ಪ್ರಧಾನ ಮಂತ್ರಿಯವರ ಕಛೇರಿ
ಸಿಂಗಾಪುರದ ಹಿರಿಯ ಸಚಿವ ಲೀ ಸಿಯೆನ್ ಲೂಂಗ್ ಅವರೊಂದಿಗೆ ಪ್ರಧಾನಮಂತ್ರಿ ಸಭೆ
Posted On:
05 SEP 2024 2:18PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಂಗಾಪುರದ ಹಿರಿಯ ಸಚಿವರು ಮತ್ತು ಗೌರವಾನ್ವಿತ ಮಾಜಿ ಪ್ರಧಾನಿ ಶ್ರೀ ಲೀ ಸಿಯೆನ್ ಲೂಂಗ್ ಅವರನ್ನು ಇಂದು ಭೇಟಿ ಮಾಡಿದ್ದರು. ಪ್ರಧಾನಮಂತ್ರಿ ಅವರ ಗೌರವಾರ್ಥ ಹಿರಿಯ ಸಚಿವರು ಉಪಾಹಾರ ಕೂಟವನ್ನು ಆಯೋಜಿಸಿದ್ದರು.
ಭಾರತ-ಸಿಂಗಾಪೂರ್ ಕಾರ್ಯತಂತ್ರದ ಪಾಲುಕಾರಿಕೆಯ ಅಭಿವೃದ್ಧಿಗೆ ಹಿರಿಯ ಸಚಿವ ಲೀ ಅವರ ಕೊಡುಗೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು ಮತ್ತು ಹಿರಿಯ ಸಚಿವ ಲೀ ಅವರು ಹಿರಿಯ ಸಚಿವರಾಗಿ ತಮ್ಮ ಹೊಸ ಜವಾಬ್ದಾರಿಯಲ್ಲಿ ಭಾರತದೊಂದಿಗಿನ ಸಿಂಗಾಪುರದ ಸಂಬಂಧಗಳಿಗೆ ಹೆಚ್ಚಿನ ಗಮನ ಮತ್ತು ಮಾರ್ಗದರ್ಶನ ನೀಡುವುದನ್ನು ಮುಂದುವರಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಹಿಂದಿನ ಸಭೆಗಳನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ ಮತ್ತು ಹಿರಿಯ ಸಚಿವ ಲೀ ಅವರು ಭಾರತ-ಸಿಂಗಾಪುರ ಸಂಬಂಧಗಳನ್ನು ಕಾರ್ಯತಾಂತ್ರಿಕ ಪಾಲುದಾರಿಕೆ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಭಾರತ - ಸಿಂಗಾಪುರ ಸಚಿವರ ದುಂಡುಮೇಜಿನ ಎರಡು ಸಭೆಗಳಲ್ಲಿ ಗುರುತಿಸಲಾದ ವಿಶೇಷ ಸಹಕಾರ ಸಂಬಂಧಗಳ ವೃದ್ಧಿಯ ಸ್ತಂಭಗಳಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡುವ ಗಣನೀಯ ಸಾಮರ್ಥ್ಯವಿದೆ ಎಂಬುದನ್ನು ಉಭಯ ನಾಯಕರು ಒಪ್ಪಿಕೊಂಡರು. ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಮತ್ತು ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅವರು ವಿಚಾರ ವಿನಿಮಯ ನಡೆಸಿದರು.
*****
(Release ID: 2052190)
Visitor Counter : 38
Read this release in:
Assamese
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam