ಹಣಕಾಸು ಸಚಿವಾಲಯ
2024-25ರ ಆರ್ಥಿಕ ಸಮೀಕ್ಷೆಯ ಮುಖ್ಯಾಂಶಗಳು
ಭಾರತದ ನೈಜ ಜಿಡಿಪಿ ಮತ್ತು ಜಿವಿಎ ಬೆಳವಣಿಗೆಯನ್ನು ಹಣಕಾಸು ವರ್ಷ 25 ರಲ್ಲಿ ಶೇಕಡಾ 6.4 ಎಂದು ಅಂದಾಜಿಸಲಾಗಿದೆ (ಮೊದಲ ಮುಂಗಡ ಅಂದಾಜು)
2026ರ ಆರ್ಥಿಕ ವರ್ಷದಲ್ಲಿ ನೈಜ ಜಿಡಿಪಿ ಬೆಳವಣಿಗೆ ದರ ಶೇ.6.3ರಿಂದ ಶೇ.6.8ರ ನಡುವೆ ಇರಲಿದೆ
ಮಧ್ಯಮಾವಧಿಯ ಬೆಳವಣಿಗೆಯ ಸಾಮರ್ಥ್ಯ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ತಳಮಟ್ಟದ ರಚನಾತ್ಮಕ ಸುಧಾರಣೆಗಳು ಮತ್ತು ನಿಯಂತ್ರಣಗಳನ್ನು ಸಡಿಲಗೊಳಿಸುವಿಕೆಗೆ ಒತ್ತು
ಭೌಗೋಳಿಕ-ಆರ್ಥಿಕ ವಿಘಟನೆ (ಜಿಇಎಫ್) ಜಾಗತೀಕರಣವನ್ನು ಬದಲಾಯಿಸುತ್ತಿದೆ, ಇದು ತಕ್ಷಣದ ಆರ್ಥಿಕ ಮರುಸಂಘಟನೆ ಮತ್ತು ಮರು ಹೊಂದಾಣಿಕೆಗಳಿಗೆ ಹಾದಿ ತೋರಿಸುತ್ತದೆ
ಸುಧಾರಣೆಗಳು ಮತ್ತು ಸುಗಮ ವ್ಯಾಪಾರ 2.0ರ ಮೇಲಿನ ಆದ್ಯತೆ ಭಾರತದ ಮಿಟ್ಟೆಲ್ ಸ್ಟಾಂಡ್ ಅಂದರೆ್, ಅಂದರೆ ಭಾರತದ ಎಸ್ ಎಂಇ (ಸಣ್ಣ ಮತ್ತು ಮಧ್ಯಮ ಉದ್ಯಮ)ವಲಯವನ್ನು ರಚಿಸಲು ಗಮನ ಹರಿಸುವುದು
ಮೂಲಸೌಕರ್ಯದ ಅವಶ್ಯಕತೆಗಳನ್ನು ಪೂರೈಸಲು ಖಾಸಗಿ ವಲಯದ ಭಾಗವಹಿಸುವಿಕೆ ನಿರ್ಣಾಯಕವಾಗಿರುತ್ತದೆ
ಕ್ಯಾಪೆಕ್ಸ್ ಹಣಕಾಸು ವರ್ಷ 21 ರಿಂದ ಹಣಕಾಸು ವರ್ಷ 24 ರವರೆಗೆ ನಿರಂತರವಾಗಿ ಸುಧಾರಿಸಿದೆ ಮತ್ತು ಸಾರ್ವತ್ರಿಕ ಚುನಾವಣೆಗಳ ನಂತರ, ಇದು ಶೇಕಡಾ 8.2 ರಷ್ಟು ಹೆಚ್ಚಾಗಿದೆ
ಪ್ರಮುಖ ಮೂಲಸೌಕರ್ಯ ವಲಯಗಳ ಬಂಡವಾಳ ವೆಚ್ಚವು ಹಣಕಾಸು ವರ್ಷ 2020 ರಿಂದ ಹಣಕಾಸು ವರ್ಷ 24 ರವರೆಗೆ ಶೇಕಡಾ 38.8 ರ ದರದಲ್ಲಿ ವೃದ್ಧಿಯಾಗಿದೆ
ಆರ್ ಬಿ ಐ ಮತ್ತು ಐಎಂಎಫ್ ಗಳು ಭಾರತದ ಗ್ರಾಹಕ ಬೆಲೆ ಹಣದುಬ್ಬರವು ಹಣಕಾಸು ವರ್ಷ 26 ರಲ್ಲಿ ಶೇಕಡಾ 4 ರ ಗುರಿಯೊಂದಿಗೆ ಹೊಂದಿಕೆಯಾಗುತ್ತದೆ ಎಂದು ಊಹಿಸಿವೆ
Posted On:
31 JAN 2025 2:20PM by PIB Bengaluru
2025ರ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಒಟ್ಟಾರೆ ರಫ್ತು ಶೇ.6ರಷ್ಟು, ಸೇವೆಗಳು ಶೇ.11.6ರಷ್ಟು (ವರ್ಷದಿಂದ ವರ್ಷಕ್ಕೆ ಹೋಲಿಸಿದಾಗ) ಬೆಳವಣಿಗೆ ಕಂಡಿವೆ
ಯುಎನ್ಸಿಟಿಎಡಿ ಪ್ರಕಾರ, ದೂರಸಂಪರ್ಕ, ಕಂಪ್ಯೂಟರ್ ಮತ್ತು ಮಾಹಿತಿ ಸೇವೆಗಳಲ್ಲಿ ಭಾರತವು ವಿಶ್ವದ 2 ನೇ ಅತಿದೊಡ್ಡ ರಫ್ತುದಾರನಾಗಿದೆ
ವಿದೇಶಿ ವಿನಿಮಯ 640.3 ಬಿಲಿಯನ್ ಡಾಲರ್ ಆಗಿದ್ದು, ಇದು 10.9 ತಿಂಗಳ ಆಮದು ಮತ್ತು ಶೇಕಡಾ 90 ರಷ್ಟು ಬಾಹ್ಯ ಸಾಲವನ್ನು ಸರಿದೂಗಿಸಲು ಸಾಕಾಗುತ್ತದೆ
ಸರ್ಕಾರದ ಬಾಹ್ಯಾಕಾಶ ವಿಷನ್ 2047, ಗಗನಯಾನ ಮಿಷನ್ ಮತ್ತು ಚಂದ್ರಯಾನ -4 ಲೂನಾರ್ ಮಾದರಿ ಹಿಂದಿರುಗುವ ಕಾರ್ಯಾಚರಣೆಯನ್ನು ಒಳಗೊಂಡಿದೆ
ಸ್ಮಾರ್ಟ್ಫೋನ್ ಆಮದಿನಲ್ಲಿ ತೀವ್ರ ಕಡಿತವಾಗಿದ್ದು, ಶೇಕಡಾ 99 ರಷ್ಟು ದೇಶೀಯವಾಗಿ ತಯಾರಿಸಲಾಗುತ್ತಿದೆ: ಆರ್ಥಿಕ ಸಮೀಕ್ಷೆ 2024-25
ಡಬ್ಲ್ಯುಐಪಿಒ ವರದಿ 2022 - ಜಾಗತಿಕವಾಗಿ ಉನ್ನತ 10 ಪೇಟೆಂಟ್ ಫೈಲಿಂಗ್ ಕಚೇರಿಗಳಲ್ಲಿ ಭಾರತ ಆರನೇ ಸ್ಥಾನದಲ್ಲಿದೆ
ಎಂಎಸ್ಎಂಇಗಳಿಗೆ ಈಕ್ವಿಟಿ ಫಂಡಿಂಗ್ ಒದಗಿಸಲು 50,000 ಕೋಟಿ ರೂ.ಗಳ ಸ್ವಾವಲಂಬಿ ಭಾರತ ನಿಧಿಯನ್ನು ಪ್ರಾರಂಭಿಸಲಾಗಿದೆ
ಭಾರತದ ಸೇವೆಗಳ ರಫ್ತು ಬೆಳವಣಿಗೆಯು 2025 ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಶೇಕಡಾ 12.8 ಕ್ಕೆ ಏರಿದೆ, ಇದು 2024 ರ ಹಣಕಾಸು ವರ್ಷದಲ್ಲಿ ಶೇಕಡಾ 5.7 ರಷ್ಟಿತ್ತು
ಜಿಡಿಪಿಗೆ ಪ್ರವಾಸೋದ್ಯಮ ಕ್ಷೇತ್ರದ ಕೊಡುಗೆ 2023 ರ ಹಣಕಾಸು ವರ್ಷದಲ್ಲಿ ಸಾಂಕ್ರಾಮಿಕ ಪೂರ್ವದ ಮಟ್ಟವಾದ ಶೇಕಡಾ 5 ಕ್ಕೆ ಮರಳಿದೆ
ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ವಲಯವು ಪ್ರಸ್ತುತ ಬೆಲೆಗಳಲ್ಲಿ 2024 ರ ಹಣಕಾಸು ವರ್ಷದಲ್ಲಿ (ಪಿಇ) ದೇಶದ ಜಿಡಿಪಿಗೆ ಸರಿಸುಮಾರು 16 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ
ಖಾರಿಫ್ ಆಹಾರ ಧಾನ್ಯ ಉತ್ಪಾದನೆ 1647.05 ಎಲ್ಎಂಟಿ ತಲುಪುವ ನಿರೀಕ್ಷೆಯಿದೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 89.37 ಎಲ್ಎಂಟಿ ಹೆಚ್ಚಾಗಿದೆ
ಮೀನುಗಾರಿಕೆ ವಲಯವು ಶೇಕಡಾ 8.7 ರಷ್ಟು ಗರಿಷ್ಠ ಸಿಎಜಿಆರ್ ಅನ್ನು ತೋರಿಸಿದೆ, ನಂತರದ ಸ್ಥಾನದಲ್ಲಿ ಜಾನುವಾರುಗಳು ಶೇಕಡಾ 5.8 ಸಿಎಜಿಆರ್ ಅನ್ನು ತೋರಿಸಿವೆ
ಪಳೆಯುಳಿಕೆಯೇತರ ಇಂಧನ ಮೂಲದಿಂದ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಒಟ್ಟು ಸಾಮರ್ಥ್ಯದ ಶೇಕಡಾ 46.8 ರಷ್ಟಿದೆ
