ಚುನಾವಣಾ ಆಯೋಗ

2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ, ಎಲ್ಲಾ ಅರ್ಹ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ದೇಶದಾದ್ಯಂತ ಜಾರಿಗೆ ತರಲಾಗಿದೆ


ಚುನಾವಣಾ ಆಯೋಗದ   ಪ್ರಯತ್ನಗಳು ವೃದ್ಧರು, ವಿಶೇಷಚೇತನರು, ತೃತೀಯಲಿಂಗಿಗಳು ಮತ್ತು ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳಿಗೆ (ಪಿವಿಟಿಜಿ) ಸೇರಿದ  ಮತದಾರರಿಗೆ ಅನುಕೂಲವಾಗಿವೆ

ಇಸಿಐ ಸಕ್ಷಮ್ ಆ್ಯಪ್  ವಿಶೇಷಚೇತನ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅನುಕೂಲ ಮಾಡಿಕೊಡುತ್ತದೆ

ದುರ್ಬಲ ಸಮುದಾಯದವರಿಂದ   ಸುಲಭ ಲಭ್ಯತೆ ಮತ್ತು ಒಳಗೊಳ್ಳುವಿಕೆಯ ಕ್ರಮಗಳೊಂದಿಗೆ ಮತದಾನ ಪ್ರಕ್ರಿಯೆಯಲ್ಲಿ ವಿಶ್ವಾಸದಿಂದ ಮತ ಚಲಾಯಿಸಲಾಗುತ್ತದೆ

Posted On: 29 MAY 2024 2:43PM by PIB Bengaluru

ಭಾರತೀಯ ಚುನಾವಣಾ ಆಯೋಗವು 2024 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಯಾವುದೇ ಅರ್ಹ ಮತದಾರರು ಭೌತಿಕ ಅಥವಾ ಇತರ ಅಡೆತಡೆಗಳ ಕಾರಣದಿಂದಾಗಿ ಅವರ ಮತದಾನದ ಹಕ್ಕನ್ನು ವಂಚಿತರಾಗಬಾರದು  ಎನ್ನುವುದನ್ನು   ಖಚಿತಪಡಿಸಿಕೊಳ್ಳಲು   ಮಹತ್ವದ ಕ್ರಮಗಳನ್ನು  ಕೈಗೊಂಡಿದೆ.. ಇಲ್ಲಿಯವರೆಗೆ, 6 ಹಂತದ ಚುನಾವಣೆಗಳು ಮುಕ್ತಾಯಗೊಂಡ ನಂತರ, ವಿಶೇಷಚೇತನರು, ಹಿರಿಯ ನಾಗರಿಕರು, ತೃತೀಯ ಲಿಂಗಿಗಳು, ದುರ್ಬಲ ಬುಡಕಟ್ಟು ಗುಂಪುಗಳತಹ ವಿವಿಧ ವಿಭಾಗಗಳ ಮತದಾರರಲ್ಲಿ ಅಪಾರ ಉತ್ಸಾಹ ಕಂಡುಬಂದಿದೆ.  85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು 40% ಅಂಗವೈಕಲ್ಯ ಹೊಂದಿರುವ ವಿಶೇಷಚೇತನರಿಗೆ ಮನೆಯಲ್ಲೇ ಕುಳಿತು ಮತದಾನ ಮಾಡುವ ಸೌಲಭ್ಯವನ್ನು 2024 ರ ಸಾರ್ವತ್ರಿಕ ಚುನಾವಣೆಗಳಲ್ಲಿ  ಅಖಿಲ ಭಾರತದ ಆಧಾರದ ಮೇಲೆ ಮೊದಲ ಬಾರಿಗೆ ವಿಸ್ತರಿಸಲಾಗಿದೆ.

 

ತಿರುವೂರು ಕ್ಷೇತ್ರದ ಮತಗಟ್ಟೆಯಲ್ಲಿ ಲಂಬಾಡಾ ಬುಡಕಟ್ಟು, ಗ್ರೇಟ್ ನಿಕೋಬಾರ್‌ನ ಶೋಂಪೆನ್ ಬುಡಕಟ್ಟಿನ  ಜನರು .ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ ಮತ್ತು ಅರುಣಾಚಲ ಪ್ರದೇಶದಲ್ಲಿ ನೈಶಿ ಬುಡಕಟ್ಟು ಜನಾಂಗದವರು

 

