ಹಣಕಾಸು ಸಚಿವಾಲಯ
azadi ka amrit mahotsav

ಕೇಂದ್ರ ಬಜೆಟ್ 2025-26ರ ಮುಖ್ಯಾಂಶಗಳು

Posted On: 01 FEB 2025 1:29PM by PIB Bengaluru

 ಭಾಗ ಎ

  ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದರು. ಬಜೆಟ್ ಮುಖ್ಯಾಂಶಗಳು ಕೆಳಗಿನಂತಿವೆ:
 

ಬಜೆಟ್ ಅಂದಾಜು 2025-26

• ಸಾಲವನ್ನು ಹೊರತುಪಡಿಸಿ ಒಟ್ಟು ಆದಾಯ ಮತ್ತು ಒಟ್ಟು ವೆಚ್ಚವನ್ನು ಕ್ರಮವಾಗಿ ₹ 34.96 ಲಕ್ಷ ಕೋಟಿ ಮತ್ತು ₹ 50.65 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.
• ನಿವ್ವಳ ತೆರಿಗೆ ಸ್ವೀಕೃತಿಗಳನ್ನು ₹ 28.37 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.
• ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.4.4 ಎಂದು ಅಂದಾಜಿಸಲಾಗಿದೆ.
• ಒಟ್ಟು ಮಾರುಕಟ್ಟೆ ಸಾಲವನ್ನು ₹ 14.82 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.
• 2025-26ರ ಹಣಕಾಸು ವರ್ಷದಲ್ಲಿ 11.21 ಲಕ್ಷ ಕೋಟಿ ರೂ.ಗಳ ಕ್ಯಾಪೆಕ್ಸ್ ವೆಚ್ಚವನ್ನು (ಜಿಡಿಪಿಯ 3.1%) ನಿಗದಿ ಮಾಡಲಾಗಿದೆ.

ಅಭಿವೃದ್ಧಿಯ ಮೊದಲ ಎಂಜಿನ್ ಆಗಿ ಕೃಷಿ

ಪ್ರಧಾನ ಮಂತ್ರಿ ಧನ್-ಧನ್ಯಾ ಕೃಷಿ ಯೋಜನೆ - ಕೃಷಿ ಜಿಲ್ಲೆಗಳ ಅಭಿವೃದ್ಧಿ ಕಾರ್ಯಕ್ರಮ
• 1.7 ಕೋಟಿ ರೈತರಿಗೆ ಅನುಕೂಲವಾಗುವಂತೆ ಕಡಿಮೆ ಉತ್ಪಾದಕತೆ, ಮಧ್ಯಮ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲ ನಿಯತಾಂಕಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಂಡಂತೆ  ರಾಜ್ಯಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು.

ಗ್ರಾಮೀಣ ಸಮೃದ್ಧಿ ಮತ್ತು ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು

• ಕೌಶಲ್ಯ, ಹೂಡಿಕೆ, ತಂತ್ರಜ್ಞಾನ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವ ಮೂಲಕ ಕೃಷಿಯಲ್ಲಿ ಉದ್ಯೋಗದ  ಸಮಸ್ಯೆಯನ್ನು  ಪರಿಹರಿಸಲು ರಾಜ್ಯಗಳ ಸಹಭಾಗಿತ್ವದಲ್ಲಿ ಸಮಗ್ರ ಬಹು-ವಲಯ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು.
• ಮೊದಲ ಹಂತವು 100 ಅಭಿವೃದ್ಧಿ ಹೊಂದುತ್ತಿರುವ ಕೃಷಿ ಜಿಲ್ಲೆಗಳನ್ನು ಒಳಗೊಳ್ಳುತ್ತದೆ.

ಬೇಳೆಕಾಳುಗಳಲ್ಲಿ ಆತ್ಮನಿರ್ಭರ

• ತೊಗರಿ, ಉದ್ದು ಮತ್ತು ಮಾಸೂರ್ ಗಳನ್ನು ಕೇಂದ್ರೀಕರಿಸಿ 6 ವರ್ಷಗಳ ಅವಧಿಯ "ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರ ಮಿಷನ್" ಅನ್ನು ಸರ್ಕಾರ ಪ್ರಾರಂಭಿಸಲಿದೆ.
• ಮುಂದಿನ 4 ವರ್ಷಗಳಲ್ಲಿ ನಾಫೆಡ್ ಮತ್ತು ಎನ್ಸಿಸಿಎಫ್ ಗಳು ಈ ಬೇಳೆಕಾಳುಗಳನ್ನು ರೈತರಿಂದ ಖರೀದಿಸುತ್ತವೆ.

ತರಕಾರಿಗಳು ಮತ್ತು ಹಣ್ಣುಗಳಿಗಾಗಿ ಸಮಗ್ರ ಕಾರ್ಯಕ್ರಮ

• ಉತ್ಪಾದನೆ, ಸಮರ್ಪಕ ಪೂರೈಕೆ, ಸಂಸ್ಕರಣೆ ಮತ್ತು ರೈತರಿಗೆ ಲಾಭದಾಯಕ ಬೆಲೆಗಳನ್ನು ಉತ್ತೇಜಿಸಲು ರಾಜ್ಯಗಳ ಸಹಭಾಗಿತ್ವದಲ್ಲಿ ಸಮಗ್ರ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು.

ಬಿಹಾರದಲ್ಲಿ ಮಖಾನಾ ಮಂಡಳಿ

• ಮಖಾನಾ ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯನ್ನು ಸುಧಾರಿಸಲು ಮಖಾನಾ ಮಂಡಳಿಯನ್ನು ಸ್ಥಾಪಿಸಲಾಗುವುದು.

ಅಧಿಕ ಇಳುವರಿ ನೀಡುವ ಬೀಜಗಳ ರಾಷ್ಟ್ರೀಯ ಮಿಷನ್

• ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು, ಹೆಚ್ಚಿನ ಇಳುವರಿ ನೀಡುವ ಬೀಜಗಳ ಗುರಿ ಅಭಿವೃದ್ಧಿ ಮತ್ತು ಪ್ರಸರಣ ಮತ್ತು 100 ಕ್ಕೂ ಹೆಚ್ಚು ಬೀಜ ಪ್ರಭೇದಗಳ ವಾಣಿಜ್ಯ ಲಭ್ಯತೆಯ ಗುರಿಯೊಂದಿಗೆ ಹೆಚ್ಚಿನ ಇಳುವರಿ ನೀಡುವ ಬೀಜಗಳ ರಾಷ್ಟ್ರೀಯ ಮಿಷನ್ ಅನ್ನು ಪ್ರಾರಂಭಿಸಲಾಗುವುದು.

ಮೀನುಗಾರಿಕೆ

• ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪ ದ್ವೀಪಗಳ ಮೇಲೆ ವಿಶೇಷ ಗಮನ ಹರಿಸಿ, ಭಾರತೀಯ ವಿಶೇಷ ಆರ್ಥಿಕ ವಲಯ ಮತ್ತು ಆಳ ಸಮುದ್ರಗಳಿಂದ ಮೀನುಗಾರಿಕೆಯನ್ನು ಸುಸ್ಥಿರವಾಗಿ ಬಳಸಿಕೊಳ್ಳಲು ಸರ್ಕಾರ ಒಂದು ಚೌಕಟ್ಟನ್ನು ತರುವುದು.

ಹತ್ತಿ ಉತ್ಪಾದಕತೆಗಾಗಿ ಮಿಷನ್

• ಹತ್ತಿ ಕೃಷಿಯ ಉತ್ಪಾದಕತೆ ಮತ್ತು ಸುಸ್ಥಿರತೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ತರಲು ಮತ್ತು ಹೆಚ್ಚುವರಿ ದೀರ್ಘಾವಧಿಯ ಪ್ರಧಾನ ಹತ್ತಿ ಪ್ರಭೇದಗಳನ್ನು ಉತ್ತೇಜಿಸಲು 5 ವರ್ಷಗಳ ಮಿಷನ್ ಅನ್ನು ಘೋಷಿಸಲಾಗಿದೆ.

ಕೆಸಿಸಿ ಮೂಲಕ ವರ್ಧಿತ ಸಾಲ

ಕೆಸಿಸಿ ಮೂಲಕ ಪಡೆದ ಸಾಲಗಳಿಗೆ ಪರಿಷ್ಕೃತ ಬಡ್ಡಿ ಸಹಾಯಧನ ಯೋಜನೆಯಡಿ ಸಾಲದ ಮಿತಿಯನ್ನು 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು.

ಅಸ್ಸಾಂನಲ್ಲಿ ಯೂರಿಯಾ ಘಟಕ

ಅಸ್ಸಾಂನ ನಮ್ರೂಪ್ ನಲ್ಲಿ ವಾರ್ಷಿಕ 12.7 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಸ್ಥಾವರ ಸ್ಥಾಪನೆ.

ಅಭಿವೃದ್ಧಿಯ 2ನೇ ಎಂಜಿನ್ ಆಗಿ ಎಂಎಸ್ಎಂಇಗಳು

ಎಂಎಸ್ಎಂಇಗಳ ವರ್ಗೀಕರಣ ಮಾನದಂಡಗಳಲ್ಲಿ ಪರಿಷ್ಕರಣೆ
ಎಲ್ಲಾ ಎಂಎಸ್ಎಂಇಗಳ ವರ್ಗೀಕರಣಕ್ಕಾಗಿ ಹೂಡಿಕೆ ಮತ್ತು ವಹಿವಾಟು ಮಿತಿಯನ್ನು ಕ್ರಮವಾಗಿ 2.5 ಮತ್ತು 2 ಪಟ್ಟು ಹೆಚ್ಚಿಸಲಾಗುವುದು.

 

ಸೂಕ್ಷ್ಮ ಉದ್ಯಮಗಳಿಗೆ ಕ್ರೆಡಿಟ್ ಕಾರ್ಡ್ ಗಳು

ಉದ್ಯೋಗ್ ಪೋರ್ಟಲ್ ನಲ್ಲಿ ನೋಂದಾಯಿಸಲಾದ ಸೂಕ್ಷ್ಮ ಉದ್ಯಮಗಳಿಗೆ ₹ 5 ಲಕ್ಷ ಮಿತಿಯೊಂದಿಗೆ ಕಸ್ಟಮೈಸ್ ಮಾಡಿದ ಕ್ರೆಡಿಟ್ ಕಾರ್ಡ್ ಗಳು, ಮೊದಲ ವರ್ಷದಲ್ಲಿ 10 ಲಕ್ಷ ಕಾರ್ಡ್ ಗಳನ್ನು ವಿತರಿಸಲಾಗುವುದು.

ಸ್ಟಾರ್ಟ್ ಅಪ್ ಗಳಿಗೆ (ನವೋದ್ಯಮಗಳಿಗೆ) ನಿಧಿ

ವಿಸ್ತೃತ ವ್ಯಾಪ್ತಿ ಮತ್ತು 10,000 ಕೋಟಿ ರೂ.ಗಳ ಹೊಸ ಕೊಡುಗೆಯೊಂದಿಗೆ ಹೊಸ ನಿಧಿಯ ನಿಧಿಯನ್ನು ಸ್ಥಾಪಿಸಲಾಗುವುದು.

ಮೊದಲ ಬಾರಿಗೆ ಉದ್ಯಮ ಸ್ಥಾಪಿಸಿದ ಉದ್ಯಮಿಗಳಿಗೆ ಯೋಜನೆ

• 5 ಲಕ್ಷ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೊದಲ ಬಾರಿಗೆ ಉದ್ಯಮ ಸ್ಥಾಪಿಸಿದ ಉದ್ಯಮಿಗಳಿಗೆ ಮುಂದಿನ 5 ವರ್ಷಗಳಲ್ಲಿ 2 ಕೋಟಿ ರೂ.ಗಳವರೆಗೆ ಅವಧಿ ಸಾಲ ನೀಡುವ ಹೊಸ ಯೋಜನೆಯನ್ನು ಘೋಷಿಸಲಾಗಿದೆ.

ಪಾದರಕ್ಷೆ ಮತ್ತು ಚರ್ಮ ವಲಯಗಳಿಗೆ ಕೇಂದ್ರೀಕೃತ ಉತ್ಪನ್ನ ಯೋಜನೆ

ಭಾರತದ ಪಾದರಕ್ಷೆ ಮತ್ತು ಚರ್ಮ ವಲಯದ ಉತ್ಪಾದಕತೆ, ಗುಣಮಟ್ಟ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು, 22 ಲಕ್ಷ ಜನರಿಗೆ ಉದ್ಯೋಗ ಒದಗಿಸಲು, 4 ಲಕ್ಷ ಕೋಟಿ ರೂ.ಗಳ ವಹಿವಾಟು ಮತ್ತು 1.1 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ರಫ್ತು ಮಾಡಲು ಕೇಂದ್ರೀಕೃತ ಉತ್ಪನ್ನ ಯೋಜನೆಯನ್ನು ಘೋಷಿಸಲಾಗಿದೆ.

ಆಟಿಕೆ ವಲಯಕ್ಕೆ ಕ್ರಮಗಳು

ಉತ್ತಮ ಗುಣಮಟ್ಟದ, ಅನನ್ಯ, ನವೀನ ಮತ್ತು ಸುಸ್ಥಿರ ಆಟಿಕೆಗಳನ್ನು ರಚಿಸುವ, ಭಾರತವನ್ನು ಆಟಿಕೆಗಳ ಜಾಗತಿಕ ಕೇಂದ್ರವನ್ನಾಗಿ ಮಾಡುವ ಯೋಜನೆಯನ್ನು ಘೋಷಿಸಲಾಯಿತು.

ಆಹಾರ ಸಂಸ್ಕರಣೆಗೆ ಬೆಂಬಲ

ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆಯನ್ನು ಸ್ಥಾಪಿಸಲಾಗುವುದು.

ಉತ್ಪಾದನಾ ಮಿಷನ್ - "ಮೇಕ್ ಇನ್ ಇಂಡಿಯಾ" ವನ್ನು ಮತ್ತಷ್ಟು ಹೆಚ್ಚಿಸುವುದು

• "ಮೇಕ್ ಇನ್ ಇಂಡಿಯಾ"ವನ್ನು ಉತ್ತೇಜಿಸಲು ಸಣ್ಣ, ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳನ್ನು ಒಳಗೊಂಡ ರಾಷ್ಟ್ರೀಯ ಉತ್ಪಾದನಾ ಮಿಷನ್ ಅನ್ನು ಘೋಷಿಸಲಾಯಿತು.
ಅಭಿವೃದ್ಧಿಯ 3 ನೇ ಎಂಜಿನ್ ಆಗಿ ಹೂಡಿಕೆ
I. ಜನರ ಮೇಲೆ ಹೂಡಿಕೆ ಮಾಡುವುದು
ಸಾಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0
ಪೌಷ್ಠಿಕಾಂಶದ ಬೆಂಬಲಕ್ಕಾಗಿ ವೆಚ್ಚದ ಮಾನದಂಡಗಳನ್ನು ಸೂಕ್ತವಾಗಿ ಹೆಚ್ಚಿಸಲಾಗುವುದು.

ಅಟಲ್ ಟಿಂಕರಿಂಗ್ ಲ್ಯಾಬ್ಸ್

ಮುಂದಿನ 5 ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ 50,000 ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ಸ್ಥಾಪಿಸಲಾಗುವುದು.

ಸರ್ಕಾರಿ ಮಾಧ್ಯಮಿಕ ಶಾಲೆಗಳು ಮತ್ತು ಪಿಎಚ್ಸಿಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ

ಭಾರತ್ ನೆಟ್ ಯೋಜನೆಯಡಿ ಗ್ರಾಮೀಣ ಪ್ರದೇಶದ ಎಲ್ಲಾ ಸರ್ಕಾರಿ ಮಾಧ್ಯಮಿಕ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಒದಗಿಸಲಾಗುವುದು.

ಭಾರತೀಯ ಭಾಷಾ ಪುಸ್ತಕ ಯೋಜನೆ

ಶಾಲೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಡಿಜಿಟಲ್ ರೂಪದ ಭಾರತೀಯ ಭಾಷಾ ಪುಸ್ತಕಗಳನ್ನು ಒದಗಿಸುವ ಭಾರತೀಯ ಭಾಷಾ ಪುಸ್ತಕ ಯೋಜನೆಯನ್ನು ಘೋಷಿಸಲಾಗಿದೆ.

ಕೌಶಲ್ಯಕ್ಕಾಗಿ ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳು

• "ಮೇಕ್ ಫಾರ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್" ಉತ್ಪಾದನೆಗೆ ಅಗತ್ಯವಾದ ಕೌಶಲ್ಯಗಳೊಂದಿಗೆ ನಮ್ಮ ಯುವಜನರನ್ನು ಸಜ್ಜುಗೊಳಿಸಲು ಜಾಗತಿಕ ಪರಿಣತಿ ಮತ್ತು ಪಾಲುದಾರಿಕೆಯೊಂದಿಗೆ ಕೌಶಲ್ಯಕ್ಕಾಗಿ 5 ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಐಐಟಿಗಳಲ್ಲಿ ಸಾಮರ್ಥ್ಯ ವಿಸ್ತರಣೆ

• 2014 ನಂತರ ಪ್ರಾರಂಭವಾದ 5 ಐಐಟಿಗಳಲ್ಲಿ ಹೆಚ್ಚುವರಿ ಮೂಲಸೌಕರ್ಯಗಳನ್ನು ನಿರ್ಮಿಸಲಾಗುವುದು, ಇದರಿಂದ ಇನ್ನೂ 6,500 ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲವಾಗುತ್ತದೆ.

