ನಾಗರೀಕ ವಿಮಾನಯಾನ ಸಚಿವಾಲಯ
ಆಯ್ದ ವಿಮಾನ ನಿಲ್ದಾಣಗಳು ಮತ್ತು ವಾಯು ಮಾರ್ಗಗಳಲ್ಲಿ ನಾಗರಿಕ ವಿಮಾನ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ
Posted On:
10 MAY 2025 12:47AM by PIB Bengaluru
ಕಾರ್ಯಾಚರಣೆಯ ಕಾರಣಗಳಿಂದಾಗಿ, ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ 32 ವಿಮಾನ ನಿಲ್ದಾಣಗಳ ಎಲ್ಲಾ ನಾಗರಿಕ ವಿಮಾನ ಕಾರ್ಯಾಚರಣೆಗಳನ್ನು ಮೇ 9 ರಿಂದ 14, 2025 ರವರೆಗೆ (ಮೇ 15, 2025, 0529 IST) ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದನ್ನು ಘೋಷಿಸುವ ಸರಣಿ ನೋಟಿಸ್ ಗಳನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮತ್ತು ಸಂಬಂಧಿತ ವಾಯುಯಾನ ಪ್ರಾಧಿಕಾರಗಳು ಏರ್‌ಮೆನ್ ಗಳಿಗೆ (NOTAM) ಜಾರಿ ಮಾಡಿವೆ. ಈ ಸೂಚನೆಯು ಈ ಕೆಳಗಿನ ವಿಮಾನ ನಿಲ್ದಾಣಗಳ ಮೇಲೆ ಪರಿಣಾಮ ಬೀರುತ್ತದೆ:
1. ಅಧಂಪುರ್
2. ಅಂಬಾಲ
3. ಅಮೃತಸರ
4. ಅವಂತಿಪುರ
5. ಬಟಿಂಡಾ
6. ಭುಜ್
7. ಬಿಕಾನೇರ್
8. ಚಂಡೀಗಢ
9. ಹಲ್ವಾರಾ
10. ಹಿಂಡನ್
11. ಜೈಸಲ್ಮೇರ್
12. ಜಮ್ಮು
13. ಜಾಮನಗರ
14. ಜೋಧಪುರ
15. ಕಾಂಡ್ಲಾ
16. ಕಾಂಗ್ರಾ (ಗಗ್ಗಲ್)
17. ಕೇಶೋದ್
18. ಕಿಶನಗಢ
19. ಕುಲ್ಲು ಮನಾಲಿ (ಭುಂತರ್)
20. ಲೇಹ್
21. ಲುಧಿಯಾನ
22. ಮುಂದ್ರಾ
23. ನಲಿಯಾ
24. ಪಠಾಣಕೋಟ್
25. ಪಟಿಯಾಲ
26. ಪೋರಬಂದರ್
27. ರಾಜಕೋಟ್ (ಹಿರಾಸರ್)
28. ಸರ್ಸಾವಾ
29. ಶಿಮ್ಲಾ
30. ಶ್ರೀನಗರ
31. ಥೋಯಿಸ್
32. ಉತ್ತರಲೈ
ಈ ಅವಧಿಯಲ್ಲಿ ಈ ವಿಮಾನ ನಿಲ್ದಾಣಗಳಲ್ಲಿನ ಎಲ್ಲಾ ನಾಗರಿಕ ವಿಮಾನ ಚಟುವಟಿಕೆಗಳು ಸ್ಥಗಿತಗೊಂಡಿರುತ್ತವೆ.
ಕಾರ್ಯಾಚರಣೆಯ ಕಾರಣಗಳಿಂದಾಗಿ ದೆಹಲಿ ಮತ್ತು ಮುಂಬೈ ವಿಮಾನ ಮಾಹಿತಿ ಪ್ರದೇಶಗಳ (ಎಫ್ ಐ ಆರ್) 25 ವಿಭಾಗಗಳ ವಾಯು ಸಂಚಾರ ಸೇವೆ (ಎಟಿಎಸ್) ಮಾರ್ಗಗಳ ತಾತ್ಕಾಲಿಕ ಮುಚ್ಚುವಿಕೆಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ವಿಸ್ತರಿಸಿದೆ.
NOTAM G0555/25 (G0525/25 ಬದಲಿಗೆ) ಪ್ರಕಾರ, ಈ 25 ಮಾರ್ಗಗಳು ಮೇ 14, 2025 ರಂದು 23:59 UTC ವರೆಗೆ (ಮೇ 15, 2025 ರ 05:29 IST) ನೆಲದ ಮಟ್ಟದಿಂದ ಅನಿಯಮಿತ ಎತ್ತರಕ್ಕೆ ಲಭ್ಯವಿರುವುದಿಲ್ಲ.
ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿರ್ವಾಹಕರು ಪ್ರಸ್ತುತ ವಾಯು ಸಂಚಾರ ಸಲಹೆಗಳ ಪ್ರಕಾರ ಪರ್ಯಾಯ ಮಾರ್ಗಗಳನ್ನು ಯೋಜಿಸಲು ಸೂಚಿಸಲಾಗಿದೆ. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಡಚಣೆಯನ್ನು ಕಡಿಮೆ ಮಾಡಲು ಸಂಬಂಧಿತ ಎಟಿಸಿ ಘಟಕಗಳೊಂದಿಗೆ ಸಮನ್ವಯದಿಂದ ಈ ತಾತ್ಕಾಲಿಕ ಸ್ಥಗಿತತೆಯನ್ನು ನಿರ್ವಹಿಸಲಾಗುತ್ತಿದೆ.
*****
(Release ID: 2128083)
Read this release in:
Telugu
,
English
,
Urdu
,
Marathi
,
Hindi
,
Bengali
,
Assamese
,
Bengali-TR
,
Punjabi
,
Gujarati
,
Tamil
,
Malayalam