2005 ಮತ್ತು 2023 ರ ನಡುವೆ 2.29 ಬಿಲಿಯನ್ ಟನ್ ಕಾರ್ಬನ್ ಡೈಆಕ್ಸೈಡ್ ಗೆ ಸಮನಾದ ಹೆಚ್ಚುವರಿ ಇಂಗಾಲದ ಸಿಂಕ್ ರಚಿಸಲಾಗಿದೆ
2030 ರ ವೇಳೆಗೆ, ಜೀವನ ಕ್ರಮಗಳು ಜಾಗತಿಕವಾಗಿ ಗ್ರಾಹಕರಿಗೆ ಸುಮಾರು 440 ಬಿಲಿಯನ್ ಡಾಲರ್ ಉಳಿಸಬಹುದು
ಸಾಮಾಜಿಕ ಸೇವೆಗಳ ವೆಚ್ಚವು ಹಣಕಾಸು ವರ್ಷ 21 ರಿಂದ ಹಣಕಾಸು ವರ್ಷ 25 ರವರೆಗೆ ಶೇಕಡಾ 15 ರಷ್ಟು ವಾರ್ಷಿಕ ಬೆಳವಣಿಗೆಯ ದರವನ್ನು ದಾಖಲಿಸಿದೆ
ಸರ್ಕಾರದ ಆರೋಗ್ಯ ವೆಚ್ಚವು ಶೇಕಡಾ 29.0 ರಿಂದ 48.0 ಕ್ಕೆ ಏರಿದೆ; ಜನರ ಆರೋಗ್ಯ ವೆಚ್ಚ ಶೇ.62.6ರಿಂದ ಶೇ.39.4ಕ್ಕೆ ಇಳಿಕೆ
2017-18ರಲ್ಲಿ ಶೇ.6.0ರಷ್ಟಿದ್ದ ನಿರುದ್ಯೋಗ ಪ್ರಮಾಣ 2023-24ರಲ್ಲಿ ಶೇ.3.2ಕ್ಕೆ ಇಳಿಕೆಯಾಗಿದೆ
ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತವೆ, ಇದು ವಿಕ್ಷಿತ್ ಭಾರತದ ದೃಷ್ಟಿಕೋನವನ್ನು ಸಾಧಿಸಲು ಅವಶ್ಯಕವಾಗಿದೆ
ಪಿಎಂ-ಇಂಟರ್ನ್ಶಿಪ್ ಯೋಜನೆ ಉದ್ಯೋಗ ಸೃಷ್ಟಿಗೆ ಪರಿವರ್ತಕ ವೇಗವರ್ಧಕವಾಗಿ ಹೊರಹೊಮ್ಮಿದೆ
ದೊಡ್ಡ ಪ್ರಮಾಣದ ಎಐ ಅಳವಡಿಕೆಗೆ ಅಡೆತಡೆಗಳು ಪ್ರಸ್ತುತದಲ್ಲಿ ಹಾಗೇ ಉಳಿದಿವೆ, ಇದು ನೀತಿ ನಿರೂಪಕರಿಗೆ ಕಾರ್ಯನಿರ್ವಹಿಸಲು ಒಂದು ಅವಕಾಶವನ್ನು ಒದಗಿಸಿದೆ
ಎಐ-ಚಾಲಿತ ರೂಪಾಂತರದ ಪ್ರತಿಕೂಲ ಸಾಮಾಜಿಕ ಪರಿಣಾಮಗಳನ್ನು ಕಡಿಮೆ ಮಾಡಲು ಸರ್ಕಾರ, ಖಾಸಗಿ ವಲಯ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಯೋಗದ ಪ್ರಯತ್ನ ಅತ್ಯಗತ್ಯ
ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2024-25ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಸಮೀಕ್ಷೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ;
ಆರ್ಥಿಕತೆಯ ಸ್ಥಿತಿ: ವೇಗದ ಹಾದಿಗೆ ಮರಳುವುದು
1. ಭಾರತದ ನೈಜ ಜಿಡಿಪಿ ಬೆಳವಣಿಗೆಯನ್ನು ಹಣಕಾಸು ವರ್ಷ 25 ರಲ್ಲಿ ಶೇಕಡಾ 6.4 ಎಂದು ಅಂದಾಜಿಸಲಾಗಿದೆ (ರಾಷ್ಟ್ರೀಯ ಆದಾಯದ ಮೊದಲ ಮುಂಗಡ ಅಂದಾಜಿನ ಪ್ರಕಾರ), ಇದು ಸರಿಸುಮಾರು ದಶಕದ ಸರಾಸರಿಗೆ ಸಮನಾಗಿದೆ.
2. ನೈಜ ಒಟ್ಟು ಮೌಲ್ಯವರ್ಧಿತ (ಜಿವಿಎ) ಸಹ 2025 ರ ಹಣಕಾಸು ವರ್ಷದಲ್ಲಿ ಶೇಕಡಾ 6.4 ರಷ್ಟು ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ.
3. ಮುಂದಿನ ಐದು ವರ್ಷಗಳಲ್ಲಿ ಶೇಕಡಾ 3.2 ರಷ್ಟು ಬೆಳವಣಿಗೆಯನ್ನು ಐಎಂಎಫ್ ಅಂದಾಜಿಸಿದೆಯಾದರೂ, ಜಾಗತಿಕ ಆರ್ಥಿಕತೆಯು 2023 ರಲ್ಲಿ ಸರಾಸರಿ ಶೇಕಡಾ 3.3 ರಷ್ಟು ಬೆಳೆದಿದೆ,
4. ಬೆಳವಣಿಗೆಯ ಮೇಲ್ಮುಖ ಮತ್ತು ಕೆಳಮುಖ ಚಲನೆಯನ್ನು ಗಮನದಲ್ಲಿಟ್ಟುಕೊಂಡು 2026ರ ಹಣಕಾಸು ವರ್ಷದಲ್ಲಿ ನೈಜ ಜಿಡಿಪಿ ಬೆಳವಣಿಗೆಯು ಶೇಕಡಾ 6.3 ರಿಂದ 6.8 ರ ನಡುವೆ ಇರುವ ನಿರೀಕ್ಷೆಯಿದೆ.
5. ಮಧ್ಯಮಾವಧಿಯ ಬೆಳವಣಿಗೆಯ ಸಾಮರ್ಥ್ಯವನ್ನು ಬಲಪಡಿಸಲು ಮತ್ತು ಭಾರತೀಯ ಆರ್ಥಿಕತೆಯ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ತಳಮಟ್ಟದ ರಚನಾತ್ಮಕ ಸುಧಾರಣೆಗಳು ಮತ್ತು ನಿಯಂತ್ರಣಗಳನ್ನು ಸಡಿಲಗೊಳಿಸುವುದಕ್ಕೆ ಒತ್ತು.
6. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ನಡೆಯುತ್ತಿರುವ ಸಂಘರ್ಷಗಳು ಮತ್ತು ಜಾಗತಿಕ ವ್ಯಾಪಾರ ನೀತಿಯ ಅಪಾಯಗಳು ಜಾಗತಿಕ ಆರ್ಥಿಕ ದೃಷ್ಟಿಕೋನಕ್ಕೆ ಗಮನಾರ್ಹ ಸವಾಲುಗಳನ್ನು ಒಡ್ಡುತ್ತಲೇ ಇವೆ.
7. ಚಿಲ್ಲರೆ ಹಣದುಬ್ಬರವು 2024ರ ಹಣಕಾಸು ವರ್ಷದಲ್ಲಿ ಶೇ.5.4ರಿಂದ 2024ರ ಏಪ್ರಿಲ್-ಡಿಸೆಂಬರ್ ನಲ್ಲಿ ಶೇ.4.9ಕ್ಕೆ ಇಳಿದಿದೆ.
8. ಬಂಡವಾಳ ವೆಚ್ಚ (ಕ್ಯಾಪೆಕ್ಸ್) ಹಣಕಾಸು ವರ್ಷ 21 ರಿಂದ ಹಣಕಾಸು ವರ್ಷ 24 ರವರೆಗೆ ನಿರಂತರವಾಗಿ ಸುಧಾರಿಸಿದೆ. ಸಾರ್ವತ್ರಿಕ ಚುನಾವಣೆಗಳ ನಂತರ, 2024 ರ ಜುಲೈ-ನವೆಂಬರ್ ಅವಧಿಯಲ್ಲಿ ಕ್ಯಾಪೆಕ್ಸ್ ವರ್ಷದಿಂದ ವರ್ಷಕ್ಕೆ ಆಧಾರದಲ್ಲಿ ಶೇಕಡಾ 8.2 ರಷ್ಟು ಬೆಳವಣಿಗೆ ಕಂಡಿದೆ.
9. ಜಾಗತಿಕ ಸೇವಾ ರಫ್ತಿನಲ್ಲಿ ಭಾರತವು ಏಳನೇ ಅತಿದೊಡ್ಡ ಪಾಲನ್ನು ಹೊಂದಿದೆ, ಇದು ಈ ವಲಯದಲ್ಲಿ ಭಾರತದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಒತ್ತಿಹೇಳುತ್ತದೆ.
10. 2024 ರ ಏಪ್ರಿಲ್ ನಿಂದ ಡಿಸೆಂಬರ್ ಅವಧಿಯಲ್ಲಿ, ಪೆಟ್ರೋಲಿಯಂಯೇತರ ಮತ್ತು ರತ್ನ ಮತ್ತು ಆಭರಣಯೇತರ ರಫ್ತು ಶೇಕಡಾ 9.1 ರಷ್ಟು ಹೆಚ್ಚಾಗಿದೆ, ಇದು ಅಸ್ಥಿರ ಜಾಗತಿಕ ಪರಿಸ್ಥಿತಿಗಳ ನಡುವೆ ಭಾರತದ ಸರಕು ರಫ್ತುಗಳ ಸ್ಥಿತಿಸ್ಥಾಪಕತ್ವವನ್ನು ಪ್ರತಿಬಿಂಬಿಸುತ್ತದೆ.
