WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಭಾರತ್ ಪೆವಿಲಿಯನ್: ಅಭೂತಪೂರ್ವ ಪ್ರತಿಕ್ರಿಯೆ ಪಡೆದ ಕಲಾ ಟು ಕೋಡ್ (ಕಲೆಯಿಂದ ಕೋಡ್‌ ವರೆಗೆ)

 Posted On: 04 MAY 2025 5:10PM |   Location: PIB Bengaluru

ವೇವ್ಸ್ 2025ರಲ್ಲಿ ಭಾರತದ ಕಥೆ ಹೇಳುವ ಸಂಪ್ರದಾಯಗಳ ನಿರಂತರತೆಗೆ ಸಂದರ್ಶಕರನ್ನು ಕರೆದೊಯ್ಯುವ ತಲ್ಲೀನಗೊಳಿಸುವ ವೀಕ್ಷಣಾ ವಲಯವಾದ ಭಾರತ್ ಪೆವಿಲಿಯನ್‌ ಸಾರ್ವಜನಿಕರಿಂದ ಅಗಾಧವಾದ ಸ್ವಾಗತ ಮತ್ತು ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಈ ಪೆವಿಲಿಯನ್ "ಕಲಾ ಟು ಕೋಡ್‌” (ಕಲೆಯಿಂದ ಕೋಡ್‌ ವರೆಗೆ) ಎಂಬ ವಿಷಯದ ಅಡಿಯಲ್ಲಿ, ಮೌಖಿಕ ಮತ್ತು ದೃಶ್ಯ ಸಂಪ್ರದಾಯಗಳಿಂದ ಹಿಡಿದು ಅತ್ಯಾಧುನಿಕ ಡಿಜಿಟಲ್ ನಾವೀನ್ಯತೆಗಳವರೆಗೆ ಮಾಧ್ಯಮ ಮತ್ತು ಮನರಂಜನೆಯಲ್ಲಿ ಭಾರತದ ವಿಕಾಸ‌ ಕುರಿತು ಆಕರ್ಷಕ ನಿರೂಪಣೆಯನ್ನು ನೀಡಿತು.

 

ಭಾರತ್ ಪೆವಿಲಿಯನ್ ಭಾರತದ ಆತ್ಮವನ್ನು ಪ್ರಸ್ತುತಪಡಿಸಿತು, ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಈಗಾಗಲೇ ನಡೆಯುತ್ತಿರುವ ತಾಂತ್ರಿಕ ಪ್ರಗತಿಯ ಹೊಸ ಅಲೆಗಳೊಂದಿಗೆ ಸಮತೋಲನಗೊಳಿಸಿತು. ವೇವ್ಸ್ 2025 ರ ಉದ್ಘಾಟನಾ ದಿನದಂದು, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಪೆವಿಲಿಯನ್‌‌ ಗೆ ಭೇಟಿ ನೀಡಿದರು. ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್, ವಿದೇಶಾಂಗ ಸಚಿವ ಶ್ರೀ ಎಸ್. ಜೈಶಂಕರ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಇತರ ಅನೇಕ ಗಣ್ಯರು ಪೆವಿಲಿಯನ್‌ ಗೆ ಭೇಟಿ ನೀಡಿ ಭಾರತದ ಕಥೆಯನ್ನು ಹೇಳುವಲ್ಲಿ ಅದರ ಪಾತ್ರವನ್ನು ಶ್ಲಾಘಿಸಿದರು. ಪೆವಿಲಿಯನ್‌ ನಲ್ಲಿ ಭಾರಿ ಜನಸಂದಣಿ ಕಂಡಿತು, ನಮ್ಮ ರಾಷ್ಟ್ರದ ಅನೇಕ ನಿಧಿಗಳನ್ನು ಕಂಡು ಜನರು ವಿಸ್ಮಯ ಮತ್ತು ಆಶ್ಚರ್ಯಚಕಿತರಾದರು.

