ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದೊಂದಿಗೆ ಬಾಂಧವ್ಯವನ್ನು ಗಾಢಗೊಳಿಸಲು ಯುಕೆ ಪ್ರಧಾನಮಂತ್ರಿಯವರು ನೀಡಿದ ಆದ್ಯತೆಯನ್ನು ಶ್ಲಾಘಿಸುವೆ: ಪ್ರಧಾನಮಂತ್ರಿ

Posted On: 24 JUL 2024 9:17PM by PIB Bengaluru

ಎರಡೂ ರಾಷ್ಟ್ರಗಳ ನಡುವಿನ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ವಿಸ್ತರಿಸಲು ಮತ್ತು ಆಳಗೊಳಿಸಲು ಯುನೈಟೆಡ್ ಕಿಂಗ್ ಡಮ್ ನ ಹೊಸದಾಗಿ ಚುನಾಯಿತ ಪ್ರಧಾನ ಮಂತ್ರಿ ಶ್ರೀ ಕೀರ್ ಸ್ಟ್ರಾಮರ್ ಅವರು ನೀಡಿದ ಆದ್ಯತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ಲಾಘಿಸಿದರು.

ಶ್ರೀ ಮೋದಿ ಅವರು ಯುನೈಟೆಡ್ ಕಿಂಗ್ಡಮ್ನ ವಿದೇಶಾಂಗ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ಕಾರ್ಯದರ್ಶಿ ಶ್ರೀ ಡೇವಿಡ್ ಲ್ಯಾಮಿ ಅವರನ್ನು ಭೇಟಿಯಾದರು.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ  ಪ್ರಧಾನಮಂತ್ರಿಯವರು  ಹೀಗೆ ಬರೆದಿದ್ದಾರೆ :

"UK FS @DavidLammy ಅವರನ್ನು ಭೇಟಿಯಾಗಿ ಸಂತೋಷವಾಯಿತು. ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ವಿಸ್ತರಿಸಲು ಮತ್ತು ಆಳಗೊಳಿಸಲು PM @Keir_Starmer ಅವರು ನೀಡಿದ ಆದ್ಯತೆಯನ್ನು ಶ್ಲಾಘಿಸುವೆ. ಸಂಬಂಧಗಳನ್ನು ಉನ್ನತೀಕರಿಸಲು ಬದ್ಧರಾಗಿರುವೆವು. ದ್ವಿಪಕ್ಷೀಯ ತಾಂತ್ರಿಕ ಭದ್ರತಾ ಉಪಕ್ರಮವನ್ನು ಮತ್ತು ಪರಸ್ಪರ ಲಾಭದಾಯಕವಾಗುವ ಎಫ್ಟಿಎಯನ್ನು ತೀರ್ಮಾನಿಸುವ ಇಚ್ಛೆ ವ್ಯಕ್ತಪಡಿಸಿರುವುದನ್ನು ಸ್ವಾಗತಿಸುವೆ.”

 

 

*****


(Release ID: 2036672) Visitor Counter : 40