ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕಾನ್ಸ್ ನಲ್ಲಿ ಭಾರತದ ಐತಿಹಾಸಿಕ ಪ್ರದರ್ಶನ - ಪಾಯಲ್ ಕಪಾಡಿಯಾಗೆ ತಮ್ಮ 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್' ಚಿತ್ರಕ್ಕಾಗಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ 


"ಸನ್ ಫ್ಲವರ್ಸ್ ವೆರ್ ದಿ ಫರ್ಸ್ಟ್ ಒನ್ಸ್ ಟು ನೊ " – ಎಫ್ ಟಿಐಐ ವಿದ್ಯಾರ್ಥಿ ಚಿದಾನಂದ್ ಎಸ್ ನಾಯಕ್ (ನಿರ್ದೇಶಕ) ಅವರ ಕೋರ್ಸ್ ಎಂಡ್ ಚಲನಚಿತ್ರವು 'ಲಾ ಸಿನೆಫ್' ಪ್ರಶಸ್ತಿಯನ್ನು ಪಡೆದುಕೊಂಡಿದೆ

'ಆಲ್ ವಿ ಇಮ್ಯಾಜಿನ್ ಆಸ್ ಲೈಟ್'- ಇಂಡೋ-ಫ್ರೆಂಚ್ ಸಹ ನಿರ್ಮಾಣವು ಕಾನ್ ನಲ್ಲಿ ಇತಿಹಾಸವನ್ನು ಸೃಷ್ಟಿಸಿತು

ಎಫ್.ಟಿ.ಐ.ಐ ಹಳೆಯ ವಿದ್ಯಾರ್ಥಿಗಳಾದ ಸಂತೋಷ್ ಶಿವನ್, ಪಾಯಲ್ ಕಪಾಡಿಯಾ, ಮೈಸಂ ಅಲಿ, ಚಿದಾನಂದ್ ಎಸ್ ನಾಯ್ಕ್ ಇತರರು ಕಾನ್ಸ್ ನಲ್ಲಿ ಮಿಂಚಿದರು.

Posted On: 26 MAY 2024 2:51PM by PIB Bengaluru

ಇಬ್ಬರು ಚಲನಚಿತ್ರ ನಿರ್ಮಾಪಕರು, ಒಬ್ಬರು ನಟಿ ಮತ್ತು ಒಬ್ಬ ಛಾಯಾಗ್ರಾಹಕರು ವಿಶ್ವದ ಪ್ರಮುಖ ಚಲನಚಿತ್ರೋತ್ಸವದಲ್ಲಿ ಅತ್ಯುನ್ನತ ಪ್ರಶಸ್ತಿಗಳನ್ನು ಗೆದ್ದಿರುವ ಕಾರಣ 77 ನೇ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಭಾರತದ ಪ್ರದರ್ಶನವು ಅಸಾಧಾರಣವಾಗಿತ್ತು. ಪ್ರವರ್ಧಮಾನಕ್ಕೆ ಬರುತ್ತಿರುವ ಚಲನಚಿತ್ರೋದ್ಯಮದೊಂದಿಗೆ ರಾಷ್ಟ್ರವನ್ನು ನಿರ್ಮಿಸುವ ಅತಿದೊಡ್ಡ ಚಲನಚಿತ್ರಗಳಲ್ಲಿ ಒಂದಾಗಿ, ಭಾರತೀಯ ಚಲನಚಿತ್ರ ನಿರ್ಮಾಪಕರು ಕಾನ್ಸ್ ನಲ್ಲಿ ಈ ವರ್ಷ ಭಾರಿ ಪುರಸ್ಕಾರಗಳನ್ನು ಗಳಿಸಿದ್ದಾರೆ.

