ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ


ಕಳೆದ ದಶಕದಲ್ಲಿ ದ್ವಿಪಕ್ಷೀಯ ಸಂಬಂಧಗಳಲ್ಲಿ ಮಹತ್ವದ ಸಾಧನೆಯನ್ನು ಒಪ್ಪಿಕೊಂಡ ಉಭಯ ನಾಯಕರು

ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಬಲ ಪಾಲುದಾರಿಕೆಯನ್ನು ಮುಂದುವರಿಸಲು ಎದುರು ನೋಡುತ್ತಿರುವುದಾಗಿ ಹೇಳಿದ ಉಭಯ ನಾಯಕರು

Posted On: 05 JUN 2024 10:13PM by PIB Bengaluru

ಬಾಂಗ್ಲಾದೇಶದ ಪ್ರಧಾನಮಂತ್ರಿಯವರಾದ ಗೌರವಾನ್ವಿತ ಶೇಖ್ ಹಸೀನಾ ಅವರು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ 18ನೇ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ ಡಿ ಎ) ವಿಜಯಕ್ಕೆ ದೂರವಾಣಿ ಕರೆಯ ಮೂಲಕ ಅಭಿನಂದನೆ ಸಲ್ಲಿಸಿದರು.

ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ಪ್ರಧಾನಮಂತ್ರಿಯವರನ್ನು ಅಭಿನಂದಿಸಿದ ಮೊದಲ ವಿದೇಶಿ ನಾಯಕರಲ್ಲಿ ಒಬ್ಬರಾಗಿದ್ದರು. ಇದು ಉಭಯ ನಾಯಕರ ನಡುವಿನ ಆತ್ಮೀಯತೆ ಮತ್ತು ವೈಯಕ್ತಿಕ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.

ವಿಕಸಿತ ಭಾರತ - 2047 ಮತ್ತು ಸ್ಮಾರ್ಟ್ ಬಾಂಗ್ಲಾದೇಶ - 2041ರ ದೃಷ್ಟಿಕೋನದ ಸಾಧನೆಯ ನಿಟ್ಟಿನಲ್ಲಿ, ನವೀಕೃತ ಆದೇಶದ ಅಡಿಯಲ್ಲಿ ಐತಿಹಾಸಿಕ ಮತ್ತು ನಿಕಟ ಸಂಬಂಧಗಳನ್ನು ಮತ್ತಷ್ಟು ಉತ್ತಮಗೊಳಿಸಿ ಒಟ್ಟಾಗಿ ಕೆಲಸ ಮಾಡುವುದಾಗಿ ಉಭಯ ನಾಯಕರು ಪ್ರತಿಜ್ಞೆ ಮಾಡಿದರು.

ಕಳೆದ ದಶಕದಲ್ಲಿ ಎರಡೂ ದೇಶಗಳ ಜನರ ಜೀವನದಲ್ಲಿ ಸಾಧಿಸಿದ ಗಮನಾರ್ಹ ಸುಧಾರಣೆಗಳನ್ನು ಒಪ್ಪಿಕೊಂಡ ಅವರು, ಆರ್ಥಿಕ ಮತ್ತು ಅಭಿವೃದ್ಧಿ ಪಾಲುದಾರಿಕೆ, ಇಂಧನ, ಭದ್ರತೆ, ಡಿಜಿಟಲ್ ಸಂಪರ್ಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಪರಿವರ್ತಕ ಸಂಬಂಧವನ್ನು ಮತ್ತಷ್ಟು ಉತ್ತಮಗೊಳಿಸಲು ಶ್ರಮಿಸುವುದಾಗಿ ಹೇಳಿದರು.

*****
 



(Release ID: 2023139) Visitor Counter : 30