ಪ್ರಧಾನ ಮಂತ್ರಿಯವರ ಕಛೇರಿ
ವೈದ್ಯರ ದಿನವಾದ ಇಂದು ಪ್ರಧಾನಮಂತ್ರಿಯವರು ವೈದ್ಯರಿಗೆ ಶುಭ ಹಾರೈಸಿದ್ದಾರೆ
Posted On:
01 JUL 2025 9:37AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ವೈದ್ಯರ ದಿನವಾದ ಇಂದು ಎಲ್ಲಾ ವೈದ್ಯರಿಗೆ ಶುಭಾಶಯ ಕೋರಿದ್ದಾರೆ. "ನಮ್ಮ ವೈದ್ಯರು ತಮ್ಮ ಕೌಶಲ್ಯ ಮತ್ತು ಶ್ರದ್ಧೆಯಿಂದ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಕರುಣಾ ಮನೋಭಾವವೂ ಅಷ್ಟೇ ಗಮನಾರ್ಹವಾಗಿದೆ" ಎಂದು ಶ್ರೀ ಮೋದಿಯವರು ಹೇಳಿದ್ದಾರೆ.
ನರೇಂದ ಮೋದಿಯವರು Xನ ಪೋಸ್ಟ್ ನಲ್ಲಿ:
"#DoctorsDay ದಿನದಂದು ಎಲ್ಲಾ ಕಾರ್ಯಪರ ವೈದ್ಯರಿಗೆ ನನ್ನ ಶುಭಾಶಯಗಳು. ನಮ್ಮ ವೈದ್ಯರು ತಮ್ಮ ಕೌಶಲ್ಯ ಮತ್ತು ಶ್ರದ್ಧೆಯಿಂದ ತಮ್ಮ ಕ್ಷೇತ್ರದಲ್ಲಿ ಒಂದು ಛಾಪನ್ನು ಮೂಡಿಸಿದ್ದಾರೆ. ಅವರ ಕರುಣಾ ಮನೋಭಾವವೂ ಅಷ್ಟೇ ಗಮನಾರ್ಹವಾಗಿದೆ. ಅವರು ಅಕ್ಷರಶಹ ಆರೋಗ್ಯದ ರಕ್ಷಕರಾಗಿದ್ದು, ಮಾನವೀಯತೆಯ ಆಧಾರಸ್ತಂಭಗಳಾಗಿದ್ದಾರೆ. ಭಾರತದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಅವರ ಕೊಡುಗೆ ನಿಜಕ್ಕೂ ಅಪಾರ ಹಾಗೂ ಅಸಾಧಾರಣವಾಗಿದೆ" ಎಂದು ಹೇಳಿದ್ದಾರೆ.
*****
(Release ID: 2141464)
Read this release in:
English
,
Urdu
,
Marathi
,
Hindi
,
Bengali-TR
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam