ಪ್ರಧಾನ ಮಂತ್ರಿಯವರ ಕಛೇರಿ
ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ ಮತ್ತು ಬಂಗಾಳಿ ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವ ಸಂಪುಟದ ನಿರ್ಧಾರಕ್ಕೆ ಪ್ರಧಾನಮಂತ್ರಿ ಶ್ಲಾಘನೆ
Posted On:
03 OCT 2024 10:05PM by PIB Bengaluru
ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ ಮತ್ತು ಬಂಗಾಳಿ ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವ ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಪ್ರಧಾನಮಂತ್ರಿಯವರು X ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ:
"ಕೇಂದ್ರ ಸಚಿವ ಸಂಪುಟವು ಅನುಮೋದಿಸಿದ ನಂತರ ಅಸ್ಸಾಮಿ ಈಗ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಪಡೆಯುತ್ತದೆ ಎಂಬುದರಿಂದ ನನಗೆ ತುಂಬಾ ಸಂತೋಷವಾಗಿದೆ. ಅಸ್ಸಾಮಿ ಸಂಸ್ಕೃತಿಯು ಶತಮಾನಗಳಿಂದ ಬೆಳೆದು ಬಂದಿದೆ, ಮತ್ತು ಅದು ನಮಗೆ ಶ್ರೀಮಂತ ಸಾಹಿತ್ಯ ಸಂಪ್ರದಾಯವನ್ನು ನೀಡಿದೆ. ಮುಂಬರುವ ದಿನಗಳಲ್ಲಿ ಈ ಭಾಷೆ ಇನ್ನಷ್ಟು ಜನಪ್ರಿಯವಾಗಲಿ. ನನ್ನ ಅಭಿನಂದನೆಗಳು."
"ಶ್ರೇಷ್ಠ ಬಂಗಾಳಿ ಭಾಷೆಗೆ ವಿಶೇಷವಾಗಿ ದುರ್ಗಾ ಪೂಜೆಯ ಶುಭ ಸಮಯದಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಬಂಗಾಳಿ ಸಾಹಿತ್ಯವು ಅಸಂಖ್ಯಾತ ಜನರಿಗೆ ವರ್ಷಗಳಿಂದ ಸ್ಫೂರ್ತಿ ನೀಡಿದೆ. ಇದಕ್ಕಾಗಿ ನಾನು ಪ್ರಪಂಚದಾದ್ಯಂತದ ಎಲ್ಲಾ ಬಂಗಾಳಿ ಭಾಷಿಕರನ್ನು ಅಭಿನಂದಿಸುತ್ತೇನೆ.
ಮರಾಠಿ ಭಾರತದ ಹೆಮ್ಮೆ.
ಈ ಅಸಾಧಾರಣ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿರುವುದಕ್ಕೆ ಅಭಿನಂದನೆಗಳು. ಈ ಗೌರವವು ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಮರಾಠಿಯ ಶ್ರೀಮಂತ ಸಾಂಸ್ಕೃತಿಕ ಕೊಡುಗೆಯನ್ನು ಗುರುತಿಸುತ್ತದೆ. ಮರಾಠಿ ಸದಾ ಭಾರತೀಯ ಪರಂಪರೆಯ ಮೂಲಾಧಾರವಾಗಿದೆ.
ಶಾಸ್ತ್ರೀಯ ಭಾಷೆಯ ಸ್ಥಾನಮಾನದೊಂದಿಗೆ, ಇನ್ನೂ ಅನೇಕ ಜನರು ಅದನ್ನು ಕಲಿಯಲು ಪ್ರೇರೇಪಿಸಲ್ಪಡುತ್ತಾರೆ ಎಂದು ನನಗೆ ಖಾತ್ರಿಯಿದೆ.
