ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿ ಮತ್ತು ನಿಯೋಜನೆಗೆ ಕ್ವಾಡ್ ತತ್ವಗಳು

Posted On: 21 SEP 2024 11:55PM by PIB Bengaluru

1. ಕ್ವಾಡ್ ನ ಸದಸ್ಯರಾದ ನಾವು, ಡಿಜಿಟಲ್ ತಂತ್ರಜ್ಞಾನಗಳು ಮತ್ತು ವ್ಯವಸ್ಥೆಗಳು ಸಮಾಜಗಳನ್ನು ಆಳವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ಗುರುತಿಸಿದ್ದೇವೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ವಿಶ್ವಸಂಸ್ಥೆಯ 2030 ಕಾರ್ಯಸೂಚಿಯನ್ನು ಸಾಕಾರಗೊಳಿಸಲು ಹಾಗೂ ಅದರ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ವೇಗ ನೀಡಲು ಅಭೂತ ಅವಕಾಶಗಳನ್ನು ನೀಡುತ್ತವೆ. ಡಿಜಿಟಲೀಕರಣದ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವಾಗ ನಮ್ಮ ಹಂಚಿಕೆಯ ಸಮೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿಯ ಮುಂದುವರಿಕೆಯಲ್ಲಿ ಎಲ್ಲವನ್ನೂ ಒಳಗೊಂಡ, ಮುಕ್ತ, ಸುಸ್ಥಿರ, ನ್ಯಾಯೋಚಿತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಡಿಜಿಟಲ್ ಭವಿಷ್ಯವನ್ನು ಪೋಷಿಸುವ ಪ್ರಾಮುಖ್ಯತೆಯನ್ನು ನಾವು ಬಲವಾಗಿ ಪ್ರತಿಪಾದಿಸುತ್ತೇವೆ.

2.  ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ(ಡಿಪಿಐ) ಎನ್ನುವುದು ವಿಕಸನಗೊಳ್ಳುತ್ತಿರುವ ಪರಿಕಲ್ಪನೆಯಾಗಿದ್ದು, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಪರಸ್ಪರ ಕಾರ್ಯಸಾಧ್ಯವಾದ ಹಂಚಿಕೆಯ ಡಿಜಿಟಲ್ ವ್ಯವಸ್ಥೆಗಳ ಒಂದು ಸೆಟ್ ಎಂದು ವಿವರಿಸಲಾಗಿದೆ; ಸಮಾನ ಲಭ್ಯತೆಯನ್ನು ಒದಗಿಸಲು ಮತ್ತು ಸಾರ್ವಜನಿಕ ಸೇವಾ ವಿತರಣೆಯಲ್ಲಿ ಸುಧಾರಣೆಗಳನ್ನು ತರಲು ಸಾರ್ವಜನಿಕ ಮತ್ತು ಖಾಸಗಿ ವಲಯದ ನಿರ್ಮಾಣ ಮತ್ತು ಅವುಗಳನ್ನು ಬಳಸಿಕೊಳ್ಳುವುದು;  ಅನ್ವಯವಾಗುವ ಕಾನೂನು ಚೌಕಟ್ಟುಗಳಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಎಲ್ಲವನ್ನೂ ಒಳಗೊಂಡ, ನಾವೀನ್ಯತೆ, ನಂಬಿಕೆ ಮತ್ತು ಸ್ಪರ್ಧೆ ಮತ್ತು ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳಿಗೆ ಗೌರವವನ್ನು ಹೆಚ್ಚಿಸಲು ಒಂದು ಹಂತದ ವೇದಿಕೆ ಮತ್ತು ನ್ಯಾಯಯುತ ಸ್ಪರ್ಧೆಯ ನಿಯಮಗಳನ್ನು ಸಕ್ರಿಯಗೊಳಿಸುತ್ತದೆ; ಮಾನವ ಹಕ್ಕುಗಳನ್ನು ಗೌರವಿಸುವ ಮತ್ತು ನಮ್ಮ ಪ್ರಜಾಸತ್ತಾತ್ಮಕ ತತ್ವಗಳನ್ನು ಎತ್ತಿಹಿಡಿಯುವ ರೀತಿಯಲ್ಲಿ ಡಿಪಿಐ ಕಾರ್ಯಗತಗೊಳಿಸಲು ಮೂಲಭೂತ ಸ್ವಾತಂತ್ರ್ಯಗಳು ಮತ್ತು ದೃಢವಾದ ಸೈಬರ್‌ ಸುರಕ್ಷತಾ ಕ್ರಮಗಳೆರಡೂ ಅತ್ಯಗತ್ಯವಾಗಿವೆ. ಡಿಪಿಐ ಅನ್ನು ನಿಯೋಜಿಸುವ ಸರ್ಕಾರಗಳು ಎಲ್ಲಾ ಡಿಜಿಟಲ್ ಅಂತರಗಳನ್ನು ನಿವಾರಿಸಲು ಸಂಘಟಿತ ಪ್ರಯತ್ನಗಳಲ್ಲಿ ತೊಡಗಬೇಕು.


