ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

7ನೇ ರಾಷ್ಟ್ರೀಯ ಪೋಷಣ ಮಾಸಾಚರಣೆ 2024ರ ಆರನೇ ದಿನದ ಅಂತ್ಯಕ್ಕೆ 35 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ 752 ಜಿಲ್ಲೆಗಳಿಂದ ಒಟ್ಟಾರೆ 1.37 ಕೋಟಿ ಚಟುವಟಿಕೆಗಳು ನಡೆದ ಬಗ್ಗೆ ವರದಿಯಾಗಿವೆ


ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶಗಳು ಇಲ್ಲಿಯವರೆಗೆ ಹೆಚ್ಚಿನ ಕೊಡುಗೆ ನೀಡಿದ ರಾಜ್ಯಗಳಾಗಿವೆ

ಕೇಂದ್ರ ಶಿಕ್ಷಣ ಸಚಿವಾಲಯ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ, ಕೇಂದ್ರ ಆಯುಷ್ ಸಚಿವಾಲಯ ಮತ್ತು ಕೇಂದ್ರ ಪಂಚಾಯತ್ ರಾಜ್ ಸಚಿವಾಲಯಗಳು ಮಹತ್ತರ ಕೊಡುಗೆ ನೀಡಿದ ಸಚಿವಾಲಯಗಳಾಗಿವೆ

Posted On: 07 SEP 2024 10:13AM by PIB Bengaluru

ಗುಜರಾತ್ ನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ 31 ಆಗಸ್ಟ್ 2024 ರಂದು ಪ್ರಾರಂಭವಾದ 7ನೇ ರಾಷ್ಟ್ರೀಯ ಪೋಷಣ ಮಾಸಾಚರಣೆಯು, ಮೂಲತಃ ಉತ್ತಮ ಆಡಳಿತಕ್ಕಾಗಿ ತಂತ್ರಜ್ಞಾನದ ಜೊತೆಗೆ ರಕ್ತಹೀನತೆ, ಮಗುವಿನ ಬೆಳವಣಿಗೆಯ ಪರಿಶೀಲನೆ, ಪೂರಕ ಉತ್ತಮ ಆಹಾರ ಮತ್ತು ಪೋಷಣವೂ ಶಿಕ್ಷಣವೂ (ಪೋಶನ್ ಭಿ ಪಧೈ ಭಿ) ನಂತಹ ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಿದೆ. ಈ ಅಭಿಯಾನವು ತಾಯಿಯ ಹೆಸರಲ್ಲಿ ಒಂದು ಸಸಿ (ಏಕ್ ಪೇಡ್ ಮಾ ಕೆ ನಾಮ್) ಉಪಕ್ರಮದ ಮೂಲಕ ಪರಿಸರ ಸುಸ್ಥಿರತೆಯನ್ನು ಒತ್ತಿಹೇಳುತ್ತದೆ, ಇದರಲ್ಲಿ 13.95 ಲಕ್ಷ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಲಾ ಕಾರ್ಯಾಚರಣೆಗಳ ಜೊತೆಗೆ ತೋಟ ನಿರ್ಮಾಣವನ್ನು ಪ್ರೋತ್ಸಾಹಿಸಲಾಗುತ್ತದೆ.

Image

ರಾಷ್ಟ್ರವ್ಯಾಪಿ ಈ ಆಚರಣೆಯ 6ನೇ ದಿನದವರೆಗೆ, 35 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ 752 ಜಿಲ್ಲೆಗಳಿಂದ 1.37 ಕೋಟಿ ಪೂರಕ ಚಟುವಟಿಕೆಗಳು ವರದಿಯಾಗಿವೆ. ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶಗಳು ಇಲ್ಲಿಯವರೆಗೆ ಹೆಚ್ಚಿನ ಕೊಡುಗೆ ನೀಡಿದ ರಾಜ್ಯಗಳಾಗಿವೆ.