ಶಿಕ್ಷಣಕ್ಕಾಗಿ ಎಐನಲ್ಲಿ ಶ್ರೇಷ್ಠತೆಯ ಕೇಂದ್ರ

ಒಟ್ಟು 500 ಕೋಟಿ ರೂ.ಗಳ ವೆಚ್ಚದಲ್ಲಿ ಶಿಕ್ಷಣಕ್ಕಾಗಿ ಕೃತಕ ಬುದ್ಧಿಮತ್ತೆಯಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲಾಗುವುದು.

ವೈದ್ಯಕೀಯ ಶಿಕ್ಷಣದ ವಿಸ್ತರಣೆ

ಮುಂದಿನ ವರ್ಷ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ 10,000 ಹೆಚ್ಚುವರಿ ಸೀಟುಗಳನ್ನು ಸೇರಿಸಲಾಗುವುದು, ಮುಂದಿನ 5 ವರ್ಷಗಳಲ್ಲಿ 75,000 ಸೀಟುಗಳನ್ನು ಸೇರಿಸಲಾಗುವುದು.

ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಕೇಂದ್ರಗಳು

ಮುಂದಿನ 3 ವರ್ಷಗಳಲ್ಲಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಕೇಂದ್ರಗಳನ್ನುಸ್ಥಾಪಿಸಲಾಗುವುದು, 2025-26ರಲ್ಲಿ 200 ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.

ನಗರ ಜೀವನೋಪಾಯವನ್ನು ಬಲಪಡಿಸುವುದು

ನಗರ ಕಾರ್ಮಿಕರ ಸಾಮಾಜಿಕ-ಆರ್ಥಿಕ ಉನ್ನತಿಗಾಗಿ ಅವರ ಆದಾಯವನ್ನು ಸುಧಾರಿಸಲು ಮತ್ತು ಸುಸ್ಥಿರ ಜೀವನೋಪಾಯವನ್ನು ಒದಗಿಸಲು ಸಹಾಯ ಮಾಡುವ ಯೋಜನೆಯನ್ನು ಘೋಷಿಸಲಾಗಿದೆ.

ಪಿಎಂ ಸ್ವನಿಧಿ

ಬ್ಯಾಂಕುಗಳಿಂದ ವರ್ಧಿತ ಸಾಲಗಳು, 30,000 ರೂ.ಗಳ ಮಿತಿಯೊಂದಿಗೆ ಯುಪಿಐ ಲಿಂಕ್ಡ್ ಕ್ರೆಡಿಟ್ ಕಾರ್ಡ್ಗಳು ಮತ್ತು ಸಾಮರ್ಥ್ಯ ವರ್ಧನೆ ಬೆಂಬಲದೊಂದಿಗೆ ಯೋಜನೆಯನ್ನು ಪುನರುಜ್ಜೀವನಗೊಳಿಸಲಾಗುವುದು.

ಆನ್ ಲೈನ್ ಪ್ಲಾಟ್ ಫಾರ್ಮ್ ಕಾರ್ಮಿಕರ ಕಲ್ಯಾಣಕ್ಕಾಗಿ ಸಾಮಾಜಿಕ ಭದ್ರತಾ ಯೋಜನೆ

ಗಿಗ್ ಕಾರ್ಮಿಕರಿಗೆ (ಆನ್ ಲೈನ್ ವೇದಿಕೆಯಲ್ಲಿ ದುಡಿಯುವ ಕಾರ್ಮಿಕರಿಗಾಗಿ) ಗುರುತಿನ ಚೀಟಿ, ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಣಿ ಮತ್ತು ಪಿಎಂ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಆರೋಗ್ಯ ರಕ್ಷಣೆಗೆ ಸರ್ಕಾರ ವ್ಯವಸ್ಥೆ ಮಾಡುತ್ತದೆ.

II. ಆರ್ಥಿಕತೆಯಲ್ಲಿ ಹೂಡಿಕೆ

ಮೂಲಸೌಕರ್ಯದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ

• ಮೂಲಸೌಕರ್ಯ ಸಂಬಂಧಿತ ಸಚಿವಾಲಯಗಳು ಪಿಪಿಪಿ ಮಾದರಿಯಲ್ಲಿ 3 ವರ್ಷಗಳ ಯೋಜನೆಗಳ ಪೈಪ್ ಲೈನ್ ತರಲು ಮುಂದಾಗಬೇಕು ರಾಜ್ಯಗಳಿಗೂ ಪ್ರೋತ್ಸಾಹ ನೀಡಬೇಕು.

ಮೂಲಸೌಕರ್ಯಕ್ಕಾಗಿ ರಾಜ್ಯಗಳಿಗೆ ಬೆಂಬಲ

ಬಂಡವಾಳ ವೆಚ್ಚ ಮತ್ತು ಸುಧಾರಣೆಗಳಿಗೆ ಪ್ರೋತ್ಸಾಹಕ್ಕಾಗಿ ರಾಜ್ಯಗಳಿಗೆ 50 ವರ್ಷಗಳ ಬಡ್ಡಿರಹಿತ ಸಾಲಕ್ಕಾಗಿ 1.5 ಲಕ್ಷ ಕೋಟಿ ರೂ.

ಆಸ್ತಿ ನಗದೀಕರಣ ಯೋಜನೆ 2025-30

• 2025-30 ಅವಧಿಗಾಗಿ ಎರಡನೇ ಯೋಜನೆ.  ಘೋಷಣೆಯಾದ ಹೊಸ ಯೋಜನೆಗಳಲ್ಲಿ 10 ಲಕ್ಷ ಕೋಟಿ ರೂ.(ವ್ಯಾಪಾರೋದ್ಯಮವೊಂದು ತನ್ನ ವ್ಯಾಪಾರೋದ್ಯಮ ಸುಧಾರಣೆಗೆ ಹಾಕುವ ಮೊತ್ತ)ಹೂಡಿಕೆ

ಜಲ ಜೀವನ್ ಮಿಷನ್

ವರ್ಧಿತ ಒಟ್ಟು ವೆಚ್ಚದೊಂದಿಗೆ ಮಿಷನ್ ಅನ್ನು 2028 ರವರೆಗೆ ವಿಸ್ತರಿಸಲಾಗುವುದು.

ಅರ್ಬನ್ ಸವಾಲು ನಿಧಿ (ಚಾಲೆಂಜ್ ಫಂಡ್)

• 'ನಗರಗಳನ್ನು ಬೆಳವಣಿಗೆಯ ಕೇಂದ್ರಗಳಾಗಿ', 'ನಗರಗಳ ಸೃಜನಶೀಲ ಪುನರಾಭಿವೃದ್ಧಿ' ಮತ್ತು 'ನೀರು ಮತ್ತು ನೈರ್ಮಲ್ಯ'ಕ್ಕಾಗಿ ಘೋಷಿಸಲಾದ 1 ಲಕ್ಷ ಕೋಟಿ ರೂ.ಗಳ ನಗರ ಸವಾಲು ನಿಧಿಯಲ್ಲಿ  2025-26ನೇ ಸಾಲಿಗೆ 10,000 ಕೋಟಿ ರೂ.ಗಳ ಹಂಚಿಕೆಯನ್ನು ಪ್ರಸ್ತಾಪಿಸಲಾಗಿದೆ.

ವಿಕಸಿತ ಭಾರತ ಗಾಗಿ ಪರಮಾಣು ಶಕ್ತಿ ಮಿಷನ್

ಪರಮಾಣು ಶಕ್ತಿ ಕಾಯ್ದೆ ಮತ್ತು ಪರಮಾಣು ಹಾನಿಗಾಗಿ ಇರುವ  ನಾಗರಿಕ ಹೊಣೆಗಾರಿಕೆ ಕಾಯ್ದೆಗೆ ತಿದ್ದುಪಡಿಗಳನ್ನು ಕೈಗೊಳ್ಳಲಾಗುವುದು.
• 20,000 ಕೋಟಿ ರೂ.ಗಳ ವೆಚ್ಚದಲ್ಲಿ ಸಣ್ಣ ಮಾಡ್ಯುಲರ್ ರಿಯಾಕ್ಟರ್ ಗಳ (ಎಸ್ ಎಂಆರ್) ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪರಮಾಣು ಶಕ್ತಿ ಮಿಷನ್ ಸ್ಥಾಪಿಸಲಾಗುವುದು, 2033 ರ ವೇಳೆಗೆ 5 ದೇಶೀಯವಾಗಿ ಅಭಿವೃದ್ಧಿಪಡಿಸಿದ ಎಸ್ ಎಂಆರ್ ಗಳು ಕಾರ್ಯನಿರ್ವಹಿಸಲಿವೆ.