3. ಆ ನಿಟ್ಟಿನಲ್ಲಿ ಡಿಪಿಐ ಅಭಿವೃದ್ಧಿ ಮತ್ತು ನಿಯೋಜನೆಯಲ್ಲಿ ಈ ಕೆಳಗಿನ ಎಲ್ಲಾ ತತ್ವಗಳನ್ನು ಪಾಲಿಸಬೇಕೆಂಬುದನ್ನು ನಾವು ಖಚಿತಪಡಿಸುತ್ತೇವೆ;


i. ಎಲ್ಲವನ್ನೂ ಒಳಗೊಂಡ(ಇನ್‌ ಕ್ಲೂಸಿವಿಟಿ): ಸೇರ್ಪಡೆಯನ್ನು ಖಾತ್ರಿಪಡಿಸಲು ಆರ್ಥಿಕ, ತಾಂತ್ರಿಕ ಅಥವಾ ಸಾಮಾಜಿಕ ಅಡೆತಡೆಗಳನ್ನು ನಿವಾರಿಸಿ ಅಥವಾ ಕಡಿಮೆ ಮಾಡಿ, ಅಂತಿಮ ಬಳಕೆದಾರರ ಸಬಲೀಕರಣ, ಕೊನೆಯ ಮೈಲು ಸಂಪರ್ಕ ಲಭ್ಯತೆ ಮತ್ತು ತಪ್ಪಾದ ಕ್ರಮಾವಳಿಯ ಪಕ್ಷಪಾತವನ್ನು ತಪ್ಪಿಸುವುದು.  


ii. ಇಂಟರ್ ಪೋರಬಲಿಟಿ: ತಂತ್ರಜ್ಞಾನ ತಟಸ್ಥ ವಿಧಾನದೊಂದಿಗೆ ಮುಕ್ತ ಮಾನದಂಡಗಳು ಮತ್ತು ವಿಶೇಷಣೆಗಳನ್ನು ಬಳಕೆ ಮತ್ತು ನಿರ್ಮಿಸುವ ಮೂಲಕ ಪರಸ್ಪರ ಕಾರ್ಯಸಾಧ್ಯತೆಯನ್ನು ಇಂಟರ್ ಪೋರಬಲಿಟಿ ಖಾತ್ರಿಪಡಿಸಿ, ಸಾಧ್ಯವಾದಲ್ಲೆಲ್ಲಾ, ಸೂಕ್ತವಾದ ಸುರಕ್ಷತೆಗಳನ್ನು ಲೆಕ್ಕಹಾಕುವಾಗ ಮತ್ತು ಕಾನೂನು ಪರಿಗಣನೆಗಳು ಮತ್ತು ತಾಂತ್ರಿಕ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮಗಳನ್ನು ಕೈಗೊಳ್ಳಿ.

iii. ಮಾಡ್ಯುಲಾರಿಟಿ ಮತ್ತು ಎಕ್ಸೆಟೆನ್ಸಬಲಿಟಿ: ವಿಸ್ತರಣಾ ವಿಧಾನವು ಅನಗತ್ಯ ಅಡ್ಡಿಯಿಲ್ಲದೆ ಬದಲಾವಣೆಗಳು/ಮಾರ್ಪಾಡುಗಳನ್ನು ಸರಿಹೊಂದಿಸಲು ಬಿಲ್ಡಿಂಗ್ ಬ್ಲಾಕ್ ಅಥವಾ ಮಾಡ್ಯುಲರ್ ಆರ್ಕಿಟೆಕ್ಚರ್ ಅನ್ನು ಸೂಚಿಸುತ್ತದೆ.

