ಚುನಾವಣಾ ಆಯೋಗ
azadi ka amrit mahotsav

ಲೋಕಸಭಾ ಚುನಾವಣೆ-2024ರ 7ನೇ ಹಂತದಲ್ಲಿ 08 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ 904 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ



7ನೇ ಹಂತದ ಮತದಾನಕ್ಕಾಗಿ 08 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 57 ಲೋಕಸಭಾ ಕ್ಷೇತ್ರಗಳಿಗೆ 2105 ನಾಮಪತ್ರಗಳನ್ನು ಸಲ್ಲಿಸಲಾಗಿದೆ

Posted On: 22 MAY 2024 1:15PM by PIB Bengaluru

ಲೋಕಸಭಾ ಚುನಾವಣೆ-2024ರ  7ನೇ ಹಂತದಲ್ಲಿ 08 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 904 ಅಭ್ಯರ್ಥಿಗಳು ಚುನಾವಣೆಯ ಅಂತಿಮ ಕಣದಲ್ಲಿ ಉಳಿದಿದ್ದಾರೆ. 2024ರ ಲೋಕಸಭಾ ಚುನಾವಣೆಗಾಗಿ 7ನೇ ಹಂತದಲ್ಲಿ ಮತದಾನ ನಡೆಯಲಿರುವ 08 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ 57 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 2105 ನಾಮಪತ್ರಗಳು ಸಲ್ಲಿಕೆಯಾಗಿವೆ. ಎಲ್ಲಾ 08 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ 7ನೇ ಹಂತಕ್ಕೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮೇ 14, 2024 ಆಗಿತ್ತು. ಸಲ್ಲಿಕೆಯಾದ ಎಲ್ಲಾ ನಾಮಪತ್ರಗಳ ಪರಿಶೀಲನೆಯ ನಂತರ, 954 ನಾಮಪತ್ರಗಳು ಕ್ರಮಬದ್ಧವೆಂದು ಕಂಡುಬಂದಿದೆ.

7ನೇ ಹಂತದಲ್ಲಿ ಪಂಜಾಬ್‌ನ 13 ಲೋಕಸಭಾ ಕ್ಷೇತ್ರಗಳಿಂದ ಗರಿಷ್ಠ 598 ನಾಮಪತ್ರಗಳು ಸಲ್ಲಿಕೆಯಾದರೆ, 13 ಲೋಕಸಭಾ ಕ್ಷೇತ್ರಗಳಿಂದ 495 ನಾಮಪತ್ರಗಳ ಸಲ್ಲಿಕೆಯೊಂದಿಗೆ ಉತ್ತರ ಪ್ರದೇಶವು ನಂತರದ ಸ್ಥಾನದಲ್ಲಿದೆ. ಬಿಹಾರದ ಜಹಾನಾಬಾದ್ ಸಂಸದೀಯ ಕ್ಷೇತ್ರಕ್ಕೆ ಗರಿಷ್ಠ 73 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪಂಜಾಬ್‌ನ ಲೂಧಿಯಾನ ಲೋಕಸಭಾ ಕ್ಷೇತ್ರಕ್ಕೆ 70 ನಾಮಪತ್ರಗಳು ಸಲ್ಲಿಕೆಯಾಗಿವೆ. 7ನೇ ಹಂತದಲ್ಲಿ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಸರಾಸರಿ ಸಂಖ್ಯೆ 16 ಆಗಿದೆ

ಲೋಕಸಭೆ ಚುನಾವಣೆ 2024 ರ ಸಾರ್ವತ್ರಿಕ ಚುನಾವಣೆಯ 7 ನೇ ಹಂತದ ರಾಜ್ಯ/UT ವಾರು ವಿವರಗಳು

ಕ್ರಮ ಸಂಖ್ಯೆ

ರಾಜ್ಯ/ಕೇಂದ್ರಾಡಳಿತ ಪ್ರದೇಶ

7ನೇ ಹಂತದಲ್ಲಿ ಲೋಕಸಭಾ ಕ್ಷೇತ್ರಗಳು

ಸ್ವೀಕರಿಸಲಾದ ನಾಮಪತ್ರಗಳ ಸಂಖ್ಯೆ

ಪರಿಶೀಲನೆ ನಂತರ ಮಾನ್ಯ ಅಭ್ಯರ್ಥಿಗಳ ಸಂಖ್ಯೆ

ನಾಮಪತ್ರ ಹಿಂಪಡೆದ ನಂತರ ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳು

 

 

 

 

 

 

1

ಬಿಹಾರ

8

372

138

134

 

 

 

2

ಚಂಡೀಗಢ

1

33

20

19

 

 

 

3

ಹಿಮಾಚಲ ಪ್ರದೇಶ

4

80

40

37

 

 

 

4

ಜಾರ್ಖಂಡ್

3

153

55

52

 

 

 

5

ಒಡಿಶಾ

6

159

69

66

 

 

 

6

ಪಂಜಾಬ್

13

598

353

328

 

 

 

7

ಉತ್ತರ ಪ್ರದೇಶ

13

495

150

144

 

 

 

8

ಪಶ್ಚಿಮ ಬಂಗಾಳ

9

215

129

124

 

 

 


 

ಒಟ್ಟು

57

2105

954

904

 

 

 

                     

 

 

 

 

 

 

 

 

 

 

 

 

 

 

 

 

 

 

 

 

 

 

 

 

*****


(Release ID: 2021314) Visitor Counter : 557