WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಮುಂಬೈಯಲ್ಲಿ “ವೇವ್ಸ್” ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವರಾದ ಶ್ರೀ. ಎಲ್ ಮುರುಗನ್; ಶೃಂಗಸಭೆಯ ಸ್ಥಳದಲ್ಲಿ ವಾಸ್ತವದ ತಳಮಟ್ಟದ ಸಿದ್ಧತೆಗಳ ಮೌಲ್ಯಮಾಪನ

 Posted On: 18 APR 2025 4:19PM |   Location: PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವರಾದ ಶ್ರೀ. ಎಲ್ ಮುರುಗನ್ ಅವರು ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) 2025ರ ತಯಾರಿಗೆ ಸಂಬಂಧಿಸಿದಂತೆ  ಇಂದು ಮುಂಬೈಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಭಾರತ ಸರ್ಕಾರ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರದ ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು. ವೇವ್ಸ್ ನಾಲ್ಕು ಸ್ತಂಭಗಳಾದ ಪ್ರಸಾರ ಮತ್ತು ಇನ್ಫೋಟೈನ್ ಮೆಂಟ್, ಎವಿಜಿಸಿ-ಎಕ್ಸ್ ಆರ್, ಡಿಜಿಟಲ್ ಮಾಧ್ಯಮ ಮತ್ತು ನಾವೀನ್ಯತೆ ಮತ್ತು ಚಲನಚಿತ್ರಗಳ ವಲಯಗಳ ಅಡಿಯಲ್ಲಿ ವಿವಿಧ ಚಟುವಟಿಕೆಗಳ ಪ್ರಗತಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ವೇವ್ಸ್ ಬಜಾರ್, ವೇವೆಕ್ಸ್, ಭಾರತ್ ಪೆವಿಲಿಯನ್, ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜಸ್ ಮತ್ತು ಇತರ ವಿವಿಧ ಉಪಕ್ರಮಗಳ ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಕೆಲಸಗಳನ್ನು ಮೌಲ್ಯಮಾಪನ ಮಾಡಲಾಯಿತು ಮತ್ತು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ವಿವಿಧ ಕ್ಷೇತ್ರಗಳ ನೋಡಲ್ ಅಧಿಕಾರಿಗಳು ಸಿದ್ಧತೆಗಳ ಪ್ರಗತಿಯ ಬಗ್ಗೆ ಸಚಿವರಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಶ್ರೀ. ಎಲ್ ಮುರುಗನ್ ಅವರು ಶೃಂಗಸಭೆಯ ಸ್ಥಳದಲ್ಲಿ ಕಾರ್ಯಕ್ರಮದ ಸಿದ್ಧತೆಗಳನ್ನು ಮೌಲ್ಯಮಾಪನ ಮಾಡಿದರು.

ವೇವ್ಸ್  ಬಗ್ಗೆ

ಮಾಧ್ಯಮ ಮತ್ತು ಮನರಂಜನಾ (ಎಂ & ಇ) ಕ್ಷೇತ್ರದ ಮಹತ್ವದ ಮೈಲಿಗಲ್ಲು ಕಾರ್ಯಕ್ರಮವಾದ ಮೊದಲ ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಅನ್ನು ಭಾರತ ಸರ್ಕಾರವು 2025ರ ಮೇ 1 ರಿಂದ 4 ರವರೆಗೆ ಮಹಾರಾಷ್ಟ್ರದ ಮುಂಬೈಯಲ್ಲಿ ಆಯೋಜಿಸಿದೆ.

ನೀವು ಉದ್ಯಮದ ವೃತ್ತಿಪರರು, ಹೂಡಿಕೆದಾರರು, ಸೃಷ್ಟಿಕರ್ತರು ಅಥವಾ ನಾವೀನ್ಯಕಾರರಾಗಿದ್ದಲ್ಲಿ, ಶೃಂಗಸಭೆಯು ಎಂ &ಇ ಭೂದೃಶ್ಯಕ್ಕೆ ಸಂಪರ್ಕಿಸಲು, ಸಹಕರಿಸಲು, ನಾವೀನ್ಯತೆ ಮತ್ತು ಕೊಡುಗೆ ನೀಡಲು ಅತ್ಯುತ್ಕೃಷ್ಟ ಜಾಗತಿಕ ವೇದಿಕೆಯನ್ನು ಒದಗಿಸುತ್ತದೆ.

ವೇವ್ಸ್ ಭಾರತದ ಸೃಜನಶೀಲ ಶಕ್ತಿಯನ್ನು ಹೆಚ್ಚಿಸಲು ಸಜ್ಜಾಗಿದೆ, ವಿಷಯ ರಚನೆ, ಬೌದ್ಧಿಕ ಆಸ್ತಿ ಮತ್ತು ತಾಂತ್ರಿಕ ನಾವೀನ್ಯತೆಗಳ ಕೇಂದ್ರವಾಗಿ ಅದರ ಸ್ಥಾನವನ್ನು ವೃದ್ಧಿಸುತ್ತದೆ. ಪ್ರಸಾರ, ಮುದ್ರಣ ಮಾಧ್ಯಮ, ದೂರದರ್ಶನ, ರೇಡಿಯೋ, ಚಲನಚಿತ್ರಗಳು, ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್, ಧ್ವನಿ ಮತ್ತು ಸಂಗೀತ, ಜಾಹೀರಾತು, ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು, ಜೆನೆರೇಟಿವ್ ಎಐ, ವರ್ಧಿತ ರಿಯಾಲಿಟಿ (ಎಆರ್), ವರ್ಚುವಲ್ ರಿಯಾಲಿಟಿ (ವಿಆರ್) ಮತ್ತು ವಿಸ್ತರಿತ ರಿಯಾಲಿಟಿ (ಎಕ್ಸ್ಆರ್)ಗಳು ಇದರಲ್ಲಿ  ಗಮನ ಹರಿಸುವ ಕೈಗಾರಿಕೆಗಳು ಮತ್ತು ವಲಯಗಳಾಗಿವೆ.
 

ಪ್ರಶ್ನೆಗಳಿವೆಯೇ? ಇಲ್ಲಿ ಉತ್ತರಗಳನ್ನು ಹುಡುಕಿ

ಪಿಐಬಿ ಟೀಮ್ ವೇವ್ಸ್ ನ ಇತ್ತೀಚಿನ ಪ್ರಕಟಣೆಗಳೊಂದಿಗೆ ಅಪ್ ಡೇಟ್ ಆಗಿರಿ

ಬನ್ನಿ, ನಮ್ಮೊಂದಿಗೆ ಪ್ರಯಾಣಿಸಿ! ವೇವ್ಸ್ ಗಾಗಿ ಈಗ ನೋಂದಾಯಿಸಿ

 

*****
 


Release ID: (Release ID: 2122711)   |   Visitor Counter: 53