30 ವರ್ಷಗಳಲ್ಲಿ ಮೊದಲ ಭಾರಿಗೆ ಭಾರತೀಯ ಚಲನಚಿತ್ರ ಪಾಯಲ್ ಕಪಾಡಿಯಾ ಅವರ 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್' ಇಬ್ಬರು ದಾದಿಯರ ಜೀವನವನ್ನು ಕೇಂದ್ರೀಕರಿಸಿದೆ, ಅದು ಉತ್ಸವದ ಅತ್ಯುನ್ನತ ಪ್ರಶಸ್ತಿಯಾದ ಪಾಮ್ ಡಿ'ಓರ್ಗೆ ನಾಮನಿರ್ದೇಶನಗೊಂಡಿತ್ತು. ಕಪಾಡಿಯಾ ಅವರ ಚಿತ್ರವು ವಿಭಾಗದಲ್ಲಿ ಎರಡನೇ ಸ್ಥಾನವಾದ ಗ್ರ್ಯಾಂಡ್ ಪ್ರಿಕ್ಸ್ ಅನ್ನು ಗೆದ್ದುಕೊಂಡಿತು.  ಈ ಗೆಲುವಿನೊಂದಿಗೆ ಎಫ್.ಟಿ.ಐ.ಐ ಹಳೆಯ ವಿದ್ಯಾರ್ಥಿ ಪಾಯಲ್ ಕಪಾಡಿಯಾ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯರಾಗಿದ್ದಾರೆ. ಇದು 30 ವರ್ಷಗಳಲ್ಲಿ ಶಾಜಿ ಎನ್ ಕರುಣ್ ಅವರ 'ಸ್ವಾಹಂ' ಅತ್ಯುನ್ನತ ಗೌರವಕ್ಕಾಗಿ ಸ್ಪರ್ಧಿಸಿದ ನಂತರ ಬಂದಿದೆ.

ಭಾರತ ಮತ್ತು ಫ್ರಾನ್ಸ್ ನಡುವಿನ ಆಡಿಯೋ-ವಿಷುಯಲ್ ಒಪ್ಪಂದದ ಅಡಿಯಲ್ಲಿ ಪಾಯಲ್ ಅವರ ಚಲನಚಿತ್ರಕ್ಕೆ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಅಧಿಕೃತ ಇಂಡೋ-ಫ್ರೆಂಚ್ ಸಹ ನಿರ್ಮಾಣ ಸ್ಥಾನಮಾನವನ್ನು ನೀಡಿತು. ಮಹಾರಾಷ್ಟ್ರದ ಸಚಿವಾಲಯವು ಚಿತ್ರದ (ರತ್ನಗಿರಿ ಮತ್ತು ಮುಂಬೈ) ಚಿತ್ರೀಕರಣಕ್ಕೆ ಅನುಮತಿ ನೀಡಿತ್ತು. ಅಧಿಕೃತ ಸಹ-ನಿರ್ಮಾಣಕ್ಕಾಗಿ ಭಾರತ ಸರ್ಕಾರದ ಪ್ರೋತ್ಸಾಹ ಯೋಜನೆಯಡಿಯಲ್ಲಿ ಅರ್ಹತಾ ಸಹ-ನಿರ್ಮಾಣ ವೆಚ್ಚದ 30% ಕ್ಕೆ ಚಲನಚಿತ್ರವು ಮಧ್ಯಂತರ ಅನುಮೋದನೆಯನ್ನು ಪಡೆಯಿತು.

ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ವಿದ್ಯಾರ್ಥಿ ಚಿದಾನಂದ ಎಸ್ ನಾಯ್ಕ್ ಅವರು ಲಾ ಸಿನೆಫ್ ವಿಭಾಗದಲ್ಲಿ ಕನ್ನಡ ಜಾನಪದ ಕತೆಯನ್ನು ಆಧರಿಸಿದ “ಸನ್ ಫ್ಲವರ್ಸ್ ವೆರ್ ದಿ ಫರ್ಸ್ಟ್ ಒನ್ಸ್ ಟು ನೊ” 15 ನಿಮಿಷಗಳ ಕಿರುಚಿತ್ರಕ್ಕಾಗಿ ಮೊದಲ ಬಹುಮಾನ ಪಡೆದರು. ಈ ಎಫ್.ಟಿ.ಐ.ಐ ಚಲನಚಿತ್ರವು ಎಫ್ ಟಿಐಐನ ಟಿವಿ ವಿಭಾಗದ ಒಂದು ವರ್ಷದ ಕಾರ್ಯಕ್ರಮದ ನಿರ್ಮಾಣವಾಗಿದೆ, ಅಲ್ಲಿ ವಿವಿಧ ವಿಭಾಗಗಳ ಅಂದರೆ ನಿರ್ದೇಶನ, ಎಲೆಕ್ಟ್ರಾನಿಕ್ ಛಾಯಾಗ್ರಹಣ, ಸಂಕಲನ,  ಧ್ವನಿ ವಿಭಾಗದ, ನಾಲ್ವರು ವಿದ್ಯಾರ್ಥಿಗಳು ಒಂದು ಯೋಜನೆಗಾಗಿ ವರ್ಷಾಂತ್ಯದ ಸಂಘಟಿತರಾಗಿ ಶ್ರಮಿಸಿ ಒಟ್ಟಾಗಿ ಕೆಲಸ ಮಾಡಿದರು. 2022 ರಲ್ಲಿ ಎಫ್.ಟಿ.ಐ.ಐಗೆ ಸೇರುವ ಮೊದಲು, ಚಿದಾನಂದ ಎಸ್ ನಾಯಕ್ ಅವರು 53 ನೇ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ (ಐಎಫ್ಎಫ್ಐ) 75 ಕ್ರಿಯೇಟಿವ್ ಮೈಂಡ್ ಗಳಲ್ಲಿ ಒಬ್ಬರಾಗಿ ಆಯ್ಕೆಯಾದರು, ಇದು ಸಿನಿಮಾ ಕ್ಷೇತ್ರದಲ್ಲಿ ಉದಯೋನ್ಮುಖ ಯುವ ಕಲಾವಿದರನ್ನು ಗುರುತಿಸಲು ಮತ್ತು ಬೆಂಬಲಿಸಲು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಉಪಕ್ರಮವಾಗಿದೆ. ಲಾ ಸಿನೆಫ್ ಆಯ್ಕೆಯಲ್ಲಿ ಭಾರತ ಮೂಲದ ಮಾನ್ಸಿ ಮಹೇಶ್ವರಿ ಅವರ ಬನ್ನಿಹುಡ್ ಎಂಬ ಅನಿಮೇಟೆಡ್ ಚಲನಚಿತ್ರವು ಮೂರನೇ ಬಹುಮಾನವನ್ನು ಪಡೆದುಕೊಂಡಿದೆ ಎನ್ನುವುದು ಗಣನೀಯವಾಗಿದೆ.

