ಚುನಾವಣಾ ಆಯೋಗ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಅಂಕಿಅಂಶ ಮಾಹಿತಿಯನ್ನು ಇಂದು ಮಾರ್ಚ್ 21, 2024ರಂದು ಬಹಿರಂಗಪಡಿಸಿದ ಭಾರತೀಯ ಚುನಾವಣಾ ಆಯೋಗ
Posted On:
21 MAR 2024 7:54PM by PIB Bengaluru
ಪಿಐಬಿ ದೆಹಲಿ ಮಾರ್ಚ್ 21: ಸುಪ್ರೀಂ ಕೋರ್ಟ್, ಫೆಬ್ರವರಿ 15, ಮಾರ್ಚ್ 11, ಮತ್ತು ಮಾರ್ಚ್ 18, 2024 (2017 ರ ಡಬ್ಲ್ಯುಪಿಸಿ ಸಂಖ್ಯೆ.880 ವಿಷಯದಲ್ಲಿ) ರಂದು ತನ್ನ ಆದೇಶದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭಾರತೀಯ ಚುನಾವಣಾ ಆಯೋಗಕ್ಕೆ (ECI) ರಾಜಕೀಯ ಪಕ್ಷಗಳ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಸಲ್ಲಿಸುವಂತೆ ಆದೇಶ ನೀಡಿತ್ತು.
ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿರುವ ಚುನಾವಣಾ ಬಾಂಡ್ ಗಳ ಅಂಕಿಅಂಶವನ್ನು ಭಾರತೀಯ ಚುನಾವಣಾ ಆಯೋಗವು ಇಂದು ಅಂದರೆ ಮಾರ್ಚ್ 21, 2024ರಂದು ತನ್ನ ವೆಬ್‌ಸೈಟ್‌ನಲ್ಲಿ "ಆಧಾರವಿರುವಂತೆಯೇ" ಅಪ್‌ಲೋಡ್ ಮಾಡಿದೆ. ಎಸ್ ಬಿಐನಿಂದ ಸ್ವೀಕರಿಸಿದ ಅಂಕಿ ಅಂಶವನ್ನು ಈ ಯುಆರ್ ಎಲ್ ಲಿಂಕ್ ನಲ್ಲಿ ಪಡೆಯಬಹುದು: https://www.eci.gov.in/candidate-politicalparty
*****
(Release ID: 2016022)
Visitor Counter : 135
Read this release in:
English
,
Urdu
,
हिन्दी
,
Marathi
,
Assamese
,
Punjabi
,
Gujarati
,
Odia
,
Tamil
,
Telugu
,
Malayalam