ಚುನಾವಣಾ ಆಯೋಗ
azadi ka amrit mahotsav

ಸಾರ್ವತ್ರಿಕ ಚುನಾವಣೆ -2024 ಕುರಿತ ಮಾಹಿತಿಗಾಗಿ ʻಪಿಐಬಿʼಯಿಂದ  ʻಮಾಧ್ಯಮ ಸೌಕರ್ಯ ಪೋರ್ಟಲ್ʼ ಪ್ರಾರಂಭ

Posted On: 27 MAR 2024 10:40AM by PIB Bengaluru

2024ರ ಸಾರ್ವತ್ರಿಕ ಚುನಾವಣೆಗೆ ವರದಿ ಮಾಡುವ ಪತ್ರಕರ್ತರ ಅನುಕೂಲಕ್ಕಾಗಿ ಒಂದೇ ಸೂರಿನಡಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಪೋರ್ಟಲ್‌ (ಮೈಕ್ರೋಸೈಟ್‌) - https://pib.gov.in/elect2024/index.aspx  ಅನ್ನು ʻಪತ್ರಿಕಾ ಮಾಹಿತಿ ಕಾರ್ಯಾಲಯʼ(ಪಿಐಬಿ) ಆರಂಭಿಸಿದೆ. ಈ ಪೋರ್ಟಲ್ ಈ ಕೆಳಗಿನ ವೈಶಿಷ್ಟ್ಯಗಳನ್ನು ಹೊಂದಿದೆ.

 

1.    ಡಿಜಿಟಲ್ ಫ್ಲಿಪ್ ಬುಕ್: ಇದು ವಿವಿಧ ಆಸಕ್ತಿದಾಯಕ ವಿಶ್ಲೇಷಣೆಗಳು ಮತ್ತು ಡೇಟಾ ಸಮೃದ್ಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ತಮ್ಮ ಲೇಖನಗಳನ್ನು ಬರೆಯಲು ಈ ಮಾಹಿತಿಯನ್ನು ಬಳಸಿಕೊಳ್ಳಬಹುದು.

 


 

2.    ಉಪಯುಕ್ತ ಲಿಂಕ್‌ಗಳನ್ನು ಇದರಲ್ಲಿ ಒದಗಿಸಲಾಗಿದ್ದು, ಅವುಗಳ ಮೂಲಕ ಪತ್ರಕರ್ತರು ʻಇಸಿಐʼ ವೆಬ್‌ತಾಣದಲ್ಲಿನ ಸಂಬಂಧಪಟ್ಟ ಭಾಗಗಳಿಗೆ ಸುಲಭವಾಗಿ ತಲುಪಬಹುದು.
 

 


3.    ಉಲ್ಲೇಖಗಳಿಗಾಗಿ ಮತ್ತು ಸುಲಭವಾಗಿ ದತ್ತಾಂಶವನ್ನು ಗ್ರಹಿಸಲು ವಿವಿಧ ಸಚಿತ್ರ ಮಾಹಿತಿ ಕೋಷ್ಟಕ(ಇನ್ಫೋಗ್ರಾಫಿಕ್ಸ್)ಗಳನ್ನು ಒದಗಿಸಲಾಗಿದೆ.

 


4.    ಸಾರ್ವತ್ರಿಕ ಚುನಾವಣೆ-2024ರ ವಿವಿಧ ಹಂತಗಳ ವೇಳಾಪಟ್ಟಿಗಳನ್ನು ಸಿದ್ಧ ದಾಖಲೆಯಾಗಿ ಒದಗಿಸಲಾಗಿದೆ.

 


5.    ʻಇಸಿಐʼ ಅಧಿಸೂಚನೆಗಳ ಬಗ್ಗೆ ತಾಜಾ ಮಾಹಿತಿಯನ್ನು ನೈಜ ಸಮಯದ ಆಧಾರದ ಮೇಲೆ ಅಪ್ಲೋಡ್ ಮಾಡಲಾಗುತ್ತದೆ.

 


6.    ಸುಲಭ ಸಂವಹನಕ್ಕಾಗಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ʻಇಸಿಐʼ ಅಧಿಕಾರಿಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.

 

 
 
7.    ಮಾಧ್ಯಮ ಮಾರ್ಗಸೂಚಿ ಸೇರಿದಂತೆ ʻಇಸಿಐʼ ಸೂಚನೆಗಳ ಸಮಗ್ರ ಸಂಗ್ರಹವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಲಾಗಿದೆ.

 

 
 

 

8.    ಮಾಧ್ಯಮಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡಲಾಗುವುದು.

 

 

*****


(Release ID: 2016465) Visitor Counter : 126