ಈ ನಿಟ್ಟಿನಲ್ಲಿ ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್, ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಮತ್ತು ಡಾ. ಸುಖಬೀರ್ ಸಿಂಗ್ ಸಂಧು ನೇತೃತ್ವದಲ್ಲಿ ದೇಶಾದ್ಯಂತ ನಡೆದ ಸಂಘಟಿತ ಪ್ರಯತ್ನಗಳು ಲೋಕಸಭೆ ಚುನಾವಣೆ – 2024ರ 6 ನೇ ಹಂತದವರೆಗೆ ಚುನಾವಣೆ ಪೂರ್ಣಗೊಂಡ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಅನೇಕ ಯಶಸ್ಸನ್ನು ಕಂಡಿವೆ.   ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, “ಜಾಗತಿಕವಾಗಿ ಹೊಸ ಮಾನದಂಡಗಳನ್ನು ಹೊಂದುವ ಚುನಾವಣಾ ಪ್ರಕ್ರಿಯೆಗಳಲ್ಲಿ ನಿರಂತರ ಸುಧಾರಣೆಗಾಗಿ ಶ್ರಮಿಸುವುದು ಆಯೋಗದ  ಬಲವಾದ ಸಂಕಲ್ಪವಾಗಿದೆ. ನಮ್ಮ ದೇಶದ ಹೆಮ್ಮೆಯ ಬಹುತ್ವ ಮತ್ತು ವೈವಿಧ್ಯತೆಯ ಮನೋಭಾವವನ್ನು ನಿಜವಾಗಿಯೂ ಪ್ರತಿಬಿಂಬಿಸುವ ಚುನಾವಣೆಗಳನ್ನು ನಡೆಸಲು  ಆಯೋಗವು ನಿರ್ಧರಿಸಿದೆ. ಆಯೋಗವನ್ನು ಸಂಪೂರ್ಣ ಚುನಾವಣಾ ಪ್ರಕ್ರಿಯೆಯ ಉದ್ದಕ್ಕೂ ಒಳಗೊಳ್ಳುವಿಕೆ ಮತ್ತು ಸುಲಭ ಲಭ್ಯತೆಯ ತತ್ವಗಳು ಮತ್ತು ಅಭ್ಯಾಸಗಳನ್ನು ಸಂಯೋಜಿಸಲು ಮತ್ತು ಆಳವಾಗಿ ಸಂಯೋಜಿಸಲು ಸಮರ್ಪಿಸಲಾಗಿದೆ, ಎಲ್ಲೆಡೆ ಸಮಾಜದ ಮುಂದೆ ಅನುಕರಣೀಯವಾಗುವಂತೆ ಮಾಡಲಾಗಿದೆ.

 

ಅರುಣಾಚಲ ಪ್ರದೇಶದಲ್ಲಿ ತಮ್ಮ ಮತ ಚಲಾಯಿಸಲು ಹಿರಿಯ ನಾಗರಿಕ ಮತದಾರರೊಬ್ಬರು ಹೋಗುತ್ತಿರುವುದು.

 

ಮತದಾರರ ಪಟ್ಟಿಯಲ್ಲಿ ಅರ್ಹ ನಾಗರಿಕರ ನವೀಕರಣ ಮತ್ತು ನೋಂದಣಿಯ ಸಂಘಟಿತ ಪ್ರಯತ್ನಗಳೊಂದಿಗೆ ಎರಡು ವರ್ಷಗಳ ಹಿಂದೆ ಸಿದ್ಧತೆಗಳು ಪ್ರಾರಂಭವಾದವು. ಈ ವರ್ಗದ ಮತದಾರರನ್ನು ಗುರಿಯಾಗಿಸಿಕೊಂಡು ವಿಶೇಷ ನೋಂದಣಿ ಅಭಿಯಾನಗಳು, ಶಿಬಿರಗಳನ್ನು ನಡೆಸುವ ಮೂಲಕ ಇದನ್ನು ಸಾಧಿಸಲಾಗಿದೆ. ಮತದಾನದ ಹಕ್ಕಿನಿಂದ ವಂಚಿತರಾಗುವ ಸಮುದಾಯಗಳ ನಡುವೆ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಚುನಾವಣಾ ಆಯೋಗವು ಬಹುಮುಖಿ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ.

ಐಚ್ಛಿಕ ಮನೆಯಿಂದ ಮತದಾನ ಸೌಲಭ್ಯ:  ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆಯಿತು 

ಐಚ್ಛಿಕ ಮನೆಯಿಂದ ಮತದಾನದ ಸೌಲಭ್ಯವು ಚುನಾವಣಾ ಪ್ರಕ್ರಿಯೆಯಲ್ಲಿ ಒಂದು ಮಾದರಿ ಬದಲಾವಣೆಯನ್ನು ಸೂಚಿಸುತ್ತದೆ ಮತ್ತು ಭಾರತದ ಸಾರ್ವತ್ರಿಕ ಚುನಾವಣೆಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಲಭ್ಯವಾಗುವಂತೆ ಮಾಡಲಾಗಿದೆ. 85 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅಥವಾ 40%   ಅಂಗವೈಕಲ್ಯ ಹೊಂದಿರುವ ಯಾವುದೇ ಅರ್ಹ ನಾಗರಿಕರು ಈ ಚುನಾವಣೆಗಳಲ್ಲಿ ಅಂಚೆ ಮತಪತ್ರದ ಮೂಲಕ ಮನೆಯಿಂದ ಮತದಾನದ ಸೌಲಭ್ಯವನ್ನು ಪಡೆಯಬಹುದು. ಈ ಸೌಲಭ್ಯಕ್ಕೆ ಮತದಾರರಿಂದ ಉತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಮುಗುಳುನಗುತ್ತಿರುವ ಮತದಾರರು ಮತ್ತು ಅವರ ಸಾಕ್ಷಿಗಳು ತಮ್ಮ ಮನೆಯ ಸೌಕರ್ಯದಿಂದ ಮತ ಚಲಾಯಿಸುವ ತೃಪ್ತಿಕರ ದೃಶ್ಯಗಳು ದೇಶದ ಎಲ್ಲಾ ಭಾಗಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತುಂಬಿವೆ. ಮತದಾನದ ಗೌಪ್ಯತೆಯನ್ನು ಶ್ರದ್ಧೆಯಿಂದ ನಿರ್ವಹಿಸುವುದರೊಂದಿಗೆ ಮತಗಟ್ಟೆ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯ ಪೂರ್ಣ ಪ್ರಮಾಣದ ಒಳಗೊಳ್ಳುವಿಕೆಯೊಂದಿಗೆ ಮನೆಯಿಂದಲೇ ಮತದಾನ ನಡೆಯುತ್ತದೆ.  ಪ್ರಕ್ರಿಯೆಗೆ ಸಾಕ್ಷಿಯಾಗಲು ಅಭ್ಯರ್ಥಿಗಳ ಏಜೆಂಟರಿಗೆ ಮತದಾನ ತಂಡಗಳೊಂದಿಗೆ ಹೋಗಲು ಅವಕಾಶವಿದೆ.

