ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತ ಮತ್ತು ಇತರ 20 ದೇಶಗಳ ಭಾಗವಹಿಸುವಿಕೆಯೊಂದಿಗೆ ವೇವ್ಸ್ 2025 “ರೀಲ್ ಮೇಕಿಂಗ್”ಸವಾಲಿಗಾಗಿ 3,300ಕ್ಕೂ ಹೆಚ್ಚು ನಮೂದುಗಳನ್ನು ಸ್ವೀಕರಿಸಲಾಗಿದೆ


ಡಿಜಿಟಲ್ ರೀಲ್ ಗಳಿಂದ ಜಾಗತಿಕ ಡೀಲ್ ಗಳವರೆಗೆ: ವಿಜೇತರು ಅಭೂತಪೂರ್ವ ಪ್ರವೇಶ ಮತ್ತು ಮನ್ನಣೆಯನ್ನು ಪಡೆಯುತ್ತಾರೆ; ಅಂತಿಮ ಸ್ಪರ್ಧಿಗಳು ಸಚಿವಾಲಯದ ಬೆಂಬಲದೊಂದಿಗೆ ಜಾಗತಿಕವಾಗಿ ಸ್ಪರ್ಧಿಸುತ್ತಾರೆ

ಭಾರತದ ಪ್ರಸ್ತುತ ತಾಂತ್ರಿಕ ಮತ್ತು ಮೂಲಸೌಕರ್ಯ ಪ್ರಗತಿಯನ್ನು ಹೇಳುವ “ವಿಕಸಿತ ಭಾರತ” ಮತ್ತು "India@2047" ವಿಷಯ ರೀಲ್ ಗಳಲ್ಲಿ ಪ್ರತಿಫಲಿಸುತ್ತದೆ

ದೇಶದ ಪ್ರಗತಿಗಾಗಿ ಸೃಜನಶೀಲತೆ ಮತ್ತು ದೃಷ್ಟಿಕೋನವನ್ನು ಪ್ರದರ್ಶಿಸುವ ಮೂಲಕ ಭಾರತದ ನಾವೀನ್ಯತೆ ಪ್ರಯಾಣವನ್ನು ಪ್ರಸ್ತುತಪಡಿಸಿ; ನೋಂದಣಿಯ ಕೊನೆಯ ದಿನಾಂಕ ಮಾರ್ಚ್ 15, 2025

Posted On: 05 FEB 2025 3:25PM by PIB Bengaluru

ವರ್ಲ್ಡ್ ಆಡಿಯೋ ವಿಷುಯಲ್ & ಎಂಟರ್‌ಟೈನ್‌ಮೆಂಟ್ ಶೃಂಗಸಭೆ (ವೇವ್ಸ್) 2025ರಲ್ಲಿ "ರೀಲ್ ಮೇಕಿಂಗ್" ಚಾಲೆಂಜ್ ಭಾರತ ಮತ್ತು 20 ದೇಶಗಳಿಂದ 3,379 ನೋಂದಣಿಗಳೊಂದಿಗೆ ಅಗಾಧ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಕ್ರಿಯೇಟ್ ಇನ್ ಇಂಡಿಯಾ

ವೇವ್ಸ್ 2025ರ ಅಡಿಯಲ್ಲಿ ಪ್ರಮುಖ ಉಪಕ್ರಮವಾಗಿ ಪ್ರಾರಂಭಿಸಲಾದ ಸ್ಪರ್ಧೆಯು ಮಾಧ್ಯಮ ಮತ್ತು ಮನರಂಜನೆಗಾಗಿ ಜಾಗತಿಕ ಕೇಂದ್ರವಾಗಿ ಭಾರತದ ಬೆಳೆಯುತ್ತಿರುವ ಪ್ರಭಾವವನ್ನು ಎತ್ತಿ ತೋರಿಸುತ್ತದೆ ಮತ್ತು ದೇಶದ ವೇಗವಾಗಿ ವಿಸ್ತರಿಸುತ್ತಿರುವ ಡಿಜಿಟಲ್ ಕ್ರಿಯೇಟರ್ ಆರ್ಥಿಕತೆಯನ್ನು ಪ್ರತಿಬಿಂಬಿಸುತ್ತದೆ. ಇದು ಭಾರತ ಸರ್ಕಾರದ "ಕ್ರಿಯೇಟ್ ಇನ್ ಇಂಡಿಯಾ" ದೃಷ್ಟಿಗೆ ಅನುಗುಣವಾಗಿದೆ, ದೇಶಾದ್ಯಂತ ಮತ್ತು ಅದರಾಚೆಗಿನ ಪ್ರತಿಭೆಗಳನ್ನು ಸಬಲೀಕರಣಗೊಳಿಸುತ್ತದೆ.

