ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಅಂತರರಾಷ್ಟ್ರೀಯ ಯೋಗ ದಿವಸ್ ಮಾಧ್ಯಮ ಸಮ್ಮಾನ್ - 2024ರ 3ನೇ ಆವೃತ್ತಿಯನ್ನು ಪ್ರಕಟಿಸಿದೆ


ವಿವಿಧ ಭಾಷೆಗಳಲ್ಲಿ ದೂರದರ್ಶನ, ರೇಡಿಯೋ ಮತ್ತು ಮುದ್ರಣ ಮಾಧ್ಯಮಗಳಿಗೆ 33 ಸಮ್ಮಾನ್ ಪ್ರಶಸ್ತಿಗಳನ್ನು ನೀಡಲಾಗುವುದು

ಯೋಗದ ಸಂದೇಶವನ್ನು ಹರಡುವಲ್ಲಿ ಮಾಧ್ಯಮಗಳ ಕೊಡುಗೆಯನ್ನು ಗುರುತಿಸಲು ಪ್ರಶಸ್ತಿಗಳು

Posted On: 11 JUN 2024 5:39PM by PIB Bengaluru

ಅಂತರರಾಷ್ಟ್ರೀಯ ಯೋಗ ದಿವಸ್ ಮಾಧ್ಯಮ ಸಮ್ಮಾನ್ 2024 ರ ಮೂರನೇ ಆವೃತ್ತಿಯನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ (ಐ & ಬಿ) ಪ್ರಕಟಿಸಿದೆ. ಭಾರತ ಮತ್ತು ವಿದೇಶಗಳಲ್ಲಿ ಯೋಗದ ಸಂದೇಶವನ್ನು ಪ್ರಸಾರ ಮಾಡುವಲ್ಲಿ ಮಾಧ್ಯಮಗಳ ಸಕಾರಾತ್ಮಕ ಪಾತ್ರ ಮತ್ತು ಜವಾಬ್ದಾರಿಯನ್ನು ಗುರುತಿಸಿದ ಸಚಿವಾಲಯವು 2019 ರ ಜೂನ್ ನಲ್ಲಿ  ಮೊದಲ ಅಂತರರಾಷ್ಟ್ರೀಯ ಯೋಗ ದಿವಸ್ ಮಾಧ್ಯಮ ಸಮ್ಮಾನ್ (ಎವೈಡಿಎಂಎಸ್) ಅನ್ನು ಸ್ಥಾಪಿಸಿತ್ತು.

ಅಂತರರಾಷ್ಟ್ರೀಯ ಯೋಗ ದಿವಸ್ ಮಾಧ್ಯಮ ಸಮ್ಮಾನ್ 2024 ರ ಅಡಿಯಲ್ಲಿ, ಮುದ್ರಣ, ದೂರದರ್ಶನ ಮತ್ತು ರೇಡಿಯೋ ಎಂಬ ಮೂರು ವಿಭಾಗಗಳ ಅಡಿಯಲ್ಲಿ 33 ಸಮ್ಮಾನ್ ಗಳನ್ನು ಇಪ್ಪತ್ತೆರಡು ಭಾರತೀಯ ಭಾಷೆಗಳು ಮತ್ತು ಇಂಗ್ಲಿಷಿಗೆ ಸಂಬಂಧಿಸಿ ನೀಡಲಾಗುವುದು:

1.  "ವೃತ್ತಪತ್ರಿಕೆಗಳಲ್ಲಿ ಯೋಗಕ್ಕೆ ಸಂಬಂಧಿಸಿ ಅತ್ಯುತ್ತಮ  ಕವರೇಜ್ /ಮಾಧ್ಯಮ ಪ್ರಸಾರ" ವಿಭಾಗದಲ್ಲಿ 22 ಭಾರತೀಯ ಭಾಷೆಗಳು ಮತ್ತು ಇಂಗ್ಲಿಷಿನಲ್ಲಿ 11 ಸಮ್ಮಾನ್ ಗಳನ್ನು ನೀಡಲಾಗುವುದು.

2. "ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ (ಟಿವಿ) ಯೋಗಕ್ಕೆ ಸಂಬಂಧಿಸಿ ಅತ್ಯುತ್ತಮ ಕವರೇಜ್ /ಮಾಧ್ಯಮ ಪ್ರಸಾರ" ವಿಭಾಗದಲ್ಲಿ 22 ಭಾರತೀಯ ಭಾಷೆಗಳು ಮತ್ತು ಇಂಗ್ಲಿಷಿನಲ್ಲಿ 11 ಸಮ್ಮಾನ್ ಗಳನ್ನು ನೀಡಲಾಗುವುದು.

3. "ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ (ರೇಡಿಯೋ) ಯೋಗಕ್ಕೆ ಸಂಬಂಧಿಸಿ ಅತ್ಯುತ್ತಮ ಕವರೇಜ್/ ಮಾಧ್ಯಮ ಪ್ರಸಾರ" ವಿಭಾಗದಲ್ಲಿ 22 ಭಾರತೀಯ ಭಾಷೆಗಳು ಮತ್ತು ಇಂಗ್ಲಿಷಿಲ್ಲಿ 11 ಸಮ್ಮಾನ್ ಗಳನ್ನು ನೀಡಲಾಗುವುದು.

