ಹಣಕಾಸು ಸಚಿವಾಲಯ

ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಎಂಎಸ್‌ಎಂಇಗಳನ್ನು  ಉತ್ತೇಜಿಸಲು  ಎಂಟು ಹೊಸ ಕ್ರಮಗಳನ್ನು ಪ್ರಸ್ತಾಪಿಸಿದರು


ಉತ್ಪಾದನಾ ವಲಯದಲ್ಲಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಲು ಪ್ರಸ್ತಾಪಿಸಲಾದ ₹ 100 ಕೋಟಿ ವರೆಗಿನ ರಕ್ಷಣೆಯೊಂದಿಗೆ ಎಂಎಸ್‌ಎಂಇಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ

ಕೇಂದ್ರ ಹಣಕಾಸು ಸಚಿವರ ಪ್ರಸ್ತಾವನೆ - ರಾಷ್ಟ್ರೀಕೃತ ಬ್ಯಾಂಕ್‌ಗಳು ಎಂಎಸ್‌ಎಂಇಗಳಿಗೆ ಸಾಲ ನೀಡಲು ಹೊಸ ಮತ್ತು ಸ್ವತಂತ್ರ ಮೌಲ್ಯಮಾಪನ ಮಾದರಿಯನ್ನು ಅಭಿವೃದ್ಧಿಪಡಿಸಬೇಕು

ಬಿಕ್ಕಟ್ಟಿನ ಅವಧಿಯಲ್ಲಿ ಎಂಎಸ್‌ಎಂಇಗಳಿಗೆ ಸಾಲದ ಬೆಂಬಲಕ್ಕಾಗಿ ಶ್ರೀಮತಿ ಸೀತಾರಾಮನ್ ಅವರ ಪ್ರಸ್ತಾಪ

ಮುದ್ರಾ ಸಾಲಗಳನ್ನು ಸಾಲ ಯೋಗ್ಯ ಉದ್ಯಮಿಗಳಿಗೆ ₹20 ಲಕ್ಷಕ್ಕೆ ಹೆಚ್ಚಿಸಲಾಗಿದೆ, ಟಿಆರ್‌ಡಿಎಸ್ ಪ್ಲಾಟ್‌ಫಾರ್ಮ್‌ ಗಳಲ್ಲಿ ಕಡ್ಡಾಯವಾಗಿ ಆನ್‌ಬೋರ್ಡಿಂಗ್‌ಗಾಗಿ ಖರೀದಿದಾರರಿಗೆ ಕೇಂದ್ರದ ಬಜೆಟ್ ಅರ್ಧದಷ್ಟು ವಹಿವಾಟು ಮಿತಿಯನ್ನು ಪ್ರಸ್ತಾಪಿಸಿದೆ

ಸುಲಭ ಮತ್ತು ನೇರ ಸಾಲ ಲಭ್ಯತೆಗಾಗಿ ಎಂಎಸ್‌ಎಂಇ ಕ್ಲಸ್ಟರ್‌ಗಳಲ್ಲಿ 24 ಹೊಸ ಎಸ್‌ ಐಡಿಬಿಐ ಶಾಖೆಗಳನ್ನು ಶ್ರೀಮತಿ ಸೀತಾರಾಮನ್ ಪ್ರಸ್ತಾಪಿಸಿದ್ದಾರೆ

ಆಹಾರ ವಿಕಿರಣ, ಗುಣಮಟ್ಟ ಮತ್ತು ಸುರಕ್ಷತೆ ಪರೀಕ್ಷೆಗಾಗಿ ಹೊಸ ಎಂಎಸ್‌ಎಂಇ ಘಟಕಗಳನ್ನು ಪ್ರಸ್ತಾಪಿಸಲಾಗಿದೆ

ಇ-ಕಾಮರ್ಸ್ ರಫ್ತು ಕೇಂದ್ರಗಳು ಎಂಎಸ್‌ಎಂಇಗಳು ಮತ್ತು ಸಾಂಪ್ರದಾಯಿಕ ಕುಶಲಕರ್ಮಿಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಪ್ರಸ್ತಾಪಿಸಲಾಗಿದೆ