ಹಡಗು ನಿರ್ಮಾಣ

• ಹಡಗು ನಿರ್ಮಾಣ ಹಣಕಾಸು ನೆರವು ನೀತಿಯನ್ನು ಪರಿಷ್ಕರಿಸಲಾಗುವುದು.
ನಿರ್ದಿಷ್ಟ ಗಾತ್ರಕ್ಕಿಂತ ಹೆಚ್ಚಿನ ದೊಡ್ಡ ಹಡಗುಗಳನ್ನು ಮೂಲಸೌಕರ್ಯ ಸಮನ್ವಯಗೊಳಿಸಿದ ಮಾಸ್ಟರ್ ಲಿಸ್ಟ್ (ಎಚ್ಎಂಎಲ್) ನಲ್ಲಿ ಸೇರಿಸಬೇಕಾಗಿದೆ.

  • ಕಡಲ ಅಭಿವೃದ್ಧಿ ನಿಧಿ

 

  • 25,000 ಕೋಟಿ ರೂ.ಗಳ ಕಾರ್ಪಸ್ ನೊಂದಿಗೆ ಕಡಲ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸಲಾಗುವುದು, ಇದರಲ್ಲಿ ಸರ್ಕಾರವು ಶೇಕಡಾ 49 ರಷ್ಟು ಕೊಡುಗೆ ನೀಡುತ್ತದೆ ಮತ್ತು ಉಳಿದವುಗಳನ್ನು ಬಂದರುಗಳು ಮತ್ತು ಖಾಸಗಿ ವಲಯದಿಂದ ಪಡೆಯಲಗುವುದು.
  • ಉಡಾನ್ - ಪ್ರಾದೇಶಿಕ ಸಂಪರ್ಕ ಯೋಜನೆ
    ಮುಂದಿನ 10 ವರ್ಷಗಳಲ್ಲಿ ಪ್ರಾದೇಶಿಕ ಸಂಪರ್ಕವನ್ನು 120 ಹೊಸ ಸ್ಥಳಗಳಿಗೆ ಹೆಚ್ಚಿಸಲು ಮತ್ತು 4 ಕೋಟಿ ಪ್ರಯಾಣಿಕರನ್ನು ಸಾಗಿಸಲು ಪರಿಷ್ಕೃತ ಉಡಾನ್ ಯೋಜನೆಯನ್ನು ಘೋಷಿಸಲಾಗಿದೆ.

• ಗುಡ್ಡಗಾಡು, ಮಹತ್ವಾಕಾಂಕ್ಷೆಯ ಮತ್ತು ಈಶಾನ್ಯ ವಲಯದ ಜಿಲ್ಲೆಗಳಲ್ಲಿ ಹೆಲಿಪ್ಯಾಡ್ ಗಳು ಮತ್ತು ಸಣ್ಣ ವಿಮಾನ ನಿಲ್ದಾಣಗಳನ್ನು ಇದು ಬೆಂಬಲಿಸುವುದು.

ಬಿಹಾರದ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ

ಪಾಟ್ನಾ ವಿಮಾನ ನಿಲ್ದಾಣದ ಸಾಮರ್ಥ್ಯ ವಿಸ್ತರಣೆ ಮತ್ತು ಬಿಹ್ತಾದಲ್ಲಿ ಬ್ರೌನ್ ಫೀಲ್ಡ್ ವಿಮಾನ ನಿಲ್ದಾಣದ ಸಾಮರ್ಥ್ಯದ ವಿಸ್ತರಣೆಯ ಜೊತೆಗೆ ಬಿಹಾರದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಗಳನ್ನು ಘೋಷಿಸಲಾಗಿದೆ.
ಮಿಥಿಲಾಂಚಲ್ ದಲ್ಲಿ ಪಶ್ಚಿಮ ಕೋಶಿ ಕಾಲುವೆ ಯೋಜನೆ
ಬಿಹಾರದ ಪಶ್ಚಿಮ ಕೋಶಿ ಕಾಲುವೆ ERM ಯೋಜನೆಗೆ ಆರ್ಥಿಕ ನೆರವು.

ಗಣಿಗಾರಿಕೆ ವಲಯದ ಸುಧಾರಣೆಗಳು

ಟೈಲಿಂಗ್ ಗಳಿಂದ ನಿರ್ಣಾಯಕ ಖನಿಜಗಳನ್ನು ಮರುಪಡೆಯಲು ನೀತಿಯನ್ನು ರೂಪಿಸಲಾಗುವುದು.

ಸ್ವಾಮಿಹ್ ನಿಧಿ 2

ಸರ್ಕಾರ, ಬ್ಯಾಂಕುಗಳು ಮತ್ತು ಖಾಸಗಿ ಹೂಡಿಕೆದಾರರ ಕೊಡುಗೆಯೊಂದಿಗೆ ಇನ್ನೂ 1 ಲಕ್ಷ ವಸತಿ ಘಟಕಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಗುರಿಯನ್ನು ಸಾಧಿಸಲು  15,000 ಕೋಟಿ ರೂ.ನಿಧಿ.

ಉದ್ಯೋಗ ಆಧಾರಿತ ಬೆಳವಣಿಗೆಗೆ ಪ್ರವಾಸೋದ್ಯಮ

ಸವಾಲಿನ ಮಾದರಿ ಮೂಲಕ ರಾಜ್ಯಗಳ ಸಹಭಾಗಿತ್ವದಲ್ಲಿ ದೇಶದ ಉನ್ನತ 50 ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು.

III. ನಾವೀನ್ಯತೆಯಲ್ಲಿ ಹೂಡಿಕೆ

ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ

ಜುಲೈ ಬಜೆಟ್ ನಲ್ಲಿ ಘೋಷಿಸಲಾದ ಖಾಸಗಿ ವಲಯ ಚಾಲಿತ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ಉಪಕ್ರಮವನ್ನು ಅನುಷ್ಠಾನಗೊಳಿಸಲು 20,000 ಕೋಟಿ ರೂ.

ಡೀಪ್ ಟೆಕ್ ಫಂಡ್ ಆಫ್ ಫಂಡ್ಸ್

ಮುಂದಿನ ಪೀಳಿಗೆಯ ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸಲು ಡೀಪ್ ಟೆಕ್ ಫಂಡ್ ಆಫ್ ಫಂಡ್ ಗಳನ್ನು ಅನ್ವೇಷಿಸಲಾಗುವುದು.

ಪಿಎಂ ರಿಸರ್ಚ್ ಫೆಲೋಶಿಪ್
ಐಐಟಿ ಮತ್ತು ಐಐಎಸ್ಸಿಗಳಲ್ಲಿ ತಾಂತ್ರಿಕ ಸಂಶೋಧನೆಗಾಗಿ 10,000 ಫೆಲೋಶಿಪ್ಗಳನ್ನು ಹೆಚ್ಚಿನ ಆರ್ಥಿಕ ನೆರವಿನೊಂದಿಗೆ ನೀಡಲಾಗುವುದು.

ಬೆಳೆಗಳ ಜೆರ್ಮಾಪ್ಲಾಸಂಗಾಗಿ  ಜೀನ್ ಬ್ಯಾಂಕ್

ಭವಿಷ್ಯದ ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಗಾಗಿ 10 ಲಕ್ಷ ಜೆರ್ಮಾಪ್ಲಾಸಂ ಲೈನ್   ಹೊಂದಿರುವ 2ನೇ ಜೀನ್ ಬ್ಯಾಂಕ್ ಸ್ಥಾಪಿಸಲಾಗುವುದು.

ರಾಷ್ಟ್ರೀಯ ಜಿಯೋಸ್ಪೇಷಿಯಲ್ ಮಿಷನ್
ಮೂಲಭೂತ  ಜಿಯೋಸ್ಪೇಷಿಯಲ್ ಮೂಲಸೌಕರ್ಯ ಮತ್ತು ಡೇಟಾವನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಜಿಯೋಸ್ಪೇಷಿಯಲ್ ಮಿಷನ್ ಘೋಷಣೆ.

ಜ್ಞಾನ ಭಾರತಂ ಮಿಷನ್

ಶೈಕ್ಷಣಿಕ ಸಂಸ್ಥೆಗಳು, ವಸ್ತುಸಂಗ್ರಹಾಲಯಗಳು, ಗ್ರಂಥಾಲಯಗಳು ಮತ್ತು ಖಾಸಗಿ ಸಂಗ್ರಾಹಕರೊಂದಿಗೆ ನಮ್ಮ ಹಸ್ತಪ್ರತಿ ಪರಂಪರೆಯ ಸಮೀಕ್ಷೆ, ದಾಖಲೀಕರಣ ಮತ್ತು ಸಂರಕ್ಷಣೆಗಾಗಿ ಜ್ಞಾನ ಭಾರತಂ ಮಿಷನ್. 1 ಕೋಟಿ ಹಸ್ತಪ್ರತಿಯ ಗುರಿ.