 

ಶ್ರೀಮತಿ. ಡಿ. ಪದ್ಮಾವತಿ, 100 ವರ್ಷ, ಕೊವ್ವೂರು ಕ್ಷೇತ್ರದಿಂದ ಮತ್ತು ಅರುಣಾಚಲ ಪ್ರದೇಶದಿಂದ ಒಬ್ಬ ಹಿರಿಯ ನಾಗರಿಕ ಮತದಾರರು

ರಾಜಸ್ಥಾನದ ಚುರುದಲ್ಲಿ ಒಂದೇ ಕುಟುಂಬದ ಎಂಟು ವಿಶೇಷ ಚೇತನ ಸದಸ್ಯರು ಮನೆಯಿಂದಲೇ ಮತದಾನದ  ಸೌಲಭ್ಯವನ್ನು ಪಡೆಯುತ್ತಿರುವುದು.

ಅಡೆತಡೆಗಳ ನಿವಾರಣೆ: ಉತ್ತಮ ಭಾಗವಹಿಸುವಿಕೆಗಾಗಿ ಮೂಲಸೌಕರ್ಯ ಅಗತ್ಯತೆಗಳಿಗೆ ಆದ್ಯತೆ  

ಯಾವುದೇ ಮೂಲಸೌಕರ್ಯದ ತೊಂದರೆಗಳನ್ನು ನಿವಾರಿಸಲು, ಪ್ರತಿ ಮತಗಟ್ಟೆಯು ನೆಲ ಮಹಡಿಯಲ್ಲಿರುವುದು, ಇಳಿಜಾರುಗಳು, ಮತದಾರರಿಗೆ ಫಲಕಗಳು, ವಾಹನ ನಿಲ್ದಾಣಕ್ಕೆ ಸ್ಥಳ, ಪ್ರತ್ಯೇಕ ಸರತಿ ಸಾಲುಗಳು ಮತ್ತು ಸ್ವಯಂಸೇವಕರು ಸೇರಿದಂತೆ ಖಚಿತವಾದ ಸೌಕರ್ಯಗಳನ್ನು ಹೊಂದಿದೆ ಎನ್ನುವುದನ್ನು ಭಾರತೀಯ ಚುನಾವಣಾ ಆಯೋಗವು ಖಾತ್ರಿಪಡಿಸಿಕೊಂಡಿದೆ. ಹೆಚ್ಚುವರಿಯಾಗಿ,  ಚುನಾವಣಾ ಆಯೋಗದ SAKSHAM ಅಪ್ಲಿಕೇಶನ್  ಮತದಾನ ಕೇಂದ್ರದಲ್ಲಿ  ಗಾಲಿ ಕುರ್ಚಿಗಳು, ಪಿಕ್-ಅಂಡ್-ಡ್ರಾಪ್ ಮತ್ತು ಸ್ವಯಂಸೇವಕರ ಸೇವೆಗಳಂತಹ ವಿವಿಧ ಸೌಲಭ್ಯಗಳನ್ನು ಪಡೆಯಲು ವಿಶೇಷಚೇತನರಿಗೆ ಅನುಕೂಲ ಕಲ್ಪಿಸಿದೆ. ಚುನಾವಣೆ ಘೋಷಣೆಯಾದ ನಂತರ ಸಕ್ಷಮ್ ಆ್ಯ ಪ್‌ನ 1.78 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ ಗಳು ಆಗಿವೆ.

