ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತದಿಂದ ನವೆಂಬರ್ 20 ರಿಂದ 24ರವರೆಗೆ ಗೋವಾದಲ್ಲಿ ವಿಶ್ವ ಆಡಿಯೋ ವಿಷುಯಲ್ ಮತ್ತು ಎಂಟರ್‌ಟೇನ್‌ಮೆಂಟ್ ಶೃಂಗಸಭೆ ಆಯೋಜನೆ
ವಿಶ್ವ ಆಡಿಯೋ ವಿಷುಯಲ್ ಮತ್ತು ಎಂಟರ್‌ಟೇನ್‌ಮೆಂಟ್ ಶೃಂಗಸಭೆ (ವೇವ್ಸ್) ಮತ್ತು ಐಎಫ್‌ಎಫ್‌ಐ ಭಾರತದಲ್ಲಿ ಸೃಜನಶೀಲತೆ ಮತ್ತು ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಲಿದೆ: ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್
ಉದ್ಯೋಗ ಸೃಷ್ಟಿಗೆ ಸರ್ಕಾರದ ಗಮನ; ಉತ್ತಮ ಗುಣಮಟ್ಟದ ವಿಷಯವನ್ನು ಪ್ರೋತ್ಸಾಹಿಸಲು ರಚನಾತ್ಮಕ ಮತ್ತು ಕಾರ್ಯವಿಧಾನದ ಮೂಲಕ ಪರಿಸರ ವ್ಯವಸ್ಥೆ ರಚನೆ
Posted On:
13 JUL 2024 5:19PM by PIB Bengaluru
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ನವೆಂಬರ್ 20 ರಿಂದ 24 ರವರೆಗೆ ಗೋವಾದಲ್ಲಿ ವಿಶ್ವಾದ್ಯಂತ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಒಂದು ಹೆಗ್ಗುರುತಾದ ವಿಶ್ವ ಆಡಿಯೋ ವಿಷುಯಲ್ ಮತ್ತು ಎಂಟರ್‌ಟೈನ್‌ಮೆಂಟ್ ಶೃಂಗಸಭೆಯನ್ನು (WAVES) ಆಯೋಜಿಸಲಿದೆ ಎಂದು ಘೋಷಿಸಿದರು. ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರೊಂದಿಗೆ ಇಂದು ನವದೆಹಲಿಯಲ್ಲಿ ನಡೆದ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಸಚಿವರು ಈ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಅಶ್ವಿನಿ ವೈಷ್ಣವ್, “ಮಾಧ್ಯಮ ಮತ್ತು ಮನರಂಜನಾ (ಎಂ & ಇ) ಪ್ರಪಂಚವು ರಚನಾತ್ಮಕ ಬದಲಾವಣೆಗೆ ತೆರೆದುಕೊಂಡಿದೆ ಮತ್ತು ಅಪಾರವಾದ ತಂತ್ರಜ್ಞಾನದ ಒಳಹರಿವನ್ನು ಕಂಡಿದೆ. ಇದು, ಅನೇಕ ಅವಕಾಶಗಳನ್ನು ಒದಗಿಸಿದೆ, ಆದರೆ ಇನ್ನೊಂದೆಡೆ, ಬದಲಾವಣೆಯೊಂದಿಗೆ ಮುಂದುವರಿಯಲು ಸಾಧ್ಯವಾಗದೆ ಕೆಲವರಲ್ಲಿ ಕಳವಳವನ್ನು ಉಂಟುಮಾಡಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಗೆ ಅನುಗುಣವಾಗಿ ಇಂದು ಸಾರ್ವಜನಿಕ ನೀತಿಯ ಪಾತ್ರವು ಈ ರಚನಾತ್ಮಕ ಬದಲಾವಣೆಯಿಂದ ಉತ್ತಮವಾದದ್ದನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಬದಲಾವಣೆಯನ್ನು ನಿಭಾಯಿಸಲು ಮಾಧ್ಯಮ ಮತ್ತು ಮನರಂಜನೆಯ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದರು.
