ಚುನಾವಣಾ ಆಯೋಗ
ಕಳೆದ 35 ವರ್ಷಗಳಲ್ಲೇ ಅತ್ಯಧಿಕ ಮತದಾನದ ಮೂಲಕ ಭಾರತದ ಚುನಾವಣಾ ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಜಮ್ಮು ಮತ್ತು ಕಾಶ್ಮೀರ
2019ಕ್ಕೆ ಹೋಲಿಸಿದರೆ ಕಾಶ್ಮೀರ ಕಣಿವೆ ಮತದಾರರ ಪಾಲ್ಗೊಳ್ಳುವಿಕೆಯಲ್ಲಿ 30 ಅಂಶಗಳ ಭಾರೀ ಜಿಗಿತ
ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾನ್ಯ ಚುನಾವಣೆ – 2024 ರಲ್ಲಿ ಮತದಾರರ ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿ ವ್ಯಾಪಕ ಸ್ಪಂದನೆ, ಕೇಂದ್ರಾಡಳಿತ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಸ್ಪಂದನೆಯ ನಿರೀಕ್ಷೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಜನತೆ ಪ್ರಜಾಪ್ರಭುತ್ವವನ್ನು ಸ್ವೀಕರಿಸುತ್ತಾರೆ ಮತ್ತು ಆಡಳಿತದಲ್ಲಿ ತಮ್ಮ ಪಾಲನ್ನು ಪ್ರತಿಪಾದಿಸಲಿದ್ದಾರೆ
Posted On:
27 MAY 2024 2:59PM by PIB Bengaluru
ಭಾರತೀಯ ಚುನಾವಣಾ ನಕಾಶೆಯಲ್ಲಿ ದೇಶ ಬೃಹತ್ ದಾಪುಗಾಲಿಟ್ಟಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 35 ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಮತದಾರರ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಿದೆ. 2024 ರ ಸಾಮಾನ್ಯ ಚುನಾವಣೆಯಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟಾರೆ ಮತದಾನದ ಪ್ರಮಾಣ [ವಿಟಿಆರ್] ಶೇ 58.46 ರಷ್ಟಾಗಿದೆ. ಈ ಮಹತ್ವದ ಭಾಗವಹಿಸುವಿಕೆಯು ಈ ಪ್ರದೇಶದ ಜನರ ದೃಢವಾದ ಪ್ರಜಾಸತ್ತಾತ್ಮಕ ಮನೋಭಾವ ಮತ್ತು ನಾಗರಿಕ ತೊಡಗಿಸಿಕೊಳ್ಳುವಿಕೆಗೆ ಸಾಕ್ಷಿಯಾಗಿದೆ. ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ರಾಜೀವ್ ಕುಮಾರ್ ಅವರ ಸಾರಥ್ಯದಲ್ಲಿ ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಮತ್ತು ಶ್ರೀ ಸುಖ್ಬೀರ್ ಸಿಂಗ್ ಸಂಧು ಅವರ ನೇತೃತ್ವದ ತಂಡ ಕೇಂದ್ರಾಡಳಿತ ಪ್ರದೇಶದಲ್ಲಿ ಸುಗಮವಾಗಿ ಚುನಾವಣೆ ನಡೆಸಿದ ಚುನಾವಣೆ ಮತ್ತು ಭದ್ರತಾ ಸಿಬ್ಬಂದಿಯನ್ನು ಅಭಿನಂದಿಸಿದೆ.
ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಅವರು ಜಮ್ಮು ಮತ್ತು ಕಾಶ್ಮೀರದ ಮತದಾರರಿಗೆ ಚುನಾವಣಾ ಆಯೋಗದಿಂದ ಅಭಿನಂದನೆ ಸಲ್ಲಿಸಿದ್ದಾರೆ. “2019 ಕ್ಕೆ ಹೋಲಿಸಿದರೆ ಚುನಾವಣೆಗೆ ಸ್ಪರ್ಧಿಸುವ ಸದಸ್ಯರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಅಂದರೆ ಶೇ 25 ರಷ್ಟು ಹೆಚ್ಚಳವಾಗಿದೆ. ಚುನಾವಣಾ ಪ್ರಚಾರ ಸಭೆಗಳಿಗೆ ಅನುಮತಿ ಪಡೆಯುವುದು ಮತ್ತು ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಒಟ್ಟಾರೆ 2455 ಅರ್ಜಿಗಳು ಸಿ-ವಿಜಿಲ್ ಮತ್ತು ಸುವಿಧಾ ಪೋರ್ಟಲ್ ನಲ್ಲಿ ಸಲ್ಲಿಕೆಯಾಗಿದೆ. ಚುನಾವಣೆ ಮತ್ತು ಪ್ರಚಾರದ ಸ್ಥಳವನ್ನು ಅಡತಡೆಯಿಂದ ದೂರವಿಟ್ಟು ಪೂರ್ಣ ಪ್ರಮಾಣದ ಪಾಲ್ಗೊಳ್ಳುವಿಕೆಯನ್ನು ಇದು ಪ್ರತಿಬಿಂಬಿಸುತ್ತದೆ. ಪುರಾತನ ಕಾಶ್ಮೀರಿ ಕುಶಲಕರ್ಮಿ ನೇಯ್ಗೆಯ ಖ್ಯಾತಿ ಮತ್ತು ಚತುರತೆಯನ್ನು ನೆನಪಿಸುವಂತೆ ಚುನಾವಣೆಗೆ ಸಜ್ಜುಗೊಳಿಸುವಿಕೆ ಮತ್ತು ಭಾಗವಹಿಸುವಿಕೆಯ ಪದರದ ಆಳದಲ್ಲಿ ಈ ಬೆಳವಣಿಗೆಯನ್ನು ಹೋಲಿಸಲಾಗಿದೆ. ಈ ಸಕ್ರಿಯ ಪಾಲ್ಗೊಳ್ಳುವಿಕೆ ಮೂಲಕ ಬರುವ ವಿಧಾನಸಭಾ ಚುನಾವಣೆಗೆ ಸಕ್ರಿಯ ಬೆಂಬಲ ಮತ್ತು ನಿರಂತರೆತೆಗೆ ಇದು ಸಾಕ್ಷಿಯಾಗಿದೆ” ಎಂದು ಹೇಳಿದ್ದಾರೆ.
ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಶ್ರೀನಗರ್, ಬಾರಾಮುಲ್ಲಾ, ಅನಂತ್ ನಾಗ್ ರಜೌರಿ, ಉದಂಪುರ್ ಮತ್ತು ಜಮ್ಮು ಸೇರಿ ಐದು ಲೋಕಸಭಾ ಕ್ಷೇತ್ರಗಳಿವೆ. ಈ ಐದು ಕ್ಷೇತ್ರಗಳಲ್ಲಿ ಈ ಹಿಂದಿನ ಕೆಲ ಚುನಾವಣೆಗಳಲ್ಲಿ ಒಟ್ಟಾರೆ ಮತದಾನದ ಪ್ರಮಾಣ –ವಿಟಿಆರ್ ಈ ಕೆಳಕಂಡಂತೆ ಇದೆ.
* ಹೋಲಿಕೆಗಾಗಿ ಹಿಂದಿನ ಜಮ್ಮು ಮತ್ತು ಕಾಶ್ಮೀರದ ಭಾಗವಾಗಿದ್ದ ಲಡಾಖ್‌ನ ಲೋಕಸಭಾ ಕ್ಷೇತ್ರವನ್ನು ಹೊರತುಪಡಿಸಲಾಗಿದೆ.