 

ಭಾರತದ ಸೃಜನಶೀಲ ಪಯಣವನ್ನು ಆಚರಿಸುವ ಭಾರತ್ ಪೆವಿಲಿಯನ್‌ ಕೇವಲ ಕಂಟೆಂಟ್‌ ಪ್ರದರ್ಶನವಾಗಿರಲಿಲ್ಲ, ಬದಲಾಗಿ ಕಂಟೆಂಟ್‌ ಸೃಷ್ಟಿಕರ್ತನಾಗಿ ಭಾರತದ ಪ್ರಬಲ ಅಭಿವ್ಯಕ್ತಿಯಾಗಿತ್ತು. ಇದು ಭಾರತದ ಸಾಂಸ್ಕೃತಿಕ ಆಳ, ಕಲಾತ್ಮಕ ಶ್ರೇಷ್ಠತೆ ಮತ್ತು ಜಾಗತಿಕ ಕಥೆ ಹೇಳುವಿಕೆಯಲ್ಲಿ ಪ್ರಾಬಲ್ಯವನ್ನು ಪ್ರದರ್ಶಿಸಿತು. ಪೆವಿಲಿಯನ್‌ ಅನ್ನು ನಾಲ್ಕು ವಿಷಯಾಧಾರಿತ ವಲಯಗಳಾಗಿ ರಚಿಸಲಾಗಿತ್ತು, ಪ್ರತಿಯೊಂದೂ ಭಾರತದ ಸೃಜನಶೀಲ ಪರಂಪರೆಯ ವಿಭಿನ್ನ ಆಯಾಮವನ್ನು ಪ್ರತಿಬಿಂಬಿಸುತ್ತವೆ:

ಶ್ರುತಿ - ಮೌಖಿಕ ಸಂಪ್ರದಾಯಗಳ ಕುರಿತು: ಭಾರತದ ಪ್ರಾಚೀನ ಮೌಖಿಕ ನಿರೂಪಣಾ ಪರಂಪರೆಯನ್ನು ಗೌರವಿಸುವ ಈ ವಲಯವು, ಲಯ ಮತ್ತು ಮಾಧುರ್ಯವು ಸಾಮೂಹಿಕ ಸ್ಮರಣೆಯನ್ನು ಹೇಗೆ ಸಂರಕ್ಷಿಸುತ್ತದೆ ಎಂಬುದನ್ನು ಅನ್ವೇಷಿಸಿತು.

ಪ್ರಮುಖ ಆಕರ್ಷಣೆಗಳು:

  • ಗುರು-ಶಿಷ್ಯ ಪರಂಪರೆ: ಮೌಖಿಕ ಜ್ಞಾನ ವ್ಯವಸ್ಥೆಗಳಿಗೆ ಗೌರವ.
  • ಅತೀಂದ್ರಿಯ ಪಿಸುಮಾತುಗಳು: ವೇದ ಪಠಣಗಳು ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳು.
  • ಧುನ್: ಮಾಧುರ್ಯಗಳ ವಸ್ತುಸಂಗ್ರಹಾಲಯ: ಶಾಸ್ತ್ರೀಯ ಭಾರತೀಯ ವಾದ್ಯಗಳ ಪ್ರದರ್ಶನ.
  • ನೆಲದ ಪ್ರತಿಧ್ವನಿಗಳು: ತಲ್ಲೀನಗೊಳಿಸುವ ಜಾನಪದ ಧ್ವನಿಗಳು.
  • ಸಂಗೀತದೊಂದಿಗೆ ಅಲೆಗಳನ್ನು ಸೃಷ್ಟಿಸುವುದು: ಗೌಹರ್ ಜಾನ್‌ ನಿಂದ ಜಾಗತಿಕ ಮಾಂತ್ರಿಕರವರೆಗೆ.
  • ಸ್ಪಾಟಿಫೈ ವೇದಿಕೆ: ಅಮಾನ್ ಅಲಿ ಬಂಗಾಶ್, ಅಯಾನ್ ಅಲಿ ಬಂಗಾಶ್ ಮತ್ತು ಕಿರಿಯ ಕುಟುಂಬ ಸದಸ್ಯರಿಂದ ನೇರ ಶಾಸ್ತ್ರೀಯ ಸಂಗೀತ ಪ್ರದರ್ಶನ.
  • ಇಂಡಿಯಾ ಆನ್‌ ಏರ್‌: ಆಕಾಶವಾಣಿಯ ಪರಂಪರೆ.
  • ಪ್ಲೇಬ್ಯಾಕ್ ನೇಷನ್‌: 100 ವರ್ಷಗಳ ಐಕಾನಿಕ್ ಪ್ಲೇಬ್ಯಾಕ್ ಗಾಯನ.
  • ಕ್ಯಾಸೆಟ್‌ನಿಂದ ಕ್ಲೌಡ್: ಸಂಗೀತ ಸ್ವರೂಪಗಳ ವಿಕಸನ.
  • ಪಾಡ್‌ಕ್ಯಾಸ್ಟ್ ಕೇಂದ್ರ: ಆಡುಭಾಷೆಯ ಆಡಿಯೊದ ಉದಯ.
  • ಬುದ್ಧಿಮತ್ತೆಯ ಪಿಸುಮಾತುಗಳು: ಭಾರತದಲ್ಲಿ ಆಡಿಯೊಬುಕ್‌ ಗಳ ಬೆಳವಣಿಗೆ.

