ಚುನಾವಣಾ ಆಯೋಗ

2024ರ ಸಾರ್ವತ್ರಿಕ ಚುನಾವಣೆ ವೇಳೆ ಇದುವರೆಗೆ 2 ತಿಂಗಳ ಕಾಲ ಜಾರಿಗೊಳಿಸಿದ್ದ ಮಾದರಿ ನೀತಿ ಸಂಹಿತೆ(ಎಂಸಿಸಿ) ಕುರಿತು ಕೇಂದ್ರ ಚುನಾವಣಾ ಆಯೋಗದ 2ನೇ ಸ್ವಯಂಪ್ರೇರಿತ ವರದಿ ಪ್ರಕಟ


90%ಗಿಂತ ಹೆಚ್ಚಿನ ದೂರುಗಳ ವಿಲೇವಾರಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎನ್ ಸಿ) ಮತ್ತು ಬಿಜೆಪಿ ಹೊರತುಪಡಿಸಿ ಇನ್ನಿತರೆ ಪಕ್ಷಗಳ ಯಾವುದೇ ಪ್ರಮುಖ ದೂರುಗಳು ಬಾಕಿ ಉಳಿದಿಲ್ಲ

ಒಟ್ಟಾರೆ ಚುನಾವಣಾ ಪ್ರಚಾರ ಹಿಂಸಾಚಾರಮುಕ್ತವಾಗಿತ್ತು. ಗದ್ದಲ, ಅಸ್ತವ್ಯಸ್ತತೆ,  ಒಳನುಸುಳುವಿಕೆ, ಪ್ರಚೋದನೆ ಮತ್ತು ಆಟಾಟೋಪ ಮುಕ್ತವಾಗಿತ್ತು

ಪ್ರಮುಖವಾಗಿ ರಾಷ್ಟ್ರೀಯ ಪಕ್ಷಗಳ ಸ್ಟಾರ್ ಪ್ರಚಾರಕರು ಮುಂದಿನ ಹಂತಗಳ ಚುನಾವಣೆಯಲ್ಲಿ ಮಾದರಿಯಾಗಿ ಪ್ರಚಾರ ನಡೆಸಬೇಕು; ಸಮಾಜದ ಸೂಕ್ಷ್ಮ ವಿಚಾರ(ವ್ಯವಸ್ಥೆ)ಗಳಿಗೆ ಹಾನಿ ಉಟುಮಾಡಬಾರದು ಎಂದು ಆಯೋಗ ನಿರೀಕ್ಷಿಸುತ್ತದೆ

Posted On: 14 MAY 2024 4:53PM by PIB Bengaluru

2024ರ ಸಾರ್ವತ್ರಿಕ ಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡಲು ಮತ್ತು ಪ್ರತಿಯೊಂದು ವಿಷಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಕೇಂದ್ರ ಚುನಾವಣಾ ಆಯೋಗವು ತನ್ನ ದೃಢವಾದ ಬದ್ಧತೆ ಹೊಂದಿದೆ. ತನ್ನ ಕಾರ್ಯಾಚರಣೆಯ 2 ತಿಂಗಳು ಪೂರ್ಣಗೊಂಡ ನಂತರ, ವಿವಿಧ ರಾಜಕೀಯ ಪಕ್ಷಗಳ ದೂರುಗಳ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ(ಎಂಸಿಸಿ) ಅಡಿ, ಆಯೋಗ ಕೈಗೊಂಡಿರುವ ಹಲವು ಕ್ರಮಗಳ ಸ್ಥಿತಿಗತಿಗಳನ್ನು ಪರಿಷ್ಕರಿಸಲು ನಿರ್ಧರಿಸಿದೆ. ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಮೊದಲ ತಿಂಗಳ ನಂತರ ಆಯೋಗವು, ಪರಿಷ್ಕೃತ ಎಂಸಿಸಿ ಪಾರದರ್ಶಕತೆಯ ಉಪಕ್ರಮವನ್ನು ಮುಂದುವರಿಸುತ್ತಿದೆ. ಆಯೋಗ ಕೈಗೊಂಡ ಕ್ರಮಗಳ ಕೆಲವು ವಿವರಗಳನ್ನು ಸಹ ನೀಡಲಾಗಿದೆ, ಇದರಿಂದ ಅನುಮಾನಗಳು ಅಥವಾ ಶಂಕೆಗಳು ಚಿಕ್ಕವಿರಲಿ ಅಥವಾ ಸೀಮಿತವಿರಲಿ, ಅವುಗಳನ್ನು ಪರಿಹರಿಸಲಾಗಿದೆ ಮತ್ತು ನಿಲ್ಲಿಸಲಾಗಿದೆ.

ಸಾರ್ವಜನಿಕ ರಂಗಕ್ಕೆ ಅಥವಾ ಕ್ಷೇತ್ರಕ್ಕೆ ಈ ಮಾಹಿತಿ ಒದಗಿಸಲು ಆಯೋಗವು ಇದನ್ನು ಆಯ್ಕೆ ಮಾಡಿದೆ. ಇದರಿಂದಾಗಿ ಪ್ರಮುಖ ಪಾಲುದಾರರು, ವಿಶೇಷವಾಗಿ ಮತದಾರರು ಮತ್ತು ರಾಜಕೀಯ ಪಕ್ಷಗಳು ಆಯೋಗ ತೆಗೆದುಕೊಂಡ ನ್ಯಾಯಸಮ್ಮತ ಮತ್ತು ಸಮತೋಲಿತ ಕ್ರಮಗಳ ಬಗ್ಗೆ ನೈಜ ಸಮಯದ ಮಾಹಿತಿ ಪಡೆಯುತ್ತಾರೆ. ಇಂತಹ ನಿರ್ಧಾರಕ್ಕೆ ಇಡೀ ಭಾರತವೇ ಹೆಮ್ಮೆಪಡುತ್ತಿದೆ.

ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ನೇತೃತ್ವದ ಚುನಾವಣಾ ಆಯೋಗದಲ್ಲಿ ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಮತ್ತು ಶ್ರೀ ಸುಖಬೀರ್ ಸಿಂಗ್ ಸಂಧು ಅವರು ಪ್ರತಿದಿನ ಮಾದರಿ ನೀತಿ ಸಂಹಿತೆ(ಎಂಸಿಸಿ) ಉಲ್ಲಂಘನೆಗಳ ದೇಶಾದ್ಯಂತ ಬಾಕಿ ಉಳಿದಿರುವ ಪ್ರಕರಣಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕಾಲಮಿತಿಯಲ್ಲಿ ಮತ್ತು ಆದ್ಯತೆಯ ಮೇರೆಗೆ ಕ್ರಮಗಳನ್ನು ಜರುಗಿಸಲಾಗುತ್ತಿದೆ. ಕಳೆದ 2 ತಿಂಗಳ ಅವಧಿಯಲ್ಲಿ ಕೈಗೊಂಡಿರುವ ಹಲವು ಕ್ರಮಗಳು ದೀರ್ಘಾವಧಿಯಲ್ಲಿ ಚುನಾವಣಾ ಪ್ರಚಾರವನ್ನು ಮತ್ತು ಪ್ರಚಾರ ಸ್ಥಳವನ್ನು ಸ್ವಚ್ಛಗೊಳಿಸುವಲ್ಲಿ ಅಥವಾ ಮರುರೂಪಿಸುವಲ್ಲಿ ದೂರಗಾಮಿ ಮತ್ತು ವ್ಯವಸ್ಥಿತ ಪರಿಣಾಮಗಳನ್ನು ಹೊಂದಿವೆ.

ಪ್ರಾರಂಭಿಕವಾಗಿ, ರಾಜಕೀಯ ಪಕ್ಷಗಳ ಉನ್ನತ ನಾಯಕರು, ವಿಶೇಷವಾಗಿ ಪ್ರಮುಖ ರಾಷ್ಟ್ರೀಯ ಪಕ್ಷಗಳು, ಅವರಲ್ಲಿ ಹೆಚ್ಚಿನವರು ಸ್ಟಾರ್ ಪ್ರಚಾರಕರು, ಪ್ರಸ್ತುತ ಚುನಾವಣೆಗಳಲ್ಲಿ ಉತ್ತಮ ಅಥವಾ ಅರ್ಥಪೂರ್ಣ ಪ್ರಚಾರ ಭಾಷಣ ಮಾಡಬೇಕು ಎಂದು ಚುನಾವಣಾ ಆಯೋಗ ನಿರೀಕ್ಷಿಸುತ್ತಿದೆ. ಆದರೆ ಚುನಾವಣೆಯ ಉಳಿದ ಹಂತಗಳಲ್ಲಿ ಸೂಕ್ಷ್ಮ ಎನಿಸುವ ದೇಶದ ಸಮತೋಲಿತ ಸಾಮಾಜಿಕ ರಚನೆ ಅಥವಾ ವ್ಯವಸ್ಥೆಯ ಮೇಲೆ ಹಾನಿ ಉಂಟುಮಾಡುವ ಯಾವುದೇ ಹೇಳಿಕೆ ಅಥವಾ ಭಾಷಣಗಳನ್ನು ತಪ್ಪಿಸುವುದು ಅಥವಾ ಸರಿಪಡಿಸುವುದು ಪ್ರಾಥಮಿಕವಾಗಿ ಪ್ರಚಾರಕರ ಜವಾಬ್ದಾರಿಯಾಗಿದೆ.

ಮಾದರಿ ನೀತಿ ಸಂಹಿತೆ ಇದುವರೆಗೆ 2 ತಿಂಗಳ ಕಾಲ ಜಾರಿ ವೇಳೆ ತೆಗೆದುಕೊಂಡ ಕೆಲವು ನಿರ್ಧಾರಗಳು ಈ ಕೆಳಗಿನಂತಿವೆ:

1. ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ಘೋಷಣೆಯೊಂದಿಗೆ 16ನೇ ಮಾರ್ಚ್ 2024ರಂದು ಮಾದರಿ ನೀತಿ ಸಂಹಿತೆ ಜಾರಿಗೆ ಬಂತು, ಇದುವರೆಗೆ 4 ಹಂತಗಳಲ್ಲಿ ಮತದಾನ ಮುಗಿದಿವೆ.

2. ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಗೆ ಬಂದು ಸುಮಾರು 2 ತಿಂಗಳು ಪೂರ್ಣಗೊಂಡಿವೆ. ಚುನಾವಣಾ ಕಣದಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಪ್ರಚಾರವು ಹಿಂಸಾಚಾರ ಮುಕ್ತವಾಗಿತ್ತು. ಗದ್ದಲ, ಅಸ್ತವ್ಯಸ್ತತೆ, ಪ್ರಚೋದನೆ ಮತ್ತು ಆಟಾಟೋಪದಿಂದ ಬಹುತೇಕ ಮುಕ್ತವಾಗಿತ್ತು.

3. ಮತದಾರರ ಉತ್ಸಾಹದ ಭಾಗವಹಿಸುವಿಕೆಯೊಂದಿಗೆ ಶಾಂತಿಯುತ, ಪ್ರಚೋದನೆಮುಕ್ತ ಚುನಾವಣೆಯ ಪ್ರಧಾನ ಕಾರ್ಯ ನಿರ್ವಹಣೆಯ ಬಗ್ಗೆ ಭಾರತೀಯ ಚುನಾವಣಾ ಆಯೋಗ ಸಂಪೂರ್ಣ ತೃಪ್ತವಾಗಿದೆ.

4. 4ನೇ ಹಂತದವರೆಗೆ ದೇಶಾದ್ಯಂತ ಉತ್ಸಾಹದಿಂದ ಮತ್ತು ಹಬ್ಬದ ಸಂಭ್ರಮದಲ್ಲಿ ಶಾಂತಿಯುತ ಮತದಾನ ನಡೆದಿದೆ. ವಿಶೇಷವಾಗಿ ಮಣಿಪುರ, ತ್ರಿಪುರಾ, ಎಡಪಂಥೀಯ ಉಗ್ರವಾದದ ಪ್ರದೇಶಗಳು, ಪಶ್ಚಿಮ ಬಂಗಾಳ, ಜಮ್ಮು-ಕಾಶ್ಮೀರ, ದೂರದ ಮತ್ತು ದುರ್ಗಮ ಪ್ರದೇಶಗಳಲ್ಲಿ ಪ್ರಜಾಪ್ರಭುತ್ವದ ಆಳವಾದ ಬೇರುಗಳು ಇರುವುದನ್ನು ತೋರಿಸಿದೆ. ಈ ಲಿಂಕ್‌ನಲ್ಲಿ ವಿಶೇಷವಾಗಿ ರಚಿಸಲಾದ ಫೋಟೊ ಗ್ಯಾಲರಿಯಲ್ಲಿ ಭಾರತೀಯ ಚುನಾವಣೆಯ ನಾನಾ ಮಜಲುಗಳ ನೋಟ ವೀಕ್ಷಿಸಲು ಆಯೋಗವು ನಾಗರಿಕರನ್ನು ಆಹ್ವಾನಿಸುತ್ತದೆ: https://www.eci.gov.in/ge-2024-photogallery

5. ಚುನಾವಣೆ ದಿನಾಂಕ ಪ್ರಕಟಣೆಯ ದಿನದಿಂದ ಇಲ್ಲಿಯವರೆಗೆ ಆಯೋಗವು  ಹೆಚ್ಚಿನ ಪಾರದರ್ಶಕತೆಯ ಅಳತೆಗೋಲಾಗಿ 63 ಪತ್ರಿಕಾ ಪ್ರಕಟಣೆಗಳನ್ನು ಬಿಡುಗಡೆ ಮಾಡಿದೆ.

6. ಇಲ್ಲಿಯವರೆಗೆ 16 ರಾಜಕೀಯ ಪಕ್ಷಗಳ 25 ನಿಯೋಗಗಳು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಳ ಕುರಿತು ತಮ್ಮ ಕುಂದುಕೊರತೆ, ದೂರುಗಳನ್ನು ಸಲ್ಲಿಸಲು ಆಯೋಗವನ್ನು ಭೇಟಿ ಮಾಡಿವೆ. ಇದಲ್ಲದೇ , ರಾಜ್ಯಗಳಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಗಳಲ್ಲಿ ಹಲವು ನಿಯೋಗಗಳು ಸಭೆ ನಡೆಸಿವೆ.

7. ಎಲ್ಲಾ ರಾಜಕೀಯ ಪಕ್ಷಗಳ ಮನವಿಯಂತೆ, ಆದಷ್ಟು ಶೀಘ್ರವಾಗಿ ಸಮಯ ನಿಗದಿಪಡಿಸಿ, ಅವರ ಕುಂದುಕೊರತೆಗಳನ್ನು ತಾಳ್ಮೆಯಿಂದ ಆಲಿಸಲಾಗಿದೆ.

8. ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಅಥವಾ ಸ್ಪಷ್ಟೀಕರಣದ ದೂರುಗಳನ್ನು ಹೊರತುಪಡಿಸಿದ ಸುಮಾರು 425 ಪ್ರಮುಖ ದೂರುಗಳನ್ನು ವಿವಿಧ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಭಾರತೀಯ ಚುನಾವಣಾ ಆಯೋಗ ಮತ್ತು ಸಿಇಒಗಳ ಮಟ್ಟದಲ್ಲಿ ಸಲ್ಲಿಸಿದ್ದಾರೆ. ಇವುಗಳಲ್ಲಿ 400 ಪ್ರಕರಣಗಳ ಮೇಲೆ ಕ್ರಮ ಜರುಗಿಸಲಾಗಿದೆ (ಅಥವಾ ವಿಷಯವನ್ನು ವಿಲೇವಾರಿ ಮಾಡಲಾಗಿದೆ). ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಬಿಜೆಪಿ ಮತ್ತು ಇತರೆ ಪಕ್ಷಗಳು ಕ್ರಮವಾಗಿ 170, 95 ಮತ್ತು 160 ದೂರುಗಳನ್ನು ದಾಖಲಿಸಿದ್ದಾರೆ, ಈ ಬಹುತೇಕ ದೂರುಗಳಿಗೆ ಕ್ರಮ ಕೈಗೊಳ್ಳಲಾಗಿದೆ.

9. ಕೋಮುವಾದ, ಜಾತಿ, ಪ್ರಾದೇಶಿಕ ಭಾಷಾ ವಿಭಜನೆ ಅಥವಾ ಭಾರತದ ಸಂವಿಧಾನದ ಪಾವಿತ್ರ್ಯದ ಬಗ್ಗೆ ಉನ್ನತ ಸ್ಟಾರ್ ಪ್ರಚಾರಕರು ಸಮಾಜ ಒಡೆಯುವ ಹೇಳಿಕೆಗಳ ಪ್ರಕಾರದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಪರಸ್ಪರರ ವಿರುದ್ಧ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲವು ದೂರುಗಳು ಬಾಕಿ ಉಳಿದಿವೆ. ಈ ಹಿಂದೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಪ್ರತ್ಯೇಕ ನಾಯಕರಿಗೆ ಆಯೋಗವು ನೋಟಿಸ್‌ಗಳನ್ನು ನೀಡಿದೆ. ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಅಧ್ಯಕ್ಷರು, ಮುಖ್ಯಸ್ಥರು, ಪ್ರಧಾನ ಕಾರ್ಯದರ್ಶಿಗಳಿಗೆ 2024 ಮಾರ್ಚ್  1ರಂದು ಆಯೋಗವು ತನ್ನ ಸಲಹಾಸೂಚಿಯೊಂದಿಗೆ ಹೊಸ ನಿಯಮ ಅಥವಾ ನಿರ್ದೇಶನಗಳನ್ನು ಅಳವಡಿಸಿಕೊಂಡಿದೆ. ರಾಜಕೀಯ ಪಕ್ಷಗಳ ನಾಯಕರು, ಅಭ್ಯರ್ಥಿಗಳು, ಸ್ಟಾರ್ ಪ್ರಚಾರಕರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಭಾಷಣಗಳನ್ನು ಮಾಡದಂತೆ, ಹೇಳಿಕೆಗಳನ್ನು ನೀಡದಂತೆ ಸೂಚಿಸಲಾಗಿದೆ. ವೈಯಕ್ತಿಕ ಸ್ಟಾರ್ ಪ್ರಚಾರಕರು, ನಾಯಕರು, ಅಭ್ಯರ್ಥಿಗಳು ಮಾಡಿದ ಭಾಷಣಗಳಿಗೆ ಅವರೇ ಜವಾಬ್ದಾರರಾಗಿ ಮುಂದುವರಿಯುತ್ತಾರೆ ಎಂದು ಆಯೋಗವು ಅಭಿಪ್ರಾಯಪಟ್ಟಿದೆ, ಆಯೋಗವು ಪಕ್ಷದ ಅಧ್ಯಕ್ಷರು, ರಾಜಕೀಯ ಪಕ್ಷದ ಮುಖ್ಯಸ್ಥರನ್ನು ಪಕ್ಷಗಳ ಆಧಾರದ ಮೇಲೆ ಪ್ರಕರಣದ ಆಧಾರದ ಮೇಲೆ ಸಂಬೋಧಿಸುತ್ತದೆ. ಅಂತಹ ಉಲ್ಲಂಘನೆಗಳನ್ನು ಮಾಡದಂತೆ ತಮ್ಮ ಸ್ಟಾರ್ ಪ್ರಚಾರಕರನ್ನು ನಿಯಂತ್ರಿಸುವ ಪ್ರಮುಖ ಜವಾಬ್ದಾರಿ ಅವರದ್ದಾಗಿರುತ್ತದೆ. ಎಲ್ಲಾ ಕಾರ್ಯಕರ್ತರಿಂದ ಮಾದರಿ ನೀತಿ ಸಂಹಿತೆಗೆ ಅನುಗುಣವಾಗಿ ರಾಜಕೀಯ ಪಕ್ಷಗಳ ಹೊಣೆಗಾರಿಕೆ ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಬಾಕಿ ಇದ್ದ ದೂರುಗಳಿಗೆ ಸಂಬಂಧಿಸಿದಂತೆ ಎರಡೂ ಪಕ್ಷಗಳ ಅಧ್ಯಕ್ಷರಿಗೆ ನೋಟಿಸ್ ನೀಡಲಾಗಿದೆ. ಎರಡೂ ಪಕ್ಷಗಳ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗಿದೆ. ದೂರುಗಳು, ಪ್ರತಿದೂರುಗಳ ಮೇಲೆ ಸೂಕ್ತ ಕ್ರಮವು ಆಯೋಗದ ಪರಿಶೀಲನೆ ಮತ್ತು ಪರಿಗಣನೆಯಲ್ಲಿದೆ. ಮಾದರಿ ನೀತಿ ಸಂಹಿತೆ ಮಾರ್ಗಸೂಚಿಯ ಅಡಿ, ತೆಗೆದುಕೊಳ್ಳಲಾದ ಕೆಲವು ಪ್ರಮುಖ ಕ್ರಮಗಳನ್ನು ಈ ಕೆಳಗಿನ ಪ್ಯಾರಾಗಳಲ್ಲಿ ನೀಡಲಾಗಿದೆ.

10. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದೂರಿನ ಆಧಾರದಲ್ಲಿ, ಅಭ್ಯರ್ಥಿಯ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಹರಿಯಾಣದ ಜಿಲ್ಲೆಯೊಂದರ ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ವರ್ಗಾವಣೆ ಮಾಡಲಾಗಿದೆ.

11. ಗುಜರಾತಿನ ದಾಹೋದ್ ಸಂಸದೀಯ ಕ್ಷೇತ್ರದಲ್ಲಿ ಮತಗಟ್ಟೆ ವಶ ಮತ್ತು ಇವಿಎಂ ದುರ್ಬಳಕೆ ಮಾಡಲಾಗಿದೆ ಎಂಬ ಕಾಂಗ್ರೆಸ್ ಪಕ್ಷದ ದೂರಿನ ಮೇರೆಗೆ, ಮರು ಮತದಾನಕ್ಕೆ ಆದೇಶ ನೀಡಲಾಯಿತು. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ  ಮತ್ತು ಪೊಲೀಸರನ್ನು ಅಮಾನತುಗೊಳಿಸಲಾಯಿತು, ಅಮಾನತಿಗೆ ಒಳಗಾದ ಸಿಬ್ಬಂದಿ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಸಂಬಂಧಪಟ್ಟ ರಾಜ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. 

12. ತೆಲುಗು ದೇಶಂ ಪಕ್ಷದ ದೂರಿನ ಮೇಲೆ ಆಯೋಗವು, ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಮಾದರಿ ನೀತಿ ಸಂಹಿತೆಯ ನಿಬಂಧನೆಗಳ ಉಲ್ಲಂಘನೆ ಮತ್ತು ಪರಿಶೀಲಿಸದ ಆರೋಪಗಳಿಗೆ ಸಂಬಂಧಿಸಿದ ಸಲಹೆಗಳನ್ನು ಖಂಡಿಸಿದೆ.
 
13. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ದೂರಿನ ಮೇರೆಗೆ, ಯಾವುದೇ ಸಾರ್ವಜನಿಕ ಸಭೆಗಳು, ಮೆರವಣಿಗೆಗಳು, ರಾಲಿಗಳು, ಪ್ರದರ್ಶನಗಳು, ಸಂದರ್ಶನಗಳು ಮತ್ತು ಪತ್ರಿಕಾಗೋಷ್ಠಿಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಹೇಳಿಕೆಗಳನ್ನು ನೀಡದಂತೆ, ಮಾಧ್ಯಮಗಳಲ್ಲಿ ಸಾರ್ವಜನಿಕ ಹೇಳಿಕೆಗಳನ್ನು ನೀಡದಂತೆ 48 ಗಂಟೆಗಳ ಕಾಲ ಬಿಆರ್ ಎಸ್ ಪಕ್ಷದ ಅಧ್ಯಕ್ಷರನ್ನು ನಿರ್ಬಂಧಿಸಲಾಗಿತ್ತು.

14. ಬಿಆರ್ ಎಸ್ ನಿಂದ ಬಂದ ದೂರುಗಳ ಮೇಲೆ, ತೆಲಂಗಾಣದ ಮಂತ್ರಿಯೊಬ್ಬರು ಆಧಾರರಹಿತ ಆರೋಪಗಳನ್ನು ಮಾಡಿದ ಮತ್ತು ವಿರೋಧ ಪಕ್ಷದ ನಾಯಕನ ವರ್ಚಸ್ಸಿಗೆ ಧಕ್ಕೆ ತಂದಿರುವುದನ್ನು ನಿರಾಕರಿಸಲಾಗಿದೆ ಅಥವಾ ಆಕ್ಷೇಪಿಸಲಾಗಿದೆ.

15. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ದೂರಿನ ಮೇರೆಗೆ, 'BJP4Karnataka' Twitter 'X' ಖಾತೆಯ ಪೋಸ್ಟ್ ನಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ತೆಗೆದುಹಾಕಲಾಗಿದೆ. ಈ ಸಂಬಂಧ ಎಫ್‌ಐಆರ್ ಕೂಡ ದಾಖಲಾಗಿತ್ತು.

16. ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನಾಯಕರ ಮಾರ್ಫ್ ಮಾಡಿದ ಚಿತ್ರಗಳನ್ನು ದುರುದ್ದೇಶಪೂರಿತವಾಗಿ ಹಾಕಲಾಗುತ್ತಿದೆ ಎಂಬ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದೂರಿನ ಮೇರೆಗೆ, Instagram ಹ್ಯಾಂಡಲ್ 'ಬೋಲ್ ಹಿಮಾಚಲ' ವಿರುದ್ಧ ಎಫ್‌ಐಆರ್ ದಾಖಲಿಸಲು ಭಾರತೀಯ ಚುನಾವಣಾ ಆಯೋಗ ನಿರ್ದೇಶಿಸಿದೆ ಮತ್ತು ಆಪಾದಿತ ಆಕ್ಷೇಪಾರ್ಹ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತೆಗೆದುಹಾಕಲು ಅಗತ್ಯವಾದ ಶಾಸನಬದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿದೆ. 

17. ಬಿಜೆಪಿಯ ದೂರಿನ ಮೇಲೆ, ಮಾಜಿ ಸಚಿವೆಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ, 1989ರ ಅಡಿ ಎಫ್‌ಐಆರ್ ದಾಖಲಿಸಲಾಗಿದೆ.
 