**1996-2019 ರವರೆಗೆ ನಿವ್ವಳ ವಿಟಿಆರ್ ರೇಖೆ: ಮತಗಟ್ಟೆಗಳಲ್ಲಿ 2024 ರ ವಿ.ಟಿ.ಆರ್
ಕಾಶ್ಮೀರ ಕಣಿವೆಯ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಶೇ 50.86 ರಷ್ಟಿದ್ದು, ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಜನರಿಗಿರುವ ನಂಬಿಕೆಯನ್ನು ಇದು ಸಾಕಾರಗೊಳಿಸುತ್ತದೆ. 2019 ರ ಸಾಮಾನ್ಯ ಚುನಾವಣೆಯಲ್ಲಿ ಶೇ 19.16 ರಷ್ಟಿದ್ದು, ಇದಕ್ಕೆ ಹೋಲಿಸಿದರೆ ಈ ಚುನಾವಣೆ 30 ಅಂಶಗಳ ಮತಗಳ ಏರಿಕೆಗೆ ಸಾಕ್ಷಿಯಾಗಿದೆ. ಶ್ರೀನಗರ್, ಬಾರಾಮುಲ್ಲಾ ಮತ್ತು ಅನಂತ್ ನಾಗ್ – ರಜೌರಿಯಲ್ಲಿ ಕ್ರಮವಾಗಿ ವಿಟಿಆರ್ 38.49%, 59.1% ಮತ್ತು 54.84% ರಷ್ಟಿದೆ. ಕಳೆದ ಮೂರು ದಶಕಗಳಲ್ಲೇ ಇದು ಅತ್ಯಧಿಕವಾಗಿದೆ. ಇತರೆ ಎರಡು ಕೇಂದ್ರಾಡಳಿತ ಪ್ರದೇಶದ ಲೋಕಸಭಾ ಕ್ಷೇತ್ರಗಳಾದ ಉದಂಪುರ್ ಮತ್ತು ಜಮ್ಮುವಿನಲ್ಲಿ ಕ್ರಮವಾಗಿ ಅತ್ಯಧಿಕ 68.27% ಮತ್ತು 72.22% ರಷ್ಟು ಮತದಾನವಾಗಿದೆ.
ಸೂಚನೆ: ಕ್ಷೇತ್ರ ಪುನರ್ ವಿಂಗಡಣೆ ಹಿನ್ನೆಲೆಯಲ್ಲಿ ಹಿಂದಿನ ಲೋಕಸಭಾ ಚುನಾವಣೆಗಳಲ್ಲಿ ಆಗಿರುವ ಮತದಾನಕ್ಕೆ ಹೋಲಿಕೆ ಮಾಡಲಾಗದು.
**1996-2019 ರವರೆಗೆ ನಿವ್ವಳ ವಿಟಿಆರ್ ರೇಖೆ: ಮತಗಟ್ಟೆಗಳಲ್ಲಿ 2024 ರ ವಿ.ಟಿ.ಆರ್
ಕೇಂದ್ರಾಡಳಿತ ಪ್ರದೇಶ ಐತಿಹಾಸಿಕ ಪಾಲ್ಗೊಳ್ಳುವಿಕೆಗೆ ಕಾರಣವಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಜನರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಚುನಾವಣೆ ಮತ್ತು ಭದ್ರತಾ ಸಿಬ್ಬಂದಿ ಅವಿರತವಾಗಿ ಕಾರ್ಯನಿರ್ವಹಿಸಿದ್ದು, ವಿಶೇಷವಾಗಿ ಯುವ ಸಮೂಹ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿದೆ. ಹೆಚ್ಚಿನ ಯುವ ಜನಾಂಗ ತನ್ನ ನಂಬಿಕೆಯನ್ನು ಪ್ರತಿಪಾದಿಸಿದೆ ಮತ್ತು ಪ್ರಜಾಪ್ರಭುತ್ವನ್ನು ದೊಡ್ಡ ಪ್ರಮಾಣದಲ್ಲಿ ಸ್ವೀಕರಿಸಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ 18 ರಿಂದ 59 ವರ್ಷಗಳ ಜನ ಚುನಾವಣೆಯಲ್ಲಿ ಭಾಗವಹಿಸಿದ ಮತ್ತೊಂದು ಆಯಾಮಕ್ಕೂ ಇದು ಕಾರಣವಾಗಿದೆ. ಸಾಮಾನ್ಯ ಚುನಾವಣೆ 2024 ರಲ್ಲಿನ ಹೆಚ್ಚಿನ ಮತದಾನದ ಶೇಕಡಾವಾರು ಪ್ರಮಾಣ ಪ್ರಜಾಪ್ರಭುತ್ವದಲ್ಲಿ ಅವರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ, ಇದು ಸಕಾರಾತ್ಮಕ ಮತ್ತು ಹೃದಯಶೀಲತೆಗೆ ಸಾಕ್ಷಿಯಾಗಿದೆ.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ [ಲೋಕಸಭಾ ಕ್ಷೇತ್ರವಾರು ದಾಖಲಾದ ಶೇಕಡವಾರು ಮತದಾನದ ಪ್ರಮಾಣ] ವಯೋಮಿತಿಗೆ ಅನುಗುಣವಾಗಿ ದಾಖಲಾದ ಮತದಾನದ ಪ್ರಮಾಣ
