ಹಣಕಾಸು ಸಚಿವಾಲಯ
azadi ka amrit mahotsav g20-india-2023

ಪ್ರಧಾನ ಮಂತ್ರಿಗಳ ಪ್ಯಾಕೇಜ್ ಅಡಿಯಲ್ಲಿ 5 ನೇ ಯೋಜನೆಯಾಗಿ ಉನ್ನತ ಕಂಪನಿಗಳಲ್ಲಿ ಇಂಟರ್ನ್ಶಿಪ್ ಅವಕಾಶಗಳನ್ನು ಒದಗಿಸುವ ಯೋಜನೆಗೆ ಚಾಲನೆ


5 ವರ್ಷಗಳಲ್ಲಿ 500 ಪ್ರಮುಖ ಕಂಪನಿಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್ಶಿಪ್ ಅವಕಾಶಗಳನ್ನು ನೀಡಲಾಗುವುದು

ತಿಂಗಳಿಗೆ 5,000 ರೂಪಾಯಿಗಳ ಇಂಟರ್ನ್ಶಿಪ್ ಭತ್ಯೆ ಮತ್ತು 6,000 ರೂಪಾಯಿಗಳ ಒಂದು ಬಾರಿಯ ಸಹಾಯವನ್ನು ನೀಡಲಾಗುವುದು

Posted On: 23 JUL 2024 1:04PM by PIB Bengaluru

ಉನ್ನತ ಕಂಪನಿಗಳಲ್ಲಿ ಇಂಟರ್ನ್ಶಿಪ್ ಅವಕಾಶಗಳನ್ನು ಒದಗಿಸಲು ಸರ್ಕಾರದಿಂದ ಸಮಗ್ರ ಯೋಜನೆಯನ್ನು ಆರಂಭಿಸಲಾಗುವುದು. ಪ್ರಧಾನ ಮಂತ್ರಿಗಳ ಪ್ಯಾಕೇಜ್ ಅಡಿಯಲ್ಲಿ ಇದು 5 ನೇ ಯೋಜನೆಯಾಗಿದೆ.
ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2024-25 ಅನ್ನು ಮಂಡಿಸುವಾಗ, ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಯ ಈ ಯೋಜನೆಯು 5 ವರ್ಷಗಳಲ್ಲಿ 1 ಕೋಟಿ ಯುವಕರಿಗೆ 500 ಉನ್ನತ ಕಂಪನಿಗಳಲ್ಲಿ ಇಂಟರ್ನ್ಶಿಪ್ ಅವಕಾಶಗಳನ್ನು ಒದಗಿಸುತ್ತದೆ ಎಂದು ಘೋಷಿಸಿದರು. ಅವರು 12 ತಿಂಗಳ ಕಾಲ  ನೈಜ  ವ್ಯಾಪಾರ ಪರಿಸರ, ವಿವಿಧ ವೃತ್ತಿಗಳು ಮತ್ತು ಉದ್ಯೋಗಾವಕಾಶಗಳಿಗೆ ತೆರೆದುಕೊಳ್ಳುವರು ಎಂದು ಅವರು ಹೇಳಿದರು.

ಯುವಕರಿಗೆ ತಿಂಗಳಿಗೆ ` ರೂ.5,000 ಇಂಟರ್ನ್  ಶಿಪ್ ಭತ್ಯೆ ಜೊತೆಗೆ ಒಂದು ಬಾರಿಯ  ರೂ.6,000  ನೆರವು ನೀಡಲಾಗುತ್ತದೆ. ಕಂಪನಿಗಳು ತಮ್ಮ ಸಿಎಸ್ಆರ್ ನಿಧಿಯಿಂದ ತರಬೇತಿ ವೆಚ್ಚ ಮತ್ತು‌ ಇಂಟರ್ನ್  ಶಿಪ್  ವೆಚ್ಚದ 10 ಪ್ರತಿಶತವನ್ನು ಭರಿಸುವ ನಿರೀಕ್ಷೆಯಿದೆ ಎಂದು ಹಣಕಾಸು ಸಚಿವರು ಹೇಳಿದರು.
 

*****



(Release ID: 2036681) Visitor Counter : 44