ಪ್ರಧಾನ ಮಂತ್ರಿಯವರ ಕಛೇರಿ

ಮಾಜಿ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರ ಜೀವನ ಮತ್ತು ಪಯಣ ಕುರಿತಾದ ಮೂರು ಪುಸ್ತಕಗಳನ್ನು ಜೂನ್ 30ರಂದು ಪ್ರಧಾನಮಂತ್ರಿಯವರು ಬಿಡುಗಡೆ ಮಾಡಲಿದ್ದಾರೆ

Posted On: 29 JUN 2024 11:03AM by PIB Bengaluru

ಭಾರತದ ಮಾಜಿ ಉಪರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯ ನಾಯ್ಡು ಅವರ 75ನೇ ಜನ್ಮದಿನದ ಮುನ್ನಾದಿನವಾದ, ಜೂನ್ 30ರಂದು ಮಧ್ಯಾಹ್ನ 12 ಗಂಟೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅವರ ಜೀವನ ಮತ್ತು ಪಯಣ ಕುರಿತಾದ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಹೈದರಾಬಾದ್ ನ ಗಚಿಬೌಲಿಯಲ್ಲಿರುವ ಅನ್ವಯ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪುಸ್ತಕಗಳು ಬಿಡುಗಡೆಯಾಗಲಿವೆ.

ಪ್ರಧಾನಮಂತ್ರಿಯವರು ಬಿಡುಗಡೆ ಮಾಡಲಿರುವ ಪುಸ್ತಕಗಳು ಈ ಕೆಳಗಿನಂತಿವೆ:

(i) ದಿ ಹಿಂದೂ ಪತ್ರಿಕೆಯ, ಹೈದರಾಬಾದ್ ಆವೃತ್ತಿಯ ಮಾಜಿ ಸ್ಥಾನಿಕ ಸಂಪಾದಕರಾದ ಶ್ರೀ ಎಸ್ ನಾಗೇಶ್ ಕುಮಾರ್ ಅವರು ಬರೆದ "ವೆಂಕಯ್ಯ ನಾಯ್ಡು - ಸೇವೆಯಲ್ಲಿ ಜೀವನ" ಎಂಬ ಶೀರ್ಷಿಕೆಯ ಮಾಜಿ ಉಪರಾಷ್ಟ್ರಪತಿಯವರ ಜೀವನಚರಿತ್ರೆ

(ii) "ಭಾರತ ಸಂಭ್ರಮಾಚರಣೆ - ಭಾರತದ 13ನೇ ಉಪರಾಷ್ಟ್ರಪತಿಯಾಗಿ ಶ್ರೀ ಎಂ.ವೆಂಕಯ್ಯ ನಾಯ್ಡು ಅವರ ಧ್ಯೇಯ ಮತ್ತು ಸಂದೇಶ", ಭಾರತದ ಉಪರಾಷ್ಟ್ರಪತಿಯವರ ಮಾಜಿ ಕಾರ್ಯದರ್ಶಿ ಡಾ. ಐ. ವಿ. ಸುಬ್ಬರಾವ್ ಅವರು ಸಂಗ್ರಹಿಸಿದ ಕಾಲಾನುಕ್ರಮ ಫೋಟೋ ಸಂಗ್ರಹ.

(iii) ಶ್ರೀ ಸಂಜಯ್ ಕಿಶೋರ್ ಅವರು ಬರೆದ "ಮಹಾನೇತಾ - ಶ್ರೀ ಎಂ. ವೆಂಕಯ್ಯ ನಾಯ್ಡು ಅವರ ಜೀವನ ಮತ್ತು ಪಯಣ" ಎಂಬ ಶೀರ್ಷಿಕೆಯ ತೆಲುಗಿನ ಚಿತ್ರಾತ್ಮಕ ಜೀವನಚರಿತ್ರೆ.

*****



(Release ID: 2029802) Visitor Counter : 26