ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಐ4ಸಿ ಯ ಮೊದಲ ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಮತ್ತು ಸೈಬರ್ ಅಪರಾಧ ತಡೆಗಟ್ಟಲು ಪ್ರಮುಖ ಉಪಕ್ರಮಗಳನ್ನು ನಾಳೆ ನವದೆಹಲಿಯಲ್ಲಿ ಚಾಲನೆ ಮಾಡಲಿದ್ದಾರೆ


ಸೈಬರ್ ಫ್ರಾಡ್ ಮಿಟಿಗೇಷನ್ ಸೆಂಟರ್ (ಸಿ.ಎಫ್.ಎಂ.ಸಿ.) ಅನ್ನು ರಾಷ್ಟ್ರಕ್ಕೆ ಅರ್ಪಿಸಲು ಮತ್ತು ಸಮನ್ವಯ ವೇದಿಕೆ (ಜಂಟಿ ಸೈಬರ್ ಕ್ರೈಮ್ ಇನ್ವೆಸ್ಟಿಗೇಶನ್ ಫೆಸಿಲಿಟೇಶನ್ ಸಿಸ್ಟಮ್) ಅನ್ನು ಚಾಲನೆಗೊಳಿಸಲಿರುವ ಕೇಂದ್ರ ಗೃಹ ಸಚಿವರು

ಶ್ರೀ ಅಮಿತ್ ಶಾ ಅವರು 'ಸೈಬರ್ ಕಮಾಂಡೋಸ್' ಕಾರ್ಯಕ್ರಮ ಮತ್ತು ಶಂಕಿತರ ನೋಂದಣಿ ಉಪಕ್ರಮವನ್ನು ಉದ್ಘಾಟಿಸಲಿದ್ದಾರೆ

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಈ ಉಪಕ್ರಮಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 'ಸೈಬರ್ ಸೆಕ್ಯೂರ್ ಭಾರತ್' ನ ದೃಷ್ಟಿಯನ್ನು ಸಾಧಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿವೆ ಎಂದು ಸಾಬೀತುಪಡಿಸುತ್ತಿವೆ

Posted On: 09 SEP 2024 6:21PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಐ4ಸಿ ಯ ಮೊದಲ ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಮತ್ತು ಸೈಬರ್ ಅಪರಾಧವನ್ನು ತಡೆಗಟ್ಟಲು ಪ್ರಮುಖ ಉಪಕ್ರಮಗಳನ್ನು ಮಂಗಳವಾರ, 10 ನೇ ಸೆಪ್ಟೆಂಬರ್ 2024 ರಂದು ನವದೆಹಲಿಯಲ್ಲಿ ಪ್ರಾರಂಭಿಸಲಿದ್ದಾರೆ.

ಕೇಂದ್ರ ಗೃಹ ಸಚಿವರು ಸೈಬರ್ ಫ್ರಾಡ್ ಮಿಟಿಗೇಷನ್ ಸೆಂಟರ್ (ಸಿ.ಎಫ್.ಎಂ.ಸಿ) ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.  ಪ್ರಮುಖ ಬ್ಯಾಂಕ್‌ ಗಳು, ಹಣಕಾಸು ಮಧ್ಯವರ್ತಿಗಳು, ಪಾವತಿ ಸಂಗ್ರಾಹಕರು, ಟೆಲಿಕಾಂ ಸೇವಾ ಪೂರೈಕೆದಾರರು, ಮಾಹಿತಿ ತಂತ್ರಜ್ಞಾನ ಮಧ್ಯವರ್ತಿಗಳು ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕಾನೂನು ಜಾರಿ ಏಜೆನ್ಸಿಗಳ (ಎಲ್.ಇ.ಎ.) ಪ್ರತಿನಿಧಿಗಳೊಂದಿಗೆ ನವದೆಹಲಿಯ ಭಾರತೀಯ ಸೈಬರ್‌ ಕ್ರೈಮ್ ಕೋಆರ್ಡಿನೇಶನ್ ಸೆಂಟರ್ (ಐ4ಸಿ) ನಲ್ಲಿ ಸಿ.ಎಫ್.ಎಂ.ಸಿ. ಸ್ಥಾಪಿಸಲಾಗಿದೆ.  ಆನ್‌ ಲೈನ್ ಹಣಕಾಸು ಅಪರಾಧಗಳನ್ನು ನಿಭಾಯಿಸಲು ತಕ್ಷಣದ ಕ್ರಮ ಮತ್ತು ತಡೆರಹಿತ ಸಹಕಾರಕ್ಕಾಗಿ ಅವರು ಒಟ್ಟಾಗಿ ಕೆಲಸ ಮಾಡುತ್ತಾರೆ.  ಕಾನೂನು ಜಾರಿಯಲ್ಲಿ "ಸಹಕಾರಿ ಪ್ರಜಾಪ್ರಭುತ್ವ" ನ ಉದಾಹರಣೆಯಾಗಿ ಸಿ.ಎಫ್.ಎಂ.ಸಿ. ಕಾರ್ಯನಿರ್ವಹಿಸಲಿದೆ.