ರಾಷ್ಟ್ರವ್ಯಾಪಿ  ಆಚರಣೆಯ ಈ ವಿಷಯದಲ್ಲಿ (ಅಥವಾ ಪ್ರಮುಖ ಕೇಂದ್ರೀಕೃತ ವಿಷಯಗಳ ಅನುಸಾರವಾಗಿ), ಇಲ್ಲಿಯವರೆಗೆ ರಕ್ತಹೀನತೆಯ ಮೇಲೆ 39 ಲಕ್ಷಕ್ಕೂ ಹೆಚ್ಚು ಚಟುವಟಿಕೆಗಳನ್ನು ನಡೆಸಲಾಗಿದೆ, ಬೆಳವಣಿಗೆಯ ಪರಿಶೀಲನೆಯಲ್ಲಿ 27 ಲಕ್ಷಕ್ಕೂ ಹೆಚ್ಚು ಚಟುವಟಿಕೆಗಳು, ಸುಮಾರು 20 ಲಕ್ಷ ಚಟುವಟಿಕೆಗಳು ಪೂರಕ ಆಹಾರದ ಮೇಲೆ, 18.5 ಲಕ್ಷಕ್ಕೂ ಹೆಚ್ಚು ಚಟುವಟಿಕೆಗಳನ್ನು ಪೋಷಣವೂ ಶಿಕ್ಷಣವೂ (ಪೋಶನ್ ಭಿ ಪಧೈ ಭಿ) ಎಂಬುದರ ಮೇಲೆ ನಡೆಸಲಾಗಿದೆ. ತಾಯಿಯ ಹೆಸರಲ್ಲಿ ಒಂದು ವೃಕ್ಷ (ಏಕ್ ಪೇಡ್ ಮಾ ಕೆ ನಾಮ್) ಉಪಕ್ರಮದ ಮೂಲಕ ಪರಿಸರ ಸುಸ್ಥಿರತೆಯ 8 ಲಕ್ಷಕ್ಕೂ ಹೆಚ್ಚು ಚಟುವಟಿಕೆಗಳನ್ನು ನಡೆಸಲಾಗಿದೆ. ಉತ್ತಮ ಆಡಳಿತಕ್ಕಾಗಿ ತಂತ್ರಜ್ಞಾನ ಎಂಬ ಪ್ರಮುಖ ಕೇಂದ್ರೀಕೃತ ಕ್ಷೇತ್ರಗಳಲ್ಲಿ ಒಂದಾದ ಕೇಂದ್ರ ಮಹಿಳಾಭಿವೃದ್ಧಿ ಇಲಾಖೆ ಗೊತ್ತುಪಡಿಸಿದ ಕಾರ್ಯಕಾರಿ-ಸೂಚಿಗಳ ಆಧಾರದಲ್ಲಿ 10 ಲಕ್ಷಕ್ಕೂ ಹೆಚ್ಚು ಚಟುವಟಿಕೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗಿದೆ. ಇದು ಐಸಿಟಿ ಅಪ್ಲಿಕೇಶನ್ ಪೋಷಣ ಟ್ರ್ಯಾಕರ್ ಗೆ ಲಿಂಕ್ ಮಾಡಲಾದ ಪೌಷ್ಟಿಕಾಂಶದ ಸೂಚಕಗಳು ಮತ್ತು ಕಾರ್ಯಕ್ರಮದ ವರದಿ, ಆಯಾ ಪ್ರದೇಶಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗಳ ಮಾಹಿತಿಯನ್ನು ಗುರುತಿಸಿ ದಾಖಲಿಸಲು ಸಹಾಯ ಮಾಡುತ್ತದೆ.

