ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಟ್ರಿನಿಡಾಡ್ ಮತ್ತು ಟೊಬೆಗೊ ಪ್ರಧಾನಮಂತ್ರಿ ಗೌರವಾನ್ವಿತ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಆಯೋಜಿಸಿದ್ದ ಸಾಂಪ್ರದಾಯಿಕ ಭೋಜನಕೂಟದಲ್ಲಿ ಪ್ರಧಾನಮಂತ್ರಿ ಭಾಗಿ  

Posted On: 04 JUL 2025 9:45AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟ್ರಿನಿಡಾಡ್ ಮತ್ತು ಟೊಬೆಗೊ ಪ್ರಧಾನಿ ಗೌರವಾನ್ವಿತ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಆಯೋಜಿಸಿದ್ದ ಸಾಂಪ್ರದಾಯಿಕ ಭೋಜನಕೂಟದಲ್ಲಿ ಭಾಗವಹಿಸಿದರು. ಟ್ರಿನಿಡಾಡ್ ಮತ್ತು ಟೊಬೆಗೊ ಆಯೋಜಿಸಿದ್ದ ಭೋಜನಕೂಟದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಸೊಹರಿ ಎಲೆಯ ಮೇಲೆ ಆಹಾರವನ್ನು ಬಡಿಸಲಾಯಿತು, ಇದು ಟ್ರಿನಿಡಾಡ್ ಮತ್ತು ಟೊಬೆಗೊ ಜನರಿಗೆ, ವಿಶೇಷವಾಗಿ ಭಾರತೀಯ ಮೂಲ ಹೊಂದಿರುವವರಿಗೆ ಹೆಚ್ಚಿನ ಸಾಂಸ್ಕೃತಿಕ ಮಹತ್ವದ್ದಾಗಿದೆ

ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಪ್ರಧಾನಮಂತ್ರಿ ಕಮಲಾ ಪರ್ಸಾದ್-ಬಿಸ್ಸೆಸ್ಸರ್ ಆಯೋಜಿಸಿದ ಭೋಜನಕೂಟದಲ್ಲಿ ಸೋಹರಿ ಎಲೆಯ ಮೇಲೆ ಆಹಾರವನ್ನು ಬಡಿಸಲಾಯಿತು. ಇದು ಟ್ರಿನಿಡಾಡ್ ಮತ್ತು ಟೊಬಾಗೋದ ಜನರಿಗೆ, ವಿಶೇಷವಾಗಿ ಭಾರತೀಯ ಮೂಲದವರಿಗೆ ಹೆಚ್ಚಿನ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಅಲ್ಲಿ, ಹಬ್ಬಗಳು ಮತ್ತು ಇತರ ವಿಶೇಷ ಕಾರ್ಯಕ್ರಮಗಳಲ್ಲಿ ಈ ಎಲೆಯ ಮೇಲೆ ಆಹಾರವನ್ನು ನೀಡಲಾಗುತ್ತದೆ."
 

 

*****


(Release ID: 2142211)