ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬಾಂಗ್ಲಾದೇಶದಲ್ಲಿ ಹೊಸ ಜವಾಬ್ದಾರಿ ವಹಿಸಿಕೊಂಡಿರುವ ನೊಬೆಲ್‌ ಪುರಸ್ಕೃತ ಪ್ರೊಫೆಸರ್‌ ಮೊಹಮದ್‌ ಯೂನಸ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

Posted On: 08 AUG 2024 9:50PM by PIB Bengaluru

ಬಾಂಗ್ಲಾದೇಶದಲ್ಲಿ ಹೊಸದಾಗಿ ರಚನೆಯಾಗಿರುವ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರ ಜವಾಬ್ದಾರಿ ವಹಿಸಿಕೊಂಡಿರುವ ನೊಬೆಲ್‌ ಪುರಸ್ಕೃತ ಪ್ರೊಫೆಸರ್‌ ಮೊಹಮದ್‌ ಯೂನಸ್‌ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ. 

ನೆರೆಯ ರಾಷ್ಟ್ರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿ ಹಾಗೂ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದವರು ಸುರಕ್ಷಿತರಾಗಿರಲಿ ಎಂದು ಶ್ರೀ ಮೋದಿ ಹಾರೈಸಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್‌ ಮಾಡಿದ್ಧಾರೆ:

“ಹೊಸ ಜವಾಬ್ದಾರಿಗಳನ್ನು ವಹಿಸಿಕೊಂಡಿರುವ ಪ್ರೊಫೆಸರ್‌ ಮೊಹಮದ್‌ ಯೂನಸ್ ಅವರಿಗೆ ಶುಭಾಶಯಗಳು. ಹಿಂದೂಗಳು ಮತ್ತು ಇತರ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ರಕ್ಷಣೆ ಮತ್ತು ಸುರಕ್ಷತೆ ಖಾತರಿಪಡಿಸುತ್ತಾ ಪರಿ‍ಸ್ಥಿತಿ ಶೀಘ್ರವೇ ಸಹಜ ಸ್ಥಿತಿಗೆ ಮರಳಲಿ ಎಂದು ನಾವು ಆಶಿಸುತ್ತೇವೆ. ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಯೊಂದಿಗೆ ಉಭಯ ದೇಶಗಳ ಜನರ ಆಶೋತ್ತರಗಳ ಈಡೇರಿಕೆಗೆ ಬಾಂಗ್ಲಾದೇಶದೊಂದಿಗೆ ಕಾರ್ಯನಿರ್ವಹಿಸಲು ಭಾರತದ ಬದ್ಧತೆ ಮುಂದುವರಿಯಲಿದೆ.”

 

 

*****


(Release ID: 2043465) Visitor Counter : 59