18. ಆಮ್ ಆದ್ಮಿ ಪಾರ್ಟಿ ದೂರಿನ ಮೇರೆಗೆ, ಸಂಬಂಧಿಸಿದ ಎಲ್ಲಾ ಅಧಿಕಾರಿಗಳು,  ಸಿಬ್ಬಂದಿ ಮತ್ತು ಇಲಾಖೆಗಳನ್ನು ಸಂವೇದನಾಶೀಲಗೊಳಿಸಲು, ಅಧಿಕೃತ, ಅನಧಿಕೃತ ಸೈಟ್‌ಗಳಲ್ಲಿನ ಅನಾಮಧೇಯ ಹ್ಯಾಂಡ್‌ಬಿಲ್‌ಗಳು, ಕರಪತ್ರಗಳು, ಹೋರ್ಡಿಂಗ್‌ಗಳ ವಿರುದ್ಧ ಹೆಚ್ಚು ಜಾಗರೂಕರಾಗಿರುವಂತೆ ದೆಹಲಿಯ ಸಿಇಒ ಒಬ್ಬರಿಗೆ ನಿರ್ದೇಶಿಸಲಾಗಿದೆ, ಇದು ಚುನಾವಣಾ ಸ್ಥಳವನ್ನು ನಕಾರಾತ್ಮಕವಾಗಿ ಹಾಳು ಮಾಡುವ ಸಾಮರ್ಥ್ಯ ಹೊಂದಿದೆ ಮತ್ತು ಪ್ರಚಾರ ಭಾಷಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಧಿಕೃತ ಸ್ಥಳಗಳಲ್ಲಿ ಪ್ರಕಾಶಕರ ಹೆಸರಿಲ್ಲದ ಯಾವುದೇ ಹೋರ್ಡಿಂಗ್‌ಗಳಿಲ್ಲ ಎಂದು ಕ್ಷೇತ್ರಾಧಿಕಾರಿಗಳು ಪ್ರಮಾಣೀಕರಿಸಿದ್ದಾರೆ.
 
19. ಎಎಪಿ ದೂರಿನ ಮೇರೆಗೆ, ಎಎಪಿಯು ಕ್ಲಿಯರೆನ್ಸ್‌ಗಾಗಿ ಸಲ್ಲಿಸಿದ ಹಾಡನ್ನು ಮರುಪರಿಶೀಲಿಸಲು ಮತ್ತು ತೆರವುಗೊಳಿಸುವಂತೆ ದೆಹಲಿಯ ಸಿಇಒಗೆ ನಿರ್ದೇಶಿಸಲಾಯಿತು.

20. ಪಶ್ಚಿಮ ಬಂಗಾಳದ ಉತ್ತರ ದಿನಜ್‌ಪುರದ ಚೋಪ್ರಾದಲ್ಲಿ ನಡೆದ ಚುನಾವಣೆ ರಾಲಿ ವೇಳೆ ಕೇಂದ್ರ ಸಶಸ್ತ್ರ ಪಡೆಗಳ ಸಂರಕ್ಷಣಾ ಪಡೆಯನ್ನು ಹಿಂತೆಗೆದುಕೊಂಡ ನಂತರದ ಪರಿಣಾಮಗಳ ಬಗ್ಗೆ ಸ್ಥಳೀಯ ಮತದಾರರು ಮತ್ತು ವಿರೋಧ ಪಕ್ಷದ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಎಐಟಿಸಿ ಶಾಸಕರ ವಿರುದ್ಧ ಐಪಿಸಿ ಸೆಕ್ಷನ್ 171ಎಫ್, 506 ಮತ್ತು ಆರ್ ಪಿ ಕಾಯ್ದೆ 1951 ರ ಸೆಕ್ಷನ್ 135 (ಸಿ) ಅಡಿ, ಎಫ್‌ಐಆರ್ ಗೆ ಆದೇಶಿಸಲಾಗಿದೆ. 

21. ಆಂಧ್ರ ಪ್ರದೇಶದ ಡಿಜಿಪಿ(ಎಚ್ಒಪಿಎಫ್)ಯನ್ನು ಸೇವೆಯಿಂದ ತೆಗೆದುಹಾಕಲಾಗಿದೆ. ಇದಲ್ಲದೆ, ಡಿಜಿಪಿ (ಗುಪ್ತಚರ) ಆಂಧ್ರ ಪ್ರದೇಶ, ಪೊಲೀಸ್ ಕಮಿಷನರ್ ವಿಜಯವಾಡ, ಡಿಐಜಿ ಅನಂತಪುರ ಮತ್ತು ಪ್ರಕಾಶಂ, ಚಿತ್ತೂರು, ಪಲ್ನಾಡು, ಅನಂತಪುರ ಎಸ್‌ಪಿಗಳನ್ನು ವಿವಿಧ ದೂರುಗಳ ಆಧಾರದ ಮೇಲೆ ತೆಗೆದುಹಾಕಲಾಗಿದೆ. ಇದೇ ರೀತಿಯ ದೂರುಗಳ ಮೇಲೆ, ಆಂಧ್ರ ಪ್ರದೇಶದಲ್ಲಿ ನಾಲ್ವರು ಡಿವೈಎಸ್‌ಪಿಗಳು, ಎಸ್‌ಡಿಪಿಒಗಳು ಮತ್ತು 5 ಪೊಲೀಸ್ ಇನ್‌ಸ್ಪೆಕ್ಟರ್‌ಗಳು, ಎಸ್‌ಎಚ್‌ಒಗಳು, ಸಬ್ ಇನ್‌ಸ್ಪೆಕ್ಟರ್‌ಗಳನ್ನು ಸಹ ವರ್ಗಾವಣೆ, ಅಮಾನತುಗೊಳಿಸಲಾಗಿದೆ.

22. ಮತದಾರರ ಪ್ರಚೋದನೆಗಾಗಿ ಮದ್ಯ ಹಂಚುತ್ತಿದ್ದವರನ್ನು ತಡೆಯಲು ಅಸಮರ್ಥತೆ ತೋರಿದ ಮತ್ತು ಇತರ ಅನಪೇಕ್ಷಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಆಂಧ್ರ ಪ್ರದೇಶ ಸ್ಟೇಟ್ ಬೆವರೇಜಸ್ ಕಾರ್ಪೊರೇಷನ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರನ್ನು ಸೇವೆಯಿಂದ ತೆಗೆದುಹಾಕಲಾಗಿದೆ.

