ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ​​​​​​​ ಶ್ರೀ ಅಮಿತ್ ಶಾ ಅವರು ಶನಿವಾರ, ಸೆಪ್ಟೆಂಬರ್ 14 ರಂದು ನವದೆಹಲಿಯಲ್ಲಿ ಅಧಿಕೃತ ಭಾಷೆಯ ವಜ್ರಮಹೋತ್ಸವ ಆಚರಣೆ ಮತ್ತು ನಾಲ್ಕನೇ ಅಖಿಲ ಭಾರತ ರಾಜಭಾಷಾ ಸಮ್ಮೇಳನದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪ್ರೇರಣೆಯೊಂದಿಗೆ ಗೃಹ ಸಚಿವಾಲಯದ ಅಧಿಕೃತ ಭಾಷಾ ಇಲಾಖೆಯು 2021 ರಿಂದ ಪ್ರತಿ ವರ್ಷ ಅಖಿಲ ಭಾರತ ರಾಜಭಾಷಾ ಸಮ್ಮೇಳನವನ್ನು ಆಯೋಜಿಸುತ್ತಿದೆ

ಅಧಿಕೃತ ಭಾಷಾ ವಜ್ರಮಹೋತ್ಸವದ ಸಂದರ್ಭದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ 'ರಾಜಭಾಷಾ ಭಾರತಿ' ಪತ್ರಿಕೆಯ ವಜ್ರಮಹೋತ್ಸವ ವಿಶೇಷ ಸಂಚಿಕೆಯನ್ನು ಗೃಹ ಸಚಿವರು ಬಿಡುಗಡೆ ಮಾಡಲಿದ್ದಾರೆ

ಶ್ರೀ ಅಮಿತ್ ಶಾ ಅವರು ವಜ್ರ ಮಹೋತ್ಸವದ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಸಹ ಬಿಡುಗಡೆ ಮಾಡಲಿದ್ದಾರೆ

ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಭಾರತೀಯ ಭಾಷಾ ಅನುಭಾಗ್‌ ಅನ್ನು ಉದ್ಘಾಟಿಸಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿಂದಿ ಮತ್ತು ಎಲ್ಲಾ ಭಾರತೀಯ ಭಾಷೆಗಳ ಅಭಿವೃದ್ಧಿ ಮತ್ತು ಅವುಗಳ ನಡುವೆ ಉತ್ತಮ ಸಮನ್ವಯಕ್ಕೆ ನಿರಂತರವಾಗಿ ಒತ್ತು ನೀಡುತ್ತಿದ್ದಾರೆ

ಹಿಂದಿಯೊಂದಿಗೆ ಎಲ್ಲಾ ಭಾರತೀಯ ಭಾಷೆಗಳ ಬಳಕೆಯನ್ನು ಉತ್ತೇಜಿಸುವ ಮತ್ತು ಅವುಗಳ ನಡುವೆ ಉತ್ತಮ ಸಮನ್ವಯದ ಉದ್ದೇಶದಿಂದ ಭಾರತೀಯ ಭಾಷೆಗಳ ಅನುಭಾಗ್‌ ಅನ್ನು ಸ್ಥಾಪಿಸಲಾಗಿದೆ

Posted On: 13 SEP 2024 3:08PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಶನಿವಾರ, ಸೆಪ್ಟೆಂಬರ್ 14 ರಂದು ನವದೆಹಲಿಯಲ್ಲಿ ಅಧಿಕೃತ ಭಾಷೆಯ ವಜ್ರಮಹೋತ್ಸವ ಆಚರಣೆ ಮತ್ತು ನಾಲ್ಕನೇ ಅಖಿಲ ಭಾರತ ರಾಜಭಾಷಾ ಸಮ್ಮೇಳನದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹಿಂದಿ ಅಧಿಕೃತ ಭಾಷೆಯಾಗಿ 75 ವರ್ಷಗಳನ್ನು ಪೂರೈಸಿದ ಸ್ಮರಣಾರ್ಥವಾಗಿ 14-15 ಸೆಪ್ಟೆಂಬರ್ 2024 ರಂದು ನವದೆಹಲಿಯ ಭಾರತ ಮಂಟಪದಲ್ಲಿ ನಾಲ್ಕನೇ ಅಖಿಲ ಭಾರತ ರಾಜಭಾಷಾ ಸಮ್ಮೇಳನವನ್ನು ಅಧಿಕೃತ ಭಾಷಾ ಇಲಾಖೆಯು ಆಯೋಜಿಸುತ್ತಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪ್ರೇರಣೆ ಮತ್ತು ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ, ಗೃಹ ಸಚಿವಾಲಯದ ಅಧಿಕೃತ ಭಾಷಾ ಇಲಾಖೆಯು 2021 ರಿಂದ ಪ್ರತಿ ವರ್ಷ ಅಖಿಲ ಭಾರತ ರಾಜಭಾಷಾ ಸಮ್ಮೇಳನವನ್ನು ಆಯೋಜಿಸುತ್ತಿದೆ.

