ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಮೋ ಭಾರತ್ ರೈಲಿನ ವಿಡಿಯೋ ಚಿತ್ರೀಕರಣಕ್ಕೆ ಪ್ರಧಾನಿ ಶ್ಲಾಘನೆ

Posted On: 12 MAR 2024 9:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಮೋ ಭಾರತ್ ರೈಲು ಪೂರ್ವ ಪೆರಿಫೆರಲ್ ಎಕ್ಸ್ ಪ್ರೆಸ್ ವೇ ದಾಟುವ ವೀಡಿಯೊವನ್ನು ಶ್ಲಾಘಿಸಿದ್ದಾರೆ. ಮೂಲಸೌಕರ್ಯ ಯೋಜನೆಗಳನ್ನು ಒಳಗೊಂಡಿರುವ ಈ ವೀಡಿಯೊವನ್ನು ಯೂಟ್ಯೂಬರ್ ಶ್ರೀ ಮೋಹಿತ್ ಕುಮಾರ್ ಚಿತ್ರೀಕರಿಸಿದ್ದಾರೆ.

ಯೂಟ್ಯೂಬರ್ ಶ್ರೀ ಮೋಹಿತ್ ಕುಮಾರ್ ಅವರ ವೀಡಿಯೊಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು;

"ಅದ್ಭುತ ವೀಡಿಯೊ...ನಿಮ್ಮ ಸಮಯೋಚಿತತೆಯು ನಾವು ಒಟ್ಟಾಗಿ ನಿರ್ಮಿಸುತ್ತಿರುವ ನವ ಭಾರತದ ಬಗ್ಗೆ ಉತ್ತಮ ದೃಷ್ಟಿಕೋನವನ್ನು ನೀಡುತ್ತದೆ,’’ ಎಂದಿದ್ದಾರೆ.

***


(Release ID: 2015573) Visitor Counter : 61