ಅದರ ಗುರಿಗಳನ್ನು ಸಾಧಿಸುವ ಮಾರ್ಗಗಳು ಮತ್ತು ಆಧಾರವಾಗಿರುವ ಪ್ರಯತ್ನಗಳ ಕುರಿತು ಮಾತನಾಡಿದ ಸಚಿವರು, ಮಾಧ್ಯಮ ಮತ್ತು ಮನರಂಜನಾ ವಲಯದಲ್ಲಿ ಉದ್ಯೋಗ ಸೃಷ್ಟಿಸಲು ಮತ್ತು ಪ್ರತಿಭೆಗಳನ್ನು ಹೆಚ್ಚಿಸಲು ಸರ್ಕಾರ ಗಮನಹರಿಸಿದೆ. ಇದನ್ನು ರಚನಾತ್ಮಕ ಮತ್ತು ಕಾರ್ಯವಿಧಾನದ ಪ್ರಯತ್ನಗಳ ಮೂಲಕ ಕಾರ್ಯಗತಗೊಳಿಸಲಾಗುತ್ತದೆ.ಈ ಪ್ರಯತ್ನಗಳು ಉತ್ತಮ ಗುಣಮಟ್ಟದ ವಿಷಯವನ್ನು ಪ್ರೋತ್ಸಾಹಿಸುವ ಪರಿಸರ ವ್ಯವಸ್ಥೆಯ ರಚನೆಯನ್ನು ಖಚಿತಪಡಿಸುತ್ತದೆ, ದೇಶದಲ್ಲಿ ಬೌದ್ಧಿಕ ಆಸ್ತಿ (ಐಪಿ) ಹಕ್ಕುಗಳನ್ನು ರಚಿಸುತ್ತದೆ ಮತ್ತು ರಕ್ಷಿಸುತ್ತದೆ ಹಾಗೂ ಪ್ರಪಂಚವು ತಮ್ಮ ವಿಷಯ ರಚನೆ ಕೇಂದ್ರಗಳನ್ನು ಸ್ಥಾಪಿಸಲು ಭಾರತವನ್ನು ನೈಸರ್ಗಿಕ ಆಯ್ಕೆಯಾಗಿ ಗುರುತಿಸುವಂತೆ ಮಾಡುತ್ತದೆ ಎಂದು ಹೇಳಿದರು.
ಈ ಪ್ರಯತ್ನಕ್ಕೆ ಎಮ್&ಇ(M&E) ಉದ್ಯಮ, ಹಣಕಾಸು ವಲಯ ಮತ್ತು ತಂತ್ರಜ್ಞಾನದ ಪ್ರಪಂಚದ ನಡುವೆ ನಿಕಟವಾಗಿ ಸಂಘಟಿತ ಪ್ರಯತ್ನಗಳ ಅಗತ್ಯವಿದೆ. ಇದಕ್ಕೆ ಉತ್ತಮ ಚಿಂತನೆಯ ನೀತಿಯ ಉಪಕ್ರಮಗಳ ಅಗತ್ಯವಿದೆ ಮತ್ತು ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಉದ್ಯಮವು ಆ ಗುರಿಯತ್ತ ತಮ್ಮ ಪ್ರಯತ್ನಗಳನ್ನು ಸಂಯೋಜಿಸುತ್ತದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.
ವೇವ್ಸ್ ಮತ್ತು ಐಎಫ್‌ಎಫ್‌ಐ ಒಂದೇ ಸ್ಪೆಕ್ಟ್ರಮ್‌ನ ವಿವಿಧ ಭಾಗಗಳನ್ನು ರೂಪಿಸುತ್ತವೆ ಮತ್ತು ವೇವ್ಸ್ ಶೃಂಗಸಭೆಯು ಇನ್‌ಪುಟ್ (Input)ಅನ್ನು ಪ್ರತಿನಿಧಿಸುತ್ತದೆ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆಫ್ ಇಂಡಿಯಾ (ಐಎಫ್‌ಎಫ್‌ಐ) ಔಟ್‌ಪುಟ್ (Output)ಆಗಿದೆ ಎಂದು ಸಚಿವರು ಹೇಳಿದರು. ಇನ್‌ಪುಟ್ ಮತ್ತು ಔಟ್‌ಪುಟ್ ಗೋವಾವನ್ನು ಸೃಜನಶೀಲತೆ ಮತ್ತು ಪ್ರತಿಭೆಯ ಪ್ರಮುಖ ತಾಣವಾಗಿಸಲಿದೆ. ನಾವೀನ್ಯತೆ ಮತ್ತು ಕಲಾತ್ಮಕ ಅಭಿವ್ಯಕ್ತಿಗೆ ದಾರಿದೀಪವಾಗಿ ಅದರ ಸ್ಥಾನವನ್ನು ಗಟ್ಟಿಗೊಳಿಸುತ್ತದೆ ಎಂದು ಅವರು ಹೇಳಿದರು. ಐಎಫ್ ಎಫ್ ಐ(IFFI) ಜೊತೆಗೆ ವೇವ್ಸ್ (WAVES)2024 ಅನ್ನು ಆಯೋಜಿಸಲು ಮುಂದಾಗಿರುವುದಕ್ಕೆ ಗೋವಾ ಮುಖ್ಯಮಂತ್ರಿಗೆ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು, ಇದರಿಂದಾಗಿ ಸ್ಪೆಕ್ಟ್ರಮ್‌ನ ಎರಡೂ ತುದಿಗಳು ಒಟ್ಟಿಗೆ ಬರುತ್ತವೆ ಎಂದರು.