ಈ ಸ್ಪರ್ಧೆಯು ಅಫ್ಘಾನಿಸ್ತಾನ, ಅಲ್ಬೇನಿಯಾ, ಅಮೆರಿಕ, ಅಂಡೋರಾ, ಆಂಟಿಗುವಾ ಮತ್ತು ಬಾರ್ಬುಡಾ, ಬಾಂಗ್ಲಾದೇಶ, ಯುಎಇ, ಆಸ್ಟ್ರೇಲಿಯಾ, ಜರ್ಮನಿ ಮತ್ತಿತರ ದೇಶಗಳ ಗಮನಾರ್ಹ ಅಂತರರಾಷ್ಟ್ರೀಯ ಭಾಗವಹಿಸುವಿಕೆಯನ್ನು ಕಂಡಿದೆ. ಈ ಜಾಗತಿಕ ವ್ಯಾಪ್ತಿಯು ಭಾರತದ ಸೃಜನಶೀಲ ವಲಯದ ಹೆಚ್ಚುತ್ತಿರುವ ಪ್ರಭಾವವನ್ನು ಎತ್ತಿ ತೋರಿಸುತ್ತದೆ ಮತ್ತು ವಿಶ್ವಾದ್ಯಂತದ ಕಂಟೆಂಟ್‌ ರಚನೆಕಾರರಿಗೆ ಒಂದು ಪ್ರಧಾನ ವೇದಿಕೆಯಾಗಿದೆ.

ತವಾಂಗ್ ಟು ಪೋರ್ಟ್ ಬ್ಲೇರ್: ದೇಶದಾದ್ಯಂತ ಕಥೆ ಹೇಳುವಿಕೆಗೆ ಹೆಚ್ಚುತ್ತಿರುವ ಬೇಡಿಕೆ

ದೇಶೀಯವಾಗಿ, ತವಾಂಗ್ (ಅರುಣಾಚಲ ಪ್ರದೇಶ), ದಿಮಾಪುರ್ (ನಾಗಾಲ್ಯಾಂಡ್), ಕಾರ್ಗಿಲ್ (ಲಡಾಖ್), ಲೇಹ್, ಶೋಪಿಯಾನ್ (ಕಾಶ್ಮೀರ), ಪೋರ್ಟ್ ಬ್ಲೇರ್ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು), ಟೆಲಿಯಮೋರಾ (ತ್ರಿಪುರ), ಕಾಸರಗೋಡು (ಕೇರಳ) ಮತ್ತು ಗ್ಯಾಮಗಟಕ್‌ (ಸಿಕ್ಕಿಂ) ಸೇರಿದಂತೆ ಭಾರತದಾದ್ಯಂತದ ವಿವಿಧ ಮತ್ತು ದೂರದ ಸ್ಥಳಗಳಿಂದ ಈ ಸವಾಲಿಗೆ ನಮೂದುಗಳನ್ನು ಸ್ವೀಕರಿಸಲಾಗಿದೆ. ಸಣ್ಣ ಪಟ್ಟಣಗಳು ​​ಮತ್ತು ಉದಯೋನ್ಮುಖ ಸೃಜನಶೀಲ ಕೇಂದ್ರಗಳಿಂದ ವೇವ್ಸ್‌ ನ “ರೀಲ್ ಮೇಕಿಂಗ್”ಸವಾಲಿಗೆ ಬಲವಾದ ಪ್ರತಿಕ್ರಿಯೆಯು ಭಾರತದ ಶ್ರೀಮಂತ ಕಥೆ ಹೇಳುವ ಸಂಪ್ರದಾಯಗಳು ಮತ್ತು ಬೆಳೆಯುತ್ತಿರುವ ಡಿಜಿಟಲ್ ಕ್ರಿಯೇಟರ್‌ ಪೂರಕ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ.

ಚಾಲೆಂಜ್‌ ನ ಭಾಗವಾಗಿ, 20 ವರ್ಷಕ್ಕಿಂತ ಮೇಲ್ಪಟ್ಟ ಭಾಗವಹಿಸುವವರು ಭಾರತದ ಪ್ರಸ್ತುತ ತಾಂತ್ರಿಕ ಮತ್ತು ಮೂಲಸೌಕರ್ಯ ಪ್ರಗತಿಗಳನ್ನು ಎತ್ತಿ ತೋರಿಸುವ "ವಿಕಸಿತ ಭಾರತ" ಮತ್ತು "ಭಾರತ@2047"ನಂತಹ ವಿಷಯಗಳ ಮೇಲೆ ರೀಲ್‌ ಗಳನ್ನು ರಚಿಸುತ್ತಾರೆ. ಈ ವಿಷಯಗಳು ಕಥೆಗಾರರಿಗೆ 30-60 ಸೆಕೆಂಡುಗಳ ಚಲನಚಿತ್ರದ ಮೂಲಕ ಭಾರತದ ನಾವೀನ್ಯತೆಯ ಪ್ರಯಾಣವನ್ನು ಪ್ರಸ್ತುತಪಡಿಸಲು ವೇದಿಕೆಯನ್ನು ಒದಗಿಸುತ್ತವೆ, ದೇಶದ ಪ್ರಗತಿಗಾಗಿ ಅವರ ಸೃಜನಶೀಲತೆ ಮತ್ತು ದೃಷ್ಟಿಯನ್ನು ಪ್ರದರ್ಶಿಸುತ್ತವೆ.