ಇವಿಎಂಗಳಲ್ಲಿ ಬ್ರೈಲ್ ಲಿಪಿ, ಬ್ರೈಲ್  ಮತದಾರ ಗುರುತಿನ ಚೀಟಿ  ಮತ್ತು ವೋಟರ್ ಸ್ಲಿಪ್‌ಗಳನ್ನು  ಅಂದ ಮತದಾರರಿಗೆ ಸಹಾಯ ಮಾಡಲು ಆಯೋಗವು  ಅನುಕೂಲ  ಮಾಡಿದೆ. ಇದಲ್ಲದೆ,  ವಿಶೇಷಚೇತನರು ಮತ್ತು ಹಿರಿಯ ನಾಗರಿಕರಿಗಾಗಿ ಮತದಾರರ ಮಾರ್ಗದರ್ಶಿ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ, ಮತದಾನದ ದಿನದ ಅನುಕೂಲಕ್ಕಾಗಿ ನೋಂದಣಿ ಪ್ರಕ್ರಿಯೆಯ ಮಾಹಿತಿಯು ಲಭ್ಯವಾಗುವಂತೆ ಮಾಡಲಾಯಿತು.

 


ಮಧ್ಯಪ್ರದೇಶ, 70  ಅಂದ ಬಾಲಕಿಯರಿಗೆ ಮತ ಚಲಾಯಿಸಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಯಿತು.

J&K ಜಮ್ಮು ಮತ್ತು ಕಾಶ್ಮೀರದಲ್ಲಿ  ಮತಗಟ್ಟೆಯನ್ನು ನಿರ್ವಹಿಸಿದ ವಿಶೇಷ ಚೇತನರು

 

Photos: Braille-coded voter cards distributed to visually impaired electors  | Hindustan Times

ಬ್ರೈಲ್  ಮತದಾರ ಗುರುತಿನ ಚೀಟಿ ,  ವೋಟರ್ ಗೈಡ್, ಬಿಹಾರದ ಮತಗಟ್ಟೆಯಲ್ಲಿ ಸ್ವಯಂಸೇವಕರು ಮತ್ತು ಒಡಿಶಾದ ಮತದಾನ ಕೇಂದ್ರದಲ್ಲಿ ಶಾಮಿಯಾನ

 

ಉತ್ಸಾಹದಲ್ಲಿ ಒಳಗೊಳ್ಳುವಿಕೆ: ಮತದಾನಕ್ಕೆ ಮಾನಸಿಕ ಅಡೆತಡೆಗಳನ್ನು ತೆಗೆದುಹಾಕುವುದು

ಮತದಾನಕ್ಕೆ ದೈಹಿಕ ಅಡೆತಡೆಗಳನ್ನು ನಿರ್ಮೂಲನೆ ಮಾಡುವುದರ ಜೊತೆಗೆ, ಚುನಾವಣಾ ಪ್ರಕ್ರಿಯೆಯಲ್ಲಿ ಅವರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ತೃತೀಯ ಲಿಂಗಿಗಳು, ಲೈಂಗಿಕ ಕಾರ್ಯಕರ್ತರು, ವಿಶೇಷ ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ) ಗಳಿಗೆ ಸೇರಿದ  ಕೆಲವರ ಸುತ್ತಲಿನ ಸಾಮಾಜಿಕ ಅಡೆತಡೆಗಳು ಮತ್ತು ಕಳಂಕಗಳನ್ನು ಪರಿಹರಿಸಲು ಚುನಾವಣಾ ಆಯೋಗವು ವಿಶೇಷ ಪ್ರಯತ್ನಗಳನ್ನು ಮಾಡಿದೆ.  ನಾಗರಿಕ ಸಮಾಜದ ಸಹಯೋಗದೊಂದಿಗೆ ಥಾಣೆ ಜಿಲ್ಲೆಯಿಂದ ತೃತೀಯ ಲಿಂಗಿಗಳು ಮತ್ತು ಲೈಂಗಿಕ ಕಾರ್ಯಕರ್ತರು ಮತ್ತು ಪಿವಿಟಿಜಿಗಳಂತಹ ಇತರ ಅಂಚಿನಲ್ಲಿರುವ ಸಮುದಾಯಗಳನ್ನು ನೋಂದಾಯಿಸಲು ವಿಶೇಷ ಶಿಬಿರಗಳನ್ನು ಏರ್ಪಡಿಸಲಾಗಿದೆ.  ದೇಶಾದ್ಯಂತ 48,260 ತೃತೀಯ ಲಿಂಗಿಗಳು  ನೋಂದಾಯಿಸಿದ್ದಾರೆ, ಅದರಲ್ಲಿ ತಮಿಳುನಾಡು ಅತಿ ಹೆಚ್ಚು ಅಂದರೆ 8467 ತೃತೀಯಲಿಂಗಿ ಮತದಾರರನ್ನು ಹೊಂದಿದೆ, ನಂತರ ಉತ್ತರ ಪ್ರದೇಶದಲ್ಲಿ 6628 ಮತ್ತು ಮಹಾರಾಷ್ಟ್ರದಲ್ಲಿ 5720  ತೃತೀಯಲಿಂಗಿ ಮತದಾರರನ್ನು ಹೊಂದಿದೆ.

