ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಭಾರತ-ಬಾಂಗ್ಲಾದೇಶ ಗಡಿಯಲ್ಲಿ (ಐಬಿಬಿ) ಪ್ರಸ್ತುತ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಭಾರತ ಸರ್ಕಾರವು ಸಮಿತಿಯನ್ನು ರಚನೆ


ಭಾರತೀಯ ನಾಗರಿಕರು ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಮಿತಿಯು ಬಾಂಗ್ಲಾದೇಶದ ತಮ್ಮ ಸಹವರ್ತಿ ಅಧಿಕಾರಿಗಳೊಂದಿಗೆ ಸಂವಹನ ಮಾರ್ಗಗಳನ್ನು ನಿರ್ವಹಿಸುತ್ತದೆ.

Posted On: 09 AUG 2024 3:06PM by PIB Bengaluru

ಭಾರತ-ಬಾಂಗ್ಲಾದೇಶ ಗಡಿಯಲ್ಲಿ (ಐಬಿಬಿ) ಪ್ರಸ್ತುತ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಭಾರತ ಸರ್ಕಾರವು ಸಮಿತಿಯನ್ನು ರಚಿಸಿದೆ. ಭಾರತೀಯ ನಾಗರಿಕರು ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಮಿತಿಯು ಬಾಂಗ್ಲಾದೇಶದ ತಮ್ಮ ಸಹವರ್ತಿ ಅಧಿಕಾರಿಗಳೊಂದಿಗೆ ಸಂವಹನ ಮಾರ್ಗಗಳನ್ನು ನಿರ್ವಹಿಸುತ್ತದೆ.

ಪೂರ್ವ ಕಮಾಂಡ್ ನ ಗಡಿ ಭದ್ರತಾ ಪಡೆ (ಬಿಎಸ್ಎಫ್) ಎಡಿಜಿ ನೇತೃತ್ವದ ಈ ಸಮಿತಿಯಲ್ಲಿ ದಕ್ಷಿಣ ಬಂಗಾಳದ ಬಿಎಸ್ಎಫ್ ಫ್ರಾಂಟಿಯರ್ ಪ್ರಧಾನ ಕಚೇರಿಯ ಐಜಿ, ಬಿಎಸ್ಎಫ್ ಫ್ರಾಂಟಿಯರ್ ಪ್ರಧಾನ ಕಚೇರಿ ತ್ರಿಪುರಾದ ಐಜಿ, ಲ್ಯಾಂಡ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಲ್ ಪಿ ಎ ಐ) ಸದಸ್ಯ (ಯೋಜನೆ ಮತ್ತು ಅಭಿವೃದ್ಧಿ) ಮತ್ತು ಎಲ್ ಪಿ ಎ ಐ ಕಾರ್ಯದರ್ಶಿ ಸದಸ್ಯರಾಗಿರುತ್ತಾರೆ.

 

*****
 


(Release ID: 2043673) Visitor Counter : 49