2018ರಲ್ಲಿ ರಾಷ್ಟ್ರದ ಮೊದಲ ಪೌಷ್ಟಿಕಾಂಶ-ಕೇಂದ್ರಿತ ಜನ ಆಂದೋಲನಗಳು ಪ್ರಾರಂಭವಾದಾಗಿನಿಂದ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು/ಇಲಾಖೆಗಳೊಂದಿಗೆ ಒಮ್ಮುಖವಾದ ಕಾರ್ಯತಂತ್ರ ಹಾಗೂ ಇದರ ಜೊತೆಗೆ, ಯಾವಾಗಲೂ ಜನ ಆಂದೋಲನಗಳ ಕೇಂದ್ರವಾಗಿ ಮುಂದುವರಿಯುತ್ತದೆ. ಒಮ್ಮುಖ ಪ್ರಯತ್ನವು ವಿವಿಧ ಪ್ರೇಕ್ಷಕರನ್ನು ವಿಶೇಷವಾಗಿ ತಳಮಟ್ಟದ ಜನರನ್ನು ತಲುಪಲು ಸಹಾಯ ಮಾಡುತ್ತದೆ. ಇಲ್ಲಿಯವರೆಗೆ, ನಡೆಯುತ್ತಿರುವ ಪೋಷಣ ಮಾಸಾಚರಣೆಗೆ ಉನ್ನತ ಕೊಡುಗೆ ನೀಡಿದ ಸಚಿವಾಲಯಗಳ ವಿವರ ಹೀಗಿದೆ. 1.38 ಲಕ್ಷ ಚಟುವಟಿಕೆಗಳೊಂದಿಗೆ ಕೇಂದ್ರ ಶಿಕ್ಷಣ ಸಚಿವಾಲಯ (ಎಂ.ಒ.ಇ), 1.17 ಲಕ್ಷ ಚಟುವಟಿಕೆಗಳೊಂದಿಗೆ ಕೇಂದ್ರ ಆರೋಗ್ಯ  ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂ.ಒ.ಹೆಚ್‌ & ಎಫ್. ಡಬ್ಲ್ಯೂ), 1.07 ಲಕ್ಷ ಚಟುವಟಿಕೆಗಳೊಂದಿಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ (ಎಂ.ಒ.ಆರ್.ಡಿ), 69 ಸಾವಿರ ಚಟುವಟಿಕೆಗಳೊಂದಿಗೆ ಕೇಂದ್ರ ಆಯುಷ್ ಸಚಿವಾಲಯ ಮತ್ತು 64 ಲಕ್ಷ ಚಟುವಟಿಕೆಗಳೊಂದಿಗೆ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವೂ ಪೋಷಣ ಮಾಸಾಚರಣೆ2024 ‌ಪರಿಕಲ್ಪನೆಗೆ ಪೂರಕವಾಗಿ ಒಂದಲ್ಲ ಒಂದು ವಿಷಯದ ಮೇಲೆ ಚಟುವಟಿಕೆಗಳನ್ನು ಆಯೋಜಿಸಿವೆ.

 

