ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಥಾಯ್ಲೆಂಡ್ ಪ್ರಧಾನಮಂತ್ರಿ ಪೀಟೊಂಗ್ಟಾರ್ನ್ ಶಿನವತ್ರಾ ಅವರ ಅಭಿವ್ಯಕ್ತಿಗೆ ಪ್ರಧಾನಮಂತ್ರಿ ಸಂತಸ

Posted On: 30 OCT 2024 9:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಥಾಯ್ಲೆಂಡ್ ಪ್ರಧಾನಿ ಪೀಟೊಂಗ್ಟಾರ್ನ್ ಶಿನಾವತ್ರಾ ಅವರ ಅಭಿವ್ಯಕ್ತಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಪೇಟೊಂಗ್ಟಾರ್ನ್ ಶಿನವತ್ರಾ ಅವರು ಇಂದು ಬ್ಯಾಂಕಾಕ್ನ ಲಿಟಲ್ ಇಂಡಿಯಾದ ಪಹರತ್ನಲ್ಲಿ ಅತ್ಯದ್ಭುತ ಥಾಯ್ಲೆಂಡ್ ದೀಪಾವಳಿ ಉತ್ಸವ 2024 ಅನ್ನು ಉದ್ಘಾಟಿಸಿದರು. ಈ ಅದ್ಭುತ ಥಾಯ್ಲೆಂಡ್‌ ದೀಪಾವಳಿ ಉತ್ಸವಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಶುಭಾಶಯಗಳನ್ನು ಕೋರಿದ್ದಾರೆ. ಇದು ಭಾರತ ಮತ್ತು ಥಾಯ್ಲೆಂಡ್ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಇನ್ನಷ್ಟು ಆಳವಾಗಿಸುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಮಂತ್ರಿಗಳ ಎಕ್ಸ್‌ ಪೋಸ್ಟ್‌ ಹೀಗಿದೆ:

"ಪ್ರಧಾನಮಂತ್ರಿ ಪೀಟೊಂಗ್ಟಾರ್ನ್ ಶಿನಾವತ್ರಾ ಅವರ ಅಭಿವ್ಯಕ್ತಿಯಿಂದ ಸಂತೋಷವಾಗಿದೆ. ಅತ್ಯದ್ಭುತವಾದ ಥಾಯ್ಲೆಂಡ್ ದೀಪಾವಳಿ ಉತ್ಸವಕ್ಕೆ ನನ್ನ ಶುಭಾಶಯಗಳು. ಇದು ಭಾರತ ಮತ್ತು ಥಾಯ್ಲೆಂಡ್ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಗಾಢಗೊಳಿಸುತ್ತದೆ."
@ingshin

 

 

*****


(Release ID: 2070811) Visitor Counter : 27