ಅಧಿಕೃತ ಭಾಷೆಯ ವಜ್ರಮಹೋತ್ಸವದ ಸಂದರ್ಭದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ‘ರಾಜಭಾಷಾ ಭಾರತಿ’ಪತ್ರಿಕೆಯ ವಜ್ರಮಹೋತ್ಸವ ವಿಶೇಷ ಸಂಚಿಕೆಯನ್ನು ಗೃಹ ಸಚಿವರು ಬಿಡುಗಡೆ ಮಾಡಲಿದ್ದಾರೆ. ಶ್ರೀ ಅಮಿತ್ ಶಾ ಅವರು ವಜ್ರ ಮಹೋತ್ಸವದ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಸಹ ಬಿಡುಗಡೆ ಮಾಡಲಿದ್ದಾರೆ. ಗೃಹ ಸಚಿವರು ಅಧಿಕೃತ ಭಾಷೆ ಗೌರವ ಮತ್ತು ಅಧಿಕೃತ ಭಾಷಾ ಕೀರ್ತಿ ಪ್ರಶಸ್ತಿಗಳನ್ನು ಸಹ ಪ್ರದಾನ ಮಾಡಲಿದ್ದಾರೆ. ಅಲ್ಲದೆ ಇನ್ನೂ ಕೆಲವು ಪುಸ್ತಕಗಳು ಮತ್ತು ನಿಯತಕಾಲಿಕೆಗಳನ್ನು ಬಿಡುಗಡೆ ಮಾಡಲಾಗುವುದು.

ಈ ಸಂದರ್ಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಭಾರತೀಯ ಭಾಷಾ ಅನುಭಾಗ್ ಉದ್ಘಾಟಿಸಲಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿಂದಿ ಮತ್ತು ಭಾರತೀಯ ಭಾಷೆಗಳ ಅಭಿವೃದ್ಧಿ ಮತ್ತು ಅವುಗಳ ನಡುವೆ ಉತ್ತಮ ಸಮನ್ವಯಕ್ಕೆ ನಿರಂತರವಾಗಿ ಒತ್ತು ನೀಡುತ್ತಿದ್ದಾರೆ. ಸಂವಿಧಾನದ ಆಶಯ ಮತ್ತು ಪ್ರಧಾನ ಮಂತ್ರಿಯವರ ನಿರ್ದೇಶನವನ್ನು ಗಮನದಲ್ಲಿಟ್ಟುಕೊಂಡು, ಹಿಂದಿಯ ಜೊತೆಗೆ ಭಾರತೀಯ ಭಾಷೆಗಳ ಬಳಕೆಯನ್ನು ಉತ್ತೇಜಿಸುವ ಮತ್ತು ಅವುಗಳ ನಡುವೆ ಉತ್ತಮ ಸಮನ್ವಯವನ್ನು ಸ್ಥಾಪಿಸುವ ಉದ್ದೇಶದಿಂದ, ಗೃಹ ಸಚಿವಾಲಯವು ಭಾರತೀಯ ಭಾಷಾ ಅನುಭಾಗ್ ಸ್ಥಾಪನೆಯನ್ನು ಪ್ರಸ್ತಾಪಿಸಿತ್ತು.

2019 ರಲ್ಲಿ, ಗೃಹ ಸಚಿವರು ದೇಶದ ವಿವಿಧ ನಗರಗಳಲ್ಲಿ ಹಿಂದಿ ದಿವಸ್ ಅನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸುವ ಪರಿಕಲ್ಪನೆಯನ್ನು ಹೊಂದಿದ್ದರು. ಈ ಪರಿಕಲ್ಪನೆಯನ್ನು ಸಾಕಾರಗೊಳಿಸಲು 2021 ರಲ್ಲಿ ವಾರಾಣಸಿಯಲ್ಲಿ ಹಿಂದಿ ದಿನ ಮತ್ತು ಮೊದಲ ಅಖಿಲ ಭಾರತ ಅಧಿಕೃತ ಭಾಷಾ ಸಮ್ಮೇಳನವನ್ನು ಆಯೋಜಿಸಲಾಯಿತು. ಅದರ ನಂತರ, ಹಿಂದಿ ದಿವಸ್ ಮತ್ತು ಎರಡನೇ ಮತ್ತು ಮೂರನೇ ಅಖಿಲ ಭಾರತ ಅಧಿಕೃತ ಭಾಷಾ ಸಮ್ಮೇಳನವನ್ನು 2022 ರಲ್ಲಿ ಸೂರತ್ ಮತ್ತು 2023 ರಲ್ಲಿ ಪುಣೆಯಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮಗಳು ದೇಶಾದ್ಯಂತ ಅಧಿಕೃತ ಭಾಷಾ ಸಿಬ್ಬಂದಿ ಮತ್ತು ಅಧಿಕಾರಿಗಳಲ್ಲಿ ಹೊಸ ಚೈತನ್ಯವನ್ನು ತುಂಬಿವೆ.