 

ಸ್ವೀಪ್‌ (SVEEP) ಉಪಕ್ರಮಗಳ ಭಾಗವಾಗಿ, ಆಯೋಗವು 16ನೇ ಮಾರ್ಚ್ 2024 ರಂದು ಇಂಡಿಯನ್ ಡೆಫ್ ಕ್ರಿಕೆಟ್ ಅಸೋಸಿಯೇಷನ್) ಮತ್ತು ದೆಹಲಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ ತಂಡಗಳ ನಡುವೆ ವಿಶೇಷಚೇತನ ಮತದಾರರಲ್ಲಿ ಮತದಾರರ ಜಾಗೃತಿ ಮೂಡಿಸಲು ಮತ್ತು ಅಂತರ್ಗತ ಚುನಾವಣೆಗಳನ್ನು ಉತ್ತೇಜಿಸಲು ಟಿ-20 ಕ್ರಿಕೆಟ್ ಪಂದ್ಯವನ್ನು ಆಯೋಜಿಸಿತ್ತು.

 

https://static.pib.gov.in/WriteReadData/userfiles/image/1BPQT.jpeg
ಚುನಾವಣಾ ಆಯೋಗದಿಂದ ಟಿ-20 ಪಂದ್ಯದಲ್ಲಿ ವಿಜೇತರಿಗೆ ಟ್ರೋಫಿ ಪ್ರದಾನ ಮಾಡುತ್ತಿರುವುದು

 

ಪ್ರತಿ  ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷಚೇತನ ಅಧಿಕಾರಿಗಳು ನಿರ್ವಹಿಸುವ ಕನಿಷ್ಠ ಒಂದು ಮತಗಟ್ಟೆಯನ್ನು ಸ್ಥಾಪಿಸಲು ಆಯೋಗದಿಂದ  ಸಾಧ್ಯವಾಗುವ ಮಟ್ಟಿಗೆ ಪ್ರಯತ್ನಗಳನ್ನು ಮಾಡಲಾಯಿತು. ಲೋಕಸಭೆ ಚುನಾವಣೆ -2024 ಕ್ಕಾಗಿ, ದೇಶದಾದ್ಯಂತ ಸುಮಾರು 2697 ವಿಶೇಷಚೇತನರು ನಿರ್ವಹಿಸಿದ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ, ಆಯೋಗವು ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು  302 ವಿಶೇಷಚೇತನರು ನಿರ್ವಹಿಸಿದ ಮತದಾನ ಕೇಂದ್ರಗಳನ್ನು ಸ್ಥಾಪಿಸಿದೆ.

 

ದುರ್ಬಲ ಸಮುದಾಯಗಳಿಗೆ ನೋಂದಣಿ ಮತ್ತು ಮತದಾನವನ್ನು ಸುಲಭಸಾಧ್ಯಗೊಳಿಸುವುದು

ವಸತಿರಹಿತರು ಮತ್ತು ಇತರ ಅಲೆಮಾರಿ ಗುಂಪಿನವರು ಹೆಚ್ಚಾಗಿ ಮತದಾನದಲ್ಲಿ ಭಾಗವಹಿಸುವಿಕೆಯನ್ನು ಸಾಧಿಸುವಲ್ಲಿ ಮತ್ತೊಂದು ನಿರ್ಣಾಯಕ ಜನರಾಗಿದ್ದಾರೆ. ಅವರ ವಿಶಿಷ್ಟ ಸನ್ನಿವೇಶಗಳ ಕಾರಣದಿಂದಾಗಿ, ಈ ಜನರು ಮನೆ ನಿವಾಸದ ಪುರಾವೆಯ ಕೊರತೆಯಿಂದಾಗಿ ಮತದಾನದಿಂದ ಉದ್ದೇಶಪೂರ್ವಕವಾಗಿಲ್ಲದೆ ವಂಚಿತರಾಗಬಹುದು. ಆದರೂ, ಕಳೆದ ಎರಡು ವರ್ಷಗಳಲ್ಲಿ ಅವರನ್ನು ಮತದಾರರಾಗಿ ನೋಂದಾಯಿಸಲು ಮತ್ತು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ವಿಶೇಷ ಪ್ರಯತ್ನಗಳನ್ನು ಮಾಡಲಾಗಿದೆ. ಹಿಂದೆ ಪ್ರವೇಶಿಸಲಾಗದ ಪ್ರದೇಶಗಳಲ್ಲಿ ಹೊಸ ಮತಗಟ್ಟೆಗಳ ಸ್ಥಳವು ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ)ಗಳ  ದೊಡ್ಡ ಪ್ರಮಾಣದ ಸೇರ್ಪಡೆಗೆ ಕಾರಣವಾಗಿದೆ.  ದುರ್ಬಲ ಬುಡಕಟ್ಟು ಸಮದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ದೂರದ ಪ್ರದೇಶಗಳಿಂದ ದುರ್ಬಲ ಬುಡಕಟ್ಟು ಸಮದಾಯದವರು ಮತದಾನ ಕೇಂದ್ರಗಳನ್ನು ತಲುಪಲು ಉಚಿತ ಸಾರಿಗೆ ಸೌಲಭ್ಯಗಳನ್ನು ಒದಗಿಸಲಾಗಿದೆ.  ಗ್ರೇಟ್ ನಿಕೋಬಾರ್‌ನ ಶೋಂಪೆನ್ ಬುಡಕಟ್ಟು ಜನರು ಲೋಕಸಭೆ ಚುನಾವಣೆ -2024 ರಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದರು, ಇದೊಂದು ಐತಿಹಾಸಿಕ ಸಾಧನೆ.

