ಸಂಪುಟ
azadi ka amrit mahotsav

ಏಕಕಾಲಿಕ ಚುನಾವಣೆಗಳ ಕುರಿತಾಗಿ ಉನ್ನತ ಮಟ್ಟದ ಸಮಿತಿಯು ಮಾಡಿರುವ ಶಿಫಾರಸುಗಳನ್ನು ಕೇಂದ್ರ ಸಚಿವ ಸಂಪುಟವು ಅಂಗೀಕರಿಸಿದೆ 

Posted On: 18 SEP 2024 4:26PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರ ಅಧ್ಯಕ್ಷತೆಯ ಏಕಕಾಲಿಕ ಚುನಾವಣೆಯ ಉನ್ನತ ಮಟ್ಟದ ಸಮಿತಿಯು ಮಾಡಿದ ಶಿಫಾರಸುಗಳನ್ನು ಅಂಗೀಕರಿಸಿದೆ.

ಏಕಕಾಲಿಕ ಚುನಾವಣೆ: ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳು

  1. 1951 ಮತ್ತು 1967 ರ ನಡುವೆ ಏಕಕಾಲದಲ್ಲಿ ಚುನಾವಣೆಗಳು ನಡೆದಿವೆ.
  2. ಕಾನೂನು ಆಯೋಗ: 170ನೇ ವರದಿ (1999):  ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳಿಗೆ ಐದು ವರ್ಷಗಳಲ್ಲಿ ಒಂದು ಚುನಾವಣೆ.
  3. ಸಂಸದೀಯ ಸಮಿತಿ 79ನೇ ವರದಿ (2015): ಎರಡು ಹಂತಗಳಲ್ಲಿ ಏಕಕಾಲಿಕ ಚುನಾವಣೆಗೆ ವಿಧಾನಗಳನ್ನು ಸೂಚಿಸುವುದು.
  4. ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ರಾಜಕೀಯ ಪಕ್ಷಗಳು ಮತ್ತು ತಜ್ಞರು ಸೇರಿದಂತೆ ವಿಶಾಲ ವ್ಯಾಪ್ತಿಯ ಎಲ್ಲಾ ಮಧ್ಯಸ್ಥಗಾರರ ಜೊತೆಗೆ ವ್ಯಾಪಕವಾಗಿ ಸಮಾಲೋಚನೆ ನಡೆಸಿತು.
  5. ವರದಿಯು ಈ ಜಾಲತಾಣದಲ್ಲಿ ಲಭ್ಯವಿದೆ: https://onoe.gov.in 
  6. ದೊರಕಿದ ವ್ಯಾಪಕವಾದ ಪ್ರತಿಕ್ರಿಯೆಯು ದೇಶದಲ್ಲಿ ಏಕಕಾಲಿಕ ಚುನಾವಣೆಗಳಿಗೆ ವ್ಯಾಪಕ ಬೆಂಬಲವಿದೆ ಎಂದು ತೋರಿಸಿದೆ.

ಶಿಫಾರಸುಗಳು ಮತ್ತು ಮುಂದಿನ ದಾರಿ:

  1. ಎರಡು ಹಂತಗಳಲ್ಲಿ ಅಳವಡಿಸಬೇಕು.
  2.  ಮೊದಲ ಹಂತದಲ್ಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದು.
  3. ಎರಡನೇ ಹಂತದಲ್ಲಿ: ಸಾರ್ವತ್ರಿಕ ಚುನಾವಣೆಯ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು (ಪಂಚಾಯತ್ ಮತ್ತು ಪುರಸಭೆಗಳು) ನಡೆಸುವುದು.
  4. ಎಲ್ಲಾ ಚುನಾವಣೆಗಳಿಗೆ ಸಾಮಾನ್ಯ ಮತದಾರರ ಒಂದು ಪಟ್ಟಿ ಮಾತ್ರ ಇರುತ್ತದೆ.
  5. ಈ ಪರಿಕಲ್ಪನೆಯು ದೇಶಾದ್ಯಂತ ವಿವರವಾದ ಚರ್ಚೆಗಳನ್ನು ಪ್ರಾರಂಭಿಸುತ್ತದೆ.
  6. ಅನುಷ್ಠಾನ ಗುಂಪನ್ನು ರಚಿಸಬೇಕು.

 

*****


(Release ID: 2056352) Visitor Counter : 134