ಅಭಿವೃದ್ಧಿಯ 4 ನೇ ಎಂಜಿನ್ ಆಗಿ ರಫ್ತು

ರಫ್ತು ಉತ್ತೇಜನ ಮಿಷನ್
ವಾಣಿಜ್ಯ, ಎಂಎಸ್ಎಂಇ ಮತ್ತು ಹಣಕಾಸು ಸಚಿವಾಲಯಗಳು ಜಂಟಿಯಾಗಿ ನಡೆಸುವ ವಲಯ ಮತ್ತು ಸಚಿವಾಲಯಗಳ ಗುರಿಗಳೊಂದಿಗೆ ರಫ್ತು ಉತ್ತೇಜನ ಮಿಷನ್ ಸ್ಥಾಪಿಸಲಾಗುವುದು.

ಭಾರತ್ ಟ್ರೇಡ್ನೆಟ್

ಅಂತರರಾಷ್ಟ್ರೀಯ ವ್ಯಾಪಾರಕ್ಕಾಗಿ 'ಭಾರತ್ ಟ್ರೇಡ್ ನೆಟ್' (ಬಿಟಿಎನ್) ಅನ್ನು ವ್ಯಾಪಾರ ದಾಖಲೀಕರಣ ಮತ್ತು ಹಣಕಾಸು ಪರಿಹಾರಗಳಿಗಾಗಿ ಏಕೀಕೃತ ವೇದಿಕೆಯಾಗಿ ಸ್ಥಾಪಿಸಲಾಗುವುದು.

ಜಿಸಿಸಿಗಾಗಿ ರಾಷ್ಟ್ರೀಯ ಚೌಕಟ್ಟು

ಉದಯೋನ್ಮುಖ ಶ್ರೇಣಿ 2 ನಗರಗಳಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಉತ್ತೇಜಿಸಲು ರಾಜ್ಯಗಳಿಗೆ ಮಾರ್ಗದರ್ಶನವಾಗಿ ರಾಷ್ಟ್ರೀಯ ಚೌಕಟ್ಟನ್ನು ರೂಪಿಸುವುದು.

ಇಂಧನವಾಗಿ ಸುಧಾರಣೆಗಳು: ಹಣಕಾಸು ವಲಯದ ಸುಧಾರಣೆಗಳು ಮತ್ತು ಅಭಿವೃದ್ಧಿ

ವಿಮಾ ಕ್ಷೇತ್ರದಲ್ಲಿ ಎಫ್.ಡಿ..

ಸಂಪೂರ್ಣ ಪ್ರೀಮಿಯಂ ಅನ್ನು ಭಾರತದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ವಿಮಾ ಕ್ಷೇತ್ರದಲ್ಲಿ ಎಫ್ಡಿಐ ಮಿತಿಯನ್ನು ಶೇಕಡಾ 74 ರಿಂದ 100 ಕ್ಕೆ ಹೆಚ್ಚಿಸಲಾಗುವುದು.
ಎನ್ ಎಬಿಎಫ್ ಐಡಿ (NaBFID) ನಿಂದ ಸಾಲ ವರ್ಧನೆ ಸೌಲಭ್ಯ
ಮೂಲಸೌಕರ್ಯಕ್ಕಾಗಿ ಕಾರ್ಪೊರೇಟ್ ಬಾಂಡ್ ಗಳಿಗಾಗಿ 'ಭಾಗಶಃ ಸಾಲ ವರ್ಧನೆ ಸೌಲಭ್ಯ'ವನ್ನು ಎನ್ ಎಬಿಎಫ್ ಐಡಿ ಸ್ಥಾಪಿಸಲಿದೆ.

ಗ್ರಾಮೀಣ ಕ್ರೆಡಿಟ್ ಸ್ಕೋರ್

ಎಸ್.ಎಚ್.ಜಿ. ಸದಸ್ಯರು ಮತ್ತು ಗ್ರಾಮೀಣ ಪ್ರದೇಶದ ಜನರ ಸಾಲದ ಅಗತ್ಯಗಳನ್ನು ಪೂರೈಸಲು ಸಾರ್ವಜನಿಕ ವಲಯದ ಬ್ಯಾಂಕುಗಳು 'ಗ್ರಾಮೀಣ ಕ್ರೆಡಿಟ್ ಸ್ಕೋರ್' ಚೌಕಟ್ಟನ್ನು ಅಭಿವೃದ್ಧಿಪಡಿಸಬೇಕು.

ಪಿಂಚಣಿ ವಲಯ

ಪಿಂಚಣಿ ಉತ್ಪನ್ನಗಳ ನಿಯಂತ್ರಣ ಸಮನ್ವಯ ಮತ್ತು ಅಭಿವೃದ್ಧಿಗಾಗಿ ಒಂದು ವೇದಿಕೆಯನ್ನು ಸ್ಥಾಪಿಸಬೇಕು.

ನಿಯಂತ್ರಣ ಸುಧಾರಣೆಗಳಿಗೆ ಉನ್ನತ ಮಟ್ಟದ ಸಮಿತಿ

ಎಲ್ಲಾ ಹಣಕಾಸುಯೇತರ ವಲಯದ ನಿಬಂಧನೆಗಳು, ಪ್ರಮಾಣೀಕರಣಗಳು, ಪರವಾನಗಿಗಳು ಮತ್ತು ಅನುಮತಿಗಳ ಪರಿಶೀಲನೆಗಾಗಿ ನಿಯಂತ್ರಣ ಸುಧಾರಣೆಗಳಿಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು.

ರಾಜ್ಯಗಳ ಹೂಡಿಕೆ ಸ್ನೇಹಿ ಸೂಚ್ಯಂಕ

ಸ್ಪರ್ಧಾತ್ಮಕ ಸಹಕಾರಿ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯನ್ನು ಹೆಚ್ಚಿಸಲು 2025 ರಲ್ಲಿ ರಾಜ್ಯಗಳ ಹೂಡಿಕೆ ಸ್ನೇಹಿ ಸೂಚ್ಯಂಕವನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಲಾಯಿತು.

ಜನ್ ವಿಶ್ವಾಸ್ ಮಸೂದೆ 2.0

ಜನ ವಿಶ್ವಾಸ್ ಮಸೂದೆ 2.0 ವಿವಿಧ ಕಾನೂನುಗಳಲ್ಲಿಯ 100 ಕ್ಕೂ ಹೆಚ್ಚು ನಿಬಂಧನೆಗಳನ್ನು ಕ್ರಿಮಿನಲ್ ಅಲ್ಲ ಎಂದು ಪರಿಗಣಿಸುತ್ತದೆ.

ಭಾಗ ಬಿ

ನೇರ ತೆರಿಗೆ

ಹೊಸ ಆಡಳಿತದ ಅಡಿಯಲ್ಲಿ 12 ಲಕ್ಷ ರೂ.ಗಳ ಆದಾಯದವರೆಗೆ (ಅಂದರೆ ಬಂಡವಾಳ ಲಾಭಗಳಂತಹ ವಿಶೇಷ ದರದ ಆದಾಯವನ್ನು ಹೊರತುಪಡಿಸಿ ತಿಂಗಳಿಗೆ ಸರಾಸರಿ 1 ಲಕ್ಷ ರೂ.) ಯಾವುದೇ ವೈಯಕ್ತಿಕ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ.
• 75,000 ರೂ.ಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಕಾರಣದಿಂದಾಗಿ ಸಂಬಳ ಪಡೆಯುವ ತೆರಿಗೆ ಪಾವತಿದಾರರಿಗೆ ಮಿತಿ 12.75 ಲಕ್ಷ ರೂ.
ಹೊಸ ರಚನೆಯು ಮಧ್ಯಮ ವರ್ಗದ ತೆರಿಗೆಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಅವರ ಕೈಯಲ್ಲಿ ಹೆಚ್ಚಿನ ಹಣವನ್ನು ಬಿಡುತ್ತದೆ, ಗೃಹ ಬಳಕೆ, ಉಳಿತಾಯ ಮತ್ತು ಹೂಡಿಕೆಯನ್ನು ಹೆಚ್ಚಿಸುತ್ತದೆ.
ಹೊಸ ಆದಾಯ ತೆರಿಗೆ ಮಸೂದೆಯು ತೆರಿಗೆದಾರರು ಮತ್ತು ತೆರಿಗೆ ಆಡಳಿತಕ್ಕೆ ಅರ್ಥವಾಗುವಂತೆ ಪಠ್ಯದಲ್ಲಿ ಸ್ಪಷ್ಟ ಮತ್ತು ನೇರವಾಗಿರಬೇಕು, ಇದು ತೆರಿಗೆ ನಿಶ್ಚಿತತೆ ಮತ್ತು ದಾವೆಗಳನ್ನು ಕಡಿಮೆ ಮಾಡಲು  ಕಾರಣವಾಗುತ್ತದೆ.
ನೇರ ತೆರಿಗೆಗಳಲ್ಲಿ ಸುಮಾರು 1 ಲಕ್ಷ ಕೋಟಿ ರೂ.ಗಳ ಆದಾಯವನ್ನು ಕಳೆದುಕೊಳ್ಳಲಾಗುವುದು.