iv. ಸ್ಕೇಲಬಲಿಟಿ: ಬೇಡಿಕೆಯಲ್ಲಿ ಯಾವುದೇ ಅನಿರೀಕ್ಷಿತ ಹೆಚ್ಚಳವನ್ನು ಸುಲಭವಾಗಿ ಸರಿಹೊಂದಿಸಲು ಮತ್ತು/ಅಥವಾ ಅಸ್ತಿತ್ವದಲ್ಲಿರುವ ವ್ಯವಸ್ಥೆಗಳನ್ನು ಬದಲಾಯಿಸದೆ ವಿಸ್ತರಣೆಯ ಅವಶ್ಯಕತೆಗಳನ್ನು ಪೂರೈಸಲು ಹೊಂದಿಕೊಳ್ಳುವ ವಿನ್ಯಾಸವನ್ನು ಬಳಸಿ

v. ಭದ್ರತೆ ಮತ್ತು ಖಾಸಗಿತನ: ವೈಯಕ್ತಿಕ ಖಾಸಗಿತನ, ದತ್ತಾಂಶ ರಕ್ಷಣೆ ಮತ್ತು ಸೂಕ್ತ ಮಟ್ಟದ ರಕ್ಷಣೆ ನೀಡುವ ಮಾನದಂಡಗಳ ಆಧಾರದ ಮೇಲೆ ಸ್ಥಿತಿಸ್ಥಾಪಕತ್ವವನ್ನು ಖಾತ್ರಿಪಡಿಸಿಕೊಳ್ಳಲು ಪ್ರಮುಖ ಖಾಸಗಿತನ (ಗೌಪ್ಯತೆ)ಯನ್ನು ಹೆಚ್ಚಿಸುವ ತಂತ್ರಜ್ಞಾನಗಳು ಮತ್ತು ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡಿರುವ ವಿಧಾನವನ್ನು ಅಳವಡಿಸಿಕೊಳ್ಳಿ

vi. ಸಹಭಾಗಿತ್ವ: ಮುಕ್ತತೆ ಮತ್ತು ಸಹಭಾಗಿತ್ವ ಸಂಸ್ಕೃತಿಯನ್ನು ಸುಗಮಗೊಳಿಸಲು ಮತ್ತು ಉತ್ತೇಜಿಸಲು ಯೋಜನೆ, ವಿನ್ಯಾಸ, ನಿರ್ಮಾಣ ಮತ್ತು ಕಾರ್ಯಾಚರಣೆಯ ವಿವಿಧ ಹಂತಗಳಲ್ಲಿ ಸಮುದಾಯದ ನಾಯಕರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಿ. ಬಳಕೆದಾರ-ಕೇಂದ್ರಿತ ಪರಿಹಾರಗಳ ಅಭಿವೃದ್ಧಿಯನ್ನು ಸಕ್ರಿಯಗೊಳಿಸಿ ಮತ್ತು ವ್ಯಾಪಕ ಮತ್ತು ನಿರಂತರ ಅಳವಡಿಕೆಗೆ ಅನುಕೂಲ ಮಾಡಿ ಮತ್ತು ಹೊಸ ಸೇವೆಗಳನ್ನು ಅಭಿವೃದ್ಧಿಪಡಿಸಲು ನಾವೀನ್ಯಕಾರರನ್ನು ಅನುಮತಿಸಿ.


vii. ಸಾರ್ವಜನಿಕ ಅನುಕೂಲ, ವಿಶ್ವಾಸ ಮತ್ತು ಪಾರದರ್ಶಕತೆಗಾಗಿ ಆಡಳಿತ:: ಅನ್ವಯವಾಗುವ ಚೌಕಟ್ಟುಗಳನ್ನು ಗೌರವಿಸುವಾಗ ಸಾರ್ವಜನಿಕರ ಅನುಕೂಲ, ವಿಶ್ವಾಸ ಮತ್ತು ಪಾರದರ್ಶಕತೆಯನ್ನು ಗರಿಷ್ಠಗೊಳಿಸಬೇಕು.  ಅದರರ್ಥ ಕಾನೂನುಗಳು, ನಿಬಂಧನೆಗಳು, ನೀತಿಗಳು ಮತ್ತು ಸಾಮರ್ಥ್ಯಗಳು ಈ ವ್ಯವಸ್ಥೆಗಳು ಸುರಕ್ಷಿತ, ಸುಭದ್ರ, ವಿಶ್ವಾಸಾರ್ಹ ಮತ್ತು ಪಾರದರ್ಶಕ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಬೇಕು ಮತ್ತು ಪೈಪೋಟಿ ಮತ್ತು ಸೇರ್ಪಡೆಯನ್ನು ಉತ್ತೇಜಿಸುತ್ತದೆ ಮತ್ತು ದತ್ತಾಂಶ ರಕ್ಷಣೆ ಮತ್ತು ಗೌಪ್ಯತೆಯ ತತ್ವಗಳಿಗೆ ಬದ್ಧವಾಗಿರಬೇಕು.