23. ಒಡಿಶಾ ಸರ್ಕಾರದ ಶಕ್ತಿ ಇಲಾಖೆಯ ಸೆಕ್ರೆಟರಿ-ಕಮ್-ಕಮಿಷನರ್ ಮಿಷನ್ ಅವರು ಚುನಾವಣೆಯಲ್ಲಿ ಪ್ರಭಾವ ಬೀರುವ ಉದ್ದೇಶಕ್ಕಾಗಿ ಸ್ವಸಹಾಯ ಗುಂಪುಗಳ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸುತ್ತಿರುವುದನ್ನು ನಿಯಂತ್ರಿಸಲು ವಿಫಲರಾದ ದೂರುಗಳ ಆಧಾರದಲ್ಲಿ ಸೇವೆಯಿಂದ ತೆಗೆದುಹಾಕಲಾಗಿದೆ.

24. ಹಿಂಸಾಚಾರ, ಭಾಗಶಃ ಕ್ರಮಗಳು ಇತ್ಯಾದಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾದ ಬಗ್ಗೆ ಬಂದ  ದೂರುಗಳ ಆಧಾರದ ಮೇಲೆ, ಪಶ್ಚಿಮ ಬಂಗಾಳದ ಶಕ್ತಿಪುರ, ಬೆಲ್ದಂಗ, ಆನಂದಪುರ, ಡೈಮಂಡ್ ಹಾರ್ಬರ್ ಮತ್ತು ಬೆಹ್ರಾಂಪುರದ ಪೊಲೀಸ್ ಠಾಣೆಗಳ 5 ಒಸಿ, ಎಸ್ಎಚ್ಒಗಳನ್ನು ಸ್ಥಳಾಂತರಿಸಲಾಗಿದೆ.

25. ತೆಲಂಗಾಣದ ಹೈದರಾಬಾದ್ ಮತಗಟ್ಟೆಯಲ್ಲಿ ಮತದಾನದ ದಿನದಂದು ಮತದಾನ ಕೇಂದ್ರದ 100 ಮೀಟರ್ ಸುತ್ತಮುತ್ತ ಮತದಾರರಿಗೆ ಪ್ರಚಾರ ಮಾಡಲು ಮತ್ತು ಪ್ರಭಾವ ಬೀರಲು ಯತ್ನಿಸಿದ ಬಿಜೆಪಿ ಅಭ್ಯರ್ಥಿ ವಿರುದ್ಧ 2 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
 
26. ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆಯ (NPRD) ದೂರಿನ ಮೇರೆಗೆ, ಟಿಡಿಪಿ ನಾಯಕ ಶ್ರೀ ಚಂದ್ರಬಾಬು ನಾಯ್ಡು ಅವರು ಶ್ರೀ ಜಗನ್ ಮೋಹನ್ ರೆಡ್ಡಿಯವರ ನಡವಳಿಕೆಯನ್ನು "ಪೈಸ್ಕೊ" ಎಂದು ಕರೆಯುವ ಮತ್ತು ಅವರ "ಮಾನಸಿಕ ಸ್ಥಿತಿ" ಚೆನ್ನಾಗಿಲ್ಲ ಎಂದು ಹೇಳುವ ಹೇಳಿಕೆಗಳನ್ನು ಖಂಡಿಸಲಾಯಿತು ಅಥವಾ ನಿರಾಕರಿಸಲಾಗಿದೆ. ಭವಿಷ್ಯದಲ್ಲಿ ಅವರ ಸಾರ್ವಜನಿಕ ಹೇಳಿಕೆಗಳಲ್ಲಿ ಅಂಗವಿಕಲರ ಬಗ್ಗೆ ಎಚ್ಚರಿಕೆಯಿಂದ ಮತ್ತು ಗೌರವದಿಂದ ಇರುವಂತೆ ನಿರ್ದೇಶನ ನೀಡಲಾಗಿದೆ.
 
27. 22.04.2024ರಂದು ಮೇಘಾಲಯದ ವೆಸ್ಟ್ ಗಾರೋ ಹಿಲ್ಸ್‌ನ ತುರಾ ಪೊಲೀಸ್ ಠಾಣೆಯಲ್ಲಿ ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯ್ದೆ, 2016ರ ಅಡಿ, ದೃಷ್ಟಿಹೀನ ವ್ಯಕ್ತಿಯನ್ನು ಅವನ ಒಪ್ಪಿಗೆ ಇಲ್ಲದೆ, ಎನ್‌ಪಿಪಿಯ ಸ್ಕಾರ್ಫ್ ಧರಿಸಿ ವೀಡಿಯೊದಲ್ಲಿ ಭಾಗವಹಿಸುವಂತೆ ಒತ್ತಾಯಿಸಿದ ಶ್ರೀ ಕ್ರಿಟೆನ್‌ಬರ್ತ್ ಮಾರಾಕ್ ವಿರುದ್ಧ ದೂರು ದಾಖಲಿಸಲಾಗಿದೆ.

28. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತದಾರರ ವಿವರಗಳನ್ನು ಕೋರಿ ಕರಪತ್ರಗಳನ್ನು ನೀಡುವುದನ್ನು ಗಂಭೀರವಾಗಿ ಪರಿಗಣಿಸುವುದು ಮತ್ತು ತಮ್ಮ ಉದ್ದೇಶಿತ ಫಲಾನುಭವಿ ಯೋಜನೆಗಳಿಗಾಗಿ ವಿವಿಧ ಸಮೀಕ್ಷೆಗಳ ನೆಪದಲ್ಲಿ ನೋಂದಣಿ ಮಾಡಿಸುವುದು, ಪ್ರಾತಿನಿಧ್ಯದ ಸೆಕ್ಷನ್ 123(1)ರ ಅಡಿ, ಲಂಚ ನೀಡುವ ಭ್ರಷ್ಟ ಅಭ್ಯಾಸವಾಗಿದೆ. ಜನತಾ ಕಾಯಿದೆ, 1951ರಂತೆ, ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳು ಯಾವುದೇ ಜಾಹೀರಾತುಗಳು, ಸಮೀಕ್ಷೆ, ಆ್ಯಪ್ ಮೂಲಕ ಚುನಾವಣೋತ್ತರ ಫಲಾನುಭವಿ ಆಧಾರಿತ ಯೋಜನೆಗಳಿಗೆ ವ್ಯಕ್ತಿಗಳನ್ನು ನೋಂದಾಯಿಸುವುದನ್ನು ಒಳಗೊಂಡಿರುವ ಯಾವುದೇ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಲು ಮತ್ತು ತ್ಯಜಿಸಲು ಸೂಚಿಸಲಾಗಿದೆ.

29. 2024 ಮೇ 14ಕ್ಕೆ ಅನ್ವಯವಾಗುವಂತೆ, ನಾಗರಿಕರಿಗೆ ಉಲ್ಲಂಘನೆಗಳ ಕುರಿತು ಸಿ-ವಿಜಿಲ್ ಆ್ಯಪ್ ಮತ್ತು ಆಯೋಗದ ಪೋರ್ಟಲ್‌ನಲ್ಲಿ ಒಟ್ಟು 4,22,432 ದೂರುಗಳನ್ನು ದಾಖಲಿಸಲಾಗಿದೆ. ಇವುಗಳಲ್ಲಿ 4,22,079 (99.9%) ಪ್ರಕರಣಗಳಿಗೆ ಕ್ರಮ ಕೈಗೊಳ್ಳಲಾಗಿದೆ. ಇವುಗಳ ಪೈಕಿ 88.7% ದೂರುಗಳನ್ನು ಸರಾಸರಿ 100 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಪರಿಹರಿಸಲಾಗಿದೆ. ಸಿ-ವಿಜಿಲ್ ಆ್ಯಪ್‌ನ ದೃಢತೆಯಿಂದಾಗಿ, ಅಕ್ರಮ ಹೋರ್ಡಿಂಗ್‌ಗಳು, ಆಸ್ತಿ ವಿರೂಪಗೊಳಿಸುವಿಕೆ, ಅನುಮತಿಸಲಾದ ಸಮಯಕ್ಕಿಂತ ಹೆಚ್ಚಿನ ಪ್ರಚಾರ, ಅನುಮತಿ ಮೀರಿದ ವಾಹನಗಳ ನಿಯೋಜನೆಯಲ್ಲಿ ಗಣನೀಯ ಕಡಿತವಾಗಿದೆ.

30. ಅಂತೆಯೇ, 2024 ಮೇ 14ಕ್ಕೆ ಅನ್ವಯವಾಗುವಂತೆ, ಸುವಿಧಾ ಪೋರ್ಟಲ್‌ನಲ್ಲಿ 2,31,479 ಅನುಮತಿಗಳನ್ನು ನೀಡಲಾಗಿದೆ, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಚುನಾವಣೆ ಸಂಬಂಧಿತ ಅನುಕೂಲಗಳನ್ನು ಬಳಸಿಕೊಂಡು ಅರ್ಹತೆಗಳನ್ನು ನೀಡುವಲ್ಲಿ FIFO (ಫಸ್ಟ್-ಇನ್-ಫಸ್ಟ್-ಔಟ್) ವಿವೇಚನೆ ತೆಗೆದುಹಾಕಲು ಕಾರಣವಾಗುತ್ತಿದೆ. 

ಮೊದಲ ತಿಂಗಳಲ್ಲಿ ಮಾದರಿ ನೀತಿ ಸಂಹಿತೆ ಅಡಿ, ತೆಗೆದುಕೊಳ್ಳಲಾದ ಕ್ರಮಗಳು ಮತ್ತು ಪ್ರೆಸ್ ನೋಟ್‌ ನಲ್ಲಿ ಬಿಡುಗಡೆ ಮಾಡಿದ ಮಾಹಿತಿ ಇಲ್ಲಿ ಲಭ್ಯವಿದೆ. (https://tinyurl.com/ddpeukfh)

31. ಗುಜರಾತ್, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ 6 ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾಗಿ ಎರಡು ಹುದ್ದೆ ಅಥವಾ ಜವಾಬ್ದಾರಿ ಹೊಂದಿರುವ ಅಧಿಕಾರಿಗಳನ್ನು ಸ್ವಯಂ ಪ್ರೇರಿತವಾಗಿ ತೆಗೆದುಹಾಕಲಾಗಿದೆ. ಏಕೆಂದರೆ ಅವರು ಗೃಹ / ಸಾಮಾನ್ಯ ಆಡಳಿತ ಇಲಾಖೆಯನ್ನು ಸಹ ನಿರ್ವಹಿಸುತ್ತಿದ್ದಾರೆ. ಡಿಎಂ, ಡಿಇಒ, ಆರ್‌ಒ ಮತ್ತು ಎಸ್‌ಪಿಗಳ ಮೇಲೆ ನಿಯಂತ್ರಣ ಹೊಂದಿರುವ ಚುನಾವಣಾ ಸಂಬಂಧಿತ ಹಿರಿಯ ಅಧಿಕಾರಿಗಳನ್ನು ಮುಖ್ಯಮಂತ್ರಿ ಕಚೇರಿಯಿಂದ ದೂರವಿಡಲು ಇದು ಕಾರಣವಾಗಿದೆ.

32. ಹಿಂದಿನ ಚುನಾವಣೆಯಲ್ಲೂ ಚುನಾವಣಾ ಕರ್ತವ್ಯದಿಂದ ನಿರ್ಬಂಧಿತರಾಗಿದ್ದರಿಂದ ಪಶ್ಚಿಮ ಬಂಗಾಳ ಡಿಜಿಪಿಯನ್ನು ಸ್ವಯಂಪ್ರೇರಿತವಾಗಿ ತೆಗೆದುಹಾಕಲಾಗಿದೆ.
 
33. ಗುಜರಾತ್, ಪಂಜಾಬ್, ಒಡಿಶಾ ಮತ್ತು ಪಶ್ಚಿಮ ಬಂಗಾಳದ 4 ರಾಜ್ಯಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್(ಡಿಎಂ) ಮತ್ತು ಪೊಲೀಸ್ ಸೂಪರಿಂಟೆಂಡೆಂಟ್(ಎಸ್‌ಪಿ) ಆಗಿ ನಾಯಕತ್ವ ಸ್ಥಾನಗಳಲ್ಲಿ ನೇಮಕ ಮಾಡಲಾದ ನಾನ್-ಕೇಡರ್ ಅಧಿಕಾರಿಗಳನ್ನು ಸ್ವಯಂಪ್ರೇರಿತವಾಗಿ ವರ್ಗಾವಣೆ ಮಾಡಲಾಗಿದೆ.
 
34. ಪಂಜಾಬ್, ಹರಿಯಾಣ ಮತ್ತು ಅಸ್ಸಾಂನಲ್ಲಿ ಚುನಾಯಿತ ರಾಜಕೀಯ ಪ್ರತಿನಿಧಿಗಳೊಂದಿಗೆ ಅವರ ರಕ್ತಸಂಬಂಧ ಅಥವಾ ಕೌಟುಂಬಿಕ ಸಂಬಂಧದ ಕಾರಣದಿಂದ ಅಧಿಕಾರಿಗಳನ್ನು ಸ್ವಯಂಪ್ರೇರಿತವಾಗಿ ವರ್ಗಾವಣೆ ಮಾಡಲಾಗಿದೆ.

35. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ದೂರಿನ ಮೇರೆಗೆ, ವಾಟ್ಸಾಪ್ ಪೋಸ್ಟ್ ಪ್ರಕಟಣೆಯಲ್ಲಿ ಭಾರತ ಸರ್ಕಾರದ ವಿಕ್ ಸಿತ್ ಭಾರತ್ ಸಂದೇಶದ ಪ್ರಸಾರ ನಿಲ್ಲಿಸಲು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ  ನಿರ್ದೇಶನ.

36. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ದೂರಿನ ಮೇರೆಗೆ, ತಕ್ಷಣವೇ ಜಾರಿಗೆ ಬರುವಂತೆ ಸರ್ಕಾರದ ಮತ್ತು ಸಾರ್ವಜನಿಕ ಆವರಣದಲ್ಲಿ ಯಾವುದೇ ರೀತಿಯ ವಿರೂಪಗಳನ್ನು ತೆಗೆದುಹಾಕುವ ಭಾರತೀಯ ಚುನಾವಣಾ ಆಯೋಗದ  ಸೂಚನೆಗಳನ್ನು ಅನುಸರಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ.

37. ಡಿಎಂಕೆ ದೂರಿನ ಮೇರೆಗೆ, ರಾಮೇಶ್ವರ ಕೆಫೆ ಸ್ಫೋಟದ ಬಗೆಗಿನ ಆಧಾರರಹಿತ ಆರೋಪಗಳಿಗಾಗಿ ಬಿಜೆಪಿ ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

38. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದೂರಿನ ಮೇರೆಗೆ, ಡಿಎಂಆರ್ ಸಿ ರೈಲುಗಳು ಮತ್ತು ಪೆಟ್ರೋಲ್ ಪಂಪ್, ಹೆದ್ದಾರಿಗಳು ಇತ್ಯಾದಿಗಳಲ್ಲಿ ಹೋರ್ಡಿಂಗ್‌ಗಳು, ಫೋಟೊಗಳು ಮತ್ತು ಸಂದೇಶಗಳು ಸೇರಿದಂತೆ ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿ  ಯಾವುದೇ ರೀತಿಯ ವಿರೂಪ ತೆಗೆದುಹಾಕಬೇಕೆಂಬ ಭಾರತೀಯ ಚುನಾವಣಾ ಆಯೋಗದ ಸೂಚನೆಗಳನ್ನು ಅನುಸರಿಸುವಂತೆ ಕ್ಯಾಬಿನೆಟ್ ಕಾರ್ಯದರ್ಶಿಗೆ ನಿರ್ದೇಶನ.

39. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದೂರಿನ ಮೇರೆಗೆ, ಕೇಂದ್ರ ಸಚಿವರೊಬ್ಬರು ತಮ್ಮ ಪ್ರಮಾಣಪತ್ರದಲ್ಲಿ ಘೋಷಿಸಿರುವ ಆಸ್ತಿ ವಿವರದಲ್ಲಿ ಯಾವುದೇ ಹೊಂದಾಣಿಕೆ ಇಲ್ಲದಿರುವುದನ್ನು ಪರಿಶೀಲಿಸಲು ಸಿಬಿಡಿಟಿಗೆ ನಿರ್ದೇಶನ.

40. ಎಐಟಿಎಂಸಿ ದೂರಿನ ಮೇರೆಗೆ, ಶ್ರೀಮತಿ ಮಮತಾ ಬ್ಯಾನರ್ಜಿ ಅವರ ಬಗ್ಗೆ ಆಕ್ಷೇಪಾರ್ಹ ಮತ್ತು ಅಗೌರವದ ಹೇಳಿಕೆ ನೀಡಿರುವ ಬಿಜೆಪಿ ನಾಯಕ ಶ್ರೀ ದಿಲೀಪ್ ಘೋಷ್ ಅವರಿಗೆ ನೋಟಿಸ್.
 
41. ಬಿಜೆಪಿ ದೂರಿನ ಮೇರೆಗೆ, ಶ್ರೀಮತಿ ಕಂಗನಾ ರಣಾವತ್ ಮತ್ತು ಶ್ರೀಮತಿ ಹೇಮಾ ಮಾಲಿನಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಗಾಗಿ ಐಎನ್ ಸಿಯ ಶ್ರೀಮತಿ ಸುಪ್ರಿಯಾ ಶ್ರಿನೇಟ್ ಮತ್ತು ಶ್ರೀ ಸುರ್ಜೆವಾಲಾ ಅವರಿಗೆ ನೋಟಿಸ್.
 
42. ಮಹಿಳೆಯರ ವಿರುದ್ಧ ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ ಪಕ್ಷಗಳ ಮುಖಂಡರಿಗೆ ನೋಟಿಸ್‌ಗಳನ್ನು ನೀಡುವ ಮೂಲಕ ಆಯೋಗವು ಮಹಿಳೆಯರ ಘನತೆ ಮತ್ತು ಗೌರವದ ವಿಷಯದಲ್ಲಿ ನಿರ್ದಿಷ್ಟವಾಗಿ ದೃಢವಾದ ನಿಲುವು ತೆಗೆದುಕೊಂಡಿದೆ. ತಮ್ಮ ಪಕ್ಷದ ನಾಯಕರು ಮತ್ತು ಪ್ರಚಾರಕರು ಇಂತಹ ಅಗೌರವ ಮತ್ತು ಅವಹೇಳನಕಾರಿ ಕಾಮೆಂಟ್‌ಗಳನ್ನು ಆಶ್ರಯಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪಕ್ಷದ ಮುಖ್ಯಸ್ಥರು, ಅಧ್ಯಕ್ಷರ ಮೇಲೆ ಹೊಣೆಗಾರಿಕೆ ಮಾಡುವಲ್ಲಿ ಆಯೋಗವು ಒಂದು ಹೆಜ್ಜೆ ಮುಂದಿದೆ.

43. ಡಿಎಂಕೆ ನಾಯಕಿ ಶ್ರೀ ಅನಿತಾ ಆರ್ ರಾಧಾಕೃಷ್ಣನ್ ಅವರು ಪ್ರಧಾನಿ ಕುರಿತು ಮಾಡಿದ ಟೀಕೆಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
 
44. ಐಎನ್ ಸಿ ದೂರಿನ ಮೇರೆಗೆ, ವಿವಿಧ ಕಾಲೇಜುಗಳಲ್ಲಿ ಸ್ಟಾರ್ ಪ್ರಚಾರಕರ ಕಟೌಟ್‌ಗಳನ್ನು ತೆಗೆದುಹಾಕಲು ದೆಹಲಿಯ ಮುನ್ಸಿಪಲ್ ಅಧಿಕಾರಿಗಳಿಗೆ ನಿರ್ದೇಶನನ್ನು ನೀಡಲಾಗಿದೆ.

*****



(Release ID: 2020650) Visitor Counter : 60