ಶ್ರೀ ಅಮಿತ್ ಶಾ ಅವರು ಸಮನ್ವಯ ವೇದಿಕೆಯನ್ನು (ಜಂಟಿ ಸೈಬರ್ ಕ್ರೈಮ್ ಇನ್ವೆಸ್ಟಿಗೇಶನ್ ಫೆಸಿಲಿಟೇಶನ್ ಸಿಸ್ಟಮ್) ಪ್ರಾರಂಭಿಸಲಿದ್ದಾರೆ.  ಸೈಬರ್ ಕ್ರೈಮ್, ಡೇಟಾ ಹಂಚಿಕೆ, ಅಪರಾಧ ಮ್ಯಾಪಿಂಗ್, ಡೇಟಾ ಅನಾಲಿಟಿಕ್ಸ್, ಸಹಕಾರ ಮತ್ತು ದೇಶಾದ್ಯಂತ ಕಾನೂನು ಜಾರಿ ಸಂಸ್ಥೆಗಳಿಗೆ ಸಮನ್ವಯ ವೇದಿಕೆಯ ಡೇಟಾ ರೆಪೊಸಿಟರಿಗಾಗಿ ಸಮನ್ವಯ ವೇದಿಕೆ ಎಂಬ ವೆಬ್ ಆಧಾರಿತ ಮಾಡ್ಯೂಲ್ ಒನ್ ಸ್ಟಾಪ್ ಪೋರ್ಟಲ್ ಆಗಿ ಕಾರ್ಯನಿರ್ವಹಿಸುತ್ತದೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರು 'ಸೈಬರ್ ಕಮಾಂಡೋಸ್' ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.  ಈ ಕಾರ್ಯಕ್ರಮದ ಅಡಿಯಲ್ಲಿ, ದೇಶದಲ್ಲಿ ಸೈಬರ್ ಭದ್ರತಾ ವ್ಯವಸ್ಥೆಯ ಬೆದರಿಕೆಗಳನ್ನು ಎದುರಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ತರಬೇತಿ ಪಡೆದ 'ಸೈಬರ್ ಕಮಾಂಡೋಸ್' ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳು (ಸಿಪಿಒ) ವಿಶೇಷ ವಿಭಾಗವನ್ನು ಸ್ಥಾಪಿಸಲಾಗುತ್ತದೆ. ಡಿಜಿಟಲ್ ಜಾಗವನ್ನು ಸುರಕ್ಷಿತವಾಗಿರಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಏಜೆನ್ಸಿಗಳಿಗೆ ತರಬೇತಿ ಪಡೆದ ಸೈಬರ್ ಕಮಾಂಡೋಗಳು ಸಹಾಯ ಮಾಡುತ್ತಾರೆ.

ಶ್ರೀ ಅಮಿತ್ ಶಾ ಅವರು ಶಂಕಿತರ ದಾಖಲಾತಿಯನ್ನು ಉದ್ಘಾಟಿಸಲಿದ್ದಾರೆ.  ಈ ಉಪಕ್ರಮದ ಭಾಗವಾಗಿ, ಹಣಕಾಸು ಪರಿಸರ ವ್ಯವಸ್ಥೆಯ ವಂಚನೆ ಅಪಾಯ ನಿರ್ವಹಣೆ ಸಾಮರ್ಥ್ಯಗಳನ್ನು ಬಲಪಡಿಸಲು ಬ್ಯಾಂಕ್‌ಗಳು ಮತ್ತು ಹಣಕಾಸು ಮಧ್ಯವರ್ತಿಗಳ ಸಹಯೋಗದೊಂದಿಗೆ ರಾಷ್ಟ್ರೀಯ ಸೈಬರ್‌ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (ಎನ್‌ಸಿಆರ್‌ಪಿ) ಆಧಾರದ ಮೇಲೆ ವಿವಿಧ ಗುರುತಿಸುವಿಕೆಗಳ ಶಂಕಿತ ನೋಂದಣಿಯನ್ನು ರಚಿಸಲಾಗುತ್ತಿದೆ.

 ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಈ ಉಪಕ್ರಮಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ‘ಸೈಬರ್ ಸೆಕ್ಯೂರ್ ಭಾರತ್’ ನ ದೃಷ್ಟಿಕೋನವನ್ನು ಸಾಧಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿದೆ ಎಂದು ಇದು ಸಾಬೀತುಪಡಿಸುತ್ತದೆ.  ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವನ್ನು (ಐ4ಸಿ) ಅಕ್ಟೋಬರ್ 5, 2018 ರಂದು ಗೃಹ ವ್ಯವಹಾರಗಳ ಸಚಿವಾಲಯದ ಸೈಬರ್ ಮತ್ತು ಮಾಹಿತಿ ಭದ್ರತಾ ವಿಭಾಗ ( ಸಿಐಎಸ್ ವಿಭಾಗ) ವ್ಯಾಪ್ತಿಯಲ್ಲಿ ಕೇಂದ್ರ ವಲಯ ಯೋಜನೆಯ ಅಡಿಯಲ್ಲಿ ಸ್ಥಾಪಿಸಲಾಯಿತು. 

ದೇಶದಾದ್ಯಂತ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ಮಟ್ಟದ ಸಮನ್ವಯ ಕೇಂದ್ರವನ್ನು ಸ್ಥಾಪಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿತ್ತು.  ಐ4ಸಿ ಕಾನೂನು ಜಾರಿ ಏಜೆನ್ಸಿಗಳ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ಸೈಬರ್ ಅಪರಾಧದೊಂದಿಗೆ ವ್ಯವಹರಿಸುವ ವಿವಿಧ ಪಾಲುದಾರರ ನಡುವೆ ಸಮನ್ವಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.  ಜನವರಿ 10, 2020 ರಂದು, ನವದೆಹಲಿಯಲ್ಲಿ ಐ4ಸಿ ಪ್ರಧಾನ ಕಛೇರಿಯನ್ನು ಉದ್ಘಾಟಿಸಲಾಯಿತು ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಾಯಿತು.  ಶಾಶ್ವತ ಸಾಂಸ್ಥಿಕ ರೂಪವನ್ನು ನೀಡಲು ಮತ್ತು ಯೋಜನೆಯ ಹಂತದಲ್ಲಿ ಗಳಿಸಿದ ಮಾಹಿತಿ ಅನುಭವ ಆಧಾರದಲ್ಲಿ ವ್ಯವಸ್ಥೆ ನಿರ್ಮಿಸಲು, ಜುಲೈ 1, 2024 ರಿಂದ ಜಾರಿಗೆ ಬರುವಂತೆ, ಐ4ಸಿ ಅನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯ ಹಾಗೂ ಜೊತೆ ಇರುವ ಕಚೇರಿಯಾಗಿ ಗೊತ್ತುಪಡಿಸಲಾಗಿದೆ.

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಬಂಡಿ ಸಂಜಯ್ ಕುಮಾರ್, ಕೇಂದ್ರ ಗೃಹ ಕಾರ್ಯದರ್ಶಿ, ನಿರ್ದೇಶಕ ಐಬಿ, ವಿಶೇಷ ಕಾರ್ಯದರ್ಶಿ (ಆಂತರಿಕ ಭದ್ರತೆ), ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿಪಿಗಳು/ಭಾರತದ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಪೊಲೀಸ್ ಅಧಿಕಾರಿಗಳು, ವಿವಿಧ ಸರ್ಕಾರಿ ಸಂಸ್ಥೆಗಳ ಅಧಿಕಾರಿಗಳು, ವಿವಿಧ ಬ್ಯಾಂಕ್‌ ಗಳು/ಹಣಕಾಸಿನ ಮಧ್ಯವರ್ತಿಗಳು, ಫಿನ್‌ಟೆಕ್, ಮಾಧ್ಯಮ ಸಂಸ್ಥೆಗಳು, ಸೈಬರ್ ಕಮಾಂಡೋಸ್, ಎನ್‌.ಸಿ.ಸಿ ಮತ್ತು ಎನ್‌.ಎಸ್‌.ಎಸ್ ಕೆಡೆಟ್‌ ಗಳು , ಹಿರಿಯ ಅಧಿಕಾರಿಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮವು 10ನೇ ಸೆಪ್ಟೆಂಬರ್ 2024 ರಂದು ಬೆಳಗ್ಗೆ 11.30 ಗಂಟೆಯಿಂದ ಐ4ಸಿ ನ ಸೈಬರ್‌ ಡೋಸ್ಟ್‌ ನ ಅಧಿಕೃತ ಯೂಟ್ಯೂಬ್ ಚಾನೆಲ್‌ ನಲ್ಲಿ ನೇರ ಪ್ರಸಾರವಾಗಲಿದೆ.

 

*****


(Release ID: 2053384) Visitor Counter : 38