ವಯೋಮಿತಿ ಗುಂಪುಗಳು
|
ಬಾರಾಮುಲ್ಲಾ
|
ಶ್ರೀನಗರ
|
ಅನಂತ್ ನಾಗ್ ರಜೌರಿ
|
ಉದಂಪುರ್
|
ಜಮ್ಮು
|
18 - 39 ವರ್ಷಗಳು
|
56.02
|
48.57
|
54.41
|
53.57
|
47.66
|
40 - 59 ವರ್ಷಗಳು
|
30.85
|
34.87
|
31.59
|
32.65
|
35.28
|
18 - 59 ವರ್ಷಗಳು
|
86.87
|
83.44
|
86.00
|
86.22
|
82.94
|
60 ಮತ್ತು ಅದಕ್ಕೂ ಹೆಚ್ಚಿನ ವಯೋಮಿತಿ
|
13.13
|
16.56
|
14.00
|
13.78
|
17.0
|
ದೆಹಲಿ, ಜಮ್ಮು ಮತ್ತು ಉಧಂಪುರದ ವಿವಿಧ ಪರಿಹಾರ ಶಿಬಿರಗಳಲ್ಲಿ ನೆಲೆಸಿರುವ ಕಾಶ್ಮೀರಿ ವಲಸಿಗ ಮತದಾರರಿಗೆ ಗೊತ್ತುಪಡಿಸಿದ ವಿಶೇಷ ಮತಗಟ್ಟೆಗಳಲ್ಲಿ ವೈಯಕ್ತಿಕವಾಗಿ ಮತ ಚಲಾಯಿಸಲು ಅಥವಾ ಅಂಚೆ ಮತಪತ್ರವನ್ನು ಬಳಸುವ ಆಯ್ಕೆಯನ್ನು ಆಯೋಗವು ಸಕ್ರಿಯಗೊಳಿಸಿತ್ತು. ಜಮ್ಮುವಿನಲ್ಲಿ 21, ಉಧಂಪುರದಲ್ಲಿ 1 ಮತ್ತು ದೆಹಲಿಯಲ್ಲಿ 4 ವಿಶೇಷ ಮತಗಟ್ಟೆಗಳನ್ನು ಇದಕ್ಕಾಗಿ ಸ್ಥಾಪಿಸಲಾಗಿತ್ತು.
ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಎಂದು 2019 ರಲ್ಲಿ ರಚಿಸಲಾಗಿತ್ತು. ಇಲ್ಲಿ ವಿಟಿಆರ್ ಪ್ರಮಾಣ ಶೇ 71.28 ರಷ್ಟಿದ್ದು, ಪ್ರಜಾತಂತ್ರದಲ್ಲಿ ಉತ್ಸಾಹಭರಿತ ಪಾಲ್ಗೊಳ್ಳುವಿಕೆಗೆ ಕಾರಣವಾಗಿದೆ.
ಕಳೆದ ಕೆಲವು ಚುನಾವಣೆಗಳಲ್ಲಿ ಲೋಕಸಭಾ ಕ್ಷೇತ್ರಗಳಲ್ಲಿ ನಿವ್ವಳ ಮತದಾನದ ಪ್ರಮಾಣ
PC/Year
|
2019
|
2014
|
2009
|
2004
|
1999
|
1998
|
1996
|
1989
|
ಶ್ರೀನಗರ
|
14.43%
|
25.86%
|
25.55%
|
18.57%
|
11.93%
|
30.06%
|
40.94%
|
Uncontested
|
ಬಾರಾಮುಲ್ಲಾ
|
34.6%
|
39.14%
|
41.84%
|
35.65%
|
27.79%
|
41.94%
|
46.65%
|
5.48%
|
ಅನಂತ್ ನಾಗ್
|
8.98%
|
28.84%
|
27.10%
|
15.04%
|
14.32%
|
28.15%
|
50.20%
|
5.07%
|
ಉದಂಪುರ್
|
70.15%
|
70.95%
|
44.88%
|
45.09%
|
39.65%
|
51.45%
|
53.29%
|
