ಪರಿಸರ ಮತ್ತು ಅರಣ್ಯ ಸಚಿವಾಲಯ

ಶ್ರೀ ಭೂಪೇಂದರ್ ಯಾದವ್ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾಗಿ ಅಧಿಕಾರ ವಹಿಸಿಕೊಂಡರು


ಶ್ರೀ ಕೀರ್ತಿವರ್ಧನ್ ಸಿಂಗ್ ಅವರು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಹಾಯಕ ಸಚಿವರಾಗಿ ಅಧಿಕಾರ ವಹಿಸಿಕೊಂಡರು

Posted On: 11 JUN 2024 4:42PM by PIB Bengaluru

ಶ್ರೀ ಭೂಪೇಂದರ್ ಯಾದವ್ ಅವರು 2024 ರ ಜೂನ್ 11 ರಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾಗಿ (ಎಂಒಇಎಫ್ ಮತ್ತು ಸಿಸಿ) ಅಧಿಕಾರ ವಹಿಸಿಕೊಂಡರು. ಪರ್ಯಾವರಣ್ ಭವನದ ಕಚೇರಿಯಲ್ಲಿ ಕಾರ್ಯದರ್ಶಿ ಶ್ರೀಮತಿ ಲೀನಾ ನಂದನ್, ಕಾರ್ಯದರ್ಶಿ (ಇಎಫ್ ಮತ್ತು ಸಿಸಿ) ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಅವರನ್ನು ಸ್ವಾಗತಿಸಿದರು. ಶ್ರೀ ಕೀರ್ತಿವರ್ಧನ್ ಸಿಂಗ್ ಅವರು ಸಹಾಯಕ ಸಚಿವರಾಗಿ ಅಧಿಕಾರ ವಹಿಸಿಕೊಂಡರು.

 

DSC_2431.JPG

DSC_2459.JPG

DSC_2442.JPG

ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡ  ಕೇಂದ್ರ ಸಚಿವರು, ತಮಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಸಚಿವಾಲಯದಲ್ಲಿ ತಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಲು ತಾವು ಸಿದ್ಧರಿರುವುದಾಗಿ ಹೇಳಿದರು. ಅವರು ತಮ್ಮ ಸಹೋದ್ಯೋಗಿ, ಸಹಾಯಕ  ಸಚಿವ ಶ್ರೀ ಕೀರ್ತಿವರ್ಧನ್ ಸಿಂಗ್ ಅವರನ್ನು ಸ್ವಾಗತಿಸಿದರು. ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಈ  ಸಚಿವಾಲಯವು ಅನೇಕ ಕ್ರಮಗಳನ್ನು ಕೈಗೊಂಡಿದೆ ಮತ್ತು ಸರ್ಕಾರವು ಪರಿಸರ ಮತ್ತು ಅಭಿವೃದ್ಧಿಯನ್ನು ಜೊತೆಯಲ್ಲಿ ತೆಗೆದುಕೊಂಡು ಮುಂದುವರಿಯುತ್ತಿದೆ ಎಂದು ಅವರು ಹೇಳಿದರು. ಮಿಷನ್ ಲೈಫ್ ಎಂಬ ಪರಿಸರಕ್ಕಾಗಿ ಜೀವನ ಶೈಲಿಯಂತಹ ಉಪಕ್ರಮಗಳ ಮೇಲೆ ಗಮನ ಹರಿಸಲಾಗುವುದು ಎಂದೂ ಅವರು ಹೇಳಿದರು. ಜಾಗತಿಕವಾಗಿ ಪರಿಸರ ಬಿಕ್ಕಟ್ಟು ಇದೆ ಮತ್ತು ಗೌರವಾನ್ವಿತ ಪ್ರಧಾನಿಯವರು ಗ್ಲ್ಯಾಸ್ಗೋ, ಹವಾಮಾನ ಸಮ್ಮೇಳನ 2021 ರಲ್ಲಿ ಪರಿಸರಕ್ಕಾಗಿ ಮಿಷನ್ ಲೈಫ್- ಜೀವನಶೈಲಿಯನ್ನು ಘೋಷಿಸಿದರು ಎಂದ ಅವರು ಮಿಷನ್ ಲೈಫ್ ಹವಾಮಾನ-ಸಕಾರಾತ್ಮಕ ಅಂದರೆ ಹವಾಮಾನಕ್ಕೆ ಪೂರಕವಾದಂತಹ ನಡವಳಿಕೆಯ ವ್ಯಕ್ತಿಗಳನ್ನು ಸಜ್ಜುಗೊಳಿಸಲು ಮತ್ತು ಪರಿಸರ ಸ್ನೇಹಿ ಸ್ವಯಂ-ಸುಸ್ಥಿರ ನಡವಳಿಕೆಗಳನ್ನು ಬಲಪಡಿಸಲು ಹಾಗು ಸಕ್ರಿಯಗೊಳಿಸಲು ಪರಿಸರ ವ್ಯವಸ್ಥೆಯನ್ನು ರಚಿಸಲು ಪ್ರಯತ್ನಿಸುತ್ತದೆ ಎಂದೂ ಅವರು ಹೇಳಿದರು. ಇದು  ಅಪರಿಮಿತ, ವಿವೇಚನಾರಹಿತ ಸಂಪನ್ಮೂಲ ಬಳಕೆಗಿಂತ ವಿವೇಚನಾಶೀಲ ಬಳಕೆಯನ್ನು ಎತ್ತಿಹಿಡಿಯುತ್ತದೆ ಎಂದವರು ಅಭಿಪ್ರಾಯಪಟ್ಟರು.