ವಿತ್ತೀಯ ಮತ್ತು ಹಣಕಾಸು ವಲಯದ ಬೆಳವಣಿಗೆಗಳು: ಕಾರ್ಡ್ ಮತ್ತು ಕುದುರೆ
1. ಸಾಲದ ಬೆಳವಣಿಗೆಯು ಠೇವಣಿ ಬೆಳವಣಿಗೆಯೊಂದಿಗೆ ಒಗ್ಗೂಡುವುದರೊಂದಿಗೆ ಬ್ಯಾಂಕ್ ಸಾಲವು ಸ್ಥಿರ ದರದಲ್ಲಿ ಬೆಳೆದಿದೆ.
2. ಅನುಸೂಚಿತ ವಾಣಿಜ್ಯ ಬ್ಯಾಂಕುಗಳ ಲಾಭದಾಯಕತೆ ಸುಧಾರಿಸಿದೆ, ಇದು ಒಟ್ಟು ಅನುತ್ಪಾದಕ ಆಸ್ತಿಗಳ (ಜಿಎನ್ಪಿಎ) ಕುಸಿತ ಮತ್ತು ಬಂಡವಾಳ ಹಾಗು ಅಪಾಯವನ್ನು ಒಳಗೊಂಡ ಆಸ್ತಿ ಅನುಪಾತ (ಸಿಆರ್ಎಆರ್) ಹೆಚ್ಚಳದಲ್ಲಿ ಪ್ರತಿಫಲಿಸುತ್ತದೆ.
3. ಸಾಲದ ಬೆಳವಣಿಗೆಯು ಸತತ ಎರಡು ವರ್ಷಗಳ ಕಾಲ ನಾಮಮಾತ್ರ ಜಿಡಿಪಿ ಬೆಳವಣಿಗೆಯನ್ನು ಮೀರಿಸಿದೆ. ಸಾಲ-ಜಿಡಿಪಿ ಅಂತರವು ಹಣಕಾಸು ವರ್ಷ 23 ರ ಮೊದಲ ತ್ರೈಮಾಸಿಕದಲ್ಲಿ (-) 10.3 ಶೇಕಡಾದಿಂದ 2025 ರ ಮೊದಲ ತ್ರೈಮಾಸಿಕದಲ್ಲಿ (-) 0.3 ಶೇಕಡಾಕ್ಕೆ ಇಳಿದಿದೆ, ಇದು ಸುಸ್ಥಿರ ಬ್ಯಾಂಕ್ ಸಾಲದ ಬೆಳವಣಿಗೆಯನ್ನು ಸೂಚಿಸುತ್ತದೆ.
4. ಬ್ಯಾಂಕಿಂಗ್ ವಲಯವು ಆಸ್ತಿ ಗುಣಮಟ್ಟ ಸುಧಾರಣೆ, ದೃಢವಾದ ಬಂಡವಾಳ ಬಫರ್ ಗಳು ಮತ್ತು ಬಲವಾದ ಕಾರ್ಯಾಚರಣೆಯ ಕಾರ್ಯಕ್ಷಮತೆಯಲ್ಲಿ ಸುಧಾರಣೆಯನ್ನು ಪ್ರದರ್ಶಿಸುತ್ತದೆ.
5. ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ ಒಟ್ಟು ಅನುತ್ಪಾದಕ ಆಸ್ತಿಗಳು (ಜಿಎನ್ಪಿಎ) ಸೆಪ್ಟೆಂಬರ್ 2024 ರ ಅಂತ್ಯದ ವೇಳೆಗೆ ಒಟ್ಟು ಸಾಲಗಳು ಮತ್ತು ಮುಂಗಡಗಳ ಶೇಕಡಾ 2.6 ಕ್ಕೆ ಇಳಿದಿವೆ. ಇದು 12 ವರ್ಷಗಳಅವಧಿಯಲ್ಲಿ ಕನಿಷ್ಠ ಮಟ್ಟವಾಗಿದೆ.
6. ದಿವಾಳಿತನ ಮತ್ತು ಸುಸ್ತಿ ಸಾಲ ಸಂಹಿತೆಯಡಿ, 2024 ರ ಸೆಪ್ಟೆಂಬರ್ ವರೆಗೆ 1,068 ಯೋಜನೆಗಳ ಪರಿಹಾರದಲ್ಲಿ 3.6 ಲಕ್ಷ ಕೋಟಿ ರೂ. ಬಂದಿದೆ. ಇದು ಲಿಕ್ವಿಡೇಶನ್ ಮೌಲ್ಯಕ್ಕೆ ಹೋಲಿಸಿದಾಗ ಶೇಕಡಾ 161 ಮತ್ತು ಒಳಗೊಂಡಿರುವ ಸ್ವತ್ತುಗಳ ನ್ಯಾಯೋಚಿತ ಮೌಲ್ಯದ ಶೇಕಡಾ 86.1 ರಷ್ಟಿದೆ.
7. ಚುನಾವಣೆ-ಚಾಲಿತ ಮಾರುಕಟ್ಟೆ ಚಂಚಲತೆಯ ಸವಾಲುಗಳ ಹೊರತಾಗಿಯೂ ಭಾರತೀಯ ಷೇರು ಮಾರುಕಟ್ಟೆಗಳು ತನ್ನ ಉದಯೋನ್ಮುಖ ಮಾರುಕಟ್ಟೆ ತಜ್ಞರನ್ನು/ಸಹವರ್ತಿಗಳನ್ನು ಮೀರಿ ಸಾಧನೆ ದಾಖಲಿಸಿವೆ.
.
8. ಪ್ರಾಥಮಿಕ ಮಾರುಕಟ್ಟೆಗಳಿಂದ (ಈಕ್ವಿಟಿ ಮತ್ತು ಸಾಲ) ಒಟ್ಟು ಸಂಪನ್ಮೂಲ ಕ್ರೋಢೀಕರಣವು 2024 ರ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ 11.1 ಲಕ್ಷ ಕೋಟಿ ರೂ.ಗಳಷ್ಟಿದೆ, ಇದು ಹಣಕಾಸು ವರ್ಷ 24 ರಲ್ಲಿ ಸಂಗ್ರಹಿಸಿದ ಮೊತ್ತಕ್ಕಿಂತ ಐದು ಪ್ರತಿಶತ ಹೆಚ್ಚಾಗಿದೆ.
9. ಬಿಎಸ್ಇ ಷೇರು ಮಾರುಕಟ್ಟೆ ಬಂಡವಾಳೀಕರಣ ಮತ್ತು ಜಿಡಿಪಿ ಅನುಪಾತವು 2024 ರ ಡಿಸೆಂಬರ್ ಅಂತ್ಯದ ವೇಳೆಗೆ ಶೇಕಡಾ 136 ರಷ್ಟಿತ್ತು, ಇದು ಇತರ ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳಾದ ಚೀನಾ (65 ಶೇಕಡಾ) ಮತ್ತು ಬ್ರೆಜಿಲ್ (37 ಶೇಕಡಾ) ಗಿಂತ ಹೆಚ್ಚಾಗಿದೆ.
10. ಭಾರತದ ವಿಮಾ ಮಾರುಕಟ್ಟೆಯು ತನ್ನ ಮೇಲ್ಮುಖ ಪಥವನ್ನು ಮುಂದುವರಿಸಿದೆ, ಒಟ್ಟು ವಿಮಾ ಪ್ರೀಮಿಯಂಗಳು 2024 ರ ಹಣಕಾಸು ವರ್ಷದಲ್ಲಿ ಶೇಕಡಾ 7.7 ರಷ್ಟು ಏರಿಕೆಯಾಗಿ 11.2 ಲಕ್ಷ ಕೋಟಿ ರೂ.ಗೆ ತಲುಪಿದೆ.
11. ಭಾರತದ ಪಿಂಚಣಿ ವಲಯವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, 2024 ರ ಸೆಪ್ಟೆಂಬರ್ ಹೊತ್ತಿಗೆ ಒಟ್ಟು ಪಿಂಚಣಿ ಚಂದಾದಾರರ ಸಂಖ್ಯೆ ಶೇಕಡಾ 16 ರಷ್ಟು (ವೈಒವೈ-ವರ್ಷದಿಂದ ವರ್ಷಕ್ಕೆ ) ಹೆಚ್ಚಾಗಿದೆ.
ಬಾಹ್ಯ ವಲಯ: ಎಫ್ಡಿಐ ಸರಿದೂಗಿಸುವಿಕೆ
1. ಜಾಗತಿಕ ಅನಿಶ್ಚಿತತೆಗಳು ಮತ್ತು ಪ್ರತಿಕೂಲ ಪರಿಸ್ಥಿತಿಗಳ ನಡುವೆ ಭಾರತದ ಬಾಹ್ಯ ವಲಯವು ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸುತ್ತಿದೆ.
2. ಒಟ್ಟಾರೆ ರಫ್ತು (ಸರಕು + ಸೇವೆಗಳು) ಹಣಕಾಸು ವರ್ಷ 25 ರ ಮೊದಲ ಒಂಬತ್ತು ತಿಂಗಳಲ್ಲಿ ಶೇಕಡಾ 6 ರಷ್ಟು (ವೈಒವೈ) ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಸೇವಾ ವಲಯ ಶೇ.11.6ರಷ್ಟು ಬೆಳವಣಿಗೆ ದಾಖಲಿಸಿದೆ.
3. ದೂರಸಂಪರ್ಕ, ಕಂಪ್ಯೂಟರ್ ಮತ್ತು ಮಾಹಿತಿ ಸೇವೆಗಳಲ್ಲಿ ಭಾರತವು ಜಾಗತಿಕ ರಫ್ತು ಮಾರುಕಟ್ಟೆಯಲ್ಲಿ ಶೇಕಡಾ 10.2 ರಷ್ಟನ್ನು ಹೊಂದಿದೆ, ಯುಎನ್ಸಿಟಿಎಡಿ ಪ್ರಕಾರ, ವಿಶ್ವದ 2 ನೇ ಅತಿದೊಡ್ಡ ರಫ್ತುದಾರ ರಾಷ್ಟ್ರವಾಗಿದೆ.
