ಪ್ರಧಾನ ಮಂತ್ರಿಯವರ ಕಛೇರಿ
ಯುನೆಸ್ಕೋದ ಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್‌ನಲ್ಲಿ ಗೀತಾ ಮತ್ತು ನಾಟ್ಯಶಾಸ್ತ್ರದ ಸೇರ್ಪಡೆಗೆ ಪ್ರಧಾನಮಂತ್ರಿ ಶ್ಲಾಘನೆ
Posted On:
18 APR 2025 10:43AM by PIB Bengaluru
ಯುನೆಸ್ಕೋದ ಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್ ಗೆ ಗೀತೆ ಮತ್ತು ನಾಟ್ಯಶಾಸ್ತ್ರದ ಸೇರ್ಪಡೆಯನ್ನು ನಮ್ಮ ಕಾಲಾತೀತ ಬುದ್ಧಿವಂತಿಕೆ ಮತ್ತು ಶ್ರೀಮಂತ ಸಂಸ್ಕೃತಿಯ ಜಾಗತಿಕ ಮನ್ನಣೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಕ್ಸ್ ನಲ್ಲಿ ಕೇಂದ್ರ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರ ಪೋಸ್ಟ್ ಗೆ ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ:
“ವಿಶ್ವಾದ್ಯಂತದ ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ಕ್ಷಣ!
ಯುನೆಸ್ಕೋದ ಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್‌ನಲ್ಲಿ ಗೀತೆ ಮತ್ತು ನಾಟ್ಯಶಾಸ್ತ್ರದ ಸೇರ್ಪಡೆಯು ನಮ್ಮ ಕಾಲಾತೀತ ಜಾಣ್ಮೆ ಮತ್ತು ಶ್ರೀಮಂತ ಸಂಸ್ಕೃತಿಯ ಜಾಗತಿಕ ಮನ್ನಣೆಯಾಗಿದೆ.
ಗೀತೆ ಮತ್ತು ನಾಟ್ಯಶಾಸ್ತ್ರವು ಶತಮಾನಗಳಿಂದ ನಾಗರಿಕತೆ ಮತ್ತು ಜಾಗೃತ ಪ್ರಜ್ಞೆಯನ್ನು ಪೋಷಿಸಿದೆ. ಆ ಆಳವಾದ ಒಳನೋಟಗಳು ಜಗತ್ತನ್ನು ಪ್ರೇರೇಪಿಸುತ್ತಲೇ ಇರುತ್ತವೆ.
@UNESCO"
*****
(Release ID: 2122718)
Visitor Counter : 19
Read this release in:
Odia
,
Malayalam
,
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu