ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ದೂರದರ್ಶನವು ಟಿ20 ವಿಶ್ವಕಪ್ ಕ್ರಿಕೆಟ್‌ ಪಂದ್ಯಗಳನ್ನು ಪ್ರಸಾರ ಮಾಡಲಿದೆ


ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಮತ್ತು ಪ್ರಸಾರ ಭಾರತಿ ಅಧ್ಯಕ್ಷ ಶ್ರೀ ನವನೀತ್ ಕುಮಾರ್ ಸೆಹಗಲ್ ಅವರು ಟಿ20 ವಿಶ್ವಕಪ್‌ ವಿಶೇಷ ಗೀತೆ ಮತ್ತು ಪ್ರೋಮೋವನ್ನು ಬಿಡುಗಡೆ ಮಾಡಿದರು

ದೂರದರ್ಶನ ಪ್ಯಾರಿಸ್ ಒಲಿಂಪಿಕ್ಸ್ 2024 ಮತ್ತು ವಿಂಬಲ್ಡನ್ 2024 ಸೇರಿದಂತೆ ಪ್ರಮುಖ ಜಾಗತಿಕ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಪ್ರಸಾರ ಮಾಡುತ್ತದೆ

Posted On: 03 JUN 2024 6:47PM by PIB Bengaluru

ಜೂನ್ 2 ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದಲ್ಲಿ ಆಯೋಜಿಸಲಾಗುತ್ತಿರುವ ಟಿ20 ವಿಶ್ವಕಪ್ ಕ್ರಿಕೆಟ್‌ ಪಂದ್ಯಗಳನ್ನು ಡಿಡಿ ಫ್ರೀ ಡಿಶ್ ವೇದಿಕೆಯಲ್ಲಿ ಪ್ರಸಾರ ಮಾಡುವುದಾಗಿ ಪ್ರಸಾರ ಭಾರತಿ ಇಂದು ಘೋಷಿಸಿದೆ. ದೂರದರ್ಶನವು ಟಿ20 ವಿಶ್ವಕಪ್‌ ನೊಂದಿಗೆ ಹಲವಾರು ಪ್ರಮುಖ ಜಾಗತಿಕ ಅಂತಾರಾಷ್ಟ್ರೀಯ ಕ್ರೀಡಾಕೂಟಗಳ ಪ್ರಸಾರದ ಸರಣಿಯನ್ನು ಸಹ ಹೊಂದಿದೆ. ಇದು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ 2024 (26 ಜುಲೈ-11 ಆಗಸ್ಟ್ 2024), ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟ (28 ಆಗಸ್ಟ್- 8 ಸೆಪ್ಟೆಂಬರ್ 2024), ಭಾರತ Vs ಜಿಂಬಾಬ್ವೆ (6 ಜುಲೈ -1 ಜುಲೈ 2024) ಮತ್ತು ಭಾರತ Vs ಶ್ರೀಲಂಕಾ (27ನೇ ಜುಲೈ -7 ಆಗಸ್ಟ್ 2024) ನಡುವಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯ ನೇರಪ್ರಸಾರ/ ಮುಂದೂಡಲ್ಪಟ್ಟ ನೇರಪ್ರಸಾರ ಮತ್ತು ಮುಖ್ಯಾಂಶಗಳನ್ನು ಒಳಗೊಂಡಿದೆ. ಫ್ರೆಂಚ್ ಓಪನ್ 2024 ಮಹಿಳೆಯರ ಮತ್ತು ಪುರುಷರ ಫೈನಲ್‌ ಪಂದ್ಯಗಳು (8ನೇ ಮತ್ತು 9ನೇ ಜೂನ್ 2024) ಮತ್ತು ವಿಂಬಲ್ಡನ್ 2024 ಮಹಿಳೆಯರ ಮತ್ತು ಪುರುಷರ ಫೈನಲ್‌ ಪಂದ್ಯಗಳನ್ನು (13ನೇ ಮತ್ತು 14ನೇ ಜುಲೈ 2024) ಪ್ರಸಾರ ಮಾಡಲಾಗುವುದು.

ಇಂದು ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಸಾರ ಭಾರತಿ ಸಿಇಒ ಶ್ರೀ ಗೌರವ್ ದ್ವಿವೇದಿ ಈ ಘೋಷಣೆ ಮಾಡಿದರು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ಪ್ರಸಾರ ಭಾರತಿ ಅಧ್ಯಕ್ಷ ಶ್ರೀ ನವನೀತ್ ಕುಮಾರ್ ಸೆಹಗಲ್, ಪ್ರಸಾರ ಭಾರತಿ ಸಿಇಒ ಶ್ರೀ ಗೌರವ್ ದ್ವಿವೇದಿ ಮತ್ತು ದೂರದರ್ಶನದ ಮಹಾನಿರ್ದೇಶಕಿ ಶ್ರೀಮತಿ ಕಾಂಚನ್ ಪ್ರಸಾದ್ ಅವರು ಶ್ರೀ ಸುಖ್ವಿಂದರ್ ಸಿಂಗ್ ಹಾಡಿರುವ ಟಿ20 ವಿಶ್ವಕಪ್ ವಿಶೇಷ ಗೀತೆ 'ಜಜ್ಬಾ' ಅನ್ನು ಬಿಡುಗಡೆ ಮಾಡಿದರು. ಕಾರ್ಯದರ್ಶಿಯವರು ಪ್ರಸಿದ್ಧ ಕಥೆಗಾರ ಶ್ರೀ ನೀಲೇಶ್ ಮಿಶ್ರಾ ಅವರ ಧ್ವನಿಯಲ್ಲಿ ನಿರೂಪಿಸಿದ ಗಾಲಾ ಟಿ20 ಕಾರ್ಯಕ್ರಮದ ಪ್ರೋಮೋವನ್ನು ಸಹ ಬಿಡುಗಡೆ ಮಾಡಿದರು.
ದೂರದರ್ಶನವು ಡಿಡಿ ಕ್ರೀಡಾ ಚಾನೆಲ್‌ ನಲ್ಲಿ ಕಂಟೆಂಟ್ ಪ್ರದರ್ಶಿಸಲು NBA ಮತ್ತು PGTA ಯಂತಹ ಪ್ರಮುಖ ಜಾಗತಿಕ ಕ್ರೀಡಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂಬುದು ಗಮನಾರ್ಹವಾಗಿದೆ. NBA ಯ ಜನಪ್ರಿಯ ಇ-ಸ್ಪೋರ್ಟ್ಸ್ ಪ್ರಾಪರ್ಟಿ NBA 2K ಲೀಗ್ ಪಂದ್ಯಗಳನ್ನು ಡಿಡಿ ಸ್ಪೋರ್ಟ್ಸ್ ಚಾನೆಲ್‌ ನಲ್ಲಿ ಪ್ರಸಾರ ಮಾಡಲಾಗುತ್ತದೆ.

ಪ್ರಸಾರ ಭಾರತಿ ತನ್ನ ಕ್ರೀಡಾ ಚಾನೆಲ್‌ ನಲ್ಲಿ ವಿವಿಧ ಕ್ರೀಡಾ ಲೀಗ್‌ ಗಳು ಮತ್ತು ಕಾರ್ಯಕ್ರಮಗಳನ್ನು ಪ್ರದರ್ಶಿಸಲು ವಿವಿಧ ಕ್ರೀಡಾ ಸಂಸ್ಥೆಗಳು ಮತ್ತು ಏಜೆನ್ಸಿಗಳೊಂದಿಗೆ ಮಾತುಕತೆಯ ಮುಂದುವರಿದ ಹಂತಗಳಲ್ಲಿದೆ. ನಾವು ಈ ಪಾಲುದಾರಿಕೆಗಳು ದೃಢಪಟ್ಟಾಗ ಮಾಧ್ಯಮಗಳಿಗೆ ತಿಳಿಸಲಾಗುವುದು.

ಮಂಗಳವಾರದ ಮತ ಎಣಿಕೆ ಪ್ರಕ್ರಿಯೆಗಾಗಿ ದೂರದರ್ಶನ ಮತ್ತು ಆಕಾಶವಾಣಿ ಮಾಡಿರುವ ವಿಸ್ತೃತ ವ್ಯವಸ್ಥೆಗಳ ಬಗ್ಗೆ ಶ್ರೀ ಗೌರವ್ ದ್ವಿವೇದಿ ಅವರು ತಿಳಿಸಿದರು.

ಕಳೆದ ವರ್ಷದಲ್ಲಿ, ಡಿಡಿ ಸ್ಪೋರ್ಟ್ಸ್ ದೇಶಾದ್ಯಂತದ ಹಲವಾರು ಬಹು ಕ್ರೀಡಾಕೂಟಗಳನ್ನು ನಿರ್ಮಿಸಿ ಪ್ರಸಾರ ಮಾಡಿತು. ಇದರಲ್ಲಿ ಅಷ್ಟಲಕ್ಷ್ಮಿ (ಈಶಾನ್ಯದ ಎಂಟು ರಾಜ್ಯಗಳು)ಯ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ, ತಮಿಳುನಾಡಿನ ಖೇಲೋ ಇಂಡಿಯಾ ಯುವ ಕ್ರೀಡಾಕೂಟ, ಗೋವಾದ ರಾಷ್ಟ್ರೀಯ ಕ್ರೀಡಾಕೂಟ, ನವದೆಹಲಿಯಲ್ಲಿ ನಡೆದ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ ನ ಉದ್ಘಾಟನಾ ಆವೃತ್ತಿ ಮತ್ತು ಗುಲ್ಮಾರ್ಗ್ ಮತ್ತು ಲೇಹ್‌ ನಲ್ಲಿ ನಡೆದ ಖೇಲೋ ಇಂಡಿಯಾ ಚಳಿಗಾಲ ಕ್ರೀಡಾಕೂಟಗಳು ಸೇರಿವೆ. ಡಿಡಿ ಸ್ಪೋರ್ಟ್ಸ್‌ ನಲ್ಲಿ ಪ್ರಸಾರ ಮಾಡುವುದರ ಹೊರತಾಗಿ, ಈ ಕ್ರೀಡಾಕೂಟಗಳ ಪ್ರಸಾರವನ್ನು ದೇಶದ ಪ್ರಮುಖ ಖಾಸಗಿ ಚಾನೆಲ್‌ ಗಳಾದ ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ ಮತ್ತು ಸೋನಿ ನೆಟ್‌ವರ್ಕ್‌ನೊಂದಿಗೆ ಹಂಚಿಕೊಳ್ಳಲಾಯಿತು.

ದೂರದರ್ಶನ ತಂಡವು ಚೀನಾದಲ್ಲಿ ನಡೆದ ಹ್ಯಾಂಗ್‌ಝೌ ಏಷ್ಯನ್ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಗಳ -ಪುರುಷರು ಮತ್ತು ಮಹಿಳಾ ಕ್ರಿಕೆಟ್ ಪಂದ್ಯಗಳು- ವರ್ಲ್ಡ್ ಫೀಡ್ ಅನ್ನು ನಿರ್ಮಾಣ ಮಾಡಿತು. ಡಿಡಿ ತಂಡವು ತಯಾರಿಸಿದ ವರ್ಲ್ಡ್ ಫೀಡ್ ಅನ್ನು ಏಷ್ಯಾದ ಹಲವಾರು ದೇಶಗಳಲ್ಲಿ ಪ್ರಸಾರ ಮಾಡಲಾಯಿತು.

2023ರ ಆಗಸ್ಟ್‌ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ದೂರದರ್ಶನ ಎಲ್ಲಾ ವೇದಿಕೆಗಳ ದೂರದರ್ಶನ ಹಕ್ಕುಗಳನ್ನು ಹೊಂದಿತ್ತು. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ವೀಕ್ಷಕ ವಿವರಣೆಯ ಹೊರತಾಗಿ, ಸರಣಿಯಲ್ಲಿ ಆಡಿದ ಸೀಮಿತ ಓವರ್‌ ಗಳ ಪಂದ್ಯಗಳ ಫೀಡ್ ಅನ್ನು ಭೋಜಪುರಿ, ತಮಿಳು, ತೆಲುಗು, ಬೆಂಗಾಲಿ ಮತ್ತು ಕನ್ನಡದಂತಹ ಪ್ರಾದೇಶಿಕ ಭಾಷೆಗಳಲ್ಲಿಯೂ ನಿರ್ಮಿಸಲಾಯಿತು ಮತ್ತು ದೂರದರ್ಶನ ಜಾಲದ ವಿವಿಧ ಪ್ರಾದೇಶಿಕ ಚಾನೆಲ್‌ ಗಳಲ್ಲಿ ಅವುಗಳನ್ನು ಪ್ರಸಾರ ಮಾಡಲಾಯಿತು.

ದೂರದರ್ಶನವು ಡಿಡಿ ಕ್ರೀಡಾ ಚಾನೆಲ್‌ ನಲ್ಲಿ ಕಂಟೆಂಟ್ ಪ್ರದರ್ಶಿಸಲು NBA ಮತ್ತು PGTA ಯಂತಹ ಪ್ರಮುಖ ಜಾಗತಿಕ ಕ್ರೀಡಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. NBA ಯ ಜನಪ್ರಿಯ ಇ-ಸ್ಪೋರ್ಟ್ಸ್ ಪ್ರಾಪರ್ಟಿ NBA 2K ಲೀಗ್ ಪಂದ್ಯಗಳನ್ನು ಡಿಡಿ ಸ್ಪೋರ್ಟ್ಸ್ ಚಾನೆಲ್‌ ನಲ್ಲಿ ಪ್ರಸಾರ ಮಾಡಲಾಗುತ್ತದೆ.

ದೂರದರ್ಶನ ನೆಟ್‌ವರ್ಕ್ ತನ್ನ ಡಿಡಿ ಫ್ರೀ ಡಿಶ್ ಪ್ಲಾಟ್‌ಫಾರ್ಮ್ ನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದಲ್ಲಿ ಮುಂಬರುವ ಟಿ20 ವಿಶ್ವಕಪ್‌ ನಿಂದ (2024 ಜೂನ್ 2 ರಿಂದ 29 ಜೂನ್ 2024 ರವರೆಗೆ), ಸಾರ್ವಜನಿಕ ಪ್ರಸಾರ ಸಂಸ್ಥೆಯಾದ ಪ್ರಸಾರ ಭಾರತಿಯು ತನ್ನ ಮುಂದಿನ ಪಯಣದಲ್ಲಿ ಮುದ್ರಣ, ಡಿಜಿಟಲ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮವನ್ನು ನಮ್ಮ ಮೌಲ್ಯಯುತ ಪಾಲುದಾರರು ಎಂದು ಪರಿಗಣಿಸುತ್ತದೆ. 

ಡಿಡಿ ಸ್ಪೋರ್ಟ್ಸ್‌ ಚಾನೆಲ್‌ ಅನ್ನು ಇಲ್ಲಿ ವೀಕ್ಷಿಸಿ

ಟಾಟಾ ಸ್ಕೈ ಚಾನೆಲ್ ಸಂ. 453

ಸನ್ ಡೈರೆಕ್ಟ್ ಚಾನೆಲ್ಸಂ. 510

ಹಾಥ್ವೇ ಚಾನೆಲ್ಸಂ. 189

ಡೆನ್ಚಾನೆಲ್ಸಂ. 425
 

ಏರ್ಟೆಲ್ ಡಿಜಿಟಲ್ ಟಿವಿ ಚಾನೆಲ್ಸಂ. 298

D2H ಚಾನೆಲ್ಸಂ. 435

ಫ್ರೀಡಿಶ್ ಚಾನೆಲ್ಸಂ. 79

ಡಿಶ್ ಟಿವಿ ಚಾನೆಲ್ಸಂ. 435

 

 

 

 

 

 

ಸಾಮಾಜಿಕ ಮಾಧ್ಯಮದಲ್ಲಿ ಡಿಡಿ ಸ್ಪೋರ್ಟ್ಸ್ಚಾನೆಲ್ಫಾಲೋ ಮಾಡಿ
 

TWITTER- @ddsportschannel

FACEBOOK- Doordarshansports

Instagram- doordarshansports

 

 

*****


(Release ID: 2022707) Visitor Counter : 76