ಚುನಾವಣಾ ಆಯೋಗ
ಬಾರಾಮುಲ್ಲಾ ಕಳೆದ 8 ಲೋಕಸಭಾ ಚುನಾವಣೆಗಳಲ್ಲಿಯೇ ಅತ್ಯಧಿಕ ಮತದಾನದತ್ತ ಸಾಗುತ್ತಿದೆ; ಸಂಜೆ 5 ಗಂಟೆಯವರೆಗೆ ಶೇ.54.21ರಷ್ಟು ಮತದಾನ ದಾಖಲಾಗಿದೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಭದ್ರತೆಯ ವಾತಾವರಣದಲ್ಲಿ ಮತದಾರರು ಬೆಳಗ್ಗೆಯಿಂದಲೇ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದರು
Posted On:
20 MAY 2024 8:12PM by PIB Bengaluru
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ದಾಖಲೆಯ ಶೇ.38.49ರಷ್ಟು ಮತದಾನದ ನಂತರ, ಬಾರಾಮುಲ್ಲಾ ಲೋಕಸಭಾ ಕ್ಷೇತ್ರವು ಕಳೆದ 8 ಲೋಕಸಭೆ ಚುನಾವಣೆಗಳಲ್ಲಿಯೇ ಅತಿ ಹೆಚ್ಚು ಮತದಾನದತ್ತ ಸಾಗುತ್ತಿದೆ. ಬಾರಾಮುಲ್ಲಾ, ಕುಪ್ವಾರ, ಬಂಡಿಪೋರಾ ಮತ್ತು ಬುದ್ಗಾಮ್ ಜಿಲ್ಲೆಗಳಲ್ಲಿ ಸಂಜೆ 5 ಗಂಟೆಯವರೆಗೆ ಶೇ.54.21 ರಷ್ಟು ಮತದಾನವಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಮತ್ತು ಶ್ರೀ ಸುಖಬೀರ್ ಸಿಂಗ್ ಸಂಧು ಅವರು ಚುನಾವಣೆಯನ್ನು ಸುಗಮ ಮತ್ತು ಶಾಂತಿಯುತವಾಗಿ ನಡೆಸಿದ ನಾಗರಿಕ ಮತ್ತು ಭದ್ರತಾ ಸಿಬ್ಬಂದಿಗಳ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ಜಮ್ಮು ಮತ್ತು ಕಾಶ್ಮೀರ ಮತದಾರರು ಉತ್ಸಾಹದಿಂದ ಭಾಗವಹಿಸಿದ್ದಕ್ಕಾಗಿ ಧನ್ಯವಾದ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ಹಕ್ಕು ಚಲಾಯಿಸಲು ಮತ್ತು ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ತಮ್ಮ ಪಾಲು ಹೊಂದಲು ಉತ್ಸುಕರಾಗಿದ್ದಾರೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.
ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಾದ್ಯಂತ 2103 ಮತಗಟ್ಟೆಗಳಲ್ಲಿ ಮತದಾನವು ಮತಗಟ್ಟೆಗಳಲ್ಲಿ ನೇರ ವೆಬ್‌ಕಾಸ್ಟಿಂಗ್ ನೊಂದಿಗೆ ನಡೆಯಿತು. ಲೋಕಸಭಾ ಕ್ಷೇತ್ರದಾದ್ಯಂತ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಯಿತು, ಉತ್ಸಾಹಭರಿತ ಮತದಾರರು ತಮ್ಮ ಮತ ಚಲಾಯಿಸಲು ಸಾಲಿನಲ್ಲಿ ಕಾಯುತ್ತಿದ್ದರು.
