ಹಣಕಾಸು ಸಚಿವಾಲಯ
azadi ka amrit mahotsav

ವಿಕಸಿತ ಭಾರತ @2047 ಅರಿತುಕೊಳ್ಳಲು ಮೂಲಸೌಕರ್ಯ ವಲಯದಲ್ಲಿ ಖಾಸಗಿ ಭಾಗವಹಿಸುವಿಕೆ ಮಹತ್ವಪೂರ್ಣ: ಆರ್ಥಿಕ ಸಮೀಕ್ಷೆ ಪ್ರತಿಪಾದನೆ


ಮಾದರಿ ನೀತಿ ಸಂಹಿತೆ ಮತ್ತು ಅನಿಶ್ಚಿತ ಮುಂಗಾರು ಹೊರತಾಗಿಯೂ, 2025 ಆರ್ಥಿಕ ವರ್ಷದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ವೇಗ ಹಳಿಯಲ್ಲಿದೆ : ಆರ್ಥಿಕ ಸಮೀಕ್ಷೆ

ಖಾಸಗಿ ಭಾಗವಹಿಸುವಿಕೆ ಉತ್ತೇಜಿಸಲು ಹಣಕಾಸು ಮಾರುಕಟ್ಟೆ ನಿಯಂತ್ರಕ ಸಂಸ್ಥೆಗಳು ಸುಧಾರಣೆ ಕ್ರಮಗಳನ್ನು ಪರಿಚಯಿಸಿವೆ

Posted On: 31 JAN 2025 1:59PM by PIB Bengaluru

ಭಾರತವು ಹೆಚ್ಚಿನ ಜಿಡಿಪಿ ಬೆಳವಣಿಗೆಯ ದರ ಕಾಯ್ದುಕೊಳ್ಳಬೇಕಾದರೆ ಮುಂದಿನ 2 ದಶಕಗಳಲ್ಲಿ ಮೂಲಸೌಕರ್ಯ ವಲಯದ ಹೂಡಿಕೆಯಲ್ಲಿ ನಿರಂತರ ಹೆಚ್ಚಳ ಮಾಡುವ ಅಗತ್ಯವಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು ಮಂಡಿಸಿದ ಆರ್ಥಿಕ ಸಮೀಕ್ಷೆ 2024-25ರಲ್ಲಿ ಪ್ರತಿಪಾದಿಸಿದರು.

ಕಳೆದ 5 ವರ್ಷಗಳಲ್ಲಿ ಭೌತಿಕ, ಡಿಜಿಟಲ್ ಮತ್ತು ಸಾಮಾಜಿಕ ಮೂಲಸೌಕರ್ಯ ನಿರ್ಮಿಸುವುದು ಸರ್ಕಾರದ ಕೇಂದ್ರ ಆದ್ಯತೆಯ ಗಮನದ ಕ್ಷೇತ್ರವಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಇದು ವಿವಿಧ ಆಯಾಮಗಳನ್ನು ಹೊಂದಿದೆ – ಮೂಲಸೌಕರ್ಯ ಮೇಲಿನ ಸಾರ್ವಜನಿಕ ವೆಚ್ಚದಲ್ಲಿ ಹೆಚ್ಚಳ, ಅನುಮೋದನೆಗಳು ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ಎದುರಾಗುವ ಅಡಚಣೆಯನ್ನು ನಿವಾರಿಸಲು ಸಂಸ್ಥೆಗಳ ರಚನೆ ಮತ್ತು ಸಂಪನ್ಮೂಲ ಕ್ರೋಢೀಕರಣ ನವೀನ ವಿಧಾನಗಳು ಅಗತ್ಯವಿವೆ. ವಿಕಸಿತ ಭಾರತ @2047ರ ಅಗತ್ಯಗಳಿಗೆ ಅನುಗುಣವಾಗಿ ದೇಶದ ಮೂಲಸೌಕರ್ಯ  ನವೀಕರಿಸುವ ಬೇಡಿಕೆಗಳನ್ನು ಸಾರ್ವಜನಿಕ ಬಂಡವಾಳದಿಂದಲೇ ಮಾತ್ರ ಪೂರೈಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