Posted On: 23 JUL 2024 1:03PM by PIB Bengaluru

"ಈ ಬಜೆಟ್ ಎಂಎಸ್‌ಎಂಇಗಳು ಮತ್ತು ಉತ್ಪಾದನೆಗೆ, ವಿಶೇಷವಾಗಿ ಕಾರ್ಮಿಕರನ್ನು ತೀವ್ರವಾಗಿ ಅವಲಂಭಿಸಿರುವ ಉತ್ಪಾದನೆಗೆ ವಿಶೇಷ ಗಮನವನ್ನು ನೀಡುತ್ತದೆ" ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ  ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. ಇಂದು ಸಂಸತ್ತಿನಲ್ಲಿ 2024-25 ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದರು. ಮಧ್ಯಂತರ ಬಜೆಟ್‌ನಲ್ಲಿ ಉಲ್ಲೇಖಿಸಿದಂತೆ ಎಂಎಸ್‌ ಎಂಇ ಗಳು ಬೆಳೆಯಲು ಮತ್ತು ಜಾಗತಿಕವಾಗಿ ಸ್ಪರ್ಧಿಸಲು ಸಹಾಯ ಮಾಡಲು ಹಣಕಾಸು, ನಿಯಂತ್ರಕ ಬದಲಾವಣೆಗಳು ಮತ್ತು ತಂತ್ರಜ್ಞಾನದ ಬೆಂಬಲವನ್ನು ಒಳಗೊಂಡಿರುವ ಪ್ಯಾಕೇಜ್ ಅನ್ನು ಸರ್ಕಾರವು ರೂಪಿಸಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ ಗಳು) ಬಜೆಟ್‌ನಲ್ಲಿನ ನಾಲ್ಕು ಪ್ರಮುಖ ವಿಷಯಗಳ ಭಾಗವಾಗಿದೆ ಮತ್ತು ಕೇಂದ್ರ ಹಣಕಾಸು ಸಚಿವರು ಎಂಎಸ್‌ ಎಂಇಗಳಿಗೆ ಬೆಂಬಲವಾಗಿ ಈ ಕೆಳಗಿನ ನಿರ್ದಿಷ್ಟ ಕ್ರಮಗಳನ್ನು ಪ್ರಸ್ತಾಪಿಸಿದರು:

ಉತ್ಪಾದನಾ ವಲಯದಲ್ಲಿ ಎಂಎಸ್‌ ಎಂಇ ಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ

ಕೇಂದ್ರ ಹಣಕಾಸು ಸಚಿವರು ಮೇಲಾಧಾರ ಅಥವಾ ಮೂರನೇ ವ್ಯಕ್ತಿ (ಥರ್ಡ್-ಪಾರ್ಟಿ) ಗ್ಯಾರಂಟಿ ಇಲ್ಲದೆ ಯಂತ್ರೋಪಕರಣಗಳು ಮತ್ತು ಸಲಕರಣೆಗಳನ್ನು ಖರೀದಿಸಲು ಎಂಎಸ್ಎಂಇಗಳಿಗೆ ಅವಧಿಯ ಸಾಲಗಳನ್ನು ಸುಗಮಗೊಳಿಸಲು ಕ್ರೆಡಿಟ್ ಗ್ಯಾರಂಟಿ ಯೋಜನೆಯನ್ನು ಪ್ರಸ್ತಾಪಿಸಿದರು. ಶ್ರೀಮತಿ ಸೀತಾರಾಮನ್ ರವರು ಅಂತಹ ಎಂಎಸ್‌ಎಂಇಗಳ ಕ್ರೆಡಿಟ್ ಅಪಾಯಗಳ ಪೂಲಿಂಗ್‌ನಲ್ಲಿ ಈ ಯೋಜನೆಯು ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ಹೆಚ್ಚಿನ ವಿವರಗಳನ್ನು ನೀಡುತ್ತಾ, ಕೇಂದ್ರ ಹಣಕಾಸು ಸಚಿವರು ಪ್ರತಿ ಅರ್ಜಿದಾರರಿಗೆ ₹ 100 ಕೋಟಿ ವರೆಗೆ ಗ್ಯಾರಂಟಿ ಕವರ್ ಒದಗಿಸಲು ಪ್ರತ್ಯೇಕ ಸ್ವಯಂ-ಹಣಕಾಸು ಖಾತರಿ ನಿಧಿಯನ್ನು ರಚಿಸಲಾಗುವುದು ಎಂದು ಹೇಳಿದರು, ಆದರೆ ಸಾಲದ ಮೊತ್ತವು ಇದನ್ನು ಮೀರಬಹುದು. ಸಾಲಗಾರನು ತತ್‌ ಕ್ಷಣದ ಗ್ಯಾರಂಟಿ ಶುಲ್ಕವನ್ನು ಮತ್ತು ಸಾಲದ ಬಾಕಿ ಕಡಿಮೆಯಾಗುತ್ತಿರುವ ಮೇಲೆ ವಾರ್ಷಿಕ ಗ್ಯಾರಂಟಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದರು.