4. ಭಾರತದ ಚಾಲ್ತಿ ಖಾತೆ ಕೊರತೆ (ಸಿಎಡಿ) 2025 ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯ ಶೇಕಡಾ 1.2 ರಷ್ಟಿದೆ, ಇದು ಹೆಚ್ಚುತ್ತಿರುವ ನಿವ್ವಳ ಸೇವೆಗಳ ಸ್ವೀಕೃತಿಗಳು ಮತ್ತು ಖಾಸಗಿ ವರ್ಗಾವಣೆ ಸ್ವೀಕೃತಿಗಳ ಹೆಚ್ಚಳದಿಂದ ಬೆಂಬಲಿತವಾಗಿದೆ.
5. ಒಟ್ಟು ವಿದೇಶಿ ನೇರ ಹೂಡಿಕೆ (ಎಫ್ಡಿಐ) ಒಳಹರಿವು 2025 ರ ಹಣಕಾಸು ವರ್ಷದಲ್ಲಿ ಪುನರುಜ್ಜೀವನವನ್ನು ದಾಖಲಿಸಿದೆ, ಇದು ಹಣಕಾಸು ವರ್ಷ 24 ರ ಮೊದಲ ಎಂಟು ತಿಂಗಳಲ್ಲಿ ಇದ್ದ 47.2 ಬಿಲಿಯನ್ ಡಾಲರ್ನಿಂದ 2025 ರ ಇದೇ ಅವಧಿಯಲ್ಲಿ 55.6 ಬಿಲಿಯನ್ ಡಾಲರಿಗೆ ಏರಿದೆ, ಇದು ಶೇಕಡಾ 17.9 ರಷ್ಟು ಬೆಳವಣಿಗೆಯಾಗಿದೆ.
6. 2024 ರ ಡಿಸೆಂಬರ್ ಅಂತ್ಯದ ವೇಳೆಗೆ ಭಾರತದ ವಿದೇಶಿ ವಿನಿಮಯ ಮೀಸಲು 640.3 ಬಿಲಿಯನ್ ಡಾಲರ್ ಆಗಿದ್ದು, ಇದು 10.9 ತಿಂಗಳ ಆಮದು ಮತ್ತು ದೇಶದ ಬಾಹ್ಯ ಸಾಲದ ಸುಮಾರು 90 ಪ್ರತಿಶತವನ್ನು ಸರಿದೂಗಿಸಲು ಸಾಕಾಗುತ್ತದೆ.
7. ಭಾರತದ ಬಾಹ್ಯ ಸಾಲವು ಕಳೆದ ಕೆಲವು ವರ್ಷಗಳಿಂದ ಸ್ಥಿರವಾಗಿದೆ, ಬಾಹ್ಯ ಸಾಲ ಮತ್ತು ಜಿಡಿಪಿ ಅನುಪಾತವು 2024 ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇಕಡಾ 19.4 ರಷ್ಟಿತ್ತು.
ಬೆಲೆಗಳು ಮತ್ತು ಹಣದುಬ್ಬರ: ಡೈನಾಮಿಕ್ಸ್ (ಚಲನಶೀಲತೆಯನ್ನು) ಅರ್ಥಮಾಡಿಕೊಳ್ಳುವುದು
1. ಐಎಂಎಫ್ ಪ್ರಕಾರ, ಜಾಗತಿಕ ಹಣದುಬ್ಬರ ದರವು 2022 ರಲ್ಲಿ ಶೇಕಡಾ 8.7 ರ ಗರಿಷ್ಠ ಮಟ್ಟದಿಂದ 2024 ರ ವೇಳೆಗೆ ಶೇಕಡಾ 5.7 ಕ್ಕೆ ಇಳಿದಿದೆ.
2. ಭಾರತದಲ್ಲಿ ಚಿಲ್ಲರೆ ಹಣದುಬ್ಬರವು ಹಣಕಾಸು ವರ್ಷ 24 ರಲ್ಲಿ ಇದ್ದ ಶೇಕಡಾ 5.4 ರಿಂದ ಹಣಕಾಸು ವರ್ಷ 25 ರಲ್ಲಿ (ಏಪ್ರಿಲ್-ಡಿಸೆಂಬರ್ 2024) ಶೇಕಡಾ 4.9 ಕ್ಕೆ ಇಳಿದಿದೆ.
3. ಆರ್ಬಿಐ ಮತ್ತು ಐಎಂಎಫ್ ಗಳು ಭಾರತದ ಗ್ರಾಹಕ ಬೆಲೆ ಹಣದುಬ್ಬರವು ಕ್ರಮೇಣ ಹಣಕಾಸು ವರ್ಷ 26 ರಲ್ಲಿ ಶೇಕಡಾ 4 ರ ಗುರಿಯೊಂದಿಗೆ ಹೊಂದಿಕೆಯಾಗುತ್ತವೆ ಎಂದು ಅಂದಾಜಿಸಿವೆ.
4. ಹವಾಮಾನ ವೈಪರೀತ್ಯಗಳ ಪರಿಣಾಮಗಳನ್ನು ತಗ್ಗಿಸಲು ಮತ್ತು ದೀರ್ಘಕಾಲೀನ ಬೆಲೆ ಸ್ಥಿರತೆಯನ್ನು ಸಾಧಿಸಲು ಹವಾಮಾನ-ಸ್ಥಿತಿಸ್ಥಾಪಕತ್ವದ ಬೆಳೆ ಪ್ರಭೇದಗಳ ಅಭಿವೃದ್ಧಿ ಮತ್ತು ವರ್ಧಿತ ಕೃಷಿ ಪದ್ಧತಿಗಳು ಅತ್ಯಗತ್ಯ.
ಮಧ್ಯಮಾವಧಿಯ ದೃಷ್ಟಿಕೋನ: ನಿಯಂತ್ರಣವನ್ನು ಸಡಿಲಗೊಳಿಸುವುದರಿಂದ ಬೆಳವಣಿಗೆಗೆ ಚಾಲನೆ
1. ಭಾರತೀಯ ಆರ್ಥಿಕತೆಯು ಅಭೂತಪೂರ್ವ ಆರ್ಥಿಕ ಸವಾಲು ಮತ್ತು ಅವಕಾಶವನ್ನು ಪ್ರತಿನಿಧಿಸುವ ಬದಲಾವಣೆಯ ಮಧ್ಯದಲ್ಲಿದೆ. ಭೌಗೋಳಿಕ-ಆರ್ಥಿಕ ವಿಘಟನೆ (ಜಿಇಎಫ್) ಜಾಗತೀಕರಣವನ್ನು ಬದಲಾಯಿಸುತ್ತಿದೆ, ಇದು ತಕ್ಷಣದ ಆರ್ಥಿಕ ಮರುಸಂಘಟನೆ ಮತ್ತು ಮರು ಹೊಂದಾಣಿಕೆಗಳಿಗೆ ಕಾರಣವಾಗುತ್ತದೆ.
2. 2047 ರ ವೇಳೆಗೆ ವಿಕ್ಷಿತ್ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಭಾರತವು ಸುಮಾರು ಒಂದು ಅಥವಾ ಎರಡು ದಶಕಗಳವರೆಗೆ ಸ್ಥಿರ ಬೆಲೆಗಳಲ್ಲಿ ಸರಾಸರಿ ಸುಮಾರು 8 ಪ್ರತಿಶತದಷ್ಟು ಬೆಳವಣಿಗೆಯ ದರವನ್ನು ಸಾಧಿಸಬೇಕಾಗಿದೆ.
3. ಭಾರತದ ಮಧ್ಯಮಾವಧಿಯ ಬೆಳವಣಿಗೆಯ ದೃಷ್ಟಿಕೋನವು ಹೊಸ ಜಾಗತಿಕ ವಾಸ್ತವಗಳನ್ನು ಪರಿಗಣಿಸಬೇಕು - ಜಿಇಎಫ್, ಚೀನಾದ ಉತ್ಪಾದನಾ ಪರಾಕ್ರಮ ಮತ್ತು ಚೀನಾದ ಮೇಲೆ ಇಂಧನ ಪರಿವರ್ತನೆಯ ಪ್ರಯತ್ನಗಳ ಅವಲಂಬನೆಯನ್ನು ಅದು ಗಮನಿಸಬೇಕು.
4. ದೇಶೀಯ ಬೆಳವಣಿಗೆಯ ಪಥಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಕಾನೂನುಬದ್ಧ ಆರ್ಥಿಕ ಚಟುವಟಿಕೆಯನ್ನು ಸುಲಭವಾಗಿ ಮುಂದುವರಿಸಲು ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಸಶಕ್ತಗೊಳಿಸಲು ಭಾರತವು ವ್ಯವಸ್ಥಿತವಾಗಿ ನಿಯಂತ್ರಣ ಮುಕ್ತ ಕ್ರಮಗಳನ್ನು ಕೈಗೊಳ್ಳುವುದರತ್ತ ಗಮನ ಹರಿಸಬೇಕು.
5. ಭಾರತದ ಮಧ್ಯಮಾವಧಿಯ ಬೆಳವಣಿಗೆಯ ನಿರೀಕ್ಷೆಗಳನ್ನು ಹೆಚ್ಚಿಸಲು ವ್ಯಕ್ತಿಗಳು ಮತ್ತು ಸಣ್ಣ ಉದ್ಯಮಗಳಿಗೆ ವ್ಯವಸ್ಥಿತವಾಗಿ ನಿಯಂತ್ರಣಗಳನ್ನು ಸಡಿಲಗೊಳಿಸುವುದು ಅಥವಾ ಆರ್ಥಿಕ ಸ್ವಾತಂತ್ರ್ಯವನ್ನು ಹೆಚ್ಚಿಸುವುದು ಅತ್ಯಂತ ಪ್ರಮುಖ ನೀತಿ ಆದ್ಯತೆಯಾಗಿದೆ.
6. ಸುಧಾರಣೆಗಳು ಮತ್ತು ಆರ್ಥಿಕ ನೀತಿಯ ಗಮನವು ಈಗ ಸುಗಮ ವ್ಯಾಪಾರ 2.0 ಅಡಿಯಲ್ಲಿ ವ್ಯವಸ್ಥಿತವಾಗಿ ನಿಯಂತ್ರಣಗಳನ್ನು ತೆಗೆದುಹಾಕುವುದು ಮತ್ತು ಕಾರ್ಯಸಾಧ್ಯವಾದ ಮಿಟ್ಟೆಲ್ ಸ್ಟಾಂಡ್ ಅಂದರೆ, ಅಂದರೆ ಭಾರತದ ಎಸ್ ಎಂಇ ವಲಯವನ್ನು ರಚಿಸುವುದರತ್ತ ಇರಬೇಕು.
