ಪ್ರಧಾನ ಮಂತ್ರಿಯವರ ಕಛೇರಿ
2025ರ ಡಿಜಿಟಲ್ ಟ್ರಾನ್ಸ್‌ಫರ್ಮೇಷನ್ ಪ್ರಶಸ್ತಿ ಗೆದ್ದಿದ್ದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಶ್ಲಾಘಿಸಿದ ಪ್ರಧಾನಮಂತ್ರಿ
Posted On:
16 MAR 2025 1:59PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಜಿಟಲ್ ಪರಿವರ್ತನಾ (ಟ್ರಾನ್ಸ್ ಫರ್ಮೇಷನ್) ಪ್ರಶಸ್ತಿ 2025 ಅನ್ನು ಗೆದ್ದಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ ) ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್ ಬಿ ಐ, ದೇಶೀಯವಾಗಿ ತನ್ನ ಇನ್ ಹೌಸ್ ಡೆವಲಪರ್ ತಂಡದ ಮೂಲಕ ಅಭಿವೃದ್ಧಿಪಡಿಸಿರುವ ಪ್ರವಾಹ್ ಮತ್ತು ಸಾರಥಿ – ನವೀನ ಡಿಜಿಟಲ್ ಉಪಕ್ರಮಗಳನ್ನು ಗುರುತಿಸಿರುವ ಲಂಡನ್ ನಲ್ಲಿರುವ ಯುನೈಟೆಡ್ ಕಿಂಗ್ಡಮ್ ನ ಕೇಂದ್ರ ಬ್ಯಾಂಕ್, ಆರ್ ಬಿ ಐ ಗೆ ಡಿಜಿಟಲ್ ಪರಿವರ್ತನಾ ಪ್ರಶಸ್ತಿ 2025 ನೀಡಿ ಗೌರವಿಸಿದೆ.
ಸಾಧನೆಯನ್ನು ಶ್ಲಾಘಿಸುತ್ತಾ, ಪ್ರಧಾನ ಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಆಡಳಿತದಲ್ಲಿ ನಾವಿನ್ಯತೆ ಮತ್ತು ದಕ್ಷತೆಯೆಡೆಗೆ ಆದ್ಯತೆಯನ್ನು ಪ್ರತಿಬಿಂಬಿಸುವ ಶ್ಲಾಘನೀಯ ಸಾಧನೆ.
ಡಿಜಿಟಲ್ ನಾವಿನ್ಯತೆಯು ಭಾರತದ ಹಣಕಾಸು ಪರಿಸರ ವ್ಯವಸ್ಥೆಯನ್ನು ಸದೃಢಗೊಳಿಸುವುದನ್ನು ಮುಂದುವರಿಸಿದೆ, ಈ ಮೂಲಕ ಅಸಂಖ್ಯಾತ ಜೀವಗಳನ್ನು ಸಬಲೀಕರಣಗೊಳಿಸುತ್ತಿದೆ."
*****
(Release ID: 2111800)
Visitor Counter : 10
Read this release in:
Odia
,
Telugu
,
Malayalam
,
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Tamil