ಈ ಉತ್ಸವವು ವಿಶ್ವವಿಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ಚಲನಚಿತ್ರ ಸೇವೆಯನ್ನು ಆಚರಿಸಿತು. ಭಾರತದಲ್ಲಿ ಬಿಡುಗಡೆಯಾದ 48 ವರ್ಷಗಳ ನಂತರ ಬೆನೆಗಲ್ ಅವರ ಮಂಥನ್, ನ್ಯಾಷನಲ್ ಫಿಲ್ಮ್ ಆರ್ಕೈವ್ಸ್ ಆಫ್ ಇಂಡಿಯಾದಲ್ಲಿ (ಎನ್ಎಫ್ ಡಿ ಸಿ-ಎನ್ಎಫ್ಎಐ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ) ಸಂರಕ್ಷಿಸಲ್ಪಟ್ಟಿದೆ ಮತ್ತು ಫಿಲ್ಮ್ ಹೆರಿಟೇಜ್ ಫೌಂಡೇಶನ್ನಿಂದ ಮರುಸ್ಥಾಪಿಸಲ್ಪಟ್ಟಿದೆ. ಈ ಚಲನಚಿತ್ರವನ್ನು ಕಾನ್ಸ್ ನಲ್ಲಿ ಕ್ಲಾಸಿಕ್ ವಿಭಾಗದಲ್ಲಿ ಪ್ರದರ್ಶಿಸಲಾಯಿತು.

ಭಾರತೀಯ ಚಿತ್ರರಂಗದಲ್ಲಿ  ತಮ್ಮ ಗಣನೀಯ ಸೇವೆಗಾಗಿ  ಹೆಸರುವಾಸಿಯಾಗಿರುವ  ಪ್ರಖ್ಯಾತ ಛಾಯಾಗ್ರಾಹಕರಾದ ಸಂತೋಷ್ ಶಿವನ್ ಅವರ "ವೃತ್ತಿ ಮತ್ತು ಅಸಾಧಾರಣ ಗುಣಮಟ್ಟದ ಕೆಲಸದ" ಗುರುತಿಸುವಿಕೆಗಾಗಿ 2024 ರ ಕಾನ್  ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಪಿಯರೆ ಆಂಜಿನಿಯಕ್ಸ್ ಗೌರವ ಪ್ರಶಸ್ತಿಯನ್ನು ಪಡೆದ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕಾನ್ಸ್ ನಲ್ಲಿ ಇತಿಹಾಸ ನಿರ್ಮಿಸಿದ ಮತ್ತೊಬ್ಬರಾದ ಅನಸೂಯಾ ಸೇನ್ ಗುಪ್ತ ಅವರು 'ಅನ್ ಸೆರ್ಟನ್ ರಿಗಾರ್ಡ್' ವಿಭಾಗದಲ್ಲಿ 'ದಿ ಶೇಮ್ ಲೆಸ್' ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾಗಿದ್ದಾರೆ.