 

ಪಾಲುದಾರಿಕೆ

ಚುನಾವಣಾ ಜಾಗೃತಿಯನ್ನು ಉತ್ತೇಜಿಸಲು ಮತ್ತು ಚುನಾವಣೆಯಲ್ಲಿ ಪಾಲುದಾರಿಕೆ ಮತ್ತು ಸೇರ್ಪಡೆಯ ಮನೋಭಾವವನ್ನು ಹುಟ್ಟುಹಾಕಲು, ಚುನಾವಣಾ ಪ್ರಕ್ರಿಯೆಯಲ್ಲಿ ಸಮುದಾಯವನ್ನು ಮತ್ತಷ್ಟು ತೊಡಗಿಸಿಕೊಳ್ಳಲು ಚುನಾವಣಾ ಆಯೋಗವು ಹನ್ನೊಂದು ವಿಶೇಷಚೇತನರನ್ನು "ಇಎಸ್‌ಐ  ರಾಯಭಾರಿಗಳು" ಎಂದು ಗೊತ್ತುಪಡಿಸಿದೆ. ಚುನಾವಣೆಗಳಲ್ಲಿ ಭಾಗವಹಿಸುವಿಕೆ ಮತ್ತು ಮಾಲೀಕತ್ವದ ಪ್ರಜ್ಞೆಯನ್ನು ಅಭಿವೃದ್ಧಿಪಡಿಸಲು ವಿಶೇಷಚೇತನರ ವಿಶೇಷ ಅಗತ್ಯತೆಗಳ ಬಗ್ಗೆ ಮತಗಟ್ಟೆ ಸಿಬ್ಬಂದಿಗೆ ತರಬೇತಿಯನ್ನು ನೀಡಲಾಗುತ್ತದೆ. ವಿಶೇಷಚೇತನರು  ಮತ್ತು ಹಿರಿಯ ನಾಗರಿಕರಿಗೆ ಉತ್ತಮ ಸೌಲಭ್ಯವನ್ನು ಒದಗಿಸುವುದಕ್ಕಾಗಿ ರಾಜ್ಯದ ಸಿಇಒಗಳು ರಾಜ್ಯ ಅಂಗವಿಕಲರು ಮತ್ತು ಸಂಬಂಧಿತ ರಾಜ್ಯಗಳ ಆರೋಗ್ಯ ಇಲಾಖೆಗಳೊಂದಿಗೆ ಸಹ ಸಹಕರಿಸಿದರು.

 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಡಿಇಒ  ನಿಂದ ಗ್ಯಾಂಗ್‌ಟಾಕ್‌ನಲ್ಲಿ ಶಿಬಿರಗಳನ್ನು ಆಯೋಜಿಸಲಾಯಿತು

ಭಾರತೀಯ ಚುನಾವಣಾ ಆಯೋಗದ  ಅಧಿಕಾರಿಗಳ ತಂಡವು ಥಾಣೆ ಜಿಲ್ಲೆ ಮತ್ತು ಮುಂಬೈ ನಗರದ ಕಾಮಾಟಿಪುರಕ್ಕೆ ಭೇಟಿ ನೀಡಿತು. ಈ ಪ್ರದೇಶಗಳಲ್ಲಿ ವಾಸಿಸುವ ತೃತೀಯಲಿಂಗಿ ಮತ್ತು ಮಹಿಳಾ ಲೈಂಗಿಕ ಕಾರ್ಯಕರ್ತರೊಂದಿಗೆ ಮುಕ್ತ ಸಂವಾದವನ್ನು ನಡೆಸಲು, ಈ ಮತದಾರರನ್ನು ಲೋಕಸಭಾ ಚುನಾವಣೆ-2024 ರ ಸಮಯದಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಪ್ರೋತ್ಸಾಹಿಸಲು, ಚುನಾವಣಾ ಭಾಗವಹಿಸುವಿಕೆಯಲ್ಲಿ ಅವರು ಎದುರಿಸುತ್ತಿರುವ ಸವಾಲುಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ಕ್ಷೇತ್ರದ ಸಿಬ್ಬಂದಿಗೆ ಅರಿವು ಮೂಡಿಸುವುದು ಭೇಟಿಯ ಉದ್ದೇಶವಾಗಿತ್ತು.

 

ಲೋಕಸಭೆ ಚುನಾವಣೆಯಲ್ಲಿ 100% ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು  ಮತ್ತು ಪ್ರೋತ್ಸಾಹಿಸಲು.ಥಾಣೆ ಜಿಲ್ಲೆಯಲ್ಲಿ ಎನ್‌ಜಿಒಗಳು ಮತ್ತು ಸಿಎಸ್‌ಒಗಳು ಮತ್ತು ತೃತೀಯಲಿಂಗಿ ಸಮುದಾಯದೊಂದಿಗೆ ಚುನಾವಣಾ ಆಯೋಗದ ತಂಡ   

