ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಷ್ಟ್ರಪತಿಯವರು ರಾಷ್ಟ್ರೀಯ ವಿಜ್ಞಾನ ಪುರಸ್ಕಾರ-2024ನ್ನು ಪ್ರದಾನ ಮಾಡಿದರು

प्रविष्टि तिथि: 22 AUG 2024 2:20PM by PIB Bengaluru

ರಾಷ್ಟ್ರಪತಿ ಭವನದ ಗಣತಂತ್ರ ಮಂಟಪದಲ್ಲಿ ಇಂದು (ಆಗಸ್ಟ್ 22, 2024ರಂದು) ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ರಾಷ್ಟ್ರೀಯ ವಿಜ್ಞಾನ ಪುರಸ್ಕಾರ -2024ನ್ನು ಪ್ರದಾನ ಮಾಡಿದರು.

ರಾಷ್ಟ್ರೀಯ ವಿಜ್ಞಾನ ಪುರಸ್ಕಾರದ ಮೊದಲ ಆವೃತ್ತಿಯಲ್ಲಿ, ವಿಜ್ಞಾನ ರತ್ನ, ವಿಜ್ಞಾನ ಶ್ರೀ, ವಿಜ್ಞಾನ ಯುವ ಮತ್ತು ವಿಜ್ಞಾನ ತಂಡ ಎಂಬ ನಾಲ್ಕು ವಿಭಾಗಗಳಲ್ಲಿ 33 ಪ್ರಶಸ್ತಿಗಳನ್ನು ಪ್ರಖ್ಯಾತ ವಿಜ್ಞಾನಿಗಳಿಗೆ ನೀಡಲಾಯಿತು.

ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಜೀವಮಾನದ ಕೊಡುಗೆ ನೀಡಿದ ವಿಜ್ಞಾನಿಗಳಿಗೆ ನೀಡುವ ವಿಜ್ಞಾನ ರತ್ನ ಪ್ರಶಸ್ತಿಯನ್ನು ಭಾರತದ ಆಣ್ವಿಕ ಜೀವಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ ಸಂಶೋಧನೆಯ ಪ್ರವರ್ತಕರಾದ ಪ್ರೊ. ಗೋವಿಂದರಾಜನ್ ಪದ್ಮನಾಭನ್ ಅವರಿಗೆ ನೀಡಲಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ವಿಶಿಷ್ಟ ಕೊಡುಗೆ ನೀಡಿದ ವಿಜ್ಞಾನಿಗಳಿಗೆ ನೀಡಲಾಗುವ ವಿಜ್ಞಾನ ಶ್ರೀ ಪ್ರಶಸ್ತಿಗಳನ್ನು ತಮ್ಮ ಕ್ಷೇತ್ರಗಳಲ್ಲಿನ ಮಹತ್ವದ ಸಂಶೋಧನೆಗಾಗಿ 13 ವಿಜ್ಞಾನಿಗಳಿಗೆ ಪ್ರದಾನ ಮಾಡಲಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನದ ಯಾವುದೇ ಕ್ಷೇತ್ರಕ್ಕೆ ಅಸಾಧಾರಣ ಕೊಡುಗೆ ನೀಡಿದ ವಿಜ್ಞಾನಿಗಳನ್ನು ಗುರುತಿಸಲು ನೀಡಲಾಗುವ ವಿಜ್ಞಾನ ಯುವ- ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು ಹಿಂದೂ ಮಹಾಸಾಗರದ ತಾಪಮಾನ ಏರಿಕೆ ಮತ್ತು ಅದರ ಪರಿಣಾಮಗಳ ಅಧ್ಯಯನದಿಂದ ಹಿಡಿದು ಸ್ಥಳೀಯ 5ಜಿ ಬೇಸ್ ಸ್ಟೇಷನ್ ಅಭಿವೃದ್ಧಿ ಮತ್ತು ಕ್ವಾಂಟಮ್ ಮೆಕ್ಯಾನಿಕ್ಸ್ ಸಂವಹನ ಮತ್ತು ನಿಖರ ಪರೀಕ್ಷೆಗಳವರೆಗೆ ವ್ಯಾಪಿಸಿರುವ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ 18 ವಿಜ್ಞಾನಿಗಳಿಗೆ ನೀಡಲಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನದ ಯಾವುದೇ ಕ್ಷೇತ್ರದಲ್ಲಿ ಅತ್ಯದ್ಭುತ ಸಂಶೋಧನಾ ಕೊಡುಗೆಗಳನ್ನು ನೀಡಿದ 3 ಅಥವಾ ಹೆಚ್ಚಿನ ವಿಜ್ಞಾನಿಗಳ ತಂಡಕ್ಕೆ ನೀಡಲಾಗುವ ವಿಜ್ಞಾನ ತಂಡ ಪ್ರಶಸ್ತಿಯನ್ನು ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರಯಾನ-3 ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸಿದ್ದಕ್ಕಾಗಿ ಚಂದ್ರಯಾನ-3 ತಂಡಕ್ಕೆ ನೀಡಲಾಯಿತು.

ರಾಷ್ಟ್ರೀಯ ವಿಜ್ಞಾನ ಪುರಸ್ಕಾರ-2024ನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.

https://static.pib.gov.in/WriteReadData/specificdocs/documents/2024/aug/doc2024822379101.pdf

 

*****

 


(रिलीज़ आईडी: 2048034) आगंतुक पटल : 121
इस विज्ञप्ति को इन भाषाओं में पढ़ें: Telugu , English , Urdu , हिन्दी , Marathi , Manipuri , Bengali-TR , Bengali , Assamese , Punjabi , Gujarati , Tamil , Malayalam