ಸಂಸದೀಯ ವ್ಯವಹಾರಗಳ ಸಚಿವಾಲಯ
ಜುಲೈ 21 ರಂದು ಸರ್ವಪಕ್ಷ ಸಭೆ ನಡೆಸಲಿರುವ ಕೇಂದ್ರ ಸರ್ಕಾರ
Posted On:
16 JUL 2024 3:53PM by PIB Bengaluru
ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್ ರಿಜಿಜು ಅವರು ಸಂಸತ್ತಿನ ಉಭಯ ಸದನಗಳಲ್ಲಿ ರಾಜಕೀಯ ಪಕ್ಷಗಳ ಸಭಾ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ನವದೆಹಲಿಯ ಸಂಸತ್ ಭವನದ ಅನೆಕ್ಸ್ ಕಟ್ಟಡದ ಮುಖ್ಯ ಸಮಿತಿ ಕೊಠಡಿಯಲ್ಲಿ ಜುಲೈ 21, 2024 ರಂದು ಬೆಳಗ್ಗೆ 11 ಗಂಟೆಗೆ ಸರ್ವಪಕ್ಷ ಸಭೆ ನಡೆಯಲಿದೆ.
ಸಂಸತ್ತಿನ ಬಜೆಟ್ ಅಧಿವೇಶನವು ಜುಲೈ 22, 2024 ರಂದು ಪ್ರಾರಂಭವಾಗಲಿದೆ ಮತ್ತು ಸರ್ಕಾರಿ ಪೂರ್ವ ನಿರ್ಧಾರಿತ ವ್ಯವಹಾರದ ಅಗತ್ಯತೆಗಳಿಗೆ ಒಳಪಟ್ಟು, ಸಂಸತ್ತು ಅಧಿವೇಶನವು ಆಗಸ್ಟ್ 12, 2024 ರಂದು ಮುಕ್ತಾಯಗೊಳ್ಳಲಿದೆ.
*****
(Release ID: 2033867)
Visitor Counter : 50
Read this release in:
Odia
,
Bengali
,
Assamese
,
English
,
Urdu
,
Marathi
,
Hindi
,
Hindi_MP
,
Manipuri
,
Punjabi
,
Gujarati
,
Tamil
,
Telugu