ಪ್ರತಿಯೊಂದು ವಿಷಯಾಧಾರಿತ ಪ್ರದೇಶಗಳಲ್ಲಿ ಗುರುತಿಸಿ ಪಟ್ಟಿ ಮಾಡಲಾದ ಚಟುವಟಿಕೆಗಳ ಜೊತೆಗೆ, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ತಮ್ಮ ಸ್ಥಳೀಯ ಪರಿಸರಕ್ಕೆ ಪೂರಕವಾಗಿ ಉತ್ತಮವಾಗಿ ಹೊಂದಿಕೊಳ್ಳುವ ಇತರ ಸಂವೇದನಾಶೀಲ ಚಟುವಟಿಕೆಗಳನ್ನು ಮಾಡಲು ಕೂಡಾ ಮುಕ್ತವಾಗಿದ್ದವು. ಇದುವರೆಗೆ ವರದಿ ಮಾಡಲಾದ ಪ್ರಮುಖ ಚಟುವಟಿಕೆಗಳಲ್ಲಿ ಮಕ್ಕಳಿಗಾಗಿ ರಕ್ತಹೀನತೆ ಶಿಬಿರ, ಹದಿಹರೆಯದ ಹುಡುಗಿಯರು (14-18 ವರ್ಷಗಳು) ರಕ್ತಹೀನತೆ ಶಿಬಿರವನ್ನು ಒಳಗೊಂಡಿದೆ.  ಬೆಳವಣಿಗೆಯ ಪರಿಶೀಲನೆಯ ಪ್ರಚಾರ, ಬೆಳವಣಿಗೆಯ ಮಾಪನ ಪರಿಶೀಲನೆ, ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಿಗೆ ರಕ್ತಹೀನತೆ ಶಿಬಿರ, ಬೆಳವಣಿಗೆಯ ಮಾಪನ ಶಿಬಿರ (ಎಸ್‌.ಎ.ಎಂ/ಎಂ.ಎ.ಎಂ. ಸ್ಕ್ರೀನಿಂಗ್), ಚಟುವಟಿಕೆ/ ಪೂರಕ ಆಹಾರ ಶಿಬಿರ (6ನೇ ತಿಂಗಳಿನಲ್ಲಿ, ಸುರಕ್ಷಿತ, ಸಾಕಷ್ಟು, ಸಮರ್ಪಕ ಮತ್ತು ಸೂಕ್ತವಾದ ಪೂರಕವಾಗಿ ಆಹಾರಗಳ ಪರಿಶೀಲನೆ), ನಗರ ಕೊಳೆಗೇರಿ ಆಧಾರಿತ ರಕ್ತಹೀನತೆ ಶಿಬಿರ ಮತ್ತು ಅವರಲ್ಲಿ‌ ಜಾಗೃತಿ ಮೂಡಿಸುವ  ಚಟುವಟಿಕೆಗಳು, ಸ್ಥಳೀಯವಾಗಿ ದೊರೆಯುವ ಆಹಾರ ಪದಾರ್ಥಗಳನ್ನು ಬಳಸಿ, ಅದರ ಮೂಲಕ ಪೂರಕ ಆಹಾರ ಪಾಕವಿಧಾನಗಳನ್ನು ಮತ್ತು ಅಡುಗೆ ಮಾಡುವ ಕುರಿತು ಪ್ರಾತ್ಯಕ್ಷಿಕೆ ಅಧಿವೇಶನ, ಸ್ವಸಹಾಯ ಗುಂಪುಗಳು, (ಎಸ್.‌ ಹೆಚ್.‌ ಜಿ), ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್), / ನೆಹರು‌ ಯುವ ಕೇಂದ್ರ (ಎನ್.ವೈ.ಕೆ), ಇತ್ಯಾದಿ ಸಂಘಟನೆಗಳ‌ ಮೂಲಕ ರಕ್ತಹೀನತೆಯ ಬಗ್ಗೆ ಸಂಬಂಧಿತ ಸಂಪರ್ಕ ಚಟುವಟಿಕೆಗಳು, ಪೂರಕ ಆಹಾರದಲ್ಲಿ ಆಹಾರ ವೈವಿಧ್ಯತೆಗಾಗಿ ವಿವಿಧ ಚಟುವಟಿಕೆಗಳು ಜಾಗೃತಿ ಶಿಬಿರ, ಕಲಿಕೆಯ ಅವಕಾಶಗಳನ್ನು ಉತ್ತೇಜಿಸಲು ಶಿಕ್ಷಣದ ಚಾವಡಿಗಳು ( ಶಿಕ್ಷಾ ಚೌಪಾಲ್) ಹಾಗೂ  ಪರಿಸರ ಸಂರಕ್ಷಣೆಯ ಪ್ರತಿಜ್ಞೆಯೊಂದಿಗೆ ಸಸಿ ನೆಡುವಿಕೆಯ ತಾಯಿಯ ಹೆಸರಲ್ಲಿ ಒಂದು ಮರ (ಏಕ್ ಪೇಡ್ ಮಾ ಕೆ ನಾಮ್) ಉಪಕ್ರಮ, ಸ್ಥಳೀಯ ಆಟಿಕೆಗಳನ್ನು ಉತ್ತೇಜಿಸುವ ಆಟ ಆಧಾರಿತ ಕಲಿಕೆಯ ಕುರಿತು ಮಕ್ಕಳು ಮತ್ತು ಪೋಷಕರಿಗೆ ಪ್ರದರ್ಶನ ಅಧಿವೇಶನ/ಚಟುವಟಿಕೆಗಳು, ನಗರ ಕೊಳೆಗೇರಿ ಆಧಾರಿತ ಬೆಳವಣಿಗೆ ಮಾಪನ ಶಿಬಿರ , ಸ್ಥಳೀಯ ಆಟಿಕೆ ತಯಾರಿಕೆ ಕಾರ್ಯಾಗಾರ, ಆಟಿಕೆ ಆಧಾರಿತ ಮತ್ತು ಆಟ ಆಧಾರಿತ ಕಲಿಕೆಯನ್ನು ಉತ್ತೇಜಿಸಲು ಸಮುದಾಯ ಕೇಂದ್ರಿತ ಆಟ ಮತ್ತು ಪಾಠ ಕಲಿಯಿರಿ( ಖೇಲೋ ಔರ್ ಪಧೋ ) ಕಾರ್ಯಕ್ರಮ, ಗರ್ಭಿಣಿಯರ ತೂಕ ಹೆಚ್ಚಳಕ್ಕಾಗಿ ಮಾಪನ ಶಿಬಿರ (ಗರ್ಭಧಾರಣೆಯ ತೂಕ ಹೆಚ್ಚಾಗುವುದು) ಮತ್ತು ಪೋಷಣ ಟ್ರ್ಯಾಕರ್ ಮೂಲಕ ಅದರ ಮಾಹಿತಿ / ದತ್ತಾಂಶ ನಮೂದು, ಗ್ರಾಮದ ಗಡಿಯೊಳಗೆ ಲಭ್ಯವಿರುವ ವಿವಿಧ ಆಹಾರವನ್ನು ಪ್ರಚಾರ ಮಾಡಲು ಆಹಾರ ಸಂಪನ್ಮೂಲ ಗುರುತಿಸುವಿಕೆ ಕಾರ್ಯಕ್ರಮ ಮತ್ತು ಸಂಬಂಧಿತ ತಜ್ಞರೊಂದಿಗೆ ಪರಿಸರ ಸಂರಕ್ಷಣೆಯ ಚಟುವಟಿಕೆಗಳನ್ನು ಸಂಪರ್ಕ ಮಾಡುವುದು – ಮುಂತಾದ ಚಟುವಟಿಕೆಗಳು ನಡೆದಿದೆ.