"ಪಾಲಿ ಮತ್ತು ಪ್ರಾಕೃತ ಭಾರತದ ಸಂಸ್ಕೃತಿಯ ಮೂಲ ಬೇರಾಗಿವೆ. ಇವು ಆಧ್ಯಾತ್ಮಿಕತೆ, ಜ್ಞಾನ ಮತ್ತು ತತ್ವಶಾಸ್ತ್ರದ ಭಾಷೆಗಳಾಗಿವೆ. ಅವು ತಮ್ಮ ಸಾಹಿತ್ಯ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿವೆ. ಶಾಸ್ತ್ರೀಯ ಭಾಷೆಗಳೆಂದು ಅವುಗಳ ಮಾನ್ಯತೆಯು ಭಾರತೀಯ ಚಿಂತನೆ, ಸಂಸ್ಕೃತಿ ಮತ್ತು ಇತಿಹಾಸದ ಮೇಲೆ ಅವುಗಳ ಕಾಲಾತೀತ ಪ್ರಭಾವವನ್ನು ಗೌರವಿಸುತ್ತದೆ.
ಅವುಗಳನ್ನು ಶಾಸ್ತ್ರೀಯ ಭಾಷೆಗಳೆಂದು ಗುರುತಿಸುವ ಕ್ಯಾಬಿನೆಟ್ ನಿರ್ಧಾರದ ನಂತರ, ಹೆಚ್ಚಿನ ಜನರು ಅವುಗಳ ಬಗ್ಗೆ ಕಲಿಯಲು ಪ್ರೇರೇಪಿಸಲ್ಪಡುತ್ತಾರೆ ಎಂದು ನನಗೆ ವಿಶ್ವಾಸವಿದೆ. ಇದು ನಿಜಕ್ಕೂ ಸಂತೋಷದ ಕ್ಷಣ!"
“কেন্দ্ৰীয় মন্ত্ৰীসভাৰ অনুমোদন পোৱাৰ পিছত অসমীয়াই এতিয়া ধ্ৰুপদী ভাষাৰ মৰ্যাদা লাভ কৰাত মই অতিশয় আনন্দিত হৈছোঁ। অসমীয়া সংস্কৃতিয়ে যুগ যুগ ধৰি উজ্বলি উঠিছে আৰু আমাক এক চহকী সাহিত্যিক পৰম্পৰা প্ৰদান কৰিছে। আগন্তুক সময়ত এই ভাষা আৰু অধিক জনপ্ৰিয় হৈ পৰক। সকলোকে মই অভিনন্দন জনালোঁ।”
“আমি অত্যন্ত খুশি যে মহান বাংলা ভাষাকে ধ্রুপদী ভাষার মর্যাদা দেওয়া হয়েছে আর তাও পবিত্র দুর্গা পূজার সময়েই।বাংলা সাহিত্য অসংখ্য মানুষকে বছরের পর বছর ধরে অনুপ্রাণিত করে আসছে । এই উপলক্ষে বিশ্ব জুড়ে সকল বাংলা ভাষাভাষী-কে অভিনন্দন জানাই ।”
“मराठी भाषा ही भारताचा अभिमान आहे. या अद्वितीय भाषेला अभिजात भाषेचा दर्जा मिळाल्याबद्दल अभिनंदन. हा सन्मान म्हणजे मराठी भाषेने आपल्या देशाच्या इतिहासात दिलेल्या समृद्ध सांस्कृतिक योगदानाचा गौरवच आहे. मराठी भाषा ही कायमच भारतीय वारशाचा आधारस्तंभ राहिली आहे. मला खात्री आहे की अभिजात भाषेचा दर्जा मिळाल्याने ही भाषा शिकण्यासाठी असंख्य लोकांना प्रेरणा मिळेल.”
*****
(Release ID: 2061888)
Visitor Counter : 38
Read this release in:
Telugu
,
English
,
Urdu
,
Hindi
,
Marathi
,
Manipuri
,
Assamese
,
Bengali
,
Punjabi
,
Gujarati
,
Tamil
,
Malayalam