ಪ್ರಧಾನ ಮಂತ್ರಿಯವರ ಕಛೇರಿ
ಕುಮುದಿನಿ ಲಖಿಯಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
Posted On:
12 APR 2025 3:39PM by PIB Bengaluru
ನೃತ್ಯಗಾರ್ತಿ ಕುಮುದಿನಿ ಲಖಿಯಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಾಪ ಸೂಚಿಸಿದ್ದಾರೆ. "ಕಥಕ್ ಮತ್ತು ಭಾರತೀಯ ಶಾಸ್ತ್ರೀಯ ನೃತ್ಯಗಳ ಬಗ್ಗೆ ಅವರ ಆಸಕ್ತಿ ಹಾಗೂ ಉತ್ಸಾಹವು ಅವರ ಗಮನಾರ್ಹ ಕೆಲಸದಲ್ಲಿ ಸದಾ ಪ್ರತಿಫಲಿಸುತ್ತದೆ, ಅವರು ಅತ್ಯುತ್ತಮ ಸಾಂಸ್ಕೃತಿಕ ಮಾದರಿ ( ಐಕಾನ್) ವ್ಯಕ್ತಿಯಾಗಿದ್ದಾರೆ "ಎಂದು ಅವರನ್ನು ಪ್ರಧಾನಮಂತ್ರಿಯವರು ತಮ್ಮ ಸಂದೇಶದಲ್ಲಿ ಶ್ಲಾಘಿಸಿದ್ದಾರೆ.
ಎಕ್ಸ್ ತಾಣದ ತಮ್ಮ ಸಂದೇಶದಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಬರೆದಿದ್ದಾರೆ:
"ಅದ್ಭುತ ಸಾಂಸ್ಕೃತಿಕ ಐಕಾನ್ ಆಗಿ ಗುರುತಿಸಲ್ಪಟ್ಟ ಕುಮುದಿನಿ ಲಖಿಯಾ ಜಿಯವರ ನಿಧನದಿಂದ ತೀವ್ರ ದುಃಖವಾಗಿದೆ. ಕಥಕ್ ಮತ್ತು ಭಾರತೀಯ ಶಾಸ್ತ್ರೀಯ ನೃತ್ಯಗಳ ಮೇಲಿನ ಅವರ ಆಸಕ್ತಿ ಹಾಗೂ ಉತ್ಸಾಹವು ಹಲವು ವರ್ಷಗಳಿಂದ ಅವರ ಮಹೋನ್ನತ ಗಮನಾರ್ಹ ಕೆಲಸದಲ್ಲಿ ಪ್ರತಿಫಲಿಸುತ್ತದೆ. ಅವರೊಬ್ಬ ನಿಜವಾದ ಪ್ರವರ್ತಕಿ, ಅವರು ತಲೆಮಾರುಗಳ ನರ್ತಕಿಯರನ್ನು ಸಹ ಬೆಳೆಸಿದ್ದಾರೆ. ಅವರ ಸಾಧನೆಗಳು ಮತ್ತು ಕೊಡುಗೆಗಳು ಅವರ ಕುಟುಂಬವನ್ನು ಸದಾ ಗೌರವಿಸುತ್ತವೆ. ಓಂ ಶಾಂತಿ."
*****
(Release ID: 2121379)
Visitor Counter : 12
Read this release in:
Odia
,
Tamil
,
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Telugu
,
Malayalam