 

ಸಮುದಾಯಗಳ ಭಾಗವಹಿಸುವಿಕೆ ಮತ್ತು ಸರ್ಕಾರದ ಸಹಯೋಗವನ್ನು ಒಳಗೊಂಡಿರುವ ರಾಷ್ಟ್ರವ್ಯಾಪಿ ಸಮಗ್ರ ವಿಧಾನದೊಂದಿಗೆ, ಪೋಷಣೆ ಕೇಂದ್ರಿತವಾಗಿ ಪ್ರತಿಯೊಬ್ಬ ವ್ಯಕ್ತಿಯನ್ನು ತೊಡಗಿಸಿಕೊಳ್ಳಲು ಮತ್ತು ಸಂವೇದನಾಶೀಲಗೊಳಿಸುವ ಸಲುವಾಗಿ, ದೇಶದ ದೂರದ ಗ್ರಾಮೀಣ ಪ್ರದೇಶಗಳಿಗೆ ತಲುಪುವ ನಿಟ್ಟಿನಲ್ಲಿ ಜನ ಆಂದೋಲನವಾಗಿ ನಡೆಯುತ್ತಿರುವ ಪೋಷಣ ಮಾಸಾಚರಣೆಯು, ಈಗ ಎಲ್ಲಡೆ "ಸುಪೋಶಿತ ಕಿಶೋರಿ ಸಶಕ್ತ ನಾರಿ" ಯ ಬಗ್ಗೆ ಸಂಚಲನವನ್ನು ಸೃಷ್ಟಿಸುತ್ತಿದೆ.

 

*****



(Release ID: 2052888) Visitor Counter : 12