ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

16ನೇ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಅಧ್ಯಕ್ಷರೊಂದಿಗಿನ ದ್ವಿಪಕ್ಷೀಯ ಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಆರಂಭಿಕ ನುಡಿಗಳ ಅನುವಾದ

Posted On: 23 OCT 2024 7:35PM by PIB Bengaluru

ಗೌರವಾನ್ವಿತರೇ,

ನಿಮ್ಮನ್ನು ಭೇಟಿ ಮಾಡಲು ನನಗೆ ಸಂತೋಷವಾಗಿದೆ. ಹಾಗೆಯೇ ನೀವು ಹೇಳಿದಂತೆ, ನಾವು 5 ವರ್ಷಗಳ ನಂತರ ಔಪಚಾರಿಕವಾಗಿ ಭೇಟಿಯಾಗುತ್ತಿದ್ದೇವೆ.

ಭಾರತ-ಚೀನಾ ಸಂಬಂಧಗಳ ಪ್ರಾಮುಖ್ಯತೆ ನಮ್ಮ ಜನರಿಗೆ ಮಾತ್ರವಲ್ಲ ಎಂದು ನಾವು ನಂಬುತ್ತೇವೆ.

ಜಾಗತಿಕ ಶಾಂತಿ, ಸ್ಥಿರತೆ ಮತ್ತು ಪ್ರಗತಿಗೆ ಕೂಡ ನಮ್ಮ ಸಂಬಂಧಗಳು ಮುಖ್ಯವಾಗಿವೆ.

ಮಾನ್ಯರೇ,

ಪರಸ್ಪರ ನಂಬಿಕೆ, ಪರಸ್ಪರ ಗೌರವ ಮತ್ತು ಪರಸ್ಪರ ಸೂಕ್ಷ್ಮತೆಯು ನಮ್ಮ ಸಂಬಂಧಗಳ ಆಧಾರವಾಗಿ ಮುಂದುವರಿಯಬೇಕು.

ಈ ಎಲ್ಲಾ ವಿಚಾರಗಳನ್ನು ಚರ್ಚಿಸಲು ಇಂದು ನಮಗೆ ಅವಕಾಶ ಸಿಕ್ಕಿದೆ.

ನಾವು ಮುಕ್ತ ಮನಸ್ಸಿನಿಂದ ಮಾತನಾಡಿದರೆ ನಮ್ಮ ಚರ್ಚೆ ರಚನಾತ್ಮಕವಾಗಿರುತ್ತದೆ ಎಂದು ನನಗೆ ವಿಶ್ವಾಸವಿದೆ.

ಧನ್ಯವಾದಗಳು

ಸೂಚನೆ :- ಇದು ಪ್ರಧಾನಮಂತ್ರಿಯವರ ಹೇಳಿಕೆಗಳ ಅಂದಾಜು ಅನುವಾದವಾಗಿದೆ. ಮೂಲ ಭಾಷಣ ಹಿಂದಿ ಭಾಷೆಯಲ್ಲಿದೆ.

 

*****
 


(Release ID: 2067650) Visitor Counter : 32