ಪರಿಷ್ಕೃತ ತೆರಿಗೆ ದರ ರಚನೆ

  • ಹೊಸ ತೆರಿಗೆ ಆಡಳಿತದಲ್ಲಿ, ಪರಿಷ್ಕೃತ ತೆರಿಗೆ ದರ ರಚನೆಯು ಕೆಳಗಿನಂತೆ ಇರುತ್ತದೆ:

0-4 ಲಕ್ಷ ರೂ.

ತೆರಿಗೆ ಇಲ್ಲ

4-8 ಲಕ್ಷ ರೂ

5 ಶೇಕಡಾ

8-12 ಲಕ್ಷ ರೂ

10 ಶೇಕಡಾ

12-16 ಲಕ್ಷ ರೂ

15 ಶೇಕಡಾ

16-20 ಲಕ್ಷ ರೂ

20 ಶೇಕಡಾ

20- 24 ಲಕ್ಷ ರೂ.

25 ಶೇಕಡಾ

24 ಲಕ್ಷ ರೂ.ಗಿಂತ ಹೆಚ್ಚು

30 ಶೇಕಡಾ

ತೊಂದರೆಗಳನ್ನು ನಿವಾರಿಸಲು  ಟಿಡಿಎಸ್ / ಟಿಸಿಎಸ್ ತರ್ಕಬದ್ಧಗೊಳಿಸುವಿಕೆ

o ಟಿಡಿಎಸ್ ಕಡಿತಗೊಳಿಸುವ ದರಗಳು ಮತ್ತು ಮಿತಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಮೂಲದಲ್ಲಿ ತೆರಿಗೆ ಕಡಿತವನ್ನು (ಟಿಡಿಎಸ್) ತರ್ಕಬದ್ಧಗೊಳಿಸುವುದು.
* ಹಿರಿಯ ನಾಗರಿಕರಿಗೆ ಬಡ್ಡಿಯ ಮೇಲಿನ ತೆರಿಗೆ ಕಡಿತದ ಮಿತಿಯನ್ನು ಪ್ರಸ್ತುತ 50,000 ರೂ.ಗಳಿಂದ 1 ಲಕ್ಷ ರೂ.ಗೆ ದ್ವಿಗುಣಗೊಳಿಸಲಾಗಿದೆ.
* ಬಾಡಿಗೆಯ ಮೇಲಿನ ಟಿಡಿಎಸ್ ಗೆ ವಾರ್ಷಿಕ ಮಿತಿ ೨.೪೦ ಲಕ್ಷ ರೂ.ಗಳಿಂದ ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಆರ್ಬಿಐನ ಉದಾರೀಕೃತ ಹಣ ರವಾನೆ ಯೋಜನೆ (ಎಲ್ಆರ್ಎಸ್) ಅಡಿಯಲ್ಲಿ ಹಣ ರವಾನೆಯ ಮೇಲೆ ಮೂಲದಲ್ಲಿ ತೆರಿಗೆ (ಟಿಸಿಎಸ್) ಸಂಗ್ರಹಿಸುವ ಮಿತಿಯನ್ನು 7 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
o ಹೆಚ್ಚಿನ ಟಿಡಿಎಸ್ ಕಡಿತದ ನಿಬಂಧನೆಗಳು ಪ್ಯಾನ್ ಅಲ್ಲದ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತವೆ.
o ಸ್ಟೇಟ್ಮೆಂಟ್ ಸಲ್ಲಿಸುವ ನಿಗದಿತ ದಿನಾಂಕದವರೆಗೆ ಟಿಸಿಎಸ್ ಪಾವತಿಯ ವಿಳಂಬದ ಪ್ರಕರಣಗಳಿಗೆ ಅಪರಾಧೀಕರಣದ ಭಯ ಇಲ್ಲ.

ಅನುಸರಣೆಯ ಹೊರೆಯನ್ನು ಕಡಿಮೆ ಮಾಡುವುದು

o ಸಣ್ಣ ಚಾರಿಟಬಲ್ ಟ್ರಸ್ಟ್ ಗಳು / ಸಂಸ್ಥೆಗಳ ನೋಂದಣಿ ಅವಧಿಯನ್ನು 5 ವರ್ಷದಿಂದ 10 ವರ್ಷಗಳಿಗೆ ಹೆಚ್ಚಿಸುವ ಮೂಲಕ ಅನುಸರಣೆ ಹೊರೆಯನ್ನು ಕಡಿಮೆ ಮಾಡುವುದು.

o ಸ್ವಯಂ-ವಾಸ್ತವ್ಯದ ಆಸ್ತಿಗಳ ವಾರ್ಷಿಕ ಮೌಲ್ಯವನ್ನು ಶೂನ್ಯ ಎಂದು ಕ್ಲೈಮ್ ಮಾಡುವ ಪ್ರಯೋಜನವನ್ನು ಅಂತಹ ಎರಡು ಸ್ವಯಂ-ವಾಸ್ತವ್ಯದ ಆಸ್ತಿಗಳಿಗೆ ಯಾವುದೇ ಷರತ್ತು ಇಲ್ಲದೆ ವಿಸ್ತರಿಸಲಾಗುವುದು.

ಸುಗಮ ವ್ಯಾಪಾರ

o ಮೂರು ವರ್ಷಗಳ ಬ್ಲಾಕ್ ಅವಧಿಗೆ ಅಂತರರಾಷ್ಟ್ರೀಯ ವಹಿವಾಟಿನ ಬೆಲೆಯನ್ನು ನಿರ್ಧರಿಸುವ ಯೋಜನೆಯನ್ನು ಪರಿಚಯಿಸುವುದು.
o ದಾವೆಗಳನ್ನು ಕಡಿಮೆ ಮಾಡಲು ಮತ್ತು ಅಂತರರಾಷ್ಟ್ರೀಯ ತೆರಿಗೆಯಲ್ಲಿ ಖಚಿತತೆಯನ್ನು ಒದಗಿಸಲು ಸುರಕ್ಷಿತ ಬಂದರು ನಿಯಮಗಳ ವ್ಯಾಪ್ತಿಯನ್ನು ವಿಸ್ತರಿಸುವುದು.
o 2024 ಆಗಸ್ಟ್ 29 ರಂದು ಅಥವಾ ನಂತರ ವ್ಯಕ್ತಿಗಳು ರಾಷ್ಟ್ರೀಯ ಉಳಿತಾಯ ಯೋಜನೆ (ಎನ್ಎಸ್ಎಸ್) ಯಿಂದ ಮಾಡಿದ ಹಿಂಪಡೆಯುವಿಕೆಗೆ ವಿನಾಯಿತಿ.
o ಒಟ್ಟಾರೆ ಮಿತಿಗಳಿಗೆ ಒಳಪಟ್ಟು ಸಾಮಾನ್ಯ ಎನ್ಪಿಎಸ್ ಖಾತೆಗಳಿಗೆ ಲಭ್ಯವಿರುವಂತೆ ಎನ್ಪಿಎಸ್ ವಾತ್ಸಲ್ಯ ಖಾತೆಗಳಿಗೆ ಇದೇ ರೀತಿಯ ಸೌಲಭ್ಯ.