39.45%
|
ಜಮ್ಮು
|
72.5%
|
67.99%
|
49.06%
|
44.49%
|
46.77%
|
54.72%
|
48.18%
|
56.89%
|
ಸಾಮಾನ್ಯ ಚುನಾವಣೆ – 2024 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮತದಾರರ ಜಾಗೃತಿಗಾಗಿ ವ್ಯಾಪಕ ಪ್ರಮಾಣದಲ್ಲಿ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮೂಲಕ ಸಾಹಸ ಕ್ರೀಡೆಗಳು, ವಿಚಾರ ಸಂಕಿರಣಗಳು, ಚುನಾವಣಾ ಜನ ಜಾಗೃತಿ ಸಮಾವೇಶಗಳು, ನಾಟಕ ಮತ್ತು ಚುನಾವಣೆ ಸಂದೇಶಗಳನ್ನು ಒಳಗೊಂಡ ಇತರೆ ಹಲವಾರು ಚಟುವಟಿಕೆಗಳನ್ನು ಕೈಗೊಳ್ಳಲಾಗಿತ್ತು. ವಿವಿಧ ಪ್ರಯತ್ನಗಳ ನಡುವೆ, ಬಾರಾಮುಲ್ಲಾದಲ್ಲಿ ಇಗ್ಲೂಸ್ ಅನ್ನು ಮಾದರಿ ಮತದಾನ ಕೇಂದ್ರವಾಗಿ ರೂಪಿಸಿ ಮತದಾನದ ಬಗ್ಗೆ ಅರಿವು ಮೂಡಿಸುವ, ಕಥುವಾದಲ್ಲಿ ಪ್ಯಾರಾ ಸ್ಕೂಟರ್ ಕಾರ್ಯಕ್ರಮ, ಸುಚೇತ್‌ಗಢ ಗಡಿಯಲ್ಲಿ ಬೀಟಿಂಗ್ ದಿ ರಿಟ್ರೀಟ್ ಸಮಾರಂಭದಲ್ಲಿ ಸಂವೇದನಾಶೀಲತೆ, ಗಡಿ ನಿಯಂತ್ರಣ ರೇಖೆ ಬಳಿಯ ಟೀಟ್‌ವಾಲ್‌ನಲ್ಲಿ ಮೆಗಾ ಜಾಗೃತಿ ಸಮಾವೇಶ, ಶ್ರೀನಗರದ ದಾಲ್ ಸರೋವರದ ಹತ್ತಿರ ಕಿಶ್ತ್‌ವಾರ್‌ನ ಚೌಗನ್ ಮತ್ತು ಎತ್ತರದ ರೈಲ್ವೆ ಸೇತುವೆಯ ಮೇಲೆ ಚುನಾವಣಾ ಆಯೋಗದ ಹಾಡಿನ ವಾದ್ಯಗಳ ಆವೃತ್ತಿಯನ್ನು ನುಡಿಸುವ ಕಾರ್ಯಕ್ರಮಗಳನ್ನು ಇವು ಒಳಗೊಂಡಿದ್ದವು. ಲಾಲ್ ಚೌಕ್, ಗುಲ್ಮಾರ್ಗ್, ಅನಂತ್ ನಾಗ್, ಕುಲ್ಗಾಂ ಮತ್ತಿತರೆ ಪ್ರದೇಶಗಳಲ್ಲಿ ಖ್ಯಾತ ಸಂಗೀತಗಾರರಿಂದ ಜನ ಜಾಗೃತಿ ಮೂಡಿಸುವ ಸಂಗೀತ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿತ್ತು. ಕೇಂದ್ರಾಡಳಿತ ಪ್ರದೇಶದ ಪ್ರತಿಯೊಂದು ಮೂಲೆ ಮೂಲೆಗಳು ಪ್ರಜಾತಂತ್ರ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಪ್ರಕ್ರಿಯೆಗೆ ಕಾರಣವಾಗಿತ್ತು ಮತ್ತು ಮತದಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗಹಿಸುವಿಕೆಗೆ ಸಾಕ್ಷಿಯಾಗಿತ್ತು. ಇದರ ಪರಿಣಾಮ ದಾಖಲೆ ಸಂಖ್ಯೆಯಲ್ಲಿ ಮತದಾರರು ಪಾಲ್ಗೊಳ್ಳುವಂತಾಯಿತು.
*****
(Release ID: 2021831)
Visitor Counter : 108
Read this release in:
Odia
,
English
,
Urdu
,
Marathi
,
Hindi
,
Hindi_MP
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu
,
Malayalam