7. ಮುಂದಿನ ಹಂತದಲ್ಲಿ, ರಾಜ್ಯಗಳು ಮಾನದಂಡಗಳು ಮತ್ತು ನಿಯಂತ್ರಣಗಳನ್ನು ಉದಾರೀಕರಣಗೊಳಿಸುವುದು, ಜಾರಿಗಾಗಿ ಕಾನೂನು ಸುರಕ್ಷತಾ ಕ್ರಮಗಳನ್ನು ನಿಗದಿಪಡಿಸುವುದು, ಸುಂಕಗಳು ಮತ್ತು ಶುಲ್ಕಗಳನ್ನು ಕಡಿಮೆ ಮಾಡುವುದು ಮತ್ತು ಅಪಾಯ ಆಧಾರಿತ ನಿಯಂತ್ರಣವನ್ನು ಅನ್ವಯಿಸುವುದರತ್ತ ಕಾರ್ಯಪ್ರವೃತ್ತವಾಗಬೇಕು.
ಹೂಡಿಕೆ ಮತ್ತು ಮೂಲಸೌಕರ್ಯ: ಸದಾ ಚಲನೆಯಲ್ಲಿಟ್ಟಿರುವುದು
1. ಕಳೆದ ಐದು ವರ್ಷಗಳಲ್ಲಿ ಸರ್ಕಾರದ ಗಮನವು ಮೂಲಸೌಕರ್ಯಗಳ ಮೇಲೆ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸುವುದು ಮತ್ತು ಅನುಮೋದನೆಗಳು ಹಾಗು ಸಂಪನ್ಮೂಲ ಕ್ರೋಢೀಕರಣವನ್ನು ವೇಗಗೊಳಿಸುವುದರ ಮೇಲಿತ್ತು.
2. ಪ್ರಮುಖ ಮೂಲಸೌಕರ್ಯ ವಲಯಗಳ ಮೇಲಿನ ಕೇಂದ್ರ ಸರ್ಕಾರದ ಬಂಡವಾಳ ವೆಚ್ಚವು 2020ರಿಂದ 2024ರ ಹಣಕಾಸು ವರ್ಷದವರೆಗೆ ಶೇ.38.8ರ ದರದಲ್ಲಿ ಏರಿಕೆಯಾಗಿದೆ.
3. ರೈಲ್ವೆ ಸಂಪರ್ಕದ ಅಡಿಯಲ್ಲಿ, 2024 ರ ಏಪ್ರಿಲ್ ಮತ್ತು ನವೆಂಬರ್ ನಡುವೆ 2031 ಕಿ.ಮೀ ರೈಲ್ವೆ ಜಾಲವನ್ನು ಕಾರ್ಯಾರಂಭ ಮಾಡಲಾಗಿದೆ ಮತ್ತು 2024 ರ ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ 17 ಹೊಸ ಜೋಡಿ ವಂದೇ ಭಾರತ್ ರೈಲುಗಳನ್ನು ಸೇವೆಗೆ ಒದಗಿಸಲಾಗಿದೆ.
4. ರಸ್ತೆ ಜಾಲದ ಅಡಿಯಲ್ಲಿ, 2025ರ ಹಣಕಾಸು ವರ್ಷದಲ್ಲಿ (ಏಪ್ರಿಲ್-ಡಿಸೆಂಬರ್) 5853 ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ.
5. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದಡಿ, ಮೊದಲ ಹಂತದಲ್ಲಿ ವಿವಿಧ ವಲಯಗಳಿಗೆ ಕೈಗಾರಿಕಾ ಬಳಕೆಗಾಗಿ 3788 ಎಕರೆ ವ್ಯಾಪ್ತಿಯನ್ನು ಒಳಗೊಂಡ ಒಟ್ಟು 383 ಪ್ಲಾಟ್ ಗಳನ್ನು ಹಂಚಿಕೆ ಮಾಡಲಾಗಿದೆ.
6. ಕಾರ್ಯಾಚರಣೆಯ ದಕ್ಷತೆಯು ಪ್ರಮುಖ ಬಂದರುಗಳಲ್ಲಿ ಸರಾಸರಿ ಕಂಟೇನರ್ ನಿರ್ವಹಣಾ ಸಮಯವನ್ನು ಹಣಕಾಸು ವರ್ಷ 24 ರಲ್ಲಿ ಇದ್ದ 48.1 ಗಂಟೆಗಳಿಂದ 2025 ರ ಹಣಕಾಸು ವರ್ಷದಲ್ಲಿ (ಏಪ್ರಿಲ್-ನವೆಂಬರ್) 30.4 ಗಂಟೆಗಳಿಗೆ ಇಳಿಸಿದೆ, ಇದು ಬಂದರು ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸಿದೆ.
7. 2024 ರ ಡಿಸೆಂಬರ್ ವೇಳೆಗೆ ಸೌರ ಮತ್ತು ಪವನ ಶಕ್ತಿಯ ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 15.8 ರಷ್ಟು ಹೆಚ್ಚಳವಾಗಿದೆ.
8. ಭಾರತದ ಒಟ್ಟು ಸ್ಥಾಪಿತ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನದ ಪಾಲು ಈಗ ಶೇಕಡಾ 47 ರಷ್ಟಿದೆ.
9. ಸರ್ಕಾರದ ಯೋಜನೆಗಳಾದ ಡಿಡಿಯುಜಿಜೆವೈ ಮತ್ತು ಸೌಭಾಗ್ಯ ಯೋಜನೆಗಳು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವನ್ನು ಸುಧಾರಿಸಿದೆ, 18,374 ಗ್ರಾಮಗಳನ್ನು ವಿದ್ಯುದ್ದೀಕರಿಸಿವೆ ಮತ್ತು 2.9 ಕೋಟಿ ಮನೆಗಳಿಗೆ ವಿದ್ಯುತ್ ಒದಗಿಸಿವೆ.
10. ಸರ್ಕಾರದ ಡಿಜಿಟಲ್ ಸಂಪರ್ಕ ಉಪಕ್ರಮಗಳು ವಿಶೇಷವಾಗಿ 2024 ರ ಅಕ್ಟೋಬರ್ ವೇಳೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 5 ಜಿ ಸೇವೆಗಳನ್ನು ಪ್ರಾರಂಭಿಸುವುದರೊಂದಿಗೆ ಗಮನ ಸೆಳೆದಿವೆ.
11. ಯುನಿವರ್ಸಲ್ ಸರ್ವೀಸ್ ಆಬ್ಲಿಗೇಷನ್ ಫಂಡ್ (ಈಗ ಡಿಜಿಟಲ್ ಭಾರತ್ ನಿಧಿ) ಅಡಿಯಲ್ಲಿ ದೂರದ ಪ್ರದೇಶಗಳಿಗೆ 4 ಜಿ ಮೊಬೈಲ್ ಸೇವೆಗಳನ್ನು ಒದಗಿಸುವ ಪ್ರಯತ್ನಗಳು ಗಮನಾರ್ಹ ಪ್ರಗತಿ ಸಾಧಿಸಿವೆ, 2024 ರ ಡಿಸೆಂಬರ್ ವೇಳೆಗೆ 10,700 ಕ್ಕೂ ಹೆಚ್ಚು ಗ್ರಾಮಗಳನ್ನು ಇದರಲ್ಲಿ ಸೇರ್ಪಡೆ ಮಾಡಲಾಗಿದೆ.
12. ಜಲ ಜೀವನ್ ಮಿಷನ್ ಪ್ರಾರಂಭವಾದಾಗಿನಿಂದ 12 ಕೋಟಿಗೂ ಹೆಚ್ಚು ಕುಟುಂಬಗಳು ಕೊಳವೆ ಮೂಲಕ ಕುಡಿಯುವ ನೀರಿನ ಸೌಲಭ್ಯವನ್ನು ಪಡೆದುಕೊಂಡಿವೆ.
13. ಸ್ವಚ್ಛ ಭಾರತ್ ಮಿಷನ್-ಗ್ರಾಮೀಣದ ಎರಡನೇ ಹಂತದ ಅಡಿಯಲ್ಲಿ, 2024 ರ ಏಪ್ರಿಲ್ ನಿಂದ ನವೆಂಬರ್ ವರೆಗೆ, ಮಾದರಿ ವಿಭಾಗದಲ್ಲಿ 1.92 ಲಕ್ಷ ಗ್ರಾಮಗಳನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದ್ದು, ಒಟ್ಟು ಬಯಲು ಶೌಚ ಮುಕ್ತ ಗ್ರಾಮಗಳ ಸಂಖ್ಯೆ 3.64 ಲಕ್ಷಕ್ಕೆ ತಲುಪಿದೆ.
14. ನಗರ ಪ್ರದೇಶಗಳಲ್ಲಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ 89 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಪೂರ್ಣಗೊಳಿಸಿದೆ.
15. ನಗರ ಸಾರಿಗೆ ಜಾಲವು ವೇಗವಾಗಿ ವಿಸ್ತರಿಸುತ್ತಿದೆ, 29 ನಗರಗಳಲ್ಲಿ ಮೆಟ್ರೋ ಮತ್ತು ಕ್ಷಿಪ್ರ ರೈಲು ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಅಥವಾ ನಿರ್ಮಾಣ ಹಂತದಲ್ಲಿವೆ, ಇದು 1,000 ಕಿಲೋಮೀಟರ್ ಗಿಂತ ಹೆಚ್ಚು ವ್ಯಾಪ್ತಿಯನ್ನು ಆವರಿಸಿದೆ..
16. ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ, 2016, ರಿಯಲ್ ಎಸ್ಟೇಟ್ ಕ್ಷೇತ್ರದ ನಿಯಂತ್ರಣ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿದೆ. 2025 ರ ಜನವರಿ ವೇಳೆಗೆ, 1.38 ಲಕ್ಷ ರಿಯಲ್ ಎಸ್ಟೇಟ್ ಯೋಜನೆಗಳು ನೋಂದಾಯಿಸಲ್ಪಟ್ಟಿವೆ ಮತ್ತು 1.38 ಲಕ್ಷ ದೂರುಗಳನ್ನು ಪರಿಹರಿಸಲಾಗಿದೆ.