ಸಾರ್ವಜನಿಕ ವಲಯದ ಬ್ಯಾಂಕ್ಗಳಿಂದ  ಎಂಎಸ್ಎಂಇಗಳಿಗೆ ಸಾಲಕ್ಕಾಗಿ  ಹೊಸ ಮೌಲ್ಯಮಾಪನ ಮಾದರಿಯ ಅಭಿವೃದ್ಧಿ

ಹೊಸ, ಸ್ವತಂತ್ರ ಮತ್ತು ಆಂತರಿಕ ಕಾರ್ಯವಿಧಾನದ ಮೂಲಕ ಎಂಎಸ್‌ಎಂಇಗಳಿಗೆ ಸಾಲದ ಸುಲಭಲಭ್ಯತೆಯನ್ನು ಹೆಚ್ಚಾಗುವಂತೆ ಮಾಡಲು  ಮಾಡಲು, ಸಾರ್ವಜನಿಕ ವಲಯದ ಬ್ಯಾಂಕ್‌ಗಳು (ಪಿಎಸ್‌ಬಿಗಳು) ಬಾಹ್ಯ ಮೌಲ್ಯಮಾಪನವನ್ನು ಅವಲಂಬಿಸಿರುವ ಬದಲು ಸಾಲಕ್ಕಾಗಿ ಎಂಎಸ್‌ಎಂಇಗಳನ್ನು ನಿರ್ಣಯಿಸಲು ತಮ್ಮ ಆಂತರಿಕ ಸಾಮರ್ಥ್ಯವನ್ನು ನಿರ್ಮಿಸುತ್ತವೆ ಎಂದು ಶ್ರೀಮತಿ ಸೀತಾರಾಮನ್ ಪ್ರಸ್ತಾಪಿಸಿದರು. ಆರ್ಥಿಕತೆಯಲ್ಲಿ ಎಂಎಸ್‌ಎಂಇಗಳ ಡಿಜಿಟಲ್ ವ್ಯವಹಾರಗಳ ವಿವರಗಳ  ಆಧಾರದ ಮೇಲೆ ಹೊಸ ಕ್ರೆಡಿಟ್ ಮೌಲ್ಯಮಾಪನ ಮಾದರಿಯನ್ನು ತಾವೇ ಅಭಿವೃದ್ಧಿಪಡಿಸುವಲ್ಲಿ ಅಥವಾ ಇತರರಿಂದ ಅಭಿವೃದ್ಧಿಪಡಿಸುವಲ್ಲಿ ಅವರು ಮುಂದಾಳತ್ವವನ್ನು ವಹಿಸುತ್ತಾರೆ. "ಇದು ಕೇವಲ ಆಸ್ತಿ ಅಥವಾ ವಹಿವಾಟು ಮಾನದಂಡಗಳ ಆಧಾರದ ಮೇಲೆ ಕ್ರೆಡಿಟ್ ಅರ್ಹತೆಯ ಸಾಂಪ್ರದಾಯಿಕ ಮೌಲ್ಯಮಾಪನದ ಮೇಲೆ ಗಮನಾರ್ಹ ಸುಧಾರಣೆಯಾಗಿದೆ ಎಂದು ನಿರೀಕ್ಷಿಸಲಾಗಿದೆ. ಇದು ಔಪಚಾರಿಕ ಲೆಕ್ಕಪತ್ರ ವ್ಯವಸ್ಥೆ ಇಲ್ಲದೇ ಇರುವ ಎಂಎಸ್‌ಎಂಇಗಳನ್ನು ಸಹ ಒಳಗೊಂಡಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ.