ಕಳೆದ ಕೆಲವು ಚುನಾವಣೆಗಳಲ್ಲಿ ಒಟ್ಟು ಮತದಾನದ ಪ್ರಮಾಣ
ಲೋ.ಸ.ಕ್ಷೇತ್ರ /ವರ್ಷ
|
2019
|
2014
|
2009
|
2004
|
1999
|
1998
|
1996
|
1989
|
ಬಾರಾಮುಲ್ಲಾ
|
34.6%
|
39.14%
|
41.84%
|
35.65%
|
27.79%
|
41.94%
|
46.65%
|
5.48%
|
ಶ್ರೀನಗರ
|
14.43%
|
25.86%
|
25.55%
|
18.57%
|
11.93%
|
30.06%
|
40.94%
|
ಅವಿರೋಧ
|
ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ 2024 ರಲ್ಲಿ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಭದ್ರತಾ ಸಿಬ್ಬಂದಿ ಸೇರಿದಂತೆ ಚುನಾವಣಾ ಸಿಬ್ಬಂದಿಗಳು ಮತದಾನ ಕೇಂದ್ರಗಳಲ್ಲಿ ಮತದಾರರನ್ನು ಶಾಂತಿಯುತ ಮತ್ತು ಹಬ್ಬದ ವಾತಾವರಣದಲ್ಲಿ ಸ್ವಾಗತಿಸಲು ಅವಿರತವಾಗಿ ಶ್ರಮಿಸಿದರು. ದೆಹಲಿ, ಜಮ್ಮು ಮತ್ತು ಉಧಂಪುರದ ವಿವಿಧ ಪರಿಹಾರ ಶಿಬಿರಗಳಲ್ಲಿ ನೆಲೆಸಿರುವ ಕಾಶ್ಮೀರಿ ವಲಸಿಗ ಮತದಾರರಿಗೆ ಗೊತ್ತುಪಡಿಸಿದ ವಿಶೇಷ ಮತಗಟ್ಟೆಗಳಲ್ಲಿ ವೈಯಕ್ತಿಕವಾಗಿ ಮತ ಚಲಾಯಿಸಲು ಅಥವಾ ಅಂಚೆ ಮತಪತ್ರವನ್ನು ಬಳಸುವ ಆಯ್ಕೆಯನ್ನು ಆಯೋಗವು ಒದಗಿಸಿತು. ಜಮ್ಮುವಿನಲ್ಲಿ 21, ಉಧಂಪುರದಲ್ಲಿ 1 ಮತ್ತು ದೆಹಲಿಯಲ್ಲಿ 4 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
ಜಮ್ಮು, ಉಧಂಪುರ ಮತ್ತು ದೆಹಲಿಯ ವಿಶೇಷ ಮತಗಟ್ಟೆಗಳಲ್ಲಿ ಮತದಾನ ಮಾಡಿದ ವಲಸೆ ಮತದಾರರು
ಇದಕ್ಕೂ ಮೊದಲು, ನಾಲ್ಕನೇ ಹಂತದಲ್ಲಿ, ಶ್ರೀನಗರ, ಗಂದರ್ಬಲ್, ಪುಲ್ವಾಮಾ, ಬುದ್ಗಾಮ್ ಮತ್ತು ಶೋಪಿಯಾನ್ ಜಿಲ್ಲೆಗಳನ್ನು ಒಳಗೊಂಡಿರುವ ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ಶೇ.38.49 ರಷ್ಟು ಮತದಾನವಾಗಿದೆ, ಇದು ಹಲವು ದಶಕಗಳಲ್ಲಿಯೇ ಅತಿ ಹೆಚ್ಚು. 370 ನೇ ವಿಧಿ ರದ್ದತಿ ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, 2019 ರ ನಂತರ ಇದು ಕಣಿವೆಯಲ್ಲಿ ನಡೆಯುತ್ತಿರುವ ಮೊದಲ ಸಾರ್ವತ್ರಿಕ ಚುನಾವಣೆಯಾಗಿದೆ.
*****
(Release ID: 2021200)
Visitor Counter : 64
Read this release in:
Odia
,
English
,
Urdu
,
Hindi
,
Hindi_MP
,
Marathi
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu
,
Malayalam