ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿ.ಡಿ.ಎನ್.ಕೆ.ಹೆಚ್. ನಲ್ಲಿರುವ ರೊಸಾಟಮ್ ಪೆವಿಲಿಯನ್‌ ಗೆ ಭೇಟಿ ನೀಡಿದ ಪ್ರಧಾನಮಂತ್ರಿ

Posted On: 09 JUL 2024 4:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ರಾಷ್ಟ್ರಪತಿ ಘನತೆವೆತ್ತ ಶ್ರೀ ವ್ಲಾಡಿಮಿರ್ ಪುಟಿನ್ ಅವರು ಇಂದು ಮಾಸ್ಕೋದಲ್ಲಿ ಎಲ್ಲಾ ರಷ್ಯನ್ ಪ್ರದರ್ಶನ ಕೇಂದ್ರ, ವಿ.ಡಿ.ಎನ್.ಕೆ.ಹೆಚ್. ಗೆ ಭೇಟಿ ನೀಡಿದರು.

ಇಬ್ಬರು ನಾಯಕರು ವಿ.ಡಿ.ಎನ್.ಕೆ.ಹೆಚ್ ನಲ್ಲಿರುವ ರೊಸಾಟಮ್ ಪೆವಿಲಿಯನ್ ಅನ್ನು ಸಂದರ್ಶನ ಮಾಡಿದರು.  ನವೆಂಬರ್ 2023 ರಲ್ಲಿ ಉದ್ಘಾಟನೆಗೊಂಡ ರೊಸಾಟಮ್ ಪೆವಿಲಿಯನ್, ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಗಳ ಇತಿಹಾಸದ ಅತಿದೊಡ್ಡ ಪ್ರದರ್ಶನಗಳಲ್ಲಿ ಒಂದಾಗಿದೆ. ನಾಗರಿಕ ಪರಮಾಣು ಶಕ್ತಿ ಕ್ಷೇತ್ರದಲ್ಲಿ ಭಾರತ-ರಷ್ಯಾ ಸಹಕಾರಕ್ಕೆ ಮೀಸಲಾದ ಛಾಯಾಚಿತ್ರ ಪ್ರದರ್ಶನವನ್ನು ಪ್ರಧಾನಮಂತ್ರಿ ವೀಕ್ಷಿಸಿದರು.  ಭಾರತದ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ (ಕೆ.ಕೆ.ಎನ್.ಪಿ.ಪಿ.) ಕೇಂದ್ರ ಭಾಗವಾಗಿರುವ ವಿವಿಇಆರ್ -1000 ರಿಯಾಕ್ಟರ್‌ ನ ಶಾಶ್ವತ ಕಾರ್ಯನಿರ್ವಹಣೆಯ ಮಾದರಿಯಾದ "ಪರಮಾಣು ಸಿಂಫನಿ" ಅನ್ನು ಸಹ ಪ್ರಧಾನಮಂತ್ರಿಗೆ ವಿವರಿಸಲಾಯಿತು.

ಪೆವಿಲಿಯನ್‌ ನಲ್ಲಿ, ಪ್ರಧಾನಮಂತ್ರಿಯವರು ಭಾರತೀಯ ಮತ್ತು ರಷ್ಯಾದ ವಿದ್ಯಾರ್ಥಿಗಳ ತಂಡದೊಂದಿಗೆ ಸಂವಾದ ನಡೆಸಿದರು.  ಭವಿಷ್ಯದ ಪೀಳಿಗೆಯ ಪ್ರಯೋಜನಕ್ಕಾಗಿ, ಅಂತರಿಕ್ಷ ಮತ್ತು ಗ್ರಹಕ್ಕಾಗಿ ಬಳಸಿಕೊಳ್ಳಬಹುದಾದ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಭವಿಷ್ಯದ ಸಾಧ್ಯತೆಗಳ ಅವಕಾಶ ಸೃಷ್ಟಿಸಬೇಕು ಎಂದು ಪ್ರಧಾನಮಂತ್ರಿಯವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.


 *****


(Release ID: 2031940) Visitor Counter : 48