ಸರ್ಕಾರಿ ಪ್ರಚಾರ ನಿಧಿಯಿಂದ ಒತ್ತಡದ ಅವಧಿಯಲ್ಲಿ ಎಂಎಸ್‌ಎಂಇಗಳಿಗೆ ಕ್ರೆಡಿಟ್ ಬೆಂಬಲ

ಕೇಂದ್ರ ಹಣಕಾಸು ಸಚಿವರು ಎಂಎಸ್ಎಂಇ ಗಳಿಗೆ   ಒತ್ತಡದ ಅವಧಿಯಲ್ಲಿ ಬ್ಯಾಂಕ್ ಸಾಲವನ್ನು ಮುಂದುವರಿಸಲು ಅನುಕೂಲವಾಗುವಂತೆ ಹೊಸ ಕಾರ್ಯವಿಧಾನವನ್ನು ಪ್ರಸ್ತಾಪಿಸಿದರು. ತಮ್ಮ ನಿಯಂತ್ರಣಕ್ಕೆ ಮೀರಿದ ಕಾರಣಗಳಿಗಾಗಿ 'ವಿಶೇಷ ಉಲ್ಲೇಖ ಖಾತೆ' (ಎಸ್‌ ಎಂಎ) ಹಂತದಲ್ಲಿರುವಾಗ, ಎಂಎಸ್ಎಂಇ ಗಳು ತಮ್ಮ ವ್ಯವಹಾರವನ್ನು ಮುಂದುವರಿಸಲು ಮತ್ತು ಅನುತ್ಪಾದಕ ಆಸ್ತಿಗಳ (ಎನ್‌ ಪಿ ಎ)  ಹಂತಕ್ಕೆ ಬರುವುದನ್ನು ತಪ್ಪಿಸಲು ಕ್ರೆಡಿಟ್ ಅಗತ್ಯವಿದೆ.   ಸರ್ಕಾರದ ಪ್ರಚಾರ ನಿಧಿಯಿಂದ ಖಾತರಿಯ ಮೂಲಕ ಕ್ರೆಡಿಟ್ ಲಭ್ಯತೆಯನ್ನು ಬೆಂಬಲಿಸಲಾಗುತ್ತದೆ ಎಂದು ಶ್ರೀಮತಿ  ಸೀತಾರಾಮನ್ ಪ್ರಸ್ತಾಪಿಸಿದರು.

ಸಾಲಕ್ಕೆ ಅರ್ಹವಾದ ಉದ್ಯಮಿಗಳಿಗೆ ಮುದ್ರಾ ಸಾಲದ ಮಿತಿಯನ್ನು 20 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ

ʼತರುಣ್’ ವರ್ಗದ ಅಡಿಯಲ್ಲಿ ಹಿಂದಿನ ಸಾಲಗಳನ್ನು ಪಡೆದು ಯಶಸ್ವಿಯಾಗಿ ಮರುಪಾವತಿ ಮಾಡಿದ ಉದ್ಯಮಿಗಳಿಗೆ ಮುದ್ರಾ ಸಾಲದ ಮಿತಿಯನ್ನು ಪ್ರಸ್ತುತ ₹ 10 ಲಕ್ಷದಿಂದ ₹ 20 ಲಕ್ಷಕ್ಕೆ ಹೆಚ್ಚಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದರು.

ಟ್ರೆಡ್‌ಗಳಲ್ಲಿ ಕಡ್ಡಾಯವಾಗಿ ಆನ್‌ಬೋರ್ಡಿಂಗ್‌ಗಾಗಿ ಖರೀದಿದಾರರಿಗೆ ಟರ್ನ್‌ಓವರ್ ಥ್ರೆಶೋಲ್ಡ್ ಅನ್ನು ಅರ್ಧಕ್ಕೆ ಇಳಿಸಲಾಗಿದೆ

ಎಂಎಸ್ಎಂಇಗಳು ತಮ್ಮ ವ್ಯಾಪಾರ ಸ್ವೀಕೃತಿಗಳನ್ನು ನಗದಾಗಿ ಪರಿವರ್ತಿಸುವ ಮೂಲಕ ತಮ್ಮ ಕಾರ್ಯ ಬಂಡವಾಳವನ್ನು ಅನ್ಲಾಕ್ ಮಾಡಲು ಅನುಕೂಲವಾಗುವಂತೆ, ಶ್ರೀಮತಿ.  ಟಿಆರ್‌ ಡಿಎಸ್ (TREDS) ಪ್ಲಾಟ್‌ಫಾರ್ಮ್‌ನಲ್ಲಿ ಕಡ್ಡಾಯವಾಗಿ ಆನ್‌ಬೋರ್ಡ್ ಮಾಡಲು ಖರೀದಿದಾರರ ವಹಿವಾಟಿನ ಮಿತಿಯನ್ನು ₹500 ಕೋಟಿಯಿಂದ ₹250 ಕೋಟಿಗೆ ಇಳಿಸಲು ಸೀತಾರಾಮನ್ ಪ್ರಸ್ತಾಪಿಸಿದರು. ಈ ಕ್ರಮವು ಇನ್ನೂ 22 ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿಪಿಎಸ್‌ ಇ) ಮತ್ತು 7,000 ಹೆಚ್ಚಿನ ಕಂಪನಿಗಳನ್ನು ವೇದಿಕೆಗೆ ತರುತ್ತದೆ. ಮಧ್ಯಮ ಉದ್ಯಮಗಳನ್ನು ಸಹ ಪೂರೈಕೆದಾರರ ವ್ಯಾಪ್ತಿಗೆ ಸೇರಿಸಲಾಗುವುದು.