ಲೋಕಸಭೆ ಚುನಾವಣೆ-2024ರಲ್ಲಿ ತಮ್ಮ ಹಕ್ಕು ಚಲಾಯಿಸಲು ವಿಶೇಷಚೇತನ ಮತದಾರರನ್ನು ಪ್ರೇರೇಪಿಸಲು ಆಯೋಗವು ಶ್ರೀಮತಿ ಶೀತಲ್ ದೇವಿ, ಅರ್ಜುನ ಪ್ರಶಸ್ತಿ ಪುರಸ್ಕೃತ ಮತ್ತು ಪ್ಯಾರಾ ಆರ್ಚರ್ ಅವರನ್ನು ʼಇಸಿಐ  ರಾಷ್ಟ್ರೀಯ ಐಕಾನ್ʼ ಆಗಿ ನೇಮಿಸಿದೆ. ಅಲ್ಲದೆ, ಚುನಾವಣಾ ಆಯೋಗದ ವಿವಿಧ ಮತದಾರರ ಜಾಗೃತಿ ಉಪಕ್ರಮಗಳಲ್ಲಿ ಭಾಗವಹಿಸಲು ಮತ್ತು ವಿಶೇಷಚೇತನ ಮತದಾರರನ್ನು ತಲುಪಲು ಹನ್ನೊಂದು ಪ್ರಮುಖ ವಿಶೇಷಚೇತನ ವ್ಯಕ್ತಿಗಳನ್ನು ಭಾರತೀಯ ಚುನಾವಣಾ ಆಯೋಗದ ರಾಯಭಾರಿಗಳನ್ನಾಗಿ ನೇಮಿಸಲಾಗಿದೆ. ಇದಲ್ಲದೆ, ಆಯೋಗವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ  ʼಇಸಿಐ  ರಾಜ್ಯ ವಿಶೇಷಚೇತನ ಐಕಾನ್ʼ ಗಳನ್ನು ಸಹ ನೇಮಿಸಿದೆ.

 

https://www.newsonair.gov.in/wp-content/uploads/2024/03/para.jpg

ಶ್ರೀಮತಿ ಶೀತಲ್ ದೇವಿ, ರಾಷ್ಟ್ರೀಯ ವಿಶೇಷಚೇತನ ಐಕಾನ್, ಇಸಿಐ  

 

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ಜಾಗೃತಿ ಮೂಡಿಸಲು ವಿಶೇಷಚೇತನ ಮತದಾರರಿಂದ ಗಾಲಿಕುರ್ಚಿ ರ‍್ಯಾಲಿಯನ್ನು ಆಯೋಜಿಸಲಾಗಿತ್ತು ನಡೆಯುತ್ತಿರುವ ಚುನಾವಣೆಗಳಲ್ಲಿ ಪಿವಿಟಿಜಿ ಸಮುದಾಯಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು "ಮತದಾರರಿಗೆ ಮನವಿ ಪತ್ರ" ಸೇರಿದಂತೆ ವ್ಯಾಪಕ ಪ್ರಚಾರವನ್ನು ಪ್ರಾರಂಭಿಸಲಾಯಿತು.

 

ಕಟ್ಟ ಕಡೆಯ ಮತದಾರರನ್ನು ತಲುಪುವುದು

"ಯಾವುದೇ ಮತದಾರರು ಹಿಂದೆ ಉಳಿಯಬಾರದು"  ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಆಯೋಗವು ಬದ್ಧವಾಗಿದೆ ಮತ್ತು ದೇಶದ ದೂರದ ಮೂಲೆಗಳಲ್ಲಿ ವಾಸಿಸುವ ಮತದಾರರನ್ನು ತಲುಪಲು ವಿಶೇಷ ಕ್ರಮಗಳನ್ನು ತೆಗೆದುಕೊಂಡಿದೆ. ಉದಾಹರಣೆಗೆ, ಗುಜರಾತ್‌ನ ಅಲಿಯಾಬೆಟ್‌ನಲ್ಲಿ ವಾಸಿಸುವ ಬುಡಕಟ್ಟು ಮತದಾರರನ್ನು ತಲುಪಲು ಕಂಟೈನರ್‌ನಲ್ಲಿ ಮತದಾನ ಕೇಂದ್ರವನ್ನು ಸ್ಥಾಪಿಸಲಾಯಿತು. ಅದೇ ರೀತಿ, ಛತ್ತೀಸ್‌ಗಢದ ಬಸ್ತಾರ್ ಮತ್ತು ಕಂಕೇರ್ ಪಿಸಿಗಳ 102 ಗ್ರಾಮಗಳ ಮತದಾರರು ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ತಮ್ಮ ಸ್ವಂತ ಗ್ರಾಮದಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

 

ಲಡಾಖ್‌ನ ಲೇಹ್ ಜಿಲ್ಲೆಯ ವರ್ಶಿ ಎಂಬ ದೂರದ ಹಳ್ಳಿಯಲ್ಲಿ ಒಂದು ಕುಟುಂಬದ ಕೇವಲ ಐದು ಸದಸ್ಯರಿಗಾಗಿ ಮತದಾನ ಕೇಂದ್ರ