ಯೋಜನೆಗಳನ್ನು ಪರಿಕಲ್ಪನೆ ಮಾಡುವ ಸಾಮರ್ಥ್ಯ ಮತ್ತು ಅಪಾಯ ಮತ್ತು ಆದಾಯ ಹಂಚಿಕೆ ಕಾರ್ಯವಿಧಾನಗಳು, ಒಪ್ಪಂದ ನಿರ್ವಹಣೆ, ಸಂಘರ್ಷ ಪರಿಹಾರ ಮತ್ತು ಯೋಜನೆ ಮುಕ್ತಾಯದಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಸುಧಾರಿಸುವ ಮೂಲಕ ಮೂಲಸೌಕರ್ಯದಲ್ಲಿ ಖಾಸಗಿ ಭಾಗವಹಿಸುವಿಕೆ ಹೆಚ್ಚಿಸುವುದನ್ನು ನಾವು ಖಚಿತಪಡಿಸಬೇಕು.

ದೇಶಾದ್ಯಂತ ಮೂಲಸೌಕರ್ಯ ವಲಯದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಅಗತ್ಯವನ್ನು ಪೂರ್ಣ ಹೃದಯದಿಂದ ಒಪ್ಪಿಕೊಳ್ಳಬೇಕು, ಅದು ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿರಬೇಕು ಎಂದು ಸಮೀಕ್ಷೆ ಹೇಳಿದೆ. ಅಷ್ಟೇ ಮುಖ್ಯವಾಗಿ, ಖಾಸಗಿ ವಲಯವು ಸಹ ಪರಸ್ಪರ ಪ್ರತಿಕ್ರಿಯಿಸಬೇಕು ಎಂದು ಸಮೀಕ್ಷೆ ಹೇಳಿದೆ.

ಖಾಸಗಿ ಭಾಗವಹಿಸುವಿಕೆ ಹೆಚ್ಚಿಸುವ ಕಾರ್ಯತಂತ್ರಕ್ಕೆ ವಿವಿಧ ಹಂತಗಳ ಸರ್ಕಾರಗಳು, ಹಣಕಾಸು ಮಾರುಕಟ್ಟೆ ಪಾಲುದಾರರು, ಯೋಜನಾ ನಿರ್ವಹಣಾ ತಜ್ಞರು ಮತ್ತು ಯೋಜಕರು ಮತ್ತು ಖಾಸಗಿ ವಲಯ - ಒಳಗೊಂಡಿರುವ ಎಲ್ಲಾ ಪಾಲುದಾರರ ಸಂಘಟಿತ ಕ್ರಮದ ಅಗತ್ಯವಿದೆ. ಯೋಜನೆಗಳನ್ನು ಪರಿಕಲ್ಪನೆ ಮಾಡುವ ಸಾಮರ್ಥ್ಯಗಳು, ಕಾರ್ಯಗತಗೊಳಿಸಲು ವಲಯ-ನಿರ್ದಿಷ್ಟ ನವೀನ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸುವುದು, ಎದುರಾಗುವ ಅಪಾಯ ಮತ್ತು ಆದಾಯ ಹಂಚಿಕೆ, ಒಪ್ಪಂದ ನಿರ್ವಹಣೆ, ಸಂಘರ್ಷ ಪರಿಹಾರ ಮತ್ತು ಯೋಜನೆ ಮುಕ್ತಾಯದಂತಹ ಉನ್ನತ-ಪರಿಣತಿ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಕೆಲಸಗಳನ್ನು ಗಣನೀಯವಾಗಿ ಸುಧಾರಿಸಬೇಕಾಗಿದೆ.