ಸುಲಭ ಮತ್ತು ನೇರ ಕ್ರೆಡಿಟ್ ಲಭ್ಯತೆಗಾಗಿ  ಎಂಎಸ್ಎಂಇ ಕ್ಲಸ್ಟರ್‌ಗಳಲ್ಲಿ ಹೊಸ ಎಸ್‌ಐಡಿಬಿಐ  ಶಾಖೆಗಳು

3 ವರ್ಷಗಳಲ್ಲಿ ಎಲ್ಲಾ ಪ್ರಮುಖ ಎಂಎಸ್ಎಂಇ ಕ್ಲಸ್ಟರ್‌ಗಳಿಗೆ ಸೇವೆ ಸಲ್ಲಿಸಲು ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಅವರಿಗೆ ನೇರ ಸಾಲವನ್ನು ಒದಗಿಸಲು ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) ಹೊಸ ಶಾಖೆಗಳನ್ನು ತೆರೆಯುತ್ತದೆ ಎಂದು ಕೇಂದ್ರ ಹಣಕಾಸು ಸಚಿವರು ಪ್ರಸ್ತಾಪಿಸಿದರು. ಈ ವರ್ಷ ಅಂತಹ 24 ಶಾಖೆಗಳನ್ನು ತೆರೆಯುವುದರೊಂದಿಗೆ, ಸೇವಾ ವ್ಯಾಪ್ತಿಯು 242 ಪ್ರಮುಖ ಕ್ಲಸ್ಟರ್‌ಗಳಲ್ಲಿ 168 ಕ್ಕೆ ವಿಸ್ತರಿಸುತ್ತದೆ ಎಂದು ಶ್ರೀಮತಿ. ಸೀತಾರಾಮನ್ ತಿಳಿಸಿದರು.

ಆಹಾರ ವಿಕಿರಣ, ಗುಣಮಟ್ಟ ಮತ್ತು ಸುರಕ್ಷತೆ ಪರೀಕ್ಷೆಗಾಗಿ ಹೊಸ ಎಂಎಸ್‌ಎಂಇ ಘಟಕಗಳು

ಎಂಎಸ್‌ಎಂಇ ವಲಯದಲ್ಲಿ 50 ಬಹು ಉತ್ಪನ್ನ ಆಹಾರ ವಿಕಿರಣ ಘಟಕಗಳ ಸ್ಥಾಪನೆಗೆ ಹಣಕಾಸಿನ ನೆರವು ನೀಡಲಾಗುವುದು ಎಂದು ಶ್ರೀಮತಿ ಸೀತಾರಾಮನ್ ಪ್ರಸ್ತಾಪಿಸಿದರು. ಎನ್‌ಎಬಿಎಲ್‌ ಅನುಮೋದನೆಯೊಂದಿಗೆ 100 ಆಹಾರ ಗುಣಮಟ್ಟ ಮತ್ತು ಸುರಕ್ಷತೆ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು.

ಇ-ಕಾಮರ್ಸ್ ರಫ್ತು ಕೇಂದ್ರಗಳು, ಎಂಎಸ್‌ಎಂಇಗಳು ಮತ್ತು ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶ

ಎಂಎಸ್‌ಎಂಇಗಳು ಮತ್ತು ಸಾಂಪ್ರದಾಯಿಕ ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು, ಕೇಂದ್ರ ಹಣಕಾಸು ಸಚಿವರು ಇ-ಕಾಮರ್ಸ್ ರಫ್ತು ಕೇಂದ್ರಗಳನ್ನು ಸಾರ್ವಜನಿಕ-ಖಾಸಗಿ-ಪಾಲುದಾರಿಕೆ (ಪಿಪಿಪಿ) ಮೋಡ್‌ನಲ್ಲಿ ಸ್ಥಾಪಿಸಲು ಪ್ರಸ್ತಾಪಿಸಿದರು. ತಡೆರಹಿತ ನಿಯಂತ್ರಣ ಮತ್ತು ಲಾಜಿಸ್ಟಿಕ್ ಚೌಕಟ್ಟಿನ ಅಡಿಯಲ್ಲಿ ಈ ಕೇಂದ್ರಗಳು ಒಂದೇ ಸೂರಿನಡಿ ವ್ಯಾಪಾರ ಮತ್ತು ರಫ್ತು ಸಂಬಂಧಿತ ಸೇವೆಗಳ ಸೌಲಭ್ಯವನ್ನು ನೀಡುತ್ತವೆ   ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.

 

*****



(Release ID: 2036683) Visitor Counter : 24