ಇದಲ್ಲದೆ, 2024 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಶ್ಮೀರದಿಂದ  ವಲಸೆ ಬಂದವರಿಗೆ ಮತದಾನವನ್ನು ಸುಲಭಗೊಳಿಸುವ ಪ್ರಮುಖ ನಿರ್ಧಾರದಲ್ಲಿ, ಜಮ್ಮು ಮತ್ತು ಉಧಮ್‌ಪುರದಲ್ಲಿ ನೆಲೆಸಿರುವ ಕಣಿವೆಯಿಂದ ಸ್ಥಳಾಂತರಗೊಂಡ ಜನರಿಗೆ ಫಾರ್ಮ್-ಎಂ ಅನ್ನು ತುಂಬುವ ತೊಡಕಿನ ವಿಧಾನವನ್ನು ಚುನಾವಣಾ ಆಯೋಗವು ರದ್ದುಗೊಳಿಸಿದೆ. ಹೆಚ್ಚುವರಿಯಾಗಿ, ಜಮ್ಮು ಮತ್ತು ಉಧಮ್‌ಪುರದ ಹೊರಗೆ ವಾಸಿಸುವ ವಲಸಿಗರಿಗೆ (ಇವರು ಫಾರ್ಮ್ ಎಂ ಸಲ್ಲಿಸುವುದನ್ನು ಮುಂದುವರಿಸುತ್ತಾರೆ), ಫಾರ್ಮ್-ಎಂ ಜೊತೆಗೆ ಲಗತ್ತಿಸಲಾದ ಪ್ರಮಾಣಪತ್ರದ ಸ್ವಯಂ-ದೃಢೀಕರಣವನ್ನು ಇಸಿಐ ಅಧಿಕೃತಗೊಳಿಸಿದೆ, ಇದು ಗೆಜೆಟೆಡ್ ಅಧಿಕಾರಿಯಿಂದ ಈ ಪ್ರಮಾಣಪತ್ರವನ್ನು ದೃಢೀಕರಿಸುವುದನ್ನು ತೆಗೆದುಹಾಕತ್ತದೆ. ದೆಹಲಿ, ಜಮ್ಮು ಮತ್ತು ಉಧಂಪುರದ ವಿವಿಧ ಪರಿಹಾರ ಶಿಬಿರಗಳಲ್ಲಿ ನೆಲೆಸಿರುವ ಕಾಶ್ಮೀರಿ ವಲಸಿಗ ಮತದಾರರಿಗೆ ಗೊತ್ತುಪಡಿಸಿದ ವಿಶೇಷ ಮತಗಟ್ಟೆಗಳಲ್ಲಿ ವೈಯಕ್ತಿಕವಾಗಿ ಮತ ಚಲಾಯಿಸಲು ಅಥವಾ ಅಂಚೆ ಮತಪತ್ರವನ್ನು ಬಳಸುವ ಆಯ್ಕೆಯನ್ನು ಆಯೋಗವು ಸಕ್ರಿಯಗೊಳಿಸಿದೆ. ಜಮ್ಮುವಿನಲ್ಲಿ 21, ಉಧಂಪುರದಲ್ಲಿ 1 ಮತ್ತು ದೆಹಲಿಯಲ್ಲಿ 4 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

 

ಕಾಶ್ಮೀರಿ ವಲಸಿಗರು ವಿಶೇಷ ಮತಗಟ್ಟೆಗಳಲ್ಲಿ ಮತ ಚಲಾಯಿಸಿರುವುದು

 

ಅದೇ ರೀತಿ, ಮಣಿಪುರದಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ (ಐಡಿಪಿ)  ಮತದಾನದ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು, 94 ವಿಶೇಷ ಮತಗಟ್ಟೆಗಳನ್ನು (ಎಸ್‌ ಪಿಎಸ್‌) 10 ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದೆ. ಕೇವಲ ಒಬ್ಬ ಮತದಾರನಿಗಾಗಿ ತೆಂಗನೌಪಾಲ್ ಜಿಲ್ಲೆಯಲ್ಲಿ ಒಂದು ಎಸ್‌ಪಿಎಸ್ ಸ್ಥಾಪಿಸಲಾಗಿದೆ. ವೆಬ್‌ಕಾಸ್ಟಿಂಗ್/ವೀಡಿಯೋಗ್ರಫಿ ಅಡಿಯಲ್ಲಿ ಮತದಾನವನ್ನು ನಡೆಸಲಾಯಿತು ಮತ್ತು ಪರಿಹಾರ ಶಿಬಿರಗಳ ಹೊರಗೆ ಇರುವ ಸ್ಥಳಾಂತರಗೊಂಡ ವ್ಯಕ್ತಿಗಳು ಸಹ ವಿಶೇಷ ಮತಗಟ್ಟೆಗಳಲ್ಲಿ  ಮತ ಚಲಾಯಿಸಲು ಆಯ್ಕೆ ಮಾಡುವ ಅವಕಾಶವಿತ್ತು.

 

ಮಣಿಪುರದ ಐಡಿಪಿ  ವಿಶೇಷ ಮತಗಟ್ಟೆಗಳಲ್ಲಿ ಮತ ಚಲಾಯಿಸುತ್ತಿರುವುದು.

*****



(Release ID: 2022172) Visitor Counter : 44