 

DSC_2450.JPG

DSC_2454.JPG

ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಜೊತೆಜೊತೆಯಾಗಿ ಸಾಗಬಲ್ಲದು ಎಂದು ಸರ್ಕಾರ ನಂಬುತ್ತದೆ ಎಂದು ಮಾನ್ಯ ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ (ಎಂಒಇಎಫ್ ಮತ್ತು ಸಿಸಿ) ಸಚಿವರು ಹೇಳಿದರು. ಹೆಚ್ಚುತ್ತಿರುವ ಜಾಗತಿಕ ತಾಪಮಾನ ಏರಿಕೆಯನ್ನು ಎದುರಿಸಲು ಗೌರವಾನ್ವಿತ ಪ್ರಧಾನಿಯವರು ಸಾಮೂಹಿಕವಾಗಿ ಗಿಡ ನೆಡುವ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ ಮತ್ತು ಸಾಮೂಹಿಕ ಗಿಡ ನೆಡುವಿಕೆಯನ್ನು ಉತ್ತೇಜಿಸಲು 2024 ರ ವಿಶ್ವ ಪರಿಸರ ದಿನದಂದು ಗೌರವಾನ್ವಿತ ಪ್ರಧಾನ ಮಂತ್ರಿಗಳು ಪ್ರಾರಂಭಿಸಿದ ಈ ಉಪಕ್ರಮದಲ್ಲಿ ಎಲ್ಲಾ ನಾಗರಿಕರು ಭಾಗವಹಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಇದು ಹೆಚ್ಚುತ್ತಿರುವ ತಾಪಮಾನ, ಮರುಭೂಮಿ ವಿಸ್ತರಣೆ ಸಮಸ್ಯೆ ಮತ್ತು ಜೈವಿಕ ವೈವಿಧ್ಯತೆ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂದವರು ಹೇಳಿದರು.

ಅಧಿಕಾರ ವಹಿಸಿಕೊಂಡ ನಂತರ, ಸಚಿವರು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು, ಅಲ್ಲಿ ಅವರಿಗೆ ಸಚಿವಾಲಯದ ಪ್ರಮುಖ ಉಪಕ್ರಮಗಳು ಮತ್ತು ನೀತಿ ವಿಷಯಗಳ ಬಗ್ಗೆ ವಿವರಿಸಲಾಯಿತು.

*****
 



(Release ID: 2024964) Visitor Counter : 20