ಕಾನ್ಸ್ ನಲ್ಲಿ ಮಿಂಚುತ್ತಿರುವ ಮತ್ತೊಬ್ಬ ಸ್ವತಂತ್ರ ಚಲನಚಿತ್ರ ನಿರ್ಮಾಪಕರಾದ ಮಾಯ್ಸಮ್ ಅಲಿ, ಕೂಡ ಎಫ್.ಟಿ.ಐ.ಐ ಹಳೆಯ ವಿದ್ಯಾರ್ಥಿ. ಅವರ ಚಲನಚಿತ್ರ "ಇನ್ ರಿಟ್ರೀಟ್" ಅನ್ನು ಎಸಿಐಡಿ ಕಾನ್ಸ್ ಸೈಡ್ ಬಾರ್ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಅಸೋಸಿಯೇಷನ್ ಫಾರ್ ದಿ ಡಿಫ್ಯೂಷನ್ ಆಫ್ ಇಂಡಿಪೆಂಡೆಂಟ್ ಸಿನಿಮಾವು 1993 ರಲ್ಲಿ ಪ್ರಾರಂಭವಾದಾಗಿನಿಂದ ನಡೆಸಲ್ಪಡುವ ವಿಭಾಗದಲ್ಲಿ ಮೊದಲ ಬಾರಿಗೆ ಭಾರತೀಯ ಚಲನಚಿತ್ರವೊಂದನ್ನು ಪ್ರದರ್ಶಿಸಲಾಯಿತು.

77ನೇ ಕಾನ್ಸ್ ಚಲನಚಿತ್ರೋತ್ಸವದಲ್ಲಿ ನಾವು ಭಾರತೀಯ ಚಿತ್ರರಂಗಕ್ಕೆ ಐತಿಹಾಸಿಕ ವರ್ಷಕ್ಕೆ ಸಾಕ್ಷಿಯಾದರೆ , ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯು ಅದರ ಸಾಧನೆಗಳನ್ನು ಆಚರಿಸಲು ವಿಶೇಷ ಕಾರಣವನ್ನು ಹೊಂದಿದೆ, ಏಕೆಂದರೆ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ ಪಾಯಲ್ ಕಪಾಡಿಯಾ, ಸಂತೋಷ್ ಶಿವನ್, ಮಾಯ್ಸಮ್  ಅಲಿ ಮತ್ತು ಚಿದಾನಂದ್ ಎಸ್ ನಾಯಕ್ ಕಾನ್ಸ್ ನಲ್ಲಿ ಮಿಂಚಿದ್ದಾರೆ. ಎಫ್.ಟಿ.ಐ.ಐ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿನ ಸ್ವಾಯತ್ತ ಸಂಸ್ಥೆಯಾಗಿದೆ ಮತ್ತು ಕೇಂದ್ರ ಸರ್ಕಾರದ ಹಣಕಾಸಿನ ಬೆಂಬಲದೊಂದಿಗೆ  ಸಂಸ್ಥೆಯಾಗಿ  ಕಾರ್ಯನಿರ್ವಹಿಸುತ್ತದೆ.

ಏಕ ಗವಾಕ್ಷಿ  ವಿಲೇವಾರಿ, ವಿವಿಧ ದೇಶಗಳೊಂದಿಗೆ ಜಂಟಿ ನಿರ್ಮಾಣ, ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಸತ್ಯಜಿತ್ ರೇ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ನಂತಹ ಸ್ವಾಯತ್ತ ಸಂಸ್ಥೆಗಳ ಮೂಲಕ ಶಿಕ್ಷಣವನ್ನು ಬೆಂಬಲಿಸುವ ಮೂಲಕ ಚಲನಚಿತ್ರ ಕ್ಷೇತ್ರವನ್ನು ಉತ್ತೇಜಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ. ಇವು ಭಾರತವನ್ನು ಪ್ರಪಂಚದ ʼಕಂಟೆಂಟ್ ಹಬ್ʼ ಆಗಿ ಸ್ಥಾಪಿಸುವಲ್ಲಿ ಸರ್ವತೋಮುಖ ಪ್ರಯತ್ನಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಹಂತದಲ್ಲಿ ಸಕಾರಾತ್ಮಕ ಪರಿಣಾಮವನ್ನು ತರುತ್ತಿವೆ.

*****



(Release ID: 2021718) Visitor Counter : 34