ಪ್ರಮುಖ ಮೂಲಸೌಕರ್ಯ ವಲಯಗಳಲ್ಲಿ ಕೇಂದ್ರ ಸರ್ಕಾರದ ಬಂಡವಾಳ ವೆಚ್ಚದ ವೇಗವು 2025ರ ಮೊದಲ ತ್ರೈಮಾಸಿಕದಲ್ಲಿ ಪರಿಣಾಮ ಬೀರಿತು, ಇದು ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಮಾದರಿ ನೀತಿ ಸಂಹಿತೆಯಿಂದಾಗಿ ಹೆಚ್ಚಾಗಿತ್ತು. ಕಳೆದ ಮುಂಗಾರು ಋತುವಿನ ಅಸಾಮಾನ್ಯ ಮಾದರಿಗಳು ಕೆಲಸದ ಪ್ರಗತಿಯನ್ನು ನಿಧಾನಗೊಳಿಸಿದವು. ಆದ್ದರಿಂದ, ವರ್ಷದಿಂದ ವರ್ಷಕ್ಕೆ ಅಂದರೆ 2025 ತ್ರೈಮಾಸಿಕಕ್ಕೆ ಹೋಲಿಕೆ ಮಾಡುವುದು ಸೂಕ್ತವಲ್ಲದಿರಬಹುದು. ಚುನಾವಣಾ ಪ್ರಕ್ರಿಯೆಯು ಇತ್ಯರ್ಥವಾಗುತ್ತಿದ್ದಂತೆ, 2024ರ ಜುಲೈ-ನವೆಂಬರ್‌ನಲ್ಲಿ ಬಂಡವಾಳ ವೆಚ್ಚವೂ ಏರಿಕೆ ಕಂಡಿತು. ಪ್ರಸ್ತುತ ಹಣಕಾಸು ವರ್ಷದ ಉಳಿದ ತಿಂಗಳುಗಳಲ್ಲಿ ಮೂಲಸೌಕರ್ಯ ವಲಯಗಳಲ್ಲಿನ ಬಂಡವಾಳ ಹೂಡಿಕೆಯು ಮತ್ತಷ್ಟು ವೇಗ ಪಡೆಯುವ ನಿರೀಕ್ಷೆಯಿದೆ. ಸರಾಸರಿಯಾಗಿ, ಮೂಲಸೌಕರ್ಯ ವಲಯಗಳಿಗೆ ಸಂಬಂಧಿಸಿದ ಸಚಿವಾಲಯಗಳು 2024ರ ಏಪ್ರಿಲ್ ನಿಂದ ನವೆಂಬರ್ ಅವಧಿಯಲ್ಲಿ ಬಜೆಟ್ ಮಾಡಲಾದ ಬಂಡವಾಳದ ಶೇಕಡ 60ರಷ್ಟು ಬಳಸಿಕೊಂಡಿವೆ. ಇದು 17ನೇ ಲೋಕಸಭಾ ಚುನಾವಣೆ ನಡೆದ 2020ರ ಅದೇ ಅವಧಿಯಲ್ಲಿ ಸಾಧಿಸಿದ ಪ್ರಗತಿಗೆ ಅನುಕೂಲಕರವಾಗಿ ಹೋಲಿಕೆಯಾಗುತ್ತದೆ.

ಸರ್ಕಾರವು ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್, ರಾಷ್ಟ್ರೀಯ ಸ್ವತ್ತಿನಿಂದ ಆದಾಯ ಗಳಿಸುವ(ಮಾನೆಟೈಸೇಷನ್) ಪೈಪ್‌ಲೈನ್ ಮತ್ತು ಪಿಎಂ-ಗತಿ ಶಕ್ತಿ ಮುಂತಾದ ಯೋಜನೆಗಳ ಅನೇಕ ಅಡಚಣೆಗಳನ್ನು ನಿವಾರಿಸುವ ಮತ್ತು ಸುಗಮಗೊಳಿಸುವ ಕಾರ್ಯವಿಧಾನಗಳನ್ನು ಸ್ಥಾಪಿಸಿದೆ ಮತ್ತು ಅವುಗಳು ಪ್ರಗತಿ ಸಾಧಿಸಿವೆ. ಖಾಸಗಿ ಭಾಗವಹಿಸುವಿಕೆ ಉತ್ತೇಜಿಸಲು ಹಣಕಾಸು ಮಾರುಕಟ್ಟೆ ನಿಯಂತ್ರಕ ಸಂಸ್ಥೆಗಳು ಸುಧಾರಣೆಗಳನ್ನು ಪರಿಚಯಿಸಿದ್ದಾರೆ. ಆದರೂ, ಅನೇಕ ಪ್ರಮುಖ ವಲಯಗಳಲ್ಲಿ ಖಾಸಗಿ ಉದ್ಯಮದ ಬಳಕೆ ಸೀಮಿತವಾಗಿದೆ ಎಂದು ಆರ್ಥಿಕ ಸಮೀಕ್ಷೆಯು ಗಮನ ಸೆಳೆದಿದೆ.

 

*****


(Release ID: 2097979) Visitor Counter : 14