ವಾರ್ತಾ ಮತ್ತು ಪ್ರಸಾರ ಸಚಿವಾಲಯ
“ಭಾರತದ ಲೈವ್ ಕಾರ್ಯಕ್ರಮಗಳ ಆರ್ಥಿಕತೆ; ಒಂದು ವ್ಯೂಹಾತ್ಮಕ ಬೆಳವಣಿಗೆಗೆ ವಿಧಿರೂಪ” ಶ್ವೇತ ಪತ್ರವನ್ನು ಕೇಂದ್ರ ಸಚಿವರಾದ ಡಾ. ಎಲ್. ಮುರುಗನ್ ವೇವ್ಸ್ 2025ರಲ್ಲಿ ಬಿಡುಗಡೆ ಮಾಡಲಿದ್ದಾರೆ
2030ರ ವೇಳೆಗೆ ಭಾರತವು ಜಗತ್ತಿನ ಅತ್ಯುನ್ನತ್ತ ಐದು ಮನೋರಂಜನಾ ತಾಣಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ
ಲೈವ್ ಕಾರ್ಯಕ್ರಮಗಳು (Live Events) ಭಾರತದ ಮಾಧ್ಯಮ ಮತ್ತು ಮನರಂಜನಾ ಪರಿಸರ (ಎಂ ಮತ್ತು ಇ) ವ್ಯವಸ್ಥೆಯಲ್ಲಿ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿವೆ
Posted On:
01 MAY 2025 1:27PM
|
Location:
PIB Bengaluru
ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವರಾದ ಶ್ರೀ ಎಲ್ ಮುರುಗನ್ ಅವರು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ರೂಪಿಸಿದ ಮೊದಲ ಶ್ವೇತಪತ್ರವಾದ "ಭಾರತದ ಲೈವ್ ಈವೆಂಟ್ಸ್ ಎಕಾನಮಿ: ಎ ಸ್ಟ್ರಾಟೆಜಿಕ್ ಗ್ರೋತ್ ಇಂಪರೇಟಿವ್" ಅನ್ನು (ಭಾರತದ ಲೈವ್ ಕಾರ್ಯಕ್ರಮಗಳ ಆರ್ಥಿಕತೆ; ಒಂದು ವ್ಯೂಹಾತ್ಮಕ ಬೆಳವಣಿಗೆಗೆ ವಿಧಿರೂಪ) ಅನಾವರಣಗೊಳಿಸಲಿದ್ದಾರೆ.
2025ರ ಮೇ3 ರಂದು ಮುಂಬೈಯಲ್ಲಿ ನಡೆಯಲಿರುವ ವೇವ್ಸ್ ಶೃಂಗಸಭೆ 2025ರ ಸಂದರ್ಭದಲ್ಲಿ ಶ್ವೇತಪತ್ರವನ್ನು ಔಪಚಾರಿಕವಾಗಿ ಬಿಡುಗಡೆ ಮಾಡಲಾಗುವುದು. ಶ್ವೇತಪತ್ರವು ಭಾರತದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ಲೈವ್ ಮನರಂಜನಾ ಉದ್ಯಮದ ಸಮಗ್ರ ವಿಶ್ಲೇಷಣೆಯನ್ನು ಪ್ರಸ್ತುತಪಡಿಸುತ್ತದೆ, ಉದಯೋನ್ಮುಖ ಪ್ರವೃತ್ತಿಗಳು, ಬೆಳವಣಿಗೆಯ ಪಥಗಳು ಮತ್ತು ವಲಯದ ನಿರಂತರ ವಿಕಾಸಕ್ಕಾಗಿ ಕಾರ್ಯತಂತ್ರದ ಶಿಫಾರಸುಗಳನ್ನು ಎತ್ತಿ ತೋರಿಸುತ್ತದೆ.
ಭಾರತದ ಲೈವ್ ಈವೆಂಟ್ಸ್ ಭೂದೃಶ್ಯವು ವಿಭಜಿತ ವಲಯದಿಂದ ದೇಶದ ಸಾಂಸ್ಕೃತಿಕ ಮತ್ತು ಸೃಜನಶೀಲ ಆರ್ಥಿಕತೆಯ ರಚನಾತ್ಮಕ ಮತ್ತು ಪ್ರಭಾವಶಾಲಿ ಆಧಾರಸ್ತಂಭವಾಗಿ ರೂಪಾಂತರಗೊಳ್ಳುತ್ತಿದೆ. 2024 ರಿಂದ 2025 ರವರೆಗಿನ ಅವಧಿಯು ಅಹಮದಾಬಾದ್ ಮತ್ತು ಮುಂಬೈಯಲ್ಲಿ 'ಕೋಲ್ಡ್ಪ್ಲೇ' (Coldplay) ನಂತಹ ಅಂತಾರಾಷ್ಟ್ರೀಯ ಪ್ರದರ್ಶನ ಕಾರ್ಯಕ್ರಮಗಳೊಂದಿಗೆ ಒಂದು ನಿರ್ಣಾಯಕ ತಿರುವನ್ನು ಸೂಚಿಸುತ್ತದೆ, ಇದು ಜಾಗತಿಕ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲು ಭಾರತದ ಸಿದ್ಧತೆಯನ್ನು ಸೂಚಿಸುತ್ತದೆ.
ಈ ಕ್ಷೇತ್ರದ ಪ್ರಮುಖ ಪ್ರವೃತ್ತಿಗಳಲ್ಲಿ (Event Tourism) ಈವೆಂಟ್ ಪ್ರವಾಸೋದ್ಯಮ (ಉತ್ಸವ, ಸಮಾವೇಶ ಇತ್ಯಾದಿ) ದ ಹೆಚ್ಚಳವೂ ಸೇರಿದೆ, ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸುಮಾರು ಅರ್ಧ ದಶಲಕ್ಷ ಜನರು ಲೈವ್ ಸಂಗೀತ ಕಾರ್ಯಕ್ರಮಗಳಿಗಾಗಿ ಪ್ರಯಾಣಿಸುತ್ತಾರೆ-ಇದು ದೃಢವಾದ ಸಂಗೀತ-ಪ್ರವಾಸೋದ್ಯಮ ಆರ್ಥಿಕತೆಯ ಉದಯವನ್ನು ಸೂಚಿಸುತ್ತದೆ. ವಿಐಪಿ ಅನುಭವಗಳು, ಕ್ಯುರೇಟೆಡ್ ಪ್ರವೇಶ ಮತ್ತು ಐಷಾರಾಮಿ ಆತಿಥ್ಯದಂತಹ ಪ್ರೀಮಿಯಂ ಟಿಕೆಟಿಂಗ್ ವಿಭಾಗಗಳು ವರ್ಷದಿಂದ ವರ್ಷಕ್ಕೆ 100% ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ತೋರಿಸಿವೆ, ಇದು ಅನುಭವ-ಚಾಲಿತ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. ಬಹು-ನಗರ ಪ್ರವಾಸಗಳು ಮತ್ತು ಪ್ರಾದೇಶಿಕ ಉತ್ಸವಗಳ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ಶ್ರೇಣಿ -2 ನಗರಗಳಿಂದ ಭಾಗವಹಿಸುವಿಕೆ ಹೆಚ್ಚಾಗಿದೆ.
2024ರಲ್ಲಿ, ಸಂಘಟಿತ ಲೈವ್ ಈವೆಂಟ್‌ಗಳು (ಕಾರ್ಯಕ್ರಮಗಳ) ವಿಭಾಗವು 15% ಬೆಳವಣಿಗೆಯನ್ನು ದಾಖಲಿಸಿತು, ಹೆಚ್ಚುವರಿ ₹ 13 ಶತಕೋಟಿ ಆದಾಯಕ್ಕೆ ಕೊಡುಗೆ ನೀಡಿತು - ಇದು ಭಾರತದ ಮಾಧ್ಯಮ ಮತ್ತು ಮನರಂಜನಾ ಪರಿಸರ ವ್ಯವಸ್ಥೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರಸ್ತುತ ಭೂದೃಶ್ಯದಲ್ಲಿ ದೊಡ್ಡ ಪ್ರಮಾಣದ ಕಾರ್ಯಕ್ರಮಗಳು ಸಾಮಾನ್ಯವಾಗಿ ಸರಿಸುಮಾರು 2,000 ರಿಂದ 5,000 ತಾತ್ಕಾಲಿಕ ಉದ್ಯೋಗಗಳನ್ನು ಸೃಷ್ಟಿಸುತ್ತವೆ, ಇದು ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಗೆ ಈ ವಲಯದ ಹೆಚ್ಚುತ್ತಿರುವ ಕೊಡುಗೆಯನ್ನು ಒತ್ತಿ ಹೇಳುತ್ತದೆ.
ಕೇಂದ್ರೀಕೃತ ಹೂಡಿಕೆಗಳು, ನೀತಿ ಬೆಂಬಲ ಮತ್ತು ಮೂಲಸೌಕರ್ಯ ಮೇಲ್ದರ್ಜೆಗೇರಿಸುವಿಕೆಗಳಿಂದಾಗಿ, ಭಾರತವು 2030ರ ವೇಳೆಗೆ ಜಾಗತಿಕವಾಗಿ ಅಗ್ರ ಐದು ಲೈವ್ ಮನರಂಜನಾ ತಾಣಗಳಲ್ಲಿ ಒಂದಾಗುವ ಹಾದಿಯಲ್ಲಿದೆ, ಅದು ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಮತ್ತು ವರ್ಧಿತ ಜಾಗತಿಕ ಸಾಂಸ್ಕೃತಿಕ ಉಪಸ್ಥಿತಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ.
*****
Release ID:
(Release ID: 2125821)
| Visitor Counter:
11