17. ಭಾರತವು ಪ್ರಸ್ತುತ 56 ಸಕ್ರಿಯ ಬಾಹ್ಯಾಕಾಶ ಸ್ವತ್ತುಗಳನ್ನು ನಿರ್ವಹಿಸುತ್ತಿದೆ. ಸರ್ಕಾರದ ಬಾಹ್ಯಾಕಾಶ ದೃಷ್ಟಿ 2047 ಗಗನಯಾನ ಮಿಷನ್ ಮತ್ತು ಚಂದ್ರಯಾನ -4 ಲೂನಾರ್ ಮಾದರಿ ಹಿಂದಿರುಗುವ ಮಿಷನ್ ನಂತಹ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಒಳಗೊಂಡಿದೆ.
18. ಸಾರ್ವಜನಿಕ ವಲಯದ ಹೂಡಿಕೆ ಮಾತ್ರವೇ ಮೂಲಸೌಕರ್ಯದ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಿಲ್ಲ, ಮತ್ತು ಅಂತರವನ್ನು ಕಡಿಮೆ ಮಾಡಲು ಖಾಸಗಿ ವಲಯದ ಭಾಗವಹಿಸುವಿಕೆ ನಿರ್ಣಾಯಕವಾಗಿರುತ್ತದೆ.
19. ಮೂಲಸೌಕರ್ಯದಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಅನುಕೂಲವಾಗುವಂತೆ ಸರ್ಕಾರವು ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ ಮತ್ತು ರಾಷ್ಟ್ರೀಯ ನಗದೀಕರಣ ಪೈಪ್ಲೈನ್ನಂತಹ ಕಾರ್ಯವಿಧಾನಗಳನ್ನು ರಚಿಸಿದೆ.
ಉದ್ಯಮ: ವ್ಯವಹಾರ ಸುಧಾರಣೆಗಳ ಬಗ್ಗೆ
1. ವಿದ್ಯುತ್ ಮತ್ತು ನಿರ್ಮಾಣದಲ್ಲಿನ ದೃಢವಾದ ಬೆಳವಣಿಗೆಯಿಂದ ಪ್ರೇರಿತವಾದ ಕೈಗಾರಿಕಾ ವಲಯವು ಹಣಕಾಸು ವರ್ಷ -25 ರಲ್ಲಿ ಶೇಕಡಾ 6.2 ರಷ್ಟು ಬೆಳೆಯುವ ನಿರೀಕ್ಷೆಯಿದೆ (ಮೊದಲ ಮುಂಗಡ ಅಂದಾಜು).
2. ಸರ್ಕಾರವು ಸ್ಮಾರ್ಟ್ ಉತ್ಪಾದನೆ ಮತ್ತು ಕೈಗಾರಿಕೆ 4.0 ಅನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ, ಸಮರ್ಥ್ ಉದ್ಯೋಗ್ ಕೇಂದ್ರಗಳ ಸ್ಥಾಪನೆಗೆ ಬೆಂಬಲ ನೀಡುತ್ತಿದೆ.
3. 2024ರ ಹಣಕಾಸು ವರ್ಷದಲ್ಲಿ ಭಾರತದ ಆಟೋಮೊಬೈಲ್ ದೇಶೀಯ ಮಾರಾಟವು ಶೇಕಡಾ 12.5 ರಷ್ಟು ಹೆಚ್ಚಾಗಿದೆ.
4. ಎಲೆಕ್ಟ್ರಾನಿಕ್ ಸರಕುಗಳ ದೇಶೀಯ ಉತ್ಪಾದನೆಯು ಹಣಕಾಸು ವರ್ಷ 2015 ರಿಂದ ಹಣಕಾಸು ವರ್ಷ 24 ರವರೆಗೆ ಸಿಎಜಿಆರ್ನಲ್ಲಿ ಶೇಕಡಾ 17.5 ರಷ್ಟು ಬೆಳೆದಿದೆ.
5. ಶೇಕಡಾ 99 ರಷ್ಟು ಸ್ಮಾರ್ಟ್ಫೋನ್ಗಳು ಈಗ ದೇಶೀಯವಾಗಿ ತಯಾರಿಸಲ್ಪಡುತ್ತವೆ, ಇದು ಆಮದಿನ ಮೇಲೆ ಭಾರತದ ಅವಲಂಬನೆಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ.
6. 2024ರ ಹಣಕಾಸು ವರ್ಷದಲ್ಲಿ ಔಷಧಗಳ ಒಟ್ಟು ವಾರ್ಷಿಕ ವಹಿವಾಟು 4.17 ಲಕ್ಷ ಕೋಟಿ ರೂ.ಗಳಾಗಿದ್ದು, ಕಳೆದ ಐದು ವರ್ಷಗಳಲ್ಲಿ ಸರಾಸರಿ ಶೇ.10.1ರ ದರದಲ್ಲಿ ಬೆಳೆಯುತ್ತಿದೆ.
7. ಡಬ್ಲ್ಯುಐಪಿಒ ವರದಿ 2022 ರ ಪ್ರಕಾರ, ಜಾಗತಿಕವಾಗಿ ಅಗ್ರ 10 ಪೇಟೆಂಟ್ ಫೈಲಿಂಗ್ ಕಚೇರಿಗಳಲ್ಲಿ ಭಾರತ ಆರನೇ ಸ್ಥಾನದಲ್ಲಿದೆ.
8. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ವಲಯವು ಭಾರತೀಯ ಆರ್ಥಿಕತೆಯ ಅತ್ಯಂತ ರೋಮಾಂಚಕ ವಲಯವಾಗಿ ಹೊರಹೊಮ್ಮಿದೆ.
9. ಎಂಎಸ್ಎಂಇಗಳಿಗೆ ಈಕ್ವಿಟಿ ಫಂಡಿಂಗ್ ಒದಗಿಸಲು, ಸರ್ಕಾರವು 50,000 ಕೋಟಿ ರೂ.ಗಳ ಮೂಲಧನದೊಂದಿಗೆ (ಕಾರ್ಪಸ್ನೊಂದಿಗೆ) ಸ್ವಾವಲಂಬಿ ಭಾರತ ನಿಧಿಯನ್ನು ಪ್ರಾರಂಭಿಸಿತು.
10. ದೇಶಾದ್ಯಂತ ಗುಚ್ಛ (ಕ್ಲಸ್ಟರ್) ಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ-ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.
ಸೇವೆಗಳು - ಹಳೆಯ ಯುದ್ದ ಕುದುರೆಯ ಎದುರು ಹೊಸ ಸವಾಲುಗಳು
1. ಒಟ್ಟು ಜಿವಿಎಗೆ ಸೇವಾ ವಲಯದ ಕೊಡುಗೆ ಹಣಕಾಸು ವರ್ಷ 2014 ರಲ್ಲಿ ಶೇಕಡಾ 50.6 ರಿಂದ ಹಣಕಾಸು ವರ್ಷ 25 ರಲ್ಲಿ ಶೇಕಡಾ 55.3 ಕ್ಕೆ ಏರಿದೆ (ಮೊದಲ ಮುಂಗಡ ಅಂದಾಜು).
2. ಸಾಂಕ್ರಾಮಿಕ ರೋಗಕ್ಕೆ ಮುಂಚಿನ ವರ್ಷಗಳಲ್ಲಿ (ಎಫ್ವೈ 13 -ಎಫ್ವೈ 20) ಸೇವಾ ವಲಯದ ಸರಾಸರಿ ಬೆಳವಣಿಗೆಯ ದರವು ಶೇಕಡಾ 8 ರಷ್ಟಿತ್ತು. ಸಾಂಕ್ರಾಮಿಕ ರೋಗದ ನಂತರದ ಅವಧಿಯಲ್ಲಿ (ಎಫ್ವೈ 23-ಎಫ್ವೈ 25) ಇದು ಶೇಕಡಾ 8.3 ರಲ್ಲಿದೆ.
3. 2023 ರಲ್ಲಿ ಜಾಗತಿಕ ಸೇವೆಗಳ ರಫ್ತಿನಲ್ಲಿ ಭಾರತವು ಶೇಕಡಾ 4.3 ರಷ್ಟು ಪಾಲನ್ನು ಹೊಂದಿದ್ದು, ವಿಶ್ವಾದ್ಯಂತ ಏಳನೇ ಸ್ಥಾನದಲ್ಲಿದೆ.
4. ಭಾರತದ ಸೇವಾ ರಫ್ತು ಬೆಳವಣಿಗೆಯು 2025ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಶೇ.12.8ಕ್ಕೆ ಏರಿಕೆಯಾಗಿದೆ.ಮತ್ತು ಇದು ಹಣಕಾಸು ವರ್ಷ 24ರಲ್ಲಿ ಇದ್ದ ಶೇಕಡಾ 5.7 ಕ್ಕಿಂತ ಹೆಚ್ಚಾಗಿದೆ.
5. ಮಾಹಿತಿ ಮತ್ತು ಕಂಪ್ಯೂಟರ್ ಸಂಬಂಧಿತ ಸೇವೆಗಳು ಕಳೆದ ದಶಕದಲ್ಲಿ (ಎಫ್ವೈ 13-ಎಫ್ವೈ 23) ಶೇಕಡಾ 12.8 ರಷ್ಟು ಪ್ರವೃತ್ತಿ ದರದಲ್ಲಿ ಬೆಳೆದಿವೆ, ಒಟ್ಟಾರೆ ಜಿವಿಎಯಲ್ಲಿ ಅದರ ಪಾಲನ್ನು ಶೇಕಡಾ 6.3 ರಿಂದ 10.9 ಕ್ಕೆ ಹೆಚ್ಚಿಸಿದೆ.
6. ಭಾರತೀಯ ರೈಲ್ವೆ 2024ರ ಹಣಕಾಸು ವರ್ಷದಲ್ಲಿ ಪ್ರಯಾಣಿಕರ ದಟ್ಟಣೆಯಲ್ಲಿ ಶೇಕಡಾ 8 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 2024ರ ಹಣಕಾಸು ವರ್ಷದಲ್ಲಿ ಆದಾಯ ಗಳಿಸುವ ಸರಕು ಸಾಗಣೆ ಶೇ.5.2ರಷ್ಟು ಏರಿಕೆಯಾಗಿದೆ.