  • ಉದ್ಯೋಗ ಮತ್ತು ಹೂಡಿಕೆ

    ಎಲೆಕ್ಟ್ರಾನಿಕ್ಸ್ ಉತ್ಪಾದನಾ ಯೋಜನೆಗಳಿಗೆ ತೆರಿಗೆ ಖಚಿತತೆ

    o ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸುತ್ತಿರುವ ಅಥವಾ ನಿರ್ವಹಿಸುತ್ತಿರುವ ನಿವಾಸಿ ಕಂಪನಿಗೆ ಸೇವೆಗಳನ್ನು ಒದಗಿಸುವ ಅನಿವಾಸಿಗಳಿಗೆ ಊಹೆಯ ತೆರಿಗೆ ಆಡಳಿತ.
    o ನಿರ್ದಿಷ್ಟ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕಗಳಿಗೆ ಸರಬರಾಜು ಮಾಡಲು ಬಿಡಿಭಾಗಗಳನ್ನು ಸಂಗ್ರಹಿಸುವ ಅನಿವಾಸಿಗಳಿಗೆ ತೆರಿಗೆ ಖಚಿತತೆಗಾಗಿ ಸುರಕ್ಷಿತ ಬಂದರನ್ನು ಪರಿಚಯಿಸುವುದು.
  • ಒಳನಾಡಿನ ಹಡಗುಗಳಿಗೆ ಟನ್ ತೆರಿಗೆ ಯೋಜನೆ

    ದೇಶದಲ್ಲಿ ಒಳನಾಡಿನ ಜಲ ಸಾರಿಗೆಯನ್ನು ಉತ್ತೇಜಿಸಲು ಭಾರತೀಯ ಹಡಗುಗಳ ಕಾಯ್ದೆ, 2021 ರ ಅಡಿಯಲ್ಲಿ ನೋಂದಾಯಿಸಲಾದ ಒಳನಾಡಿನ ಹಡಗುಗಳಿಗೆ ಅಸ್ತಿತ್ವದಲ್ಲಿರುವ ಟನ್ ತೆರಿಗೆ ಯೋಜನೆಯ ಪ್ರಯೋಜನಗಳನ್ನು ವಿಸ್ತರಿಸಲಾಗುವುದು.

    ನವೋದ್ಯಮಗಳ ಸೇರ್ಪಡೆಗೆ ವಿಸ್ತರಣೆ
    1.4.2030 ಕ್ಕಿಂತ ಮೊದಲು ಸಂಯೋಜಿಸಲಾದ ನವೋದ್ಯಮಗಳಿಗೆ ಲಭ್ಯವಿರುವ ಪ್ರಯೋಜನವನ್ನು ಅನುಮತಿಸಲು ಸಂಯೋಜನೆಯ ಅವಧಿಯನ್ನು 5 ವರ್ಷಗಳವರೆಗೆ ವಿಸ್ತರಿಸುವುದು.

ಪರ್ಯಾಯ ಹೂಡಿಕೆ ನಿಧಿಗಳು (ಎಐಎಫ್ಗಳು)

ಮೂಲಸೌಕರ್ಯ ಮತ್ತು ಅಂತಹ ಇತರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಿರುವ ವರ್ಗ 1 ಮತ್ತು ವರ್ಗ 2 ಎಐಎಫ್ ಗಳಿಗೆ ಸೆಕ್ಯುರಿಟಿಗಳಿಂದ ಬರುವ ಲಾಭದ ಮೇಲೆ ತೆರಿಗೆ ವಿಧಿಸುವುದರಲ್ಲಿ  ಖಚಿತತೆ.

ಚಿನ್ನ ಮತ್ತು ಪಿಂಚಣಿ ನಿಧಿಗಳಿಗೆ ಹೂಡಿಕೆ ದಿನಾಂಕ ವಿಸ್ತರಣೆ

ಸೊವರಿನ್ (ಚಿನ್ನದ) ಸಂಪತ್ತು ನಿಧಿಗಳು ಮತ್ತು ಪಿಂಚಣಿ ನಿಧಿಗಳಲ್ಲಿ ಹೂಡಿಕೆ ಮಾಡುವ ದಿನಾಂಕವನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸುವುದು, ಮೂಲಸೌಕರ್ಯ ವಲಯಕ್ಕೆ ಅವುಗಳಿಂದ ಧನಸಹಾಯವನ್ನು ಉತ್ತೇಜಿಸುವುದು.

ಪರೋಕ್ಷ ತೆರಿಗೆ
ಕೈಗಾರಿಕಾ ಸರಕುಗಳಿಗೆ ಕಸ್ಟಮ್ಸ್ ಸುಂಕ ರಚನೆಯನ್ನು ತರ್ಕಬದ್ಧಗೊಳಿಸುವಿಕೆ
ಕೇಂದ್ರ ಬಜೆಟ್ 2025-26: ರ ಪ್ರಸ್ತಾವನೆಗಳು
i. ಏಳು ಸುಂಕ ದರಗಳನ್ನು ತೆಗೆದುಹಾಕುವುದು. ಇದು 2023-24ರ ಬಜೆಟ್ನಲ್ಲಿ ತೆಗೆದುಹಾಕಲಾದ ಏಳು ಸುಂಕ ದರಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಇದರ ನಂತರ, 'ಶೂನ್ಯ' ದರ ಸೇರಿದಂತೆ ಕೇವಲ ಎಂಟು ಸುಂಕ ದರಗಳು ಮಾತ್ರ ಉಳಿಯುತ್ತವೆ.
ii. ಅಂತಹ ಸಂದರ್ಭಗಳಲ್ಲಿ  ಸ್ವಲ್ಪಮಟ್ಟಿಗೆ ಕಡಿಮೆಯಾಗುವ ಕೆಲವು ವಸ್ತುಗಳನ್ನು ಹೊರತುಪಡಿಸಿ ಪರಿಣಾಮಕಾರಿ ಸುಂಕದ ವ್ಯವಸ್ಥೆಯನ್ನು ವ್ಯಾಪಕವಾಗಿ ನಿರ್ವಹಿಸಲು ಸೂಕ್ತ ಸೆಸ್ ಅನ್ನು ಅನ್ವಯಿಸಲಾಗುವುದು.
iii. ಒಂದಕ್ಕಿಂತ ಹೆಚ್ಚು ಸೆಸ್ ಅಥವಾ ಸರ್ಚಾರ್ಜ್ ವಿಧಿಸಬಾರದು. ಆದ್ದರಿಂದ ಸೆಸ್ ಗೆ ಒಳಪಟ್ಟಿರುವ 82 ಸುಂಕ ಮಾರ್ಗಗಳಲ್ಲಿ ಸಮಾಜ ಕಲ್ಯಾಣ ಸರ್ಚಾರ್ಜ್ ಗೆ ವಿನಾಯಿತಿ ನೀಡಲಾಗಿದೆ.

ಪರೋಕ್ಷ ತೆರಿಗೆಗಳಲ್ಲಿ ಸುಮಾರು 2600 ಕೋಟಿ ರೂ.ಗಳ ಆದಾಯವನ್ನು ಕಳೆದುಕೊಳ್ಳಲಾಗುವುದು.
ಔಷಧಗಳು/ಔಷಧಿಗಳ ಆಮದಿನ ಮೇಲೆ ಪರಿಹಾರ
• 36 ಜೀವರಕ್ಷಕ ಔಷಧಿಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ (ಬಿಸಿಡಿ) ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ.
• 6 ಜೀವರಕ್ಷಕ ಔಷಧಿಗಳಿಗೆ 5% ರಿಯಾಯಿತಿ ಕಸ್ಟಮ್ಸ್ ಸುಂಕ
ಔಷಧೀಯ ಕಂಪೆನಿಗಳು ನಡೆಸುವ ರೋಗಿ ನೆರವು ಕಾರ್ಯಕ್ರಮಗಳ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಔಷಧಿಗಳು ಬಿಸಿಡಿ ಯಿಂದ ಸಂಪೂರ್ಣ ವಿನಾಯತಿ ಪಡೆದಿದ್ದು; 13 ಹೊಸ ರೋಗಿ ಸಹಾಯ/ನೆರವು ಕಾರ್ಯಕ್ರಮಗಳ ಜೊತೆ  ಇನ್ನೂ 37 ಔಷಧಿಗಳನ್ನು ಸೇರಿಸಲಾಗಿದೆ.

ದೇಶೀಯ ಉತ್ಪಾದನೆ ಮತ್ತು ಮೌಲ್ಯವರ್ಧನೆಗೆ ಬೆಂಬಲ
ನಿರ್ಣಾಯಕ ಖನಿಜಗಳು:
o ಕೋಬಾಲ್ಟ್ ಪುಡಿ ಮತ್ತು ತ್ಯಾಜ್ಯ, ಲಿಥಿಯಂ-ಐಯಾನ್ ಬ್ಯಾಟರಿಯ ಸ್ಕ್ರ್ಯಾಪ್, ಸೀಸ, ಸತು ಮತ್ತು ಇನ್ನೂ 12 ನಿರ್ಣಾಯಕ ಖನಿಜಗಳಿಗೆ ಬಿಸಿಡಿಯಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ.