ಸಚಿವರು ಇತರ ಗಣ್ಯರೊಂದಿಗೆ ವೇವ್ಸ್ 2024 ರ ವೆಬ್‌ಸೈಟ್ ಅನ್ನು ಬಿಡುಗಡೆ ಮಾಡಿದರು (https://wavesindia.org/) ಮತ್ತು ಶೃಂಗಸಭೆಯ ಕೈಪಿಡಿಯನ್ನು ಅನಾವರಣಗೊಳಿಸಿದರು.
ಗೋವಾದ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಮಾತನಾಡಿ, ಐಎಫ್‌ಎಫ್‌ಐ ದೀರ್ಘಕಾಲದಿಂದ ಸಿನಿಮೀಯ ಶ್ರೇಷ್ಠತೆಯ ದಾರಿದೀಪವಾಗಿದೆ, ವೇವ್ಸ್ ಉದಯೋನ್ಮುಖ ಎಂ&ಇ ವಲಯದ ಮೇಲೆ ಕೇಂದ್ರೀಕರಿಸುವ ಮೂಲಕ ಉದ್ಯಮದ ಸಹಯೋಗದ ಹೊಸ ಆಯಾಮವನ್ನು ಪರಿಚಯಿಸುತ್ತದೆ. ಎರಡು ಕಾರ್ಯಕ್ರಮಗಳು ಒಟ್ಟಾಗಿ ಅಪ್ರತಿಮ ಅವಕಾಶಗಳ ಭವಿಷ್ಯಕ್ಕೆ ವೇದಿಕೆ ಸೃಷ್ಟಿಸುತ್ತವೆ. ವೇವ್ಸ್ ಗೋವಾವನ್ನು ಸಾಂಸ್ಕೃತಿಕ ಕೇಂದ್ರವಾಗಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ. ಎಂ&ಇ ಉದ್ಯಮದ ಪ್ರತಿನಿಧಿಗಳು ನಾವೀನ್ಯತೆ ಮತ್ತು ಸಹಯೋಗದ ಮನೋಭಾವದೊಂದಿಗೆ ಗೋವಾಕ್ಕೆ ಬರುವಂತೆ ಇದೇ ಸಂದರ್ಭದಲ್ಲಿ ಆಹ್ವಾನಿಸಿದರು.
ಎಂ&ಇ ಉದ್ಯಮದಿಂದ ಜಾಗತಿಕ ನಾಯಕರನ್ನು ಭಾರತಕ್ಕೆ ಕರೆತರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ವೇವ್ಸ್ 2024 ಜೀವಂತಗೊಳಿಸಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್.ಮುರುಗನ್ ಹೇಳಿದರು. ಕ್ಷೇತ್ರದಿಂದ ದೇಶದ ಕೌಶಲ್ಯಪೂರ್ಣ ಮಾನವಶಕ್ತಿಯನ್ನು ಪ್ರೋತ್ಸಾಹಿಸಲು ಶೃಂಗಸಭೆಯು ವೇದಿಕೆಯನ್ನು ಸೃಷ್ಟಿಸುತ್ತದೆ ಎಂದು ಸಚಿವರು ಹೇಳಿದರು.
ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಮಾತನಾಡಿ, ಎಂ&ಇ ಶೃಂಗಸಭೆಯನ್ನು ರಚಿಸುವ ಗುರಿಯನ್ನು ಹೊಂದಿದೆ: “ಭಾರತವು ಆರ್ಥಿಕವಾಗಿ ಬೆಳೆಯುತ್ತಿರುವಾಗ ಭಾರತದ ಶಕ್ತಿಯನ್ನು ಹೆಚ್ಚಿಸುವುದು ಈ ಉಪಕ್ರಮದ ಗುರಿಯಾಗಿದೆ. ಶೃಂಗಸಭೆಯು ಸೃಜನಶೀಲತೆ, ನಾವೀನ್ಯತೆ ಮತ್ತು ಪ್ರಭಾವದಲ್ಲಿ ಹೊಸ ಮಾನದಂಡಗಳನ್ನು ಹೊಂದಿಸುವ ನಿರೀಕ್ಷೆಯಿದೆ. ನಾವೀನ್ಯತೆ ಮತ್ತು ತಾಂತ್ರಿಕ ಪ್ರಗತಿಯನ್ನು ಉತ್ತೇಜಿಸುವುದು, ನಮ್ಮ ಉದ್ಯಮದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು, ಉದ್ಯಮದ ಸಹಯೋಗಗಳನ್ನು ಬಲಪಡಿಸುವುದು, ಹೂಡಿಕೆಯನ್ನು ಆಕರ್ಷಿಸುವುದು, ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವುದು, ವಿಷಯ ವೈವಿಧ್ಯತೆಯನ್ನು ಉತ್ತೇಜಿಸುವುದು ಮತ್ತು ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶಗಳನ್ನು ಸಾಧಿಸಲು ಶೃಂಗಸಭೆಯು ಅವಕಾಶ ಕಲ್ಪಿಸಲಿದೆ ಎಂದು ಅವರು ಹೇಳಿದರು.
ಶೃಂಗಸಭೆಯು ಲಾಭ ಪಡೆಯುವ ಅವಕಾಶಗಳ ಕುರಿತು ಕಾರ್ಯದರ್ಶಿ ಮಾಹಿತಿ ನೀಡಿದರು ಮತ್ತು ವಿಷಯ ಉತ್ಪಾದನೆ ಮತ್ತು ನಾವೀನ್ಯತೆ, ಅನಿಮೇಷನ್, ವಿಎಫ್‌ಎಕ್ಸ್ ಮತ್ತು ಗೇಮಿಂಗ್ ಮತ್ತು ಅಂತಿಮವಾಗಿ ಸಂಗೀತ ಮತ್ತು ಬೌದ್ಧಿಕ ಆಸ್ತಿ (ಐಪಿ) ರಚನೆಯು ಅದರ ಮೂಲವನ್ನು ರೂಪಿಸುತ್ತದೆ ಎಂದು ಹೇಳಿದರು.
ವೇವ್ಸ್(WAVES) ಒಂದು ಪ್ರಧಾನ ವೇದಿಕೆಯಾಗಿದ್ದು, ವಿಕಸನಗೊಳ್ಳುತ್ತಿರುವ ಎಂ&ಇ ಉದ್ಯಮದ ಭೂದೃಶ್ಯದಲ್ಲಿ ಸಂವಾದ, ವ್ಯಾಪಾರ ಸಹಯೋಗ ಮತ್ತು ನಾವೀನ್ಯತೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಶೃಂಗಸಭೆಯು ಅವಕಾಶಗಳನ್ನು ಅನ್ವೇಷಿಸಲು, ಸವಾಲುಗಳನ್ನು ಎದುರಿಸಲು, ಭಾರತಕ್ಕೆ ವ್ಯಾಪಾರವನ್ನು ಆಕರ್ಷಿಸಲು ಮತ್ತು ಕ್ಷೇತ್ರದ ಭವಿಷ್ಯವನ್ನು ರೂಪಿಸಲು ಉದ್ಯಮದ ಪ್ರಮುಖರು, ಮಧ್ಯಸ್ಥಗಾರರು ಮತ್ತು ನವೋದ್ಯಮಗಳನ್ನು ಆಹ್ವಾನಿಸುತ್ತಿದೆ.