ಈ ಸಂದರ್ಭವನ್ನು ಅಧಿಕೃತ ಭಾಷಾ ಇಲಾಖೆಯು ವಜ್ರಮಹೋತ್ಸವವಾಗಿ ಆಚರಿಸುತ್ತಿರುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಹಿಂದಿ ದಿವಸ್ ಕಾರ್ಯಕ್ರಮ ಮತ್ತು ನಾಲ್ಕನೇ ಅಖಿಲ ಭಾರತೀಯ ರಾಜಭಾಷಾ ಸಮ್ಮೇಳನವು ವಿಶೇಷವಾಗಿದೆ. ಹಿಂದಿ ಅಧಿಕೃತ ಭಾಷೆಯಾಗಿ 75 ವರ್ಷಗಳನ್ನು ಪೂರೈಸಿ ಅನೇಕ ಪ್ರಮುಖ ಮೈಲಿಗಲ್ಲುಗಳನ್ನು ದಾಟಿರುವುದು ಮಾತ್ರವಲ್ಲದೆ ತಂತ್ರಜ್ಞಾನ ಕ್ಷೇತ್ರದಲ್ಲಿ ನಿರಂತರ ಪ್ರಗತಿಯನ್ನು ಸಾಧಿಸಿದೆ.

ಎರಡು ದಿನಗಳ ನಾಲ್ಕನೇ ಅಖಿಲ ಭಾರತೀಯ ರಾಜಭಾಷಾ ಸಮ್ಮೇಳನದಲ್ಲಿ, ಕಳೆದ 75 ವರ್ಷಗಳಲ್ಲಿ ಹಿಂದಿ ಅಧಿಕೃತ ಭಾಷೆ, ಸಾರ್ವಜನಿಕ ಭಾಷೆ ಮತ್ತು ಸಂಪರ್ಕ ಭಾಷೆಯಾಗಿ ಪ್ರಗತಿಯ ಕುರಿತು ಆಳವಾದ ಚರ್ಚೆ ನಡೆಯಲಿದೆ. ಸಮ್ಮೇಳನದ ಮೊದಲ ದಿನವಾದ ಸೆ.14ರಂದು ಮಧ್ಯಾಹ್ನದ ಊಟದ ನಂತರದ ಅಧಿವೇಶನದಲ್ಲಿ ‘ಅಧಿಕೃತ ಭಾಷಾ ವಜ್ರಮಹೋತ್ಸವ – 75 ವರ್ಷಗಳಲ್ಲಿ ಆಡಳಿತ ಭಾಷೆ, ಸಾರ್ವಜನಿಕ ಭಾಷೆ ಮತ್ತು ಸಂಪರ್ಕ ಭಾಷೆಯಾಗಿ ಹಿಂದಿಯ ಪ್ರಗತಿ’ ಕುರಿತು ಚರ್ಚೆ ನಡೆಯಲಿದೆ. ಎರಡನೇ ಅಧಿವೇಶನವು 'ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಹಿಂದಿ' ವಿಷಯವನ್ನು ಹೊಂದಿರುತ್ತದೆ, ಇದನ್ನು ಜನಪ್ರಿಯ ಹಿಂದಿ ಕವಿ ಮತ್ತು ವಾಗ್ಮಿ ಡಾ. ಕುಮಾರ್ ವಿಶ್ವಾಸ್ ಅವರು ಉದ್ದೇಶಿಸಿ ಮಾತನಾಡಲಿದ್ದಾರೆ.

ಸೆ.15ರಂದು ನಡೆಯುವ ಸಮ್ಮೇಳನದ ಮೂರನೇ ಅಧಿವೇಶನದಲ್ಲಿ ‘ಭಾಷಾ ಬೋಧನೆಯಲ್ಲಿ ನಿಘಂಟಿನ ಪಾತ್ರ ಮತ್ತು ದೇವನಾಗರಿ ಲಿಪಿಯ ವಿಶೇಷತೆ’ಕುರಿತು ನಾಡಿನ ಖ್ಯಾತ ಭಾಷಾಶಾಸ್ತ್ರಜ್ಞರು ಹಾಗೂ ನಿಘಂಟುತಜ್ಞರು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ. ನಾಲ್ಕನೇ ಅಧಿವೇಶನವು 'ತಂತ್ರಜ್ಞಾನದ ಯುಗದಲ್ಲಿ ಅಧಿಕೃತ ಭಾಷೆ ಹಿಂದಿ ಅನುಷ್ಠಾನದಲ್ಲಿ ಅಧಿಕೃತ ಭಾಷಾ ಸಮಿತಿಯ ಕೊಡುಗೆ" ಕುರಿತು ನಡೆಯಲಿದೆ.

ಐದನೇ ಅಧಿವೇಶನವು 'ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷಿ ಅಧಿನಿಯಮ 2023: ಒಂದು ಚರ್ಚೆ' ಕುರಿತು ನಡೆಯಲಿದೆ, ಇದನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರು ಉದ್ದೇಶಿಸಿ ಮಾತನಾಡಲಿದ್ದಾರೆ. ಕೊನೆಯ ಅಧಿವೇಶನವು 'ಭಾರತೀಯ ಸಿನಿಮಾ- ಹಿಂದಿ ಭಾಷೆಯ ಬೆಳವಣಿಗೆಗೆ ಪ್ರಬಲ ಮಾಧ್ಯಮ', ಇದನ್ನು ಖ್ಯಾತ ನಟ ಶ್ರೀ ಅನುಪಮ್ ಖೇರ್ ಮತ್ತು ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಶ್ರೀ ಚಂದ್ರಪ್ರಕಾಶ್ ದ್ವಿವೇದಿ ಉದ್ದೇಶಿಸಿ ಮಾತನಾಡಲಿದ್ದಾರೆ.

ರಾಜ್ಯಸಭೆ ಉಪ ಸಭಾಪತಿ ಶ್ರೀ ಹರಿವಂಶ್, ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾದ ಶ್ರೀ ನಿತ್ಯಾನಂದ ರೈ ಮತ್ತು ಶ್ರೀ ಬಂಡಿ ಸಂಜಯ್ ಕುಮಾರ್, ಸಂಸದೀಯ ಅಧಿಕೃತ ಭಾಷಾ ಸಮಿತಿಯ ಉಪಾಧ್ಯಕ್ಷ ಶ್ರೀ ಭರ್ತೃಹರಿ ಮಹತಾಬ್ ಮತ್ತು ಸಮಿತಿಯ ಇತರ ಸದಸ್ಯರು, ಭಾರತ ಸರ್ಕಾರದ ಕಾರ್ಯದರ್ಶಿಗಳು, ಮುಖ್ಯ ವಿವಿಧ ಬ್ಯಾಂಕ್‌ ಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ (ಪಿ ಎಸ್‌ ಯು) ಕಾರ್ಯನಿರ್ವಾಹಕ ಅಧಿಕಾರಿಗಳು, ದಕ್ಷಿಣ ಭಾರತದ ಹಿಂದಿ ವಿದ್ವಾಂಸರಾದ ಪ್ರೊ.ಎಂ.ಗೋವಿಂದರಾಜನ್ ಮತ್ತು ಪ್ರೊ.ಎಸ್.ಆರ್. ಸರ್ರಾಜು ಮತ್ತು ಪ್ರಖ್ಯಾತ ಹಿಂದಿ ವಿದ್ವಾಂಸರಾದ ಪ್ರೊ.ಸೂರ್ಯಪ್ರಸಾದ್ ದೀಕ್ಷಿತ್ ಮತ್ತು ಡಾ.ಹರಿಓಂ ಪನ್ವಾರ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಎರಡು ದಿನಗಳ ಸಮ್ಮೇಳನದಲ್ಲಿ 10,000 ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ, ಇದರಲ್ಲಿ ದೇಶಾದ್ಯಂತದ ರಾಜಭಾಷಾ ಅಧಿಕಾರಿಗಳು ಮತ್ತು ಹಿಂದಿ ವಿದ್ವಾಂಸರು ಮತ್ತು ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ಸೇರಿದ್ದಾರೆ.

 

*****

 


(Release ID: 2054581) Visitor Counter : 39