ಕೃತಿ - ಶಾಸನಗಳು ಮತ್ತು ಲಿಖಿತ ಸಂಪ್ರದಾಯ: ಈ ವಲಯವು ಭಾರತದ ನಾಗರಿಕತೆಯ ಸ್ಮರಣೆಯನ್ನು ಸಂರಕ್ಷಿಸುವಲ್ಲಿ ಲಿಖಿತ ಸಂಪ್ರದಾಯದ ಪಾತ್ರವನ್ನು ಎತ್ತಿ ತೋರಿಸಿದೆ.

ಪ್ರಮುಖ ಆಕರ್ಷಣೆಗಳು:

  • ಮೊದಲ ಚಿಹ್ನೆಗಳು: ಆರಂಭಿಕ ಗುಹಾ ವರ್ಣಚಿತ್ರಗಳು ಮತ್ತು ಸಂವಹನ.
  • ಸಿಂಧೂ ನದಿಯ ಮುದ್ರೆಗಳು: ಸಂವಾದಾತ್ಮಕ ಸಿಂಧೂ ಕಣಿವೆಯ ಅನುಭವ.
  • ನಾಗರಿಕತೆಗಳಾದ್ಯಂತ ರಾಮಾಯಣ: ಏಷ್ಯಾದ ಮೂಲಕ ಮಹಾಕಾವ್ಯದ ಪ್ರಯಾಣ.
  • ಭಾರತದ ಶಾಸನಗಳು: ಅಶೋಕನ ಶಾಸನಗಳು.
  • ಸಂರಕ್ಷಿತ ಜ್ಞಾನ: ಪ್ರಾಚೀನ ಗ್ರಂಥಾಲಯಗಳಿಂದ ಹಸ್ತಪ್ರತಿಗಳು.
  • ಲೋಹದ ನೆನಪುಗಳು: ತಾಮ್ರಫಲಕ ದಸ್ತಾವೇಜೀಕರಣ.
  • ಮುದ್ರಣದ ಶಕ್ತಿ: ಭಾರತೀಯ ಪತ್ರಿಕೋದ್ಯಮದ ಉದಯ.
  • ಭಾರತೀಯ ಶೆಲ್ಫ್: ಐಕಾನಿಕ್ ಪುಸ್ತಕಗಳ ಸಂವಾದಾತ್ಮಕ ಡಿಜಿಟಲ್ ಗ್ರಂಥಾಲಯ.
  • ಕವರ್ ಸ್ಟೋರಿ: ಭಾರತದ ನಿಯತಕಾಲಿಕೆಗಳನ್ನು ಆಚರಿಸುವುದು.
  • ಕಾಮಿಕ್ಸ್ ಕಾರ್ನರ್: ಕ್ಲಾಸಿಕ್ ಕಾಮಿಕ್ಸ್‌ ನಿಂದ ಗ್ರಾಫಿಕ್ ಕಾದಂಬರಿಗಳವರೆಗೆ.

ದೃಷ್ಟಿ - ದೃಶ್ಯ ಸಂಪ್ರದಾಯಗಳು

ದೃಶ್ಯ ಕಥೆ ಹೇಳುವಿಕೆಯ ಮೇಲೆ ಕೇಂದ್ರೀಕರಿಸಿದ ಈ ವಲಯವು ಗುಹಾ ಕಲೆಯಿಂದ ಆಧುನಿಕ ಸಿನೆಮಾದವರೆಗೆ ವ್ಯಾಪಿಸಿದೆ.

ಪ್ರಮುಖ ಆಕರ್ಷಣೆಗಳು:

  • ಕಲಾ ಯಾತ್ರೆ: ಭಾರತದ ದೃಶ್ಯ ಕಲಾ ವಿಕಾಸವನ್ನು ಪ್ರದರ್ಶಿಸುವ ಎಲ್ ಇ ಡಿ ಸುರಂಗ.
  • ಅನಂತ ಲಯ: ಹರಪ್ಪಾದ ನೃತ್ಯ ಬಾಲೆಯ ಹೊಲೊಗ್ರಾಫಿಕ್ ಪ್ರದರ್ಶನ.
  • ಭಾವನೆಯ ಸಾರ: ನವರಸದ ಸಂವಾದಾತ್ಮಕ ಪರಿಶೋಧನೆ.
  • ನಟರಾಜ ಪ್ರದರ್ಶನ: ಕಾಸ್ಮಿಕ್ ನರ್ತಕನಾಗಿ ಶಿವನಿಗೆ ದೃಶ್ಯ ಗೌರವ.
  • ಜಾನಪದ ವೃತ್ತಾಂತಗಳು: ಜಾನಪದ ನೃತ್ಯಗಳು, ಬೊಂಬೆಯಾಟ ಮತ್ತು ಬುಡಕಟ್ಟು ಅಭಿವ್ಯಕ್ತಿಗಳು.
  • ಭೂತಕಾಲದ ಚೌಕಟ್ಟುಗಳು: ಚಲನಚಿತ್ರ ವಿಕಾಸ ಪ್ರದರ್ಶನಗಳು.
  • ವಾಲ್‌ ಆಫ್‌ ಫ್ರೇಮ್‌: ಭಾರತೀಯ ಚಿತ್ರರಂಗದ ದಿಗ್ಗಜರನ್ನು ಆಚರಿಸುವುದು.
  • ಲೈಟ್ಸ್‌ ಕ್ಯಾಮೆರಾ ಲೆಗಸಿ: ಚಲನಚಿತ್ರ ಸೃಷ್ಟಿಕರ್ತರು ಮತ್ತು ತಂತ್ರಜ್ಞರಿಗೆ ಗೌರವಗಳು.
  • ಟಿವಿಯ ವಿಕಸನ: ದೂರದರ್ಶನದಿಂದ ಸ್ಟ್ರೀಮಿಂಗ್ ಯುಗದವರೆಗೆ ಪ್ರದರ್ಶನ.

ಕ್ರಿಯೇಟರ್ ಲೀಪ್

ಈ ವಲಯವು ಭವಿಷ್ಯದ ಕಥೆ ಹೇಳುವ ತಂತ್ರಜ್ಞಾನಗಳಲ್ಲಿ ಭಾರತದ ನಾವೀನ್ಯತೆಯನ್ನು ಪ್ರದರ್ಶಿಸಿತು.

ಪ್ರಮುಖ ಆಕರ್ಷಣೆಗಳು:

  • ಎಐ, ಎಕ್ಸ್‌ ಆರ್, ಗೇಮಿಂಗ್, ಮೆಟಾವರ್ಸ್ ಮತ್ತು ಅನಿಮೇಷನ್‌‌ ನಲ್ಲಿ ಭಾರತದ ಪ್ರಗತಿಯ ಪ್ರದರ್ಶನಗಳು.
  • ಉದಯೋನ್ಮುಖ ಭಾರತೀಯ ಬೌದ್ಧಿಕ ಅಸ್ತಿಯ ಪ್ರದರ್ಶನ.
  • ಕಥೆ ಹೇಳುವ ಭವಿಷ್ಯವನ್ನು ಪ್ರತಿಬಿಂಬಿಸುವ ಸಂವಾದಾತ್ಮಕ ಡೆಮೊಗಳು.

ವೇವ್ಸ್ 2025ರ ಭಾರತ್ ಪೆವಿಲಿಯನ್ ಭಾರತದ ಕಥೆ ಹೇಳುವ ಸಂಪ್ರದಾಯಗಳು ಮತ್ತು ನಾವೀನ್ಯತೆಗಳ ಬಹು-ಸಂವೇದನಾಶೀಲ ಆಚರಣೆಯನ್ನು ಪ್ರಸ್ತುತಪಡಿಸಿತು. ಇದು ಪರಂಪರೆಯಲ್ಲಿ ಬೇರೂರಿರುವ ಮತ್ತು ಭವಿಷ್ಯವನ್ನು ನೋಡುವ ಸೃಜನಶೀಲ ಶಕ್ತಿ‌ ಕೇಂದ್ರವಾಗಿ ಭಾರತದ ಗುರುತನ್ನು ಪುನರುಚ್ಚರಿಸಿತು.

 

ನೈಜ ಸಮಯದ ಅಧಿಕೃತ ಅಪ್ಡೇಟ್‌ ಗಳಿಗಾಗಿ, ದಯವಿಟ್ಟು ಫಾಲೋ ಮಾಡಿ:

On X : 

https://x.com/WAVESummitIndia

https://x.com/MIB_India

https://x.com/PIB_India

https://x.com/PIBmumbai

On Instagram: 

https://www.instagram.com/wavesummitindia

https://www.instagram.com/mib_india

https://www.instagram.com/pibindia

 

*****


Release ID: (Release ID: 2126889)   |   Visitor Counter: 6