ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನೀತಿ ಆಯೋಗದ ಖ್ಯಾತ ಅರ್ಥಶಾಸ್ತ್ರಜ್ಞರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ


ಸಭೆಯ ವಿಷಯ: ಜಾಗತಿಕ ಅನಿಶ್ಚಿತತೆಯ ಸಮಯದಲ್ಲಿ ಭಾರತದ ಬೆಳವಣಿಗೆಯ ವೇಗವನ್ನು ಕಾಪಾಡಿಕೊಳ್ಳುವುದು

2047ರ ವೇಳೆಗೆ ಭಾರತದ ದೃಷ್ಟಿಯನ್ನು ಅಭಿವೃದ್ಧಿಯತ್ತ ಕೇಂದ್ರೀಕರಿಸಿ ಮೂಲಭೂತ ಬದಲಾವಣೆಯ ಮೂಲಕ ವಿಕಸಿತ ಭಾರತವನ್ನು ಸಾಧಿಸಬಹುದು: ಪ್ರಧಾನಮಂತ್ರಿ

ಉದ್ಯೋಗ ಸೃಷ್ಟಿ, ಕೌಶಲ್ಯ ಅಭಿವೃದ್ಧಿ, ಕೃಷಿ ಉತ್ಪಾದಕತೆಯ ಹೆಚ್ಚಳ, ಹೂಡಿಕೆಯ ಆಕರ್ಷಣೆ, ರಫ್ತು ಹೆಚ್ಚಳ ಸೇರಿದಂತೆ ವ್ಯಾಪಕ ವಿಷಯಗಳ ಬಗ್ಗೆ ಸಲಹೆಗಳನ್ನು ಹಂಚಿಕೊಂಡ ಅರ್ಥಶಾಸ್ತ್ರಜ್ಞರು

Posted On: 24 DEC 2024 6:47PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನೀತಿ ಆಯೋಗದಲ್ಲಿ 2025-26ನೇ ಸಾಲಿನ ಕೇಂದ್ರ ಬಜೆಟ್ ಸಿದ್ಧತೆಗಾಗಿ ಪ್ರಖ್ಯಾತ ಅರ್ಥಶಾಸ್ತ್ರಜ್ಞರು ಮತ್ತು ಚಿಂತಕರ ಗುಂಪಿನೊಂದಿಗೆ ಸಂವಾದ ನಡೆಸಿದರು.

"ಜಾಗತಿಕ ಅನಿಶ್ಚಿತತೆಯ ಸಮಯದಲ್ಲಿ ಭಾರತದ ಬೆಳವಣಿಗೆಯ ವೇಗವನ್ನು ಕಾಪಾಡಿಕೊಳ್ಳುವುದು" ಎಂಬ ವಿಷಯದ ಬಗ್ಗೆ ಸಭೆ ನಡೆಯಿತು.

ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿಯವರು, ಭಾಷಣಕಾರರ ಒಳನೋಟದ ಅಭಿಪ್ರಾಯಗಳಿಗೆ ಧನ್ಯವಾದ ಅರ್ಪಿಸಿದರು. 2047ರ ವೇಳೆಗೆ ಭಾರತದ ದೃಷ್ಟಿಯನ್ನು ಅಭಿವೃದ್ಧಿಯತ್ತ ಕೇಂದ್ರೀಕರಿಸಿ ಮೂಲಭೂತ ಬದಲಾವಣೆಯ ಮೂಲಕ ವಿಕಸಿತ ಭಾರತವನ್ನು ಸಾಧಿಸಬಹುದು ಎಂದು ಪ್ರಧಾನಿಯವರು ಒತ್ತಿ ಹೇಳಿದರು.

ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ಎದುರಾಗುವ ಸವಾಲುಗಳ ವಿಶ್ಲೇಷಣೆ, ವಿಶೇಷವಾಗಿ ಯುವಕರಲ್ಲಿ ಉದ್ಯೋಗವನ್ನು ಹೆಚ್ಚಿಸುವ ಮತ್ತು ಕ್ಷೇತ್ರಗಳಲ್ಲಿ ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕಾರ್ಯತಂತ್ರಗಳು, ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಉದ್ಯೋಗ ಮಾರುಕಟ್ಟೆಯ ವಿಕಸನ ಅಗತ್ಯಗಳೊಂದಿಗೆ ಹೊಂದಿಸುವ ಕಾರ್ಯತಂತ್ರಗಳು, ಕೃಷಿ ಉತ್ಪಾದಕತೆಯ ಹೆಚ್ಚಳ ಮತ್ತು ಸುಸ್ಥಿರ ಗ್ರಾಮೀಣ ಉದ್ಯೋಗಾವಕಾಶಗಳ ಸೃಷ್ಟಿ, ಖಾಸಗಿ ಹೂಡಿಕೆಯ ಆಕರ್ಷಣೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಉದ್ಯೋಗಗಳ ಸೃಷ್ಟಿ, ಮೂಲಸೌಕರ್ಯ ಯೋಜನೆಗಳಿಗೆ ಸಾರ್ವಜನಿಕ ಹಣದ ಕ್ರೋಢೀಕರಣೆ ಮತ್ತು ಆರ್ಥಿಕ ಸೇರ್ಪಡೆಯ ಉತ್ತೇಜನ ಮತ್ತು ರಫ್ತು ಹೆಚ್ಚಳ ಮತ್ತು ವಿದೇಶಿ ಹೂಡಿಕೆಯ ಆಕರ್ಷಣೆ ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಬಗ್ಗೆ ಭಾಷಣಕಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಡಾ. ಸುರ್ಜಿತ್ ಎಸ್.ಭಲ್ಲಾ, ಡಾ. ಅಶೋಕ್ ಗುಲಾಟಿ, ಡಾ. ಸುದೀಪ್ತೋ ಮುಂಡ್ಲೆ, ಶ್ರೀ ಧರ್ಮಕೀರ್ತಿ ಜೋಶಿ, ಶ್ರೀ ಜನಮೇಜಯ ಸಿನ್ಹಾ, ಶ್ರೀ ಮದನ್ ಸಬ್ನವಿಸ್, ಪ್ರೊ. ಅಮಿತಾ ಬಾತ್ರಾ, ಶ್ರೀ ರಿಧಮ್ ದೇಸಾಯಿ, ಪ್ರೊ. ಚೇತನ್ ಘಾಟೆ, ಪ್ರೊ. ಭರತ್ ರಾಮಸ್ವಾಮಿ, ಡಾ. ಸೌಮ್ಯ ಕಾಂತಿ ಘೋಷ್, ಶ್ರೀ ಸಿದ್ಧಾರ್ಥ ಸನ್ಯಾಲ್, ಡಾ. ಲವೀಶ್ ಭಂಡಾರಿ, ಪ್ರೊ. ರಜನಿ ಸಿನ್ಹಾ, ಪ್ರೊ. ಕೇಶವ್ ದಾಸ್, ಡಾ. ಪ್ರೀತಮ್ ಬ್ಯಾನರ್ಜಿ, ಶ್ರೀ ರಾಹುಲ್ ಬಜೋರಿಯಾ, ಶ್ರೀ ನಿಖಿಲ್ ಗುಪ್ತಾ ಮತ್ತು ಪ್ರೊ. ಶಾಶ್ವತ್ ಅಲೋಕ್ ಸೇರಿದಂತೆ ಅನೇಕ ಪ್ರಸಿದ್ಧ ಅರ್ಥಶಾಸ್ತ್ರಜ್ಞರು ಮತ್ತು ವಿಶ್ಲೇಷಕರು ಸಂವಾದದಲ್ಲಿ ಭಾಗವಹಿಸಿದ್ದರು.

 

*****


(Release ID: 2088246) Visitor Counter : 8