ರೀಲ್ ಮೇಕಿಂಗ್ ಸವಾಲಿನ ವಿಜೇತರು ವಿಶೇಷ ಅವಕಾಶಗಳನ್ನು ಪಡೆಯುತ್ತಾರೆ, ಅವುಗಳೆಂದರೆ:

  • 2025ರಲ್ಲಿ ಮೆಟಾ-ಆಯೋಜಿಸುವ ಈವೆಂಟ್ ಮತ್ತು ರೀಲ್ಸ್ ಮಾಸ್ಟರ್‌ಕ್ಲಾಸ್‌ ಗೆ ಆಹ್ವಾನ.
  • ವೇವ್ಸ್‌ 2025ಕ್ಕೆ ಎಲ್ಲಾ ವೆಚ್ಚಗಳನ್ನು ಪಾವತಿಸಿದ ಪ್ರವೇಶವಿರುತ್ತದೆ, ಅಲ್ಲಿ ಅವರನ್ನು ಗೌರವಿಸಲಾಗುತ್ತದೆ.
  • ಅಂತರರಾಷ್ಟ್ರೀಯ ಮಟ್ಟದ ಕಂಟೆಂಟ್ ರಚನೆಕಾರರ ಸ್ಪರ್ಧೆಗಳಲ್ಲಿ ಭಾಗವಹಿಸಲು ಅಂತಿಮ ಸ್ಪರ್ಧಿಗಳಿಗೆ ಸಚಿವಾಲಯ ಬೆಂಬಲ ನೀಡುತ್ತದೆ.
  • ವಿಜೇತ ರೀಲ್‌ ಗಳನ್ನು ವೇವ್ಸ್‌ ಅಧಿಕೃತ ಜಾಲತಾಣದ ಪ್ರತಿಷ್ಠಿತ ವೇವ್ಸ್ ಹಾಲ್ ಆಫ್ ಫೇಮ್‌‌ ನಲ್ಲಿ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ ಗಳಲ್ಲಿ ಪ್ರದರ್ಶಿಸಲಾಗುತ್ತದೆ.

ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್

ವೇವ್ಸ್ 2025 ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿ ಮತ್ತು ಧ್ಯೇಯದಿಂದ ಪ್ರೇರಿತವಾಗಿದೆ, ಇದು ಭಾರತದ ಸೃಜನಶೀಲ ಸಾಮರ್ಥ್ಯಕ್ಕೆ ಹೊಸ ಜಾಗತಿಕ ಗುರುತನ್ನು ಒದಗಿಸುವ ಮತ್ತು ಮಾಧ್ಯಮ, ಮನರಂಜನೆ ಮತ್ತು ಕಂಟೆಂಟ್ ರಚನೆಗೆ ಭಾರತವನ್ನು ಪ್ರಮುಖ ತಾಣವಾಗಿ ಸ್ಥಾಪಿಸುವ ಗುರಿಯನ್ನು ಹೊಂದಿದೆ. ಈ ಶೃಂಗಸಭೆಯು ಉದಯೋನ್ಮುಖ ಪ್ರವೃತ್ತಿಗಳನ್ನು ಚರ್ಚಿಸಲು ಉದ್ಯಮದ ಪ್ರಮುಖರು, ಮಧ್ಯಸ್ಥಗಾರರು ಮತ್ತು ನವೋದ್ಯಮಗಳನ್ನು ಒಟ್ಟುಗೂಡಿಸುತ್ತದೆ, ಸಹಯೋಗವನ್ನು ಉತ್ತೇಜಿಸುತ್ತದೆ, ಭಾರತದ ಶ್ರೀಮಂತ ಸೃಜನಶೀಲ ಪರಿಸರ ವ್ಯವಸ್ಥೆಯನ್ನು ಪ್ರದರ್ಶಿಸುತ್ತದೆ ಮತ್ತು 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್' ಎಂಬ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಕಾರ್ಯಗತಗೊಳಿಸುತ್ತದೆ.

ಭಾರತ ಮತ್ತು ಇತರ 20 ದೇಶಗಳ ಭಾಗವಹಿಸುವಿಕೆಯೊಂದಿಗೆ, ರೀಲ್ ಮೇಕಿಂಗ್ ಚಾಲೆಂಜ್ ಭಾರತದ ವೈವಿಧ್ಯಮಯ ಮತ್ತು ಕ್ರಿಯಾತ್ಮಕ ಕಥೆ ಹೇಳುವ ಭೂದೃಶ್ಯಕ್ಕೆ ಸಾಕ್ಷಿಯಾಗಿದೆ, ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸುತ್ತದೆ.

ಹೆಚ್ಚಿನ ವಿವರಗಳಿಗಾಗಿ, ಭೇಟಿ ನೀಡಿ: https://wavesindia.org/challenges-2025

 

*****

 


(Release ID: 2100028) Visitor Counter : 28