ಅಂತಾರಾಷ್ಟ್ರೀಯ ಯೋಗ ದಿನ

ಪ್ರತಿ ವರ್ಷ ಜೂನ್ 21 ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಯೋಗ ದಿನವು ವಿಶ್ವದಾದ್ಯಂತ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಸಾಮೂಹಿಕ ಜನಾಂದೋಲನವನ್ನು ಹುಟ್ಟುಹಾಕಿದೆ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕೆ ಅದರ ಸಮಗ್ರ ವಿಧಾನವು ಗಮನಾರ್ಹ ಆಸಕ್ತಿಯನ್ನು ಕೆರಳಿಸಿದೆ ಮತ್ತು  ಇದು ಜಾಗತಿಕ ವಿದ್ಯಮಾನವಾಗಿದೆ. ಭಾರತ ಮತ್ತು ವಿದೇಶಗಳಲ್ಲಿ ಯೋಗದ ಸಂದೇಶವನ್ನು ವರ್ಧಿಸುವಲ್ಲಿ ಯಾ ವಿಸ್ತರಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ, ಈ ಪ್ರಾಚೀನ ಪದ್ಧತಿಯನ್ನು/ ಅಭ್ಯಾಸವನ್ನು ಮತ್ತು ಅದರ ಹಲವಾರು ಪ್ರಯೋಜನಗಳನ್ನು ಉತ್ತೇಜಿಸುವಲ್ಲಿ ಮಾಧ್ಯಮಗಳು ಹೊಂದಿರುವ ಅಪಾರ ಶಕ್ತಿ ಮತ್ತು ಜವಾಬ್ದಾರಿಯನ್ನು ಗುರುತಿಸುವುದು ಬಹಳ ಮುಖ್ಯ.

ಎ.ವೈ.ಡಿ.ಎಂ.ಎಸ್. ಶಿಫಾರಸು ಮತ್ತು ಮಾರ್ಗಸೂಚಿಗಳು

ವಿಶೇಷ ಪದಕ / ಫಲಕ / ಟ್ರೋಫಿ ಮತ್ತು ಪ್ರಶಂಸಾ ಪತ್ರವನ್ನು ಒಳಗೊಂಡಿರುವ ಸಮ್ಮಾನ್ ಅನ್ನು ಸ್ವತಂತ್ರ ತೀರ್ಪುಗಾರರು ಶಿಫಾರಸು ಮಾಡುತ್ತಾರೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದಲ್ಲಿ  ನೋಂದಣಿ / ಪರವಾನಗಿಯನ್ನು ಹೊಂದಿರುವ  ಮುದ್ರಣ ಮಾಧ್ಯಮ, ರೇಡಿಯೋ ಮತ್ತು ಟಿ.ವಿ./ದೂರದರ್ಶನದಲ್ಲಿ ತೊಡಗಿರುವ ಎಲ್ಲಾ ಮಾಧ್ಯಮ ಸಂಸ್ಥೆಗಳು / ಕಂಪನಿಗಳು ಪ್ರಶಸ್ತಿಗಳ ಪರಿಗಣನೆಗೆ ಅರ್ಹವಾಗಿವೆ.

ಮಾರ್ಗಸೂಚಿಗಳ ಪ್ರಕಾರ, ಮಾಧ್ಯಮ ಸಂಸ್ಥೆಗಳು 2024 ರ ಜೂನ್ 12 ರಿಂದ 2024 ರ  ಜೂನ್ 25  ರ ಅವಧಿಯಲ್ಲಿ ಬರೆದ ಮತ್ತು ಪ್ರಕಟಿಸಿದ ಲೇಖನ (ಗಳ) ಅಥವಾ ಆಡಿಯೋ / ದೃಶ್ಯ ವಿಷಯ ಪ್ರಸಾರ / ಪ್ರಸಾರದ ಸಂಬಂಧಿತ ತುಣುಕುಗಳೊಂದಿಗೆ ನಿಗದಿತ ನಮೂನೆಯಲ್ಲಿ ನಾಮನಿರ್ದೇಶನಗಳ ವಿವರಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 2024ರ ಜುಲೈ 8 ಕೊನೆಯ ದಿನವಾಗಿದೆ. ವಿವರವಾದ ಮಾರ್ಗಸೂಚಿಗಳನ್ನು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (https://pib.gov.in/indexd.aspx) ಹಾಗು ವಾರ್ತಾ ಮತ್ತು ಪ್ರಸಾರ ಸಚಿವಾಲಯದ (https://mib.gov.in/sites/default/files/AYDMS%20Guidelines%202024_0.pdf) ಜಾಲ ತಾಣಗಳಲ್ಲಿ  ನೋಡಬಹುದು.

ಎವೈಡಿಎಂಎಸ್ 2 ನೇ ಆವೃತ್ತಿ - 2023

ಪ್ರಶಸ್ತಿಗಳ ಮೊದಲ ಆವೃತ್ತಿಯನ್ನು 2020 ರ ಜನವರಿ 7 ರಂದು ಪ್ರದಾನ ಮಾಡಲಾಯಿತು. ಎವೈಡಿಎಂಎಸ್ 2 ನೇ ಆವೃತ್ತಿ - 2023 ರ ಸಮ್ಮಾನ್ ಗಳನ್ನು ಇನ್ನೂ ವಿತರಿಸಲಾಗಿಲ್ಲ. ಕಳೆದ ವರ್ಷದ ಎವೈಡಿಎಂಎಸ್ (2 ನೇ ಆವೃತ್ತಿ) ವಿಜೇತರಿಗೆ ವರ್ಷದ ಎವೈಡಿಎಂಎಸ್ (3 ನೇ ಆವೃತ್ತಿ) ವಿಜೇತರ ಜೊತೆಗೆ ಸಮ್ಮಾನ್ ಪ್ರಶಸ್ತಿಗಳನ್ನು ಪ್ರದಾನಿಸಲಾಗುವುದು.

*****



(Release ID: 2024455) Visitor Counter : 32