ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಅವರು ಫೆಬ್ರವರಿ 29 ರಂದು ಮಾರಿಷಸ್ ನ ಅಗಲೆಗಾ ದ್ವೀಪದಲ್ಲಿ ಹೊಸ ಏರ್ ಸ್ಟ್ರಿಪ್ ಮತ್ತು ಜೆಟ್ಟಿಯನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ


ಅಗಲೇಗಾ ದ್ವೀಪದಲ್ಲಿ ಆರು ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಗುವುದು

ಈ ಯೋಜನೆಗಳು ಮಾರಿಷಸ್ ನ ಮುಖ್ಯ ಭೂಭಾಗದೊಂದಿಗೆ ಅಗಲೇಗಾದ ಸಂಪರ್ಕವನ್ನು ಬಲಪಡಿಸುತ್ತವೆ ಮತ್ತು ಕಡಲ ಭದ್ರತೆಯನ್ನು ಹೆಚ್ಚಿಸುತ್ತದೆ

Posted On: 27 FEB 2024 6:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಗೌರವಾನ್ವಿತ ಶ್ರೀ ಪ್ರವಿಂದ್ ಜುಗ್ನೌತ್ ಅವರು 2024 ರ ಫೆಬ್ರವರಿ 29 ರಂದು ಮಧ್ಯಾಹ್ನ 1 ಗಂಟೆಗೆ ಮಾರಿಷಸ್ ನ ಅಗಲೇಗಾ ದ್ವೀಪದಲ್ಲಿ ಹೊಸ ಏರ್ ಸ್ಟ್ರಿಪ್ ಮತ್ತು ಸೇಂಟ್ ಜೇಮ್ಸ್ ಜೆಟ್ಟಿ ಮತ್ತು ಆರು ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ.

ಈ ಯೋಜನೆಗಳ ಉದ್ಘಾಟನೆಯು ಭಾರತ ಮತ್ತು ಮಾರಿಷಸ್ ನಡುವಿನ ದೃಢವಾದ ಮತ್ತು ದಶಕಗಳಷ್ಟು ಹಳೆಯ ಅಭಿವೃದ್ಧಿ ಪಾಲುದಾರಿಕೆಗೆ ಸಾಕ್ಷಿಯಾಗಿದೆ. ಈ ಯೋಜನೆಗಳು ಮಾರಿಷಸ್ ಮತ್ತು ಅಗಲೇಗಾ ನಡುವಿನ ಉತ್ತಮ ಸಂಪರ್ಕದ ಬೇಡಿಕೆಯನ್ನು ಪೂರೈಸುತ್ತವೆ, ಕಡಲ ಭದ್ರತೆಯನ್ನು ಬಲಪಡಿಸುತ್ತವೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತವೆ.

2024 ರ ಫೆಬ್ರವರಿ 12 ರಂದು ಮಾರಿಷಸ್ ನಲ್ಲಿ ಉಭಯ ನಾಯಕರು ಯುಪಿಐ ಮತ್ತು ರುಪೇ ಕಾರ್ಡ್ ಸೇವೆಗಳನ್ನು ಇತ್ತೀಚೆಗೆ ಪ್ರಾರಂಭಿಸಿದ ನಂತರ ಈ ಯೋಜನೆಗಳ ಉದ್ಘಾಟನೆ ಮಹತ್ವದ್ದಾಗಿದೆ.

*****



(Release ID: 2009804) Visitor Counter : 46