ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಹಾಕಿ ತಂಡವನ್ನು ಪ್ರಧಾನಮಂತ್ರಿ ಅಭಿನಂದಿಸಿದರು

Posted On: 08 AUG 2024 7:46PM by PIB Bengaluru

ಫ್ರಾನ್ಸ್‌ ನ ಪ್ಯಾರಿಸ್‌ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದರು. 

ತಂಡದ ಕ್ರೀಡಾಪಟುಗಳ ಕೌಶಲ್ಯ, ಪರಿಶ್ರಮ ಮತ್ತು ತಂಡದ ಒಗ್ಗಟ್ಟಿನ ಮನೋಭಾವವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಶ್ಲಾಘಿಸಿದರು. 

 ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:

 "ಮುಂದಿನ ಪೀಳಿಗೆಗಳು ಪಾಲಿಸಬೇಕಾದ ಸಾಧನೆ ನೀವು ಮಾಡಿದ್ದೀರಿ! 

ಭಾರತದ ಹಾಕಿ ತಂಡ ಒಲಿಂಪಿಕ್ಸ್‌ ನಲ್ಲಿ ಮಿಂಚಿದ್ದು, ಕಂಚಿನ ಪದಕವನ್ನು ಗೆದ್ದು ಮನೆಗೆ ಹೊತ್ತು ತಂದಿದ್ದಾರೆ!  ಇದು ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಪದಕವಾಗಿರುವುದರಿಂದ ಇದು ಇನ್ನಷ್ಟು ವಿಶೇಷವಾಗಿದೆ. 

ಅವರ ಯಶಸ್ಸು ಕೌಶಲ್ಯ, ಪರಿಶ್ರಮ ಮತ್ತು ತಂಡದ ಒಗ್ಗಟ್ಟಿನ ಮನೋಭಾವದ ವಿಜಯವಾಗಿದೆ. ಅವರು ಅಗಾಧವಾದ ಮನೋಧೈರ್ಯ ಮತ್ತು ಸ್ಥಿತಿಸ್ಥಾಪಕತ್ವವನ್ನು ತೋರಿಸಿದ್ದಾರೆ. ಆಟಗಾರರಿಗೆ ಅಭಿನಂದನೆಗಳು. 

ಪ್ರತಿಯೊಬ್ಬ ಭಾರತೀಯನು ಹಾಕಿಯೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಹೊಂದಿದ್ದಾನೆ ಮತ್ತು ಈ ಸಾಧನೆಯು ನಮ್ಮ ರಾಷ್ಟ್ರದ ಯುವಕರಲ್ಲಿ ಕ್ರೀಡೆಯನ್ನು ಇನ್ನಷ್ಟು ಜನಪ್ರಿಯಗೊಳಿಸಲಿದೆ.
 

 

 

*****


(Release ID: 2043455) Visitor Counter : 50