ಪ್ರಕಟಣಾ ದಿನಾಂಕ:
10 JUN 2025 12:41PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ 11 ವರ್ಷಗಳಲ್ಲಿ ಭಾರತದ ಕ್ರೀಡಾ ಮೂಲಸೌಕರ್ಯದಲ್ಲಾಗಿರುವ ವಿಸ್ತರಣೆಯ ಬಗ್ಗೆ ವಿವರಿಸುವ ಲೇಖನವನ್ನು ಇಂದು ಹಂಚಿಕೊಂಡಿದ್ದಾರೆ. ಈ ಪರಿವರ್ತನೆಯು ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿ ಕೇಂದ್ರವಾಗಿಸುವತ್ತ ಮುನ್ನಡೆಸುತ್ತದೆ ಎಂದು ಅವರು ಬಣ್ಣಿಸಿದ್ದಾರೆ.
ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರ ಎಕ್ಸ್ ಪೋಸ್ಟ್ಗೆ ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ:
"ಕಳೆದ 11 ವರ್ಷಗಳಲ್ಲಿ ಭಾರತದ ಕ್ರೀಡಾ ಮೂಲಸೌಕರ್ಯವು ಅಭೂತಪೂರ್ವ ಪ್ರಮಾಣದಲ್ಲಿ ಹೇಗೆ ವಿಸ್ತರಣೆ ಕಂಡಿದೆ ಎಂಬುದನ್ನು ಕೇಂದ್ರ ಸಚಿವರಾದ ಶ್ರೀ @mansukhmandviya ಅವರು ವಿವರಿಸಿದ್ದಾರೆ. ಯುವಜನರನ್ನು ಕೇಂದ್ರ ಬಿಂದುವಾಗಿಸಿಕೊಂಡಿರುವ ಈ ರೂಪಾಂತರವು ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿ ಕೇಂದ್ರವಾಗಿಸುವತ್ತ ಮುನ್ನಡೆಸುತ್ತಿದೆ.”
*****