7. ಜಿಡಿಪಿಗೆ ಪ್ರವಾಸೋದ್ಯಮ ಕ್ಷೇತ್ರದ ಕೊಡುಗೆ 2023ರ ಹಣಕಾಸು ವರ್ಷದಲ್ಲಿ ಸಾಂಕ್ರಾಮಿಕ ಪೂರ್ವದ ಮಟ್ಟವಾದ ಶೇಕಡಾ 5 ಕ್ಕೆ ಮರಳಿದೆ.
ಅಧ್ಯಾಯ-9 ಕೃಷಿ ಮತ್ತು ಆಹಾರ ನಿರ್ವಹಣೆ: ಭವಿಷ್ಯದ ವಲಯ
1. 'ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ' ವಲಯವು ಪ್ರಸ್ತುತ ಬೆಲೆಗಳಲ್ಲಿ 2024 (ಪಿಇ) ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿಗೆ ಸರಿಸುಮಾರು 16 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ.
2. ತೋಟಗಾರಿಕೆ, ಜಾನುವಾರು ಮತ್ತು ಮೀನುಗಾರಿಕೆಯಂತಹ ಉನ್ನತ ಮೌಲ್ಯದ ಕ್ಷೇತ್ರಗಳು ಒಟ್ಟಾರೆ ಕೃಷಿ ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿಗಳಾಗಿವೆ.
3. 2024 ರ ಖಾರಿಫ್ ಆಹಾರ ಧಾನ್ಯ ಉತ್ಪಾದನೆ 1647.05 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ತಲುಪುವ ನಿರೀಕ್ಷೆಯಿದೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 89.37 ಎಲ್ಎಂಟಿ ಹೆಚ್ಚಳವಾಗಿದೆ.
4. 2024-25ರ ಹಣಕಾಸು ವರ್ಷದಲ್ಲಿ, ಅರ್ಹರ್ ಮತ್ತು ಬಾಜ್ರಾದ ಕನಿಷ್ಠ ಬೆಂಬಲ ಬೆಲೆಯನ್ನು ಕ್ರಮವಾಗಿ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಶೇಕಡಾ 59 ಮತ್ತು 77 ರಷ್ಟು ಹೆಚ್ಚಿಸಲಾಗಿದೆ.
5. ಮೀನುಗಾರಿಕೆ ವಲಯವು ಶೇಕಡಾ 8.7 ರಷ್ಟು ಅತ್ಯಧಿಕ ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರವನ್ನು (ಸಿಎಜಿಆರ್) ತೋರಿಸಿದೆ, ನಂತರದ ಸ್ಥಾನದಲ್ಲಿ ಜಾನುವಾರುಗಳು ಶೇಕಡಾ 8 ರಷ್ಟು ಸಿಎಜಿಆರ್ ಹೊಂದಿವೆ.
6. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) 2013 ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಆಹಾರ ಭದ್ರತೆಯ ವಿಧಾನದಲ್ಲಿ ಮೂಲಭೂತ ಬದಲಾವಣೆಯನ್ನು ಗುರುತಿಸಿದೆ.
7. ಪಿಎಂಜಿಕೆಎವೈ ಅಡಿಯಲ್ಲಿ ಇನ್ನೂ ಐದು ವರ್ಷಗಳವರೆಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವುದು, ಆಹಾರ ಮತ್ತು ಪೌಷ್ಠಿಕಾಂಶದ ಸುರಕ್ಷತೆಯ ಬಗ್ಗೆ ಸರ್ಕಾರದ ದೀರ್ಘಕಾಲೀನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
8. ಅಕ್ಟೋಬರ್ 31 ರವರೆಗೆ, ಪಿಎಂ-ಕಿಸಾನ್ ಅಡಿಯಲ್ಲಿ 11 ಕೋಟಿಗೂ ಹೆಚ್ಚು ರೈತರು ಪ್ರಯೋಜನ ಪಡೆದಿದ್ದಾರೆ ಮತ್ತು 23.61 ಲಕ್ಷ ರೈತರು ಪಿಎಂ ಕಿಸಾನ್ ಮಾನಧನ್ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಹವಾಮಾನ ಮತ್ತು ಪರಿಸರ: ಹೊಂದಾಣಿಕೆ ಮುಖ್ಯ
1. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರದ ಸ್ಥಾನಮಾನವನ್ನು ಸಾಧಿಸುವ ಭಾರತದ ಮಹತ್ವಾಕಾಂಕ್ಷೆಯು ಮೂಲಭೂತವಾಗಿ ಅಂತರ್ಗತ ಮತ್ತು ಸುಸ್ಥಿರ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ನೆಲೆಗೊಂಡಿದೆ.
2. ಭಾರತವು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ 2,13,701 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸ್ಥಾಪಿಸಿದೆ, ಇದು 2024 ರ ನವೆಂಬರ್ 30 ರ ವೇಳೆಗೆ ಒಟ್ಟು ಸಾಮರ್ಥ್ಯದ ಶೇಕಡಾ 46.8 ರಷ್ಟಾಗಿತ್ತು.
3. ಭಾರತೀಯ ಅರಣ್ಯ ಸಮೀಕ್ಷೆ 2024 ರ ಪ್ರಕಾರ, 2005 ಮತ್ತು 202 ರ ನಡುವೆ 2.29 ಬಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ಗೆ ಸಮನಾದ ಹೆಚ್ಚುವರಿ ಇಂಗಾಲದ ಸಿಂಕ್ ಅನ್ನು ರಚಿಸಲಾಗಿದೆ
4. ಭಾರತ ನೇತೃತ್ವದ ಜಾಗತಿಕ ಆಂದೋಲನ, ಲೈಫ್ಸ್ಟೈಲ್ ಫಾರ್ ಎನ್ವಿರಾನ್ಮೆಂಟ್ (ಎಲ್ಐಎಫ್ಇ), ದೇಶದ ಸುಸ್ಥಿರತೆಯ ಪ್ರಯತ್ನಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
5. 2030 ರ ವೇಳೆಗೆ, ಲೈಫ್ ಕ್ರಮಗಳು ಕಡಿಮೆ ಬಳಕೆ ಮತ್ತು ಕಡಿಮೆ ಬೆಲೆಗಳ ಮೂಲಕ ಜಾಗತಿಕವಾಗಿ ಗ್ರಾಹಕರಿಗೆ ಸುಮಾರು 440 ಬಿಲಿಯನ್ ಡಾಲರ್ ಉಳಿಸಬಹುದು ಎಂದು ಅಂದಾಜಿಸಲಾಗಿದೆ.
ಸಾಮಾಜಿಕ ವಲಯ - ವ್ಯಾಪ್ತಿಯನ್ನು ವಿಸ್ತರಿಸುವುದು ಮತ್ತು ಸಬಲೀಕರಣವನ್ನು ಪ್ರೇರೇಪಿಸುವುದು
1. ಸರ್ಕಾರದ ಸಾಮಾಜಿಕ ಸೇವೆಗಳ ವೆಚ್ಚವು (ಕೇಂದ್ರ ಮತ್ತು ರಾಜ್ಯಗಳಿಗೆ ಸಂಯೋಜಿತವಾಗಿ) ಹಣಕಾಸು ವರ್ಷ 21 ರಿಂದ ಹಣಕಾಸು ವರ್ಷ 25 ರವರೆಗೆ ಶೇಕಡಾ 15 ರಷ್ಟು ಸಂಯೋಜಿತ ವಾರ್ಷಿಕ ಬೆಳವಣಿಗೆಯ ದರದಲ್ಲಿ ಹೆಚ್ಚಾಗಿದೆ.
2. ಬಳಕೆಯ ವೆಚ್ಚದಲ್ಲಿನ ಅಸಮಾನತೆಯನ್ನು ಅಳೆಯುವ ಗಿನಿ ಗುಣಾಂಕವು ಕುಸಿಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇದು 2022-23ರಲ್ಲಿ ಇದ್ದ 0.266 ರಿಂದ 2023-24 ರಲ್ಲಿ 0.237 ಕ್ಕೆ ಇಳಿದಿದೆ ಮತ್ತು ನಗರ ಪ್ರದೇಶಗಳಲ್ಲಿ ಇದು 2022-23 ರಲ್ಲಿ ಇದ್ದ 0.314 ರಿಂದ 2023-24 ರಲ್ಲಿ 0.284 ಕ್ಕೆ ಇಳಿದಿದೆ.
3. ಸರ್ಕಾರದ ವಿವಿಧ ಹಣಕಾಸಿನ ನೀತಿಗಳು ಆದಾಯ ವಿತರಣೆಯನ್ನು ಮರುರೂಪಿಸಲು ಸಹಾಯ ಮಾಡುತ್ತಿವೆ.
4. ಸರ್ಕಾರದ ಆರೋಗ್ಯ ವೆಚ್ಚವು ಶೇಕಡಾ 29.0 ರಿಂದ 48.0 ಕ್ಕೆ ಏರಿದೆ; ಒಟ್ಟು ಆರೋಗ್ಯ ಖರ್ಚಿನಲ್ಲಿ ಜೇಬಿನಿಂದ ಮಾಡುವ ವೆಚ್ಚದ ಪಾಲು ಶೇಕಡಾ 62.6 ರಿಂದ 39.4 ಕ್ಕೆ ಇಳಿದಿದೆ, ಇದು ಕುಟುಂಬಗಳು ಅನುಭವಿಸುವ ಆರ್ಥಿಕ ಸಂಕಷ್ಟವನ್ನು ಕಡಿಮೆ ಮಾಡುತ್ತದೆ.
5. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ ಪಿಎಂ-ಜೆಎವೈ) ವೆಚ್ಚವನ್ನು ಗಮನಾರ್ಹವಾಗಿ ಕಡಿತಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ, 1.25 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಉಳಿತಾಯವನ್ನು ದಾಖಲಿಸಲಾಗಿದೆ.
6. ಗ್ರಾಮ ಪಂಚಾಯತ್ ಮಟ್ಟದಲ್ಲಿನ ಬಜೆಟ್ ಗಳು ಎಸ್ ಡಿಜಿ ಉದ್ದೇಶಗಳಿಗೆ ಹೊಂದಿಕೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್ ಡಿಜಿ) ಸ್ಥಳೀಕರಣದ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲಾಗಿದೆ.
ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ: ಅಸ್ತಿತ್ವದ ಆದ್ಯತೆಗಳು
1. ಭಾರತೀಯ ಕಾರ್ಮಿಕ ಮಾರುಕಟ್ಟೆ ಸೂಚಕಗಳು ಸುಧಾರಿಸಿದ್ದು, ನಿರುದ್ಯೋಗ ದರವು 2017-18ರಲ್ಲಿ (ಜುಲೈ-ಜೂನ್) ಇದ್ದ ಶೇಕಡಾ 6.0 ರಿಂದ 2023-24 ರಲ್ಲಿ (ಜುಲೈ-ಜೂನ್) ಶೇಕಡಾ 3.2 ಕ್ಕೆ ಇಳಿದಿದೆ.
2. 10-24 ವರ್ಷ ವಯಸ್ಸಿನ ಜನಸಂಖ್ಯೆಯ ಸುಮಾರು 26 ಪ್ರತಿಶತದಷ್ಟು ಹೊಂದಿರುವ ಭಾರತವು ವಿಶಿಷ್ಟ ಜನಸಂಖ್ಯಾ ಅವಕಾಶದ ಹೊಸ್ತಿಲಲ್ಲಿದೆ, ಜಾಗತಿಕವಾಗಿ ಅತ್ಯಂತ ಕಿರಿಯ ರಾಷ್ಟ್ರಗಳಲ್ಲಿ ಒಂದಾಗಿದೆ.
3. ಮಹಿಳಾ ಉದ್ಯಮಶೀಲತೆಗೆ ಉತ್ತೇಜನ ನೀಡಲು, ಸರ್ಕಾರವು ಸುಲಭವಾಗಿ ಸಾಲ, ಮಾರುಕಟ್ಟೆ ಬೆಂಬಲ, ಕೌಶಲ್ಯ ಅಭಿವೃದ್ಧಿ ಮತ್ತು ಮಹಿಳಾ ನವೋದ್ಯಮಗಳಿಗೆ ಬೆಂಬಲ ಇತ್ಯಾದಿಗಳ ವಿಷಯದಲ್ಲಿ ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದೆ.
4. ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತಿವೆ, ಇದು ವಿಕ್ಷಿತ್ ಭಾರತದ ದೃಷ್ಟಿಕೋನವನ್ನು ಸಾಧಿಸಲು ಅವಶ್ಯಕವಾಗಿದೆ.
5. ಆಟೋಮೇಷನ್, ಉತ್ಪಾದನಾ ಎಐ, ಡಿಜಿಟಲೀಕರಣ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳಂತಹ ಉದಯೋನ್ಮುಖ ಜಾಗತಿಕ ಪ್ರವೃತ್ತಿಗಳಿಗೆ ಅನುಗುಣವಾಗಿ ಸರ್ಕಾರವು ಸ್ಥಿತಿಸ್ಥಾಪಕ ಮತ್ತು ಸ್ಪಂದಿಸುವ ನುರಿತ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುತ್ತಿದೆ.
6. ಉದ್ಯೋಗವನ್ನು ಹೆಚ್ಚಿಸಲು, ಸ್ವಯಂ ಉದ್ಯೋಗವನ್ನು ಉತ್ತೇಜಿಸಲು ಮತ್ತು ಕಾರ್ಮಿಕರ ಕಲ್ಯಾಣವನ್ನು ಉತ್ತೇಜಿಸಲು ಸರ್ಕಾರ ಕ್ರಮಗಳನ್ನು ಜಾರಿಗೆ ತಂದಿದೆ.
7. ಇತ್ತೀಚೆಗೆ ಪ್ರಾರಂಭಿಸಲಾದ ಪಿಎಂ-ಇಂಟರ್ನ್ಶಿಪ್ ಯೋಜನೆ ಉದ್ಯೋಗ ಸೃಷ್ಟಿಗೆ ಪರಿವರ್ತಕ ವೇಗವರ್ಧಕವಾಗಿ ಹೊರಹೊಮ್ಮುತ್ತಿದೆ.
8. ಇಪಿಎಫ್ಒ ಅಡಿಯಲ್ಲಿ ನಿವ್ವಳ ವೇತನದಾರರ ಸೇರ್ಪಡೆ ಕಳೆದ ಆರು ವರ್ಷಗಳಲ್ಲಿ ದ್ವಿಗುಣಗೊಂಡಿದೆ, ಇದು ಔಪಚಾರಿಕ ಉದ್ಯೋಗದಲ್ಲಿ ಆರೋಗ್ಯಕರ ಬೆಳವಣಿಗೆಯನ್ನು ಸೂಚಿಸುತ್ತದೆ.
ಎಐ ಯುಗದಲ್ಲಿ ಕಾರ್ಮಿಕ: ಬಿಕ್ಕಟ್ಟೇ ಅಥವಾ ವೇಗವರ್ಧಕವೇ?
1. ಕೃತಕ ಬುದ್ಧಿಮತ್ತೆಯ (ಎಐ) ಡೆವಲಪರ್ಗಳು ಹೊಸ ಯುಗವನ್ನು ಪ್ರಾರಂಭಿಸುವ ಭರವಸೆ ನೀಡುತ್ತಾರೆ, ಅಲ್ಲಿ ಆರ್ಥಿಕವಾಗಿ ಮೌಲ್ಯಯುತವಾದ ಕೆಲಸದ ಬಹುಪಾಲು ಸ್ವಯಂಚಾಲಿತವಾಗಿರುತ್ತದೆ.
2. ಆರೋಗ್ಯ, ಸಂಶೋಧನೆ, ಕ್ರಿಮಿನಲ್ ನ್ಯಾಯ, ಶಿಕ್ಷಣ, ವ್ಯವಹಾರ ಮತ್ತು ಹಣಕಾಸು ಸೇವೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಐ ಮಾನವ ಕಾರ್ಯಕ್ಷಮತೆಯನ್ನು ಮೀರಿಸುವ ನಿರೀಕ್ಷೆಯಿದೆ.
3. ದೊಡ್ಡ ಪ್ರಮಾಣದ ಎಐ ಅಳವಡಿಕೆಗೆ ಪ್ರಸ್ತುತ ಅಡೆತಡೆಗಳು ಮುಂದುವರೆದಿವೆ, ಇದರಲ್ಲಿ ವಿಶ್ವಾಸಾರ್ಹತೆ, ಸಂಪನ್ಮೂಲ ಅದಕ್ಷತೆ ಮತ್ತು ಮೂಲಸೌಕರ್ಯ ಕೊರತೆಗಳು ಸೇರಿವೆ. ಈ ಸವಾಲುಗಳು, ಎಐನ ಪ್ರಾಯೋಗಿಕ ಸ್ವಭಾವದೊಂದಿಗೆ, ನೀತಿ ನಿರೂಪಕರಿಗೆ ಕಾರ್ಯನಿರ್ವಹಿಸಲು ಒಂದು ಸಂದರ್ಭವನ್ನು/ಅವಕಾಶವನ್ನು ಸೃಷ್ಟಿಸುತ್ತವೆ.
4. ಅದೃಷ್ಟವಶಾತ್, ಎಐ ಪ್ರಸ್ತುತ ಶೈಶವಾವಸ್ಥೆಯಲ್ಲಿರುವುದರಿಂದ, ಭಾರತಕ್ಕೆ ತನ್ನ ಅಡಿಪಾಯವನ್ನು ಬಲಪಡಿಸಲು ಮತ್ತು ರಾಷ್ಟ್ರವ್ಯಾಪಿ ಸಾಂಸ್ಥಿಕ ಪ್ರತಿಕ್ರಿಯೆಯನ್ನು ಸಜ್ಜುಗೊಳಿಸಲು ಅಗತ್ಯವಾದ ಸಮಯ ಲಭ್ಯವಿದೆ.
5. ಭಾರತವು ತನ್ನ ಯುವ, ಕ್ರಿಯಾತ್ಮಕ ಮತ್ತು ತಂತ್ರಜ್ಞಾನ-ಬುದ್ಧಿವಂತ ಜನಸಂಖ್ಯೆಯನ್ನು ಬಳಸಿಕೊಳ್ಳುವ ಮೂಲಕ, ತಮ್ಮ ಕೆಲಸ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಎಐ ಅನ್ನು ಬಳಸಿಕೊಳ್ಳುವ ಕಾರ್ಯಪಡೆಯನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿದೆ.
6. ಭವಿಷ್ಯವು 'ವರ್ಧಿತ ಬುದ್ಧಿಮತ್ತೆ' ಸುತ್ತ ಸುತ್ತುತ್ತದೆ, ಅಲ್ಲಿ ಕಾರ್ಯಪಡೆಯು ಮಾನವ ಮತ್ತು ಯಂತ್ರ ಸಾಮರ್ಥ್ಯಗಳನ್ನು ಸಂಯೋಜಿಸುತ್ತದೆ. ಈ ವಿಧಾನವು ಮಾನವ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಕೆಲಸದ ಕಾರ್ಯಕ್ಷಮತೆಯಲ್ಲಿ ಒಟ್ಟಾರೆ ದಕ್ಷತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ, ಅಂತಿಮವಾಗಿ ಇಡೀ ಸಮಾಜಕ್ಕೆ ಪ್ರಯೋಜನವನ್ನು ನೀಡುತ್ತದೆ.
7. ಎಐ-ಚಾಲಿತ ರೂಪಾಂತರದ ಪ್ರತಿಕೂಲ ಸಾಮಾಜಿಕ ಪರಿಣಾಮಗಳನ್ನು ಕಡಿಮೆ ಮಾಡಲು ಸರ್ಕಾರ, ಖಾಸಗಿ ವಲಯ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಯೋಗದ ಪ್ರಯತ್ನ ಅತ್ಯಗತ್ಯ.
*****
(Release ID: 2098344)
Visitor Counter : 30
Read this release in:
Telugu
,
Odia
,
Malayalam
,
English
,
Urdu
,
Hindi
,
Nepali
,
Marathi
,
Bengali
,
Assamese
,
Gujarati
,
Tamil