    • ಜವಳಿ:
      o ಇನ್ನೂ ಎರಡು ವಿಧದ ಶಟಲ್-ಲೆಸ್ ಮಗ್ಗಗಳು ಸಂಪೂರ್ಣವಾಗಿ ವಿನಾಯಿತಿ ಪಡೆದ ಜವಳಿ ಯಂತ್ರೋಪಕರಣಗಳು.
      o ನೇಯ್ದ ಬಟ್ಟೆಗಳ ಮೇಲಿನ BCD ದರವನ್ನು "10% ಅಥವಾ 20%" ರಿಂದ "ಪ್ರತಿ ಕೆ.ಜಿ.ಗೆ 20% ಅಥವಾ 115 ಕ್ಕೆ ಪರಿಷ್ಕರಿಸಲಾಗಿದ್ದು , ಯಾವುದು ಹೆಚ್ಚೋ ಅದು ಅನ್ವಯಿಸುತ್ತದೆ.
      ಎಲೆಕ್ಟ್ರಾನಿಕ್ ಸರಕುಗಳು:
      o ಇಂಟರ್ಯಾಕ್ಟಿವ್ ಫ್ಲಾಟ್ ಪ್ಯಾನಲ್ ಡಿಸ್ಪ್ಲೇ (IFPD) ಮೇಲಿನ BCD ಯನ್ನು 10% ರಿಂದ 20% ಗೆ ಹೆಚ್ಚಿಸಲಾಗಿದೆ.
      o ಓಪನ್ ಸೆಲ್ ಮತ್ತು ಇತರ ಘಟಕಗಳ ಮೇಲೆ BCD ಯನ್ನು 5% ಗೆ ಇಳಿಸಲಾಗಿದೆ.
      o ತೆರೆದ ಕೋಶಗಳ ಭಾಗಗಳ ಮೇಲೆ BCD ಗೆ ವಿನಾಯಿತಿ ನೀಡಲಾಗಿದೆ.
      ಲಿಥಿಯಂ ಐಯಾನ್ ಬ್ಯಾಟರಿ:
      o ಇವಿ ಬ್ಯಾಟರಿ ತಯಾರಿಕೆಗೆ 35 ಹೆಚ್ಚುವರಿ ಬಂಡವಾಳ ಸರಕುಗಳು, ಮತ್ತು ಮೊಬೈಲ್ ಫೋನ್ ಬ್ಯಾಟರಿ ತಯಾರಿಕೆಗೆ 28 ಹೆಚ್ಚುವರಿ ಬಂಡವಾಳ ಸರಕುಗಳಿಗೆ ವಿನಾಯಿತಿ ನೀಡಲಾಗಿದೆ.
  •  ಹಡಗು ವಲಯ:
    o ಹಡಗುಗಳ ತಯಾರಿಕೆಗೆ ಕಚ್ಚಾ ವಸ್ತುಗಳು, ಘಟಕಗಳು, ಬಳಕೆ ವಸ್ತುಗಳು ಅಥವಾ ಭಾಗಗಳ ಮೇಲಿನ ಬಿಸಿಡಿ ವಿನಾಯಿತಿಯನ್ನು ಇನ್ನೂ ಹತ್ತು ವರ್ಷಗಳವರೆಗೆ ವಿಸ್ತರಿಸಲಾಗಿದೆ.
    o ಹಡಗು ಒಡೆಯುವಿಕೆಗೆ ಅದೇ ಸೌಲಭ್ಯ  ಮುಂದುವರಿಯುತ್ತದೆ.
    ದೂರಸಂಪರ್ಕ:
    o ಕ್ಯಾರಿಯರ್ ಗ್ರೇಡ್ ಈಥರ್ನೆಟ್ ಸ್ವಿಚ್ ಗಳ ಮೇಲಣ  BCD ಯನ್ನು 20% ರಿಂದ 10% ಕ್ಕೆ ಇಳಿಸಲಾಗಿದೆ.
    ರಫ್ತು ಉತ್ತೇಜನ
    ಕರಕುಶಲ ವಸ್ತುಗಳು:
    o ರಫ್ತಿನ ಅವಧಿಯನ್ನು ಆರು ತಿಂಗಳಿನಿಂದ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ, ಅಗತ್ಯವಿದ್ದರೆ ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಬಹುದು.
    o ಡ್ಯೂಟಿ-ಫ್ರೀ ಇನ್ ಪುಟ್ ಗಳ (ಸುಂಕ ರಹಿತ ಸರಕುಗಳ ) ಪಟ್ಟಿಗೆ ಒಂಬತ್ತು ಐಟಂಗಳನ್ನು ಸೇರಿಸಲಾಗಿದೆ.
    • ಚರ್ಮ ವಲಯ:
      o ವೆಟ್ ಬ್ಲೂ ಚರ್ಮದ ಮೇಲೆ BCD ಗೆ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ.
      o ಕ್ರಸ್ಟ್ ಚರ್ಮಕ್ಕೆ 20% ರಫ್ತು ಸುಂಕದಿಂದ ವಿನಾಯಿತಿ.
      ಸಾಗರ ಉತ್ಪನ್ನಗಳು:
      o BCD ಯನ್ನು  ಅನಲಾಗ್ ಉತ್ಪನ್ನಗಳ ತಯಾರಿಕೆ ಮತ್ತು ರಫ್ತಿಗಾಗಿ ಹೆಪ್ಪುಗಟ್ಟಿದ /ಶೀತಲೀಕೃತ ಫಿಶ್ ಪೇಸ್ಟ್ (ಸುರಿಮಿ) ಮೇಲೆ 30% ರಿಂದ 5% ಕ್ಕೆ ಇಳಿಸಲಾಗಿದೆ.
      o ಮೀನು ಮತ್ತು ಸೀಗಡಿ ಆಹಾರಗಳ ತಯಾರಿಕೆಗಾಗಿ ಮೀನಿನ ಜಲವಿಚ್ಛೇದನದ ಮೇಲೆ BCD ಯನ್ನು 15% ರಿಂದ 5% ಕ್ಕೆ ಇಳಿಸಲಾಗಿದೆ.
      ರೈಲ್ವೆ ಸರಕುಗಳಿಗೆ ದೇಶೀಯ ಎಂಆರ್ಒಗಳು:
      o ರೈಲ್ವೆ ಎಂಆರ್ ಒಗಳು ವಿಮಾನದಂತೆಯೇ ಪ್ರಯೋಜನ ಪಡೆಯುತ್ತವೆ ಮತ್ತು ದುರಸ್ತಿ ವಸ್ತುಗಳ ಆಮದಿನ ವಿಷಯದಲ್ಲಿ ಎಂಆರ್ ಒಗಳನ್ನು ರವಾನಿಸುತ್ತವೆ.
      o ಅಂತಹ ವಸ್ತುಗಳ ರಫ್ತಿಗೆ ಸಮಯ ಮಿತಿಯನ್ನು 6 ತಿಂಗಳಿನಿಂದ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ ಮತ್ತು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ.
  • ವ್ಯಾಪಾರ ಸೌಲಭ್ಯ
    ತಾತ್ಕಾಲಿಕ ಮೌಲ್ಯಮಾಪನಕ್ಕೆ ಸಮಯ ಮಿತಿ:
    o ತಾತ್ಕಾಲಿಕ ಮೌಲ್ಯಮಾಪನವನ್ನು ಅಂತಿಮಗೊಳಿಸಲು, ಎರಡು ವರ್ಷಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ, ಅದನ್ನು ಒಂದು ವರ್ಷ ವಿಸ್ತರಿಸಬಹುದು.
    ಸ್ವಯಂಪ್ರೇರಿತ ಅನುಸರಣೆ:
    o ಆಮದುದಾರರು ಅಥವಾ ರಫ್ತುದಾರರು, ಸರಕುಗಳನ್ನು ತೆರವುಗೊಳಿಸಿದ ನಂತರ, ಸ್ವಯಂಪ್ರೇರಿತವಾಗಿ ಸರಕುಗಳ ಭೌತಿಕ ಸಂಗತಿಗಳನ್ನು ಘೋಷಿಸಲು ಮತ್ತು ಬಡ್ಡಿಯೊಂದಿಗೆ ಆದರೆ ದಂಡವಿಲ್ಲದೆ ಸುಂಕವನ್ನು ಪಾವತಿಸಲು ಅನುವು ಮಾಡಿಕೊಡುವ ಹೊಸ ನಿಬಂಧನೆಯನ್ನು ಪರಿಚಯಿಸಲಾಗಿದೆ.
    ಅಂತಿಮ ಬಳಕೆಗೆ ವಿಸ್ತೃತ ಸಮಯ:
    o ಸಂಬಂಧಿತ ನಿಯಮಗಳಲ್ಲಿ ಆಮದು ಮಾಡಿದ ಇನ್ ಪುಟ್ ಗಳ (ಸರಕುಗಳ) ಅಂತಿಮ ಬಳಕೆಯ ಸಮಯ ಮಿತಿಯನ್ನು ಆರು ತಿಂಗಳಿನಿಂದ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ.
    o ಅಂತಹ ಆಮದುದಾರರು ಮಾಸಿಕ ಹೇಳಿಕೆಯ ಬದಲು ತ್ರೈಮಾಸಿಕ ಹೇಳಿಕೆಗಳನ್ನು ಮಾತ್ರ ಸಲ್ಲಿಸಬೇಕು.
      

 

***** 


(Release ID: 2098820) Visitor Counter : 18