ಪ್ರಧಾನ ಮಂತ್ರಿಯವರ ಕಛೇರಿ
ಶ್ರೇಷ್ಠ ನರ್ತಕರು ಮತ್ತು ಸಾಂಸ್ಕೃತಿಕ ದಿಗ್ಗಜ ಶ್ರೀ ಕನಕ ರಾಜು ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
प्रविष्टि तिथि:
26 OCT 2024 10:36AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೇಷ್ಠ ನೃತ್ಯಗಾರರು ಮತ್ತು ಸಾಂಸ್ಕೃತಿಕ ದಿಗ್ಗಜ ಶ್ರೀ ಕನಕ ರಾಜು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಗುಸ್ಸಾಡಿ ನೃತ್ಯವನ್ನು ಸಂರಕ್ಷಿಸಲು ಅವರು ನೀಡಿದ ಶ್ರೀಮಂತ ಕೊಡುಗೆ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರಮುಖ ಅಂಶಗಳು, ಅವುಗಳ ಅಧಿಕೃತ ರೂಪದಲ್ಲಿ ಪ್ರವರ್ಧಮಾನಕ್ಕೆ ಬರುವುದನ್ನು ಖಚಿತಪಡಿಸಿಕೊಳ್ಳಲು ಅವರ ಸಮರ್ಪಣೆ ಮತ್ತು ಉತ್ಸಾಹವನ್ನು ಶ್ರೀ ನರೇಂದ್ರ ಮೋದಿ ಶ್ಲಾಘಿಸಿದರು.
ಈ ಕುರಿತು ಎಕ್ಸ್ ಖಾತೆಯಲ್ಲಿ ಶ್ರೀ ನರೇಂದ್ರ ಮೋದಿ ಹೀಗೆ ಬರೆದಿದ್ದಾರೆ:
"ಶ್ರೇಷ್ಠ ನೃತ್ಯಗಾರರು ಮತ್ತು ಸಾಂಸ್ಕೃತಿಕ ದಿಗ್ಗಜ ಶ್ರೀ ಕನಕ ರಾಜು ಜೀ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಗುಸ್ಸಾಡಿ ನೃತ್ಯವನ್ನು ಸಂರಕ್ಷಿಸುವಲ್ಲಿ ಅವರ ಶ್ರೀಮಂತ ಕೊಡುಗೆ ಯಾವಾಗಲೂ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಅವರ ಸಮರ್ಪಣೆ ಮತ್ತು ಉತ್ಸಾಹವು ಸಾಂಸ್ಕೃತಿಕ ಪರಂಪರೆಯ ಪ್ರಮುಖ ಅಂಶಗಳು ಅವುಗಳ ಅಧಿಕೃತ ರೂಪದಲ್ಲಿ ಪ್ರವರ್ಧಮಾನಕ್ಕೆ ಬರುವುದನ್ನು ಖಚಿತಪಡಿಸಿತು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. "ಓಂ ಶಾಂತಿ."
*****
(रिलीज़ आईडी: 2068529)
आगंतुक पटल : 70
इस विज्ञप्ति को इन भाषाओं में पढ़ें:
Odia
,
English
,
Urdu
,
हिन्दी
,
Marathi
,
Manipuri
,
Assamese
,
Bengali
,
Punjabi
,
Gujarati
,
Tamil
,
Telugu
,
Malayalam