ಕ್ರಿಯಾಶೀಲ ಎಂ & ಇ ವ್ಯಾಪ್ತಿಯಲ್ಲಿ ಭಾರತವನ್ನು ಸಾಟಿಯಿಲ್ಲದ ಜಾಗತಿಕ ಶಕ್ತಿ ಕೇಂದ್ರವಾಗಿ ಇರಿಸುವ ದೃಷ್ಟಿಯೊಂದಿಗೆ, ವೇವ್ಸ್ (WAVES) ವಿಶ್ವಾದ್ಯಂತ ಸೃಜನಶೀಲತೆ, ನಾವೀನ್ಯತೆ ಮತ್ತು ಪ್ರಭಾವದ ಹೊಸ ಮಾನದಂಡಗಳನ್ನು ಹೊಂದಿಸುವ ಗುರಿಯನ್ನು ಹೊಂದಿದೆ. ವೇವ್ಸ್ ನ ಮುಂಚೂಣಿ ವೇದಿಕೆಯ ಮೂಲಕ ವಿಶೇಷ ಹೂಡಿಕೆ ಅವಕಾಶಗಳೊಂದಿಗೆ ಜಾಗತಿಕ ಎಂ&ಇ ನಾಯಕರನ್ನು ಸಬಲೀಕರಣಗೊಳಿಸುವುದು ಮುಖ್ಯ ಉದ್ದೇಶವಾಗಿದೆ.
ಕಾರ್ಯಕ್ರಮದಲ್ಲಿ TRAI ಅಧ್ಯಕ್ಷರಾದ ಶ್ರೀ ಅನಿಲ್ ಕುಮಾರ್ ಲೋಹಾಟಿ ಮತ್ತು ಗೋವಾ ಮುಖ್ಯ ಕಾರ್ಯದರ್ಶಿ ಪುನೀತ್ ಕುಮಾರ್ ಗೋಯಲ್, ವಿವಿಧ ವಿದೇಶಿ ರಾಯಭಾರಿಗಳು ಮತ್ತು ರಾಜತಾಂತ್ರಿಕ ಪ್ರತಿನಿಧಿಗಳು ಸಹ ಉಪಸ್ಥಿತರಿದ್ದರು.
ಈ ವೇಳೆ ವೇವ್ಸ್ ಲೋಗೋ, ವೆಬ್‌ಸೈಟ್ ಮತ್ತು ಕೈಪಿಡಿ ಅನ್ನು ಬಿಡುಗಡೆ ಮಾಡಿದ ನಂತರ ಮತ್ತೊಂದು ದುಂಡು ಮೇಜಿನ ಸಭೆ ನಡೆಯಿತು. ಇದರಲ್ಲಿ ಸುಮಾರು 60 ಸಂಸ್ಥೆಗಳು, ಸಂಘಗಳು, ಉದ್ಯಮ ಸಂಸ್ಥೆಗಳು, ಪ್ರಮುಖ ಮಾಧ್ಯಮ ಸಂಸ್ಥೆಗಳು, ಉನ್ನತ ವ್ಯವಸ್ಥಾಪಕರು, ಬ್ರಾಡ್‌ಕಾಸ್ಟಿಂಗ್, ಎವಿಜಿಸಿ(AVGC), ಡಿಜಿಟಲ್ ಮೀಡಿಯಾ ವಲಯಗಳ 80ಕ್ಕೂ ಹೆಚ್ಚು ಉನ್ನತ ವ್ಯವಸ್ಥಾಪಕರು ಉಪಸ್ಥಿತರಿದ್ದರು.
2024ರ ನವೆಂಬರ್ 20 ರಿಂದ 24 ರವರೆಗೆ ವೇವ್ಸ್ (WAVES) ಅನ್ನು ಭಾರತದ ಗೋವಾದಲ್ಲಿ ನಡೆಸಲಾಗುವುದು, ಇದು ಎಂ&ಇ ಉದ್ಯಮದ ಕ್ಯಾಲೆಂಡರ್‌ನಲ್ಲಿ (Calendar)ಒಂದು ಹೆಗ್ಗುರುತಾಗಲಿದೆ ಎಂಬ ಭರವಸೆ ಇದೆ.
*****
(Release ID: 2033057)
Visitor Counter : 50
Read this release in:
Odia
,
Malayalam
,
English
,
Khasi
,
Urdu
,
Hindi
,
Hindi_MP
,
Marathi
,
Manipuri
,
Assamese
,
Punjabi
,
Gujarati
,
Tamil
,
Telugu