viii. ಕುಂದುಕೊರತೆಗಳ ಪರಿಹಾರ: ಕುಂದುಕೊರತೆ ಪರಿಹಾರ ಅಂದರೆ, ಬಳಕೆದಾರ ಟಚ್‌ಪಾಯಿಂಟ್‌ಗಳು, ಪ್ರಕ್ರಿಯೆಗಳು, ಜವಾಬ್ದಾರಿಯುತ ಘಟಕಗಳು, ಪರಿಹಾರಕ್ಕಾಗಿ ಕ್ರಮಗಳ ಮೇಲೆ ಬಲವಾದ ಗಮನವನ್ನು ಹೊಂದಲು ಸುಲಭವಾಗಿ ಲಭ್ಯವಾಗುವ ಮತ್ತು ಪಾರದರ್ಶಕ ಕಾರ್ಯವಿಧಾನಗಳನ್ನು ವಿವರಿಸಿ.

ix. ಸುಸ್ಥಿರತೆ : ಸಾಕಷ್ಟು ಹಣಕಾಸು ಮತ್ತು ತಾಂತ್ರಿಕ ಬೆಂಬಲದ ಮೂಲಕ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಿ, ಅಡೆತಡೆಯಿಲ್ಲದ ಕಾರ್ಯಾಚರಣೆಗಳು ಮತ್ತು ತಡೆರಹಿತ ಬಳಕೆದಾರ-ಕೇಂದ್ರಿತ ಸೇವಾ ವಿತರಣೆಯನ್ನು ಸುಲಭಗೊಳಿಸುವ ಕ್ರಮಗಳಿಗೆ ವೇಗ ನೀಡುವುದು.


x. ಮಾನವ ಹಕ್ಕುಗಳು: ಯೋಜನೆ, ವಿನ್ಯಾಸ, ನಿರ್ಮಾಣ ಮತ್ತು ಕಾರ್ಯಾಚರಣೆಯ ಪ್ರತಿಯೊಂದು ಹಂತದಲ್ಲೂ ಮಾನವ ಹಕ್ಕುಗಳನ್ನು ಗೌರವಿಸುವ ವಿಧಾನವನ್ನು ಅಳವಡಿಸಿಕೊಳ್ಳಿ.

xi. ಬೌದ್ಧಿಕ ಆಸ್ತಿ ಸಂರಕ್ಷಣೆ: ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟುಗಳ ಆಧಾರದ ಮೇಲೆ ಬಳಸಿದ ತಂತ್ರಜ್ಞಾನಗಳು ಮತ್ತು ಇತರ ವಸ್ತುಗಳ ಹಕ್ಕುದಾರರಿಗೆ ಬೌದ್ಧಿಕ ಆಸ್ತಿ ಹಕ್ಕುಗಳ ಸಾಕಷ್ಟು ಮತ್ತು ಪರಿಣಾಮಕಾರಿ ರಕ್ಷಣೆ ಮತ್ತು ಜಾರಿಯನ್ನು ಖಾತ್ರಿಪಡಿಸುವುದು.

xii. ಸುಸ್ಥಿರ ಅಭಿವೃದ್ಧಿ: ಸುಸ್ಥಿರ ಅಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗಾಗಿ 2030 ರ ಕಾರ್ಯಸೂಚಿಯ ಅನುಷ್ಠಾನಕ್ಕೆ ಕೊಡುಗೆ ನೀಡುವ ಈ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಮತ್ತು ನಿಯೋಜಿಸಲು ಪ್ರಯತ್ನ